ಸಂಜಯ್ ಲೀಲಾ ಬನ್ಸಾಲಿಯ 'ಹೀರಾಮಂಡಿ' ಬಜೆಟ್ ಎಷ್ಟು, ವೇಶ್ಯೆಯಾಗಿ ನಟಿಸಿದವರ ಸಂಭಾವನೆ ಎಷ್ಟು ಕೋಟಿ?

By Vinutha Perla  |  First Published May 10, 2024, 5:47 PM IST

ಖ್ಯಾತ ಬಾಲಿವುಡ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರ ಚೊಚ್ಚಲ ವೆಬ್ ಸೀರಿಸ್ 'ಹೀರಾಮಂಡಿ, ದಿ ಡೈಮಂಡ್ ಬಜಾರ್' ಎಲ್ಲೆಡೆ ಸದ್ದು ಮಾಡ್ತಿದೆ. ಅದ್ದೂರಿ ಕಾಸ್ಟ್ಯೂಮ್‌, ಜ್ಯುವೆಲ್ಸ್‌ ಬಳಸಿರೋ ಈ ಸಿನಿಮಾದ ಬಜೆಟ್‌ ಎಷ್ಟೂಂತ ಎಲ್ಲರೂ ಮಾತನಾಡಿಕೊಳ್ತಿದ್ದಾರೆ. ಮಾತ್ರವಲ್ಲ ಈ ವೆಬ್‌ ಸಿರೀಸ್‌ಗೆ ನಟ-ನಟಿಯರು ಪಡೆದುಕೊಂಡ ಸಂಭಾವನೆಯೂ ಕೋಟಿಯಲ್ಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ಖ್ಯಾತ ಬಾಲಿವುಡ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರ ಚೊಚ್ಚಲ ವೆಬ್ ಸೀರಿಸ್ ಹೀರಾಮಂಡಿ, ದಿ ಡೈಮಂಡ್ ಬಜಾರ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಹೀರಾಮಂಡಿ ಸಿರೀಸ್‌ ಕೇವಲ ಅದರಲ್ಲಿನ ನಟಿಯರ ಅಭಿನಯಕ್ಕಾಗಿ ಮಾತ್ರವಲ್ಲದೆ ಅದರ ಸೆಟ್ ವಿನ್ಯಾಸ ಮತ್ತು ವೇಷಭೂಷಣಗಳಿಗಾಗಿ ಪ್ರಶಂಸಿಸಲ್ಪಟ್ಟಿದೆ. ವಬ್‌ ಸಿರೀಸ್‌ನ ಹೈ ಬಜೆಟ್, ಬಳಸಿದ ದುಬಾರಿ ಆಭರಣಗಳು, ನಟ-ನಟಿಯರಿಗೆ ಪಾವತಿಸಿದ ಸಂಭಾವನೆಯೂ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದೆ.

ವರದಿಗಳ ಪ್ರಕಾರ, ಸಂಜಯ್ ಲೀಲಾ ಬನ್ಸಾಲಿ ಈ ವೆಬ್‌ ಸರಣಿಯ ನಿರ್ದೇಶನಕ್ಕಾಗಿ ಅಂದಾಜು 60-70 ಕೋಟಿ ಖರ್ಚು ಮಾಡಿದ್ದಾರೆ. ಹಾಗೆಯೇ ನಟ-ನಟಿಯರಿಗೆ ಕೋಟಿಯಲ್ಲಿ ಸಂಭಾವನೆಯನ್ನು ನೀಡಿದ್ದಾರೆ. ಯಾರಿಗೆ ಎಷ್ಟೆಲ್ಲಾ ಸಂಭಾವನೆ ನೀಡಲಾಗಿದೆ ತಿಳಿಯೋಣ.

Latest Videos

undefined

ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ

ಸೋನಾಕ್ಷಿ ಸಿನ್ಹಾ
ರೆಹಾನಾ ಮತ್ತು ಫರೀದನ್‌ರ ದ್ವಿಪಾತ್ರದಲ್ಲಿ ನಟಿಸಿದ್ದಕ್ಕಾಗಿ ಸೋನಾಕ್ಷಿ ಸಿನ್ಹಾ ಬರೋಬ್ಬರಿ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇವರು ಹೀರಾಮಂಡಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿದ್ದಾರೆ.

ಮನೀಶಾ ಕೊಯಿರಾಲಾ
 ವೇಶ್ಯೆ ಮಲ್ಲಿಕಾಜಾನ್ ಪ್ರಬಂಧಕ್ಕಾಗಿ ಮನೀಶಾ 1 ಕೋಟಿ ಸಂಭಾವನೆ ಪಡೆದರು

ಅದಿತಿ ರಾವ್ ಹೈದರಿ
ಅದಿತಿ ರಾವ್‌ ಹೈದರಿಗೆ 1-1.5 ಕೋಟಿ ಸಂಭಾವನೆ ನೀಡಲಾಗಿದೆ. ಅವರು ಮಲ್ಲಿಕಾಜಾನ್ ಅವರ ಹಿರಿಯ ಮಗಳು ಬಿಬ್ಬೋಜಾನ್ ಪಾತ್ರವನ್ನು ನಿರ್ವಹಿಸಿದ್ದಾರೆ.

ರಿಚಾ ಚಡ್ಡಾ
ರಿಚಾ ಅವರು ಮಲ್ಲಿಕಾಜಾನ್ ಅವರ ಸಾಕು ಮಗಳು ಲಜ್ವಂತಿ ಅಕಾ ಲಜ್ಜೋ ಪಾತ್ರವನ್ನು ಮಾಡಿದ್ದು, ಮನಿಷಾಗೆ ಸರಿಸಮಾನವಾದ ಸಂಭಾವನೆಯನ್ನೂ ಪಡದಿದ್ದಾರೆ. ಅಂದರೆ ಬರೋಬ್ಬರಿ 1 ಕೋಟಿ ಸಂಭಾವನೆ ಪಡೆದರು.

ಸಂಜೀದಾ ಶೇಖ್
ಸಂಜೀದಾ ರೆಹನಾ ಮತ್ತು ಮಲ್ಲಿಕಾಜಾನ್ ಅವರ ತಂಗಿ ವಹೀದಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪ್ರದರ್ಶನದಿಂದ ಆಕೆ 40 ಲಕ್ಷ ರೂ. ಗಳಿಸಿದ್ದಾಳೆ.

ಸಂಜಯ್ ಲೀಲಾ ಬನ್ಸಾಲಿಯ ಚಿತ್ರಗಳಲ್ಲೆಲ್ಲ ವೇಶ್ಯಾವಾಟಿಕೆ ಇದ್ದೇ ಇರುತ್ತೆ ಏಕೆ?

ಶರ್ಮಿನ್ ಸೆಹಗಲ್
ಮಲ್ಲಿಕಾಜಾನ್ ಅವರ ಕಿರಿಯ ಮಗಳ ಪಾತ್ರ ಮಾಡಿರುವ ಶರ್ಮಿನ್, ತನ್ನ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ 30 ಲಕ್ಷ ರೂ. ಸಂಭಾವನೆ ಪಡೆದರು.

ಫರ್ದೀನ್ ಖಾನ್
ನವಾಬ್ ವಾಲಿ ಬಿನ್ ಜಾಯೆದ್-ಅಲ್ ಮೊಹಮ್ಮದ್ ಆಗಿ ಪುನರಾಗಮನ ಮಾಡಿದ ಫರ್ದೀನ್ ಹೀರಾಮಂಡಿಗೆ 75 ಲಕ್ಷ ರೂ. ಶುಲ್ಕ ವಿಧಿಸಿದರು. ಇದಲ್ಲದೆ ಹೀರಾಮಂಡಿ ಚಿತ್ರದಲ್ಲಿ ಶೇಖರ್ ಸುಮನ್, ಅಧ್ಯಾಯನ್ ಸುಮನ್, ತಹಾ ಶಾ ಬಾದುಶಾ, ಫರೀದಾ ಜಲಾಲ್ ಮತ್ತು ಶ್ರುತಿ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಹೀರಾಮಂಡಿ ವೆಬ್‌ ಸಿರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ.

click me!