ಬಾಲಿವುಡ್ ನಟಿ ಕರೀನಾ ಕಪೂರ್‌ಗೆ ಮಧ್ಯಪ್ರದೇಶ ಹೊಸ ಸಂಕಷ್ಟ ಎದುರಾಗಿದೆ. ತಾವು ಬರೆದ ತಾಯ್ತನದ ಪುಸ್ತಕದಲ್ಲಿ ಬೈಬಲ್ ಪದ ಬಳಸಿದ್ದಕ್ಕೆ ಬೆಬೋಗೆ ಮಧ್ಯಪ್ರದೇಶ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಗರ್ಭಾವಸ್ಥೆ ಹಾಗೂ ತಾಯ್ತನಕ್ಕೆ ಸಂಬಂಧಿಸಿದಂತೆ ನಟಿ ಕರೀನಾ ಪುಸ್ತಕವೊಂದನ್ನು ಬರೆದಿದ್ದರು.
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್‌ಗೆ ಮಧ್ಯಪ್ರದೇಶ ಹೊಸ ಸಂಕಷ್ಟ ಎದುರಾಗಿದೆ. ತಾವು ಬರೆದ ತಾಯ್ತನದ ಪುಸ್ತಕದಲ್ಲಿ ಬೈಬಲ್ ಪದ ಬಳಸಿದ್ದಕ್ಕೆ ಬೆಬೋಗೆ ಮಧ್ಯಪ್ರದೇಶ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಗರ್ಭಾವಸ್ಥೆ ಹಾಗೂ ತಾಯ್ತನಕ್ಕೆ ಸಂಬಂಧಿಸಿದಂತೆ ನಟಿ ಕರೀನಾ ಪುಸ್ತಕವೊಂದನ್ನು ಬರೆದಿದ್ದರು. ಇದಕ್ಕೆ ಅವರು 'ಕರೀನಾ ಕಪೂರ್ ಖಾನ್ಸ್ ಪ್ರಗ್ನೆನ್ಸಿ ಬೈಬಲ್ ಎಂದು ಹೆಸರಿಟ್ಟಿದ್ದರು. ಆದರೆ ಹೀಗೆ ಬೈಬಲ್ ಪದ ಬಳಸಿ ತಮ್ಮ ಪುಸ್ತಕಕ್ಕೆ ಹೆಸರಿಟ್ಟಿರುವುದಕ್ಕೆ ವಕೀಲರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಈಗ ಮಧ್ಯ ಪ್ರದೇಶದ ಹೈಕೋರ್ಟ್ ನಟಿ ಕರೀನಾಗೆ ನೊಟೀಸ್ ಜಾರಿ ಮಾಡಿದೆ.
ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಾಧೀಶರಾದ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರು ಕರೀನಾ ಕಪೂರ್ ಹಾಗೂ ಪುಸ್ತಕದ ಮಾರಾಟಗಾರರಿಗೆ ನೊಟೀಸ್ ಜಾರಿ ಮಾಡಿದ್ದು, ಏಕೆ ತಮ್ಮ ಪುಸ್ತಕದ ಹೆಸರಿಗೆ ಬೈಬಲ್ ಎಂಬ ಪದವನ್ನು ಸೇರಿಸಿದ್ದೀರಿ ಎಂಬ ಬಗ್ಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ವಕೀಲ ಕ್ರಿಸ್ಟೋಫರ್ ಅಂಥೋನಿ ಅವರ ಅರ್ಜಿಯ ನಂತರ ನ್ಯಾಯಾಧೀಶರು ಈ ನೋಟೀಸ್ ಜಾರಿ ಮಾಡಿದ್ದಾರೆ. ಅಂಥೋಣಿ ಅವರು ಈ ಪುಸ್ತಕದ ಮಾರಾಟವನ್ನು ಕೂಡ ಬ್ಯಾನ್ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟಗಾರರಿಗೂ ಈ ನೊಟೀಸ್ ಜಾರಿ ಮಾಡಲಾಗಿದೆ.
undefined
ಹಿಂದೂ ಧರ್ಮದಲ್ಲಿ ಹುಟ್ಟಿದ ಕರೀನಾ ಕಪೂರ್ ಮಗನಿಗೆ ತೈಮೂರ್ ಆಲಿ ಖಾನ್ ಅಂತ ಹೆಸರಿಟ್ಟಿದ್ಯಾಕೆ?
ಹೀಗೆ ಕರೀನಾಗೆ ನೋಟೀಸ್ ಜಾರಿ ಮಾಡುವುದಕ್ಕೆ ಕಾರಣವಾಗಿರುವ ಕ್ರಿಸ್ಟೋಫರ್ ಅಂಥೋಣಿ ಜಬಲ್‌ಪುರ ಮೂಲದ ಸಾಮಾಜಿಕ ಕಾರ್ಯಕರ್ತರಾಗಿದ್ದು, ಕರೀನಾ ಪುಸ್ತಕದ ಹೆಸರಿನ ವಿರುದ್ಧ ಸಲ್ಲಿಸಿರುವ ಅರ್ಜಿಯಲ್ಲಿ, ಪುಸ್ತಕದಲ್ಲಿ ಬೈಬಲ್ ಪದ ಬಳಸಿರುವುದರಿಂದ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವುಂಟಾಗಿದೆ. ಬೈಬಲ್ ಜಗತ್ತಿನೆಲ್ಲೆಡೆ ಇರುವ ಕ್ರಿಶ್ಚಿಯನ್ ಸಮುದಾಯದ ಶ್ರೇಷ್ಠಗ್ರಂಥವಾಗಿದ್ದು, ಅದನ್ನು ಕರೀನಾ ಕಪೂರ್ ತಮ್ಮ ಗರ್ಭಾವಸ್ಥೆಗೆ ಸಂಬಂಧಿಸಿದ ಪುಸ್ತಕಕ್ಕೆ ಹೋಲಿಕೆ ಮಾಡಿರುವುದು ತಪ್ಪು, ನಟಿ ತಮ್ಮ ಪುಸ್ತಕಕ್ಕೆ ಪ್ರಚಾರಕ್ಕಾಗಿ ಈ ಬೈಬಲ್ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
2021ರಲ್ಲಿ ಕರೀನಾ ಕಪೂರ್ ಈ ಪುಸ್ತಕವನ್ನು ಪ್ರಕಟ ಮಾಡಿದ್ದರು, 43 ವರ್ಷದ ನಟಿ ಕರೀನಾ ತಮ್ಮ ಗರ್ಭಾವಸ್ಥೆ ಹಾಗೂ ತಾಯ್ತನದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದು, ಇದರಲ್ಲಿ ತಾಯಿಯಾಗುವರಿಗೆ ಕೆಲವು ವಿಶೇಷ ಸೂಚನೆಗಳು ಮಾಹಿತಿಗಳು ಇವೆ. ಇತ್ತ ಹೀಗೆ ಕರೀನಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಸ್ಟೋಫರ್ ಅಂಥೋನಿ ಮೊದಲಿಗೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲು ಮುಂದಾಗಿದ್ದರು. ಆದರೆ ಅವರು ದೂರು ದಾಖಲಿಸಲು ಒಪ್ಪದೇ ಇದ್ದಾಗ ಕೆಳಹಂತದ ನ್ಯಾಯಾಲಯದಲ್ಲಿ ದೂರು ನೀಡಲು ಮುಂದಾದರು. ಆದರೆ ಅಲ್ಲಿನ ನ್ಯಾಯಾಲಯ ಇವರ ಅರ್ಜಿಯನ್ನು ತಿರಸ್ಕರಿಸಿತು. ಇದಾದ ನಂತರ ಇವರು ಮೇಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದ ಹೈಕೋರ್ಟ್ ನಟಿ ಕರೀನಾ ಕಪೂರ್‌ಗೆ ನೋಟೀಸ್ ಜಾರಿ ಮಾಡಿದೆ.
ಮಕ್ಕಳನ್ನು ಬೆಳೆಸೋದು ಹೇಗೆ? ಬಾಲಿವುಡ್ ನಟ, ನಟಿಯರು ಹೇಳ್ತಾರೆ ಕೇಳಿ!