ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ; ರೊಮ್ಯಾಂಟಿಕ್ ಫೋಟೋ ಮೂಲಕ ಮಹೇಶ್ ಬಾಬು ದಂಪತಿಯ ವಾರ್ಷಿಕೋತ್ಸವ ವಿಶ್

Published : Feb 10, 2023, 11:38 AM IST
ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ; ರೊಮ್ಯಾಂಟಿಕ್ ಫೋಟೋ ಮೂಲಕ ಮಹೇಶ್ ಬಾಬು ದಂಪತಿಯ ವಾರ್ಷಿಕೋತ್ಸವ ವಿಶ್

ಸಾರಾಂಶ

ಟಾಲಿವುಡ್ ನ ಸ್ಟಾರ್ ಜೋಡಿ ಮಹೇಶ್ ಬಾಬು ಮತ್ತು ನಮ್ರತಾ ದಂಪತಿಗೆ ಇಂದು (ಫೆಬ್ರವರಿ 10) ಮದುವೆ ವಾರ್ಷಿಕೋತ್ಸವದ ಸಂಭ್ರಮ. ಈ ಜೋಡಿ 18ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

ಟಾಲಿವುಡ್ ನ ಸ್ಟಾರ್ ಜೋಡಿ ಮಹೇಶ್ ಬಾಬು ಮತ್ತು ನಮ್ರತಾ ದಂಪತಿಗೆ ಇಂದು (ಫೆಬ್ರವರಿ 10) ಮದುವೆ ವಾರ್ಷಿಕೋತ್ಸವದ ಸಂಭ್ರಮ. ಈ ಜೋಡಿ 18ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮ, ಸಂತಸದ ದಿನದ ಬಗ್ಗೆ ಮಹೇಶ್ ಬಾಬು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೊಮ್ಯಾಂಟಿಕ್ ಫೋಟೋ ಮೂಲಕ ನಮ್ರತಾ ಮತ್ತು ಮಹೇಶ್ ಬಾಬು ಇಬ್ಬರೂ ವಾರ್ಷಿಕೋತ್ಸವದ ವಿಶ್ ಮಾಡಿಕೊಂಡಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರೂ ಪ್ರೀತಿ ಹಂಚಿಕೊಂಡಿದ್ದಾರೆ. ಟಾಲಿವುಡ್‌ನ ಸ್ಟಾರ್ ಜೋಡಿ ಮಹೇಶ್ ಮತ್ತು ನಮ್ರತಾ 2005 ಫೆಬ್ರವರಿ 10ಕ್ಕೆ ಹಸೆಮಣೆ ಏರಿದರು. ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಈ ತಾರಾ ಜೋಡಿಗೆ ಅಭಿಮಾನಿಗಳು, ಸಿನಿಮಾ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. 

ಮಹೇಶ್ ಬಾಬು ಪ್ರೀತಿಯ ವಿಶ್

ಪ್ರಿನ್ಸ್ ಮಹೇಶ್ ಬಾಬು ಪತ್ನಿ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿ, 'ನಾವು ಸ್ವಲ್ಪ ಕ್ರೇಸಿ, ಜಾಸ್ತಿ ಪ್ರೀತಿ. 18 ವರ್ಷಗಳ ಒಟ್ಟಿಗೆ ಜೀವನ ಮತ್ತು ಶಾಶ್ವತವಾಗಿ ಹೋಗುತ್ತೇವೆ. ವಾರ್ಷಿಕೋತ್ಸವದ ಶುಭಾಶಯಗಳು ನಮ್ರತಾ' ಎಂದು ಹೇಳಿದ್ದಾರೆ.

ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ

ನಮ್ರತಾ ಶಿರೋಡ್ಕರ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 'ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರದ 18 ವರ್ಷಗಳ ಸಂಭ್ರಮಾಚರಣೆ. ವಾರ್ಷಿಕೋತ್ಸವದ ಶುಭಾಶಯಗಳು ಮಹೇಶ್ ಬಾಬು' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಹೇಶ್ ಬಾಬು ಮೈ ಮೇಲೆ ಹತ್ತಿ ಕುಳಿತು ಕಿಸ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

2005ರಲ್ಲಿ ಮದುವೆ

ಮಹೇಶ್ ಬಾಬು ಮತ್ತು ನಮ್ರತಾ ಅವರದ್ದು ಪ್ರೇಮ ವಿವಾಹ. 2000ರಲ್ಲಿ ಸಿನಿಮಾ ಸೆಟ್ ನಲ್ಲಿ ಭೇಟಿಯಾದ ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಬಳಿಕ 2005ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇಬ್ಬರೂ ಹಿಂದೂ ಸಂಪ್ರದಾಯದಂತೆ 2005 ಫೆಬ್ರವರಿ 10ಕ್ಕೆ ವಿವಾಹ ಜೀವನಕ್ಕೆ ಕಾಲಿಟ್ಟರು.

ಮಹೇಶ್​ ಬಾಬುಗಾಗಿ ನಟನೆ ಬಿಟ್ಟೆ : ಮಾಜಿ ಮಿಸ್​ ಇಂಡಿಯಾ, ನಟಿ ನಮ್ರತಾ ಶಿರೋಡ್ಕರ್ ​ಮನದಾಳದ ಮಾತು..

ಮಹೇಶ್ ಬಾಬು ದಂಪತಿಗೆ ಇಬ್ಬರು ಮಕ್ಕಳು

ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರೂ ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಟಾಲಿವುಡ್ ನ ಮುದ್ದಾದ ದಂಪತಿಗೆ ಸಿತಾರಾ ಮತ್ತು ಗೌತಮ್ ಮಕ್ಕಳಿದ್ದಾರೆ. ಮಗಳು ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತನ್ನದೆ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಪುತ್ರ ವಿದೇಶದಲ್ಲಿ ಓದುತ್ತಿದ್ದಾರೆ.

ವಿಶ್ವ ಸುಂದರಿ ಕಿರೀಟ ಮಿಸ್ ಮಾಡಿಕೊಂಡಿದ್ದ ಮಹೇಶ್ ಬಾಬು ಪತ್ನಿ ನಮ್ರತಾ; ಸ್ಟುಪಿಡ್ ಉತ್ತರವೇ ಕಾರಣ ಎಂದ ನೆಟ್ಟಿಗರು

ಅಭಿನಯದಿಂದ ದೂರ ಉಳಿದಿರುವ ನಮ್ರತಾ

ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದ ನಮ್ರತಾ ಮದುವೆ ಬಳಿಕ ಅಭಿನಯದಿಂದ ದೂರ ಉಳಿದಿದ್ದಾರೆ. ಪತಿ, ಮಕ್ಕಳು ಅಂತ ಸಂಸಾರದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇನ್ನು ಪತಿ ಮಹೇಶ್ ಬಾಬು ಸಿನಿಮಾ ಜೀವನವನ್ನು ನಮ್ರತಾ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ನಿರ್ದೇಶಕ ತ್ರಿವಿಕ್ರಮ್ ಜೊತೆ 28ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಟೈಟಲ್ ಇನ್ನೂ ಅನೌನ್ಸ್ ಆಗಿಲ್ಲ. ಈ ಸಿನಿಮಾ ಜೊತೆಗೆ ಮಹೇಶ್ ಬಾಬು ಬಹುನಿರೀಕ್ಷೆಯ ರಾಜಮೌಳಿ ಜೊತೆಗಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Samantha: ಪತಿ ರಾಜ್ ನಿಡಿಮೋರುಗೆ ಸಮಂತಾ ಮುದ್ದಾಗಿ ಏನ್ ಕರೀತಾರೆ ಗೊತ್ತಾ? ನಿಕ್‌ನೇಮ್ ಸೀಕ್ರೆಟ್ ರಿವೀಲ್!
Anushka Shetty: ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್: ಬಾಹುಬಲಿ ರಹಸ್ಯ ಬಯಲು