ನಟ ರಣಬೀರ್ ಕಪೂರ್‌ಗೆ ಶಾಕ್, ಅ.6ಕ್ಕೆ ವಿಚಾರಣೆ ಹಾಜರಾಗಲು ಇಡಿ ನೋಟಿಸ್!

By Suvarna News  |  First Published Oct 4, 2023, 4:03 PM IST

ಬಾಲಿವುಡ್ ನಟ ರಣಬೀರ್ ಕಪೂರ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
 


ಮುಂಬೈ(ಅ.04) ಉದ್ಯಮಿ ಸೌರಬ್ ಚಂದ್ರಶೇಖರ್ ದುಬಾರಿ ಮದುವೆ ಪಾರ್ಟಿಯಲ್ಲಿ ಪಾಲ್ಗೊಂಡ ಹಲವು ಬಾಲಿವುಡ್ ನಟ ನಟಿರಿಗೆ ಸಂಕಷ್ಟ ಶುರುವಾಗಿದೆ. ಒಬ್ಬರ ಹಿಂದೊಬ್ಬರಿಗೆ ಇದೀಗ ಇಡಿ ನೋಟಿಸ್ ನೀಡುತ್ತಿದೆ. ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ಸರದಿ. ಮಹದೇವ ಬೆಟ್ಟಿಂಗ್ ಆ್ಯಪ್ ಸಂಬಂಧ ನಟ ರಣಬೀರ್ ಕಪೂರ್‌ಗೆ ಇಡಿ ನೋಟಿಸ್ ನೀಡಿದೆ. ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಲು ಇಡಿ ಸೂಚಿಸಿದೆ. ರಣಬೀರ್ ಮಾತ್ರವಲ್ಲ, ಹಲವು ಬಾಲಿವುಡ್ ನಟ ನಟಿಯರ ಮೇಲೆ ಇಡಿ ಹದ್ದಿನ ಕಣ್ಣಿಟ್ಟಿದ್ದು, ಕೆಲವರಿಗೆ ಈಗಾಗಲೇ ಸಂಕಷ್ಟ ಶುರುವಾಗಿದೆ.

ಮಹಾದೇವ್ ಬೆಟ್ಟಿಂಗ್ ಆ್ಯಪ್ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಇದೀಗ ರಣಬೀರ್ ಕಪೂರ್‌ಗೆ ನೋಟಿಸ್ ನೀಡಿದೆ. ಅಕ್ಟೋಬರ್ 6 ರಂದು ಮುಂಬೈನ ಇಡಿ ಕಚೇರಿಗೆ ಹಾಜರಾಗಲು ಸೂಚಿಸಲಾಗಿದೆ. ಅಕ್ಟೋಬರ್ 6 ರಂದು ರಣಬೀರ್ ಕಪೂರ್ ವಿಚಾರಣೆ ನಡೆಯಲಿದೆ. ಇದೀಗ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಸಂಬಂಧ ರಣಬೀರ್ ಕಪೂರ್ ಮಾತ್ರವಲ್ಲ, ಇತರ ಕೆಲ ಸೆಲೆಬ್ರೆಟಿಗಳ ಇಡಿ ರೇಡಾರ್‌ನಲ್ಲಿದ್ದಾರೆ.  ಟೈಗರ್ ಶ್ರಾಫ್, ನೇಹಾ ಕಕ್ಕರ್, ಎಲ್ಲಿ ಅವ್ರಾಮ್, ಸನ್ನಿ ಲಿಯೋನ್, ಭಾಗ್ಯಶ್ರಿ, ಪುಲ್ಕಿತ್, ಕೃತಿ, ಕೃಷ್ಣ ಅಭಿಷೇಖ್, ಅತೀಫ್ ಅಸ್ಲಾಮ್, ರಹತ್ ಅಲಿ ಖಾನ್, ಅಲಿ ಅಸ್ಗರ್, ವಿಶಾಲ್ ದದ್ಲಾನಿ, ನುಶ್ರತ್ ಬರೂಚಾ ಸೇರಿದಂತೆ ಹಲವು ಸೆಲೆಬ್ರೆಟಿಗಳ ಮೇಲೆ ಇಡಿ ಕಣ್ಣಿಟ್ಟಿದೆ.

Tap to resize

Latest Videos

ಹವಾಲಾ ಹಣ ಸ್ವೀಕರಿಸಿದ ಆರೋಪ;ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿ ಹಲವು ಬಾಲಿವುಡ್ ನಟ-ನಟಿಯರಿಗೆ ಇಡಿ ಶಾಕ್

ಉದ್ಯಮಿ ಸೌರಬ್ ಚಂದ್ರಶೇಖರ್ ಮಾಲೀಕತ್ವದ ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಜೊತೆ ಹಲವು ಬಾಲಿವುಡ್ ನಟ ನಟಿಯರು ಸಂಬಂಧ ಹೊಂದಿದ್ದಾರೆ. ಕೆಲವರು ಆ್ಯಪ್ ಪ್ರಮೋಶನ್‌ನ ಭಾಗವಾಗಿದ್ದರೆ, ಮತ್ತೆ ಕೆಲವರೂ ಹೂಡಿಕೆ ಮಾಡಿದ್ದಾರೆ ಅನ್ನೋ ಮಾತುಗಳಿವೆ. ಇತ್ತೀಚೆಗೆ ಸೌರಬ್ ಚಂದ್ರಶೇಖರ್ ದುಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆ ಸಮಾರಂಭಕ್ಕೆ ಬಾಲಿವುಡ್‌ನ ಬಹುತೇಕ ನಟ ನಟಿಯರು ಪಾಲ್ಗೊಂಡಿದ್ದರು. ಅತ್ಯಂತ ದುಬಾರಿ ಮದುವೆ ಅನ್ನೋ ಹೆಗ್ಗಳಿಕೆಗೆ ಸೌರಬ್ ಚಂದ್ರಶೇಖರ್ ಮದುವೆ ಪಾತ್ರವಾಗಿತ್ತು.

ಸೌರಬ್ ಚಂದ್ರಶೇಖರ್ ಮದುವೆಯಲ್ಲಿ ಪಾಲ್ಗಗೊಂಡ ಬಾಲಿವುಡ್ ನಟ ನಟಿಯರ ಮೇಲೂ ಇಡಿ ಕಣ್ಣಿಟ್ಟಿದೆ. ಈಗಾಗಲೇ ಕೆಲವರಿ ನೋಟಿಸ್ ನೀಡಿದೆ. ದುಬೈನಲ್ಲಿನ ಸೌರಬ್ ಚಂದ್ರಶೇಖರ್ ಮದುವೆಗೆ ಬಾಲಿವುಡ್ ಸೆಲೆಬ್ರೆಟಿಗಳಿಗೆ ಹೋಟೆಲ್ ಬುಕ್ ಮಾಡಲು 42 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ಮದುವೆ ಸಮಾರಂಭದ ಇವೆಂಟ್ ಮ್ಯಾನೇಜ್ಮೆಂಟ್ ವಹಿಸಿಕೊಂಡ ಕಂಪನಿಗೆ 112 ಕೋಟಿ ರೂಪಾಯಿ ನೀಡಲಾಗಿದೆ. ಈ ಎಲ್ಲಾ ಮೊತ್ತಗಳು ಅಕ್ರಮ ಹವಾಲ ಹಣ ಎಂದು ಇಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ಜಾಕ್ವಲಿನ್ ಬಳಿಕ ಸನ್ನಿ ಲಿಯೋನ್‌ಗೆ ಇಡಿ ವಿಚಾರಣೆ ಸಂಕಷ್ಟ, ನಟಿ ಬೆಂಬಲಕ್ಕೆ ನಿಂತ ಫ್ಯಾನ್ಸ್!

click me!