ಭಾರತದ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾಗಿರುವ ವಿರುಷ್ಕ ಬರೀ ಆಟ, ಸಿನಿಮಾದಿಂದ ಮಾತ್ರವಲ್ಲ ತಮ್ಮ ವ್ಯವಹಾರದಿಂದಲೂ ಜನರ ಗಮನ ಸೆಳೆಯುತ್ತಾರೆ. ಬುದ್ಧಿವಂತಿಕೆಯಿಂದ ಹಣ ಹೂಡುವ ಜೋಡಿಗೆ ಹಣವನ್ನು ಡಬಲ್ ಮಾಡುವ ಕಲೆ ಗೊತ್ತಿದೆ.
ಹಣ ಸಂಪಾದನೆ ಮಾಡಿದ್ರೆ ಮಾತ್ರ ಸಾಲೋದಿಲ್ಲ ಮಾಡಿದ ಹಣ ಮತ್ತೆ ದುಡಿಯಬೇಕು. ಅಂದ್ರೆ ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ, ಹಣವನ್ನು ಡಬಲ್ ಮಾಡ್ಬೇಕು. ಬುದ್ಧಿವಂತ ಹೂಡಿಕೆದಾರರು ಅವಕಾಶ ನೋಡಿ ಹಣವನ್ನು ಹೂಡಿಕೆ ಮಾಡ್ತಾರೆ. ಇದಕ್ಕೆ ಭಾರತದ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಜೋಡಿ ಉತ್ತಮ ನಿದರ್ಶನ. ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುವ ವಿರುಷ್ಕಾ ಜೋಡಿ ಅದೆಲ್ಲವನ್ನು ಖರ್ಚು ಮಾಡಿ ಕೈಚೆಲ್ಲಿ ಕುಳಿತುಕೊಳ್ಳೋದಿಲ್ಲ. ಅದನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುತ್ತಾರೆ. ನಾಲ್ಕು ವರ್ಷಗಳ ಹಿಂದೆ ಮಾಡಿದ ಕೆಲಸಕ್ಕೆ ಈಗ ವಿರುಷ್ಕಾ ಖುಷಿಯಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ವಿರುಷ್ಕ (Virushka) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಅದ್ರ ಫಲ ಈಗ ಸಿಕ್ಕಿದೆ. ಎರಡುವರೆ ಕೋಟಿ ಹೂಡಿಕೆ ಈಗ 9 ಕೋಟಿಗೆ ಬಂದು ನಿಂತಿದೆ.
ಕರ್ಮ ಬೆನ್ನು ಬಿಡಲ್ಲ; ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ ಹೀಗ್ಯಾಕೆ ಹೇಳಿದ್ರು?
ಗೋ ಡಿಜಿಟ್ (Go Digit) ಜನರಲ್ ಇನ್ಶೂರೆನ್ಸ್‌ನಲ್ಲಿನ ವಿರಾಟ್ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ ಹೂಡಿಕೆ ಮಾಡಿದ್ದರು. ವರದಿ ಪ್ರಕಾರ, ವಿರುಷ್ಕಾ, ಫೆಬ್ರವರಿ 2020ರಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ನಲ್ಲಿ ಹೂಡಿಕೆ ಮಾಡಿದ್ದರು. ಆಗ ಪ್ರತಿ ಷೇರಿನ ಬೆಲೆ 75 ರೂಪಾಯಿ ಇತ್ತು. ಈ ದರದಲ್ಲಿಯೇ ವಿರಾಟ್ ಕೊಹ್ಲಿ 2,66,667 ಈಕ್ವಿಟಿ ಷೇರುಗಳನ್ನು ಖರೀದಿ ಮಾಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ 2 ಕೋಟಿ ರೂಪಾಯಿ ಹೂಡಿಕೆ (Investment) ಮಾಡಿದ್ದರು. ಅನುಷ್ಕಾ ಶರ್ಮಾ ಕೂಡ ಇದೇ ಷೇರಿನಲ್ಲಿ ಹೂಡಿಕೆ ಮಾಡಿದ್ದರು. ಪ್ರತಿ ಷೇರಿಗೆ 75 ರೂಪಾಯಿಯಂತೆ 66,667 ಈಕ್ವಿಟಿ ಷೇರುಗಳನ್ನು (Equity Shares) ಖರೀದಿ ಮಾಡಿದ್ದರು. ಅದಕ್ಕೆ ಅನುಷ್ಕಾ 50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಕೊಹ್ಲಿ ಹಾಗೂ ಅನುಷ್ಕಾ ಒಟ್ಟೂ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ನಲ್ಲಿ 2.5 ಕೋಟಿ ಮೌಲ್ಯದ ಷೇರು ಖರೀದಿ ಮಾಡಿದ್ದರು.
ಮೇ 15ರಂದು ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಕಂಪನಿ ತನ್ನ ಐಪಿಒ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಪ್ರತಿ ಐಪಿಒ ಬೆಲೆಯನ್ನು ಕಂಪನಿ 258ರಿಂದ 272ಕ್ಕೆ ನಿಗದಿಪಡಿಸಿದೆ. ಈ ಹಿಂದೆಯೇ ಹೂಡಿಕೆ ಮಾಡಿದ್ದ ವಿರುಷ್ಕಾಗೆ ಇದ್ರಿಂದ ಶೇಕಡಾ 262ರಷ್ಟು ರಿಟರ್ನ್ ಸಿಗಲಿದೆ.
ನೀವು ವಿರಾಟ್ ಕೊಹ್ಲಿ ಒಂದು ಷೇರಿನ ಬೆಲೆಯನ್ನು 272 ರೂಪಾಯಿ ದರದಲ್ಲಿ ಲೆಕ್ಕ ಹಾಕಿದ್ರೆ ಕೊಹ್ಲಿಯ 2,66,667 ಷೇರುಗಳ ಮೌಲ್ಯ 7.25 ಕೋಟಿಯಾಗಲಿದೆ. ಅದೇ ಅನುಷ್ಕಾ ಶರ್ಮಾ ಅವರ 66,667 ಷೇರಿನ ಬೆಲೆ 1.81 ಕೋಟಿಯಾಗಲಿದೆ. ಒಟ್ಟೂ ಲೆಕ್ಕ ಹಾಕಿದ್ರೆ 9.07 ಕೋಟಿಯಾಗಲಿದೆ. ನಾಲ್ಕು ವರ್ಷದ ಹಿಂದೆ 2.5 ಕೋಟಿ ಹೂಡಿಕೆ ಮಾಡಿದ್ದ ದಂಪತಿ 9.07 ಕೋಟಿ ಸಂಪಾದಿಸಿದ್ದಾರೆ. ಆದ್ರೆ ವಿರುಷ್ಕಾ ತಮ್ಮ ಷೇರುಗಳನ್ನು ಈಗ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ.
ಆಧಾರ್ ದುರ್ಬಳಕೆ ತಡೆಯಲು ಹೊಸ ವಿಧಾನ ಪರಿಚಯಿಸಿದ ಯುಐಡಿಎಐ; ಏನಿದರ ವಿಶೇಷತೆ?
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಭಾರತದ ಮೊದಲ ಗೋ ಡಿಜಿಟಲ್ ಜನರಲ್ ಇನ್ಶುರೆನ್ಸ್ ಪೂರೈಕೆದಾರ. ಕಂಪನಿಯು ಇತ್ತೀಚೆಗೆ ಎರಡು ಮಿಲಿಯನ್ ಗ್ರಾಹಕರನ್ನು ದಾಟಿದೆ. ಮೇ 15 ರಿಂದ ಗೋ ಡಿಜಿಟ್ ಜನರಲ್ ಇನ್ಶುರೆನ್ಸ್ ಐಪಿಒನಲ್ಲಿ ಬಿಡ್ ಮಾಡಬಹುದು. ಇದರ ಬಿಡ್ಡಿಂಗ್ ಶುಕ್ರವಾರ ಮೇ 17 ರಂದು ಮುಕ್ತಾಯಗೊಳ್ಳಲಿದೆ. ಗೋ ಡಿಜಿಟ್ ಜನರಲ್ ಇನ್ಶುರೆನ್ಸ್ ಐಪಿಒಗಾಗಿ ಆಂಕರ್ ಹೂಡಿಕೆದಾರರಿಗೆ ಹಂಚಿಕೆ ಮೇ 14 ರಂದು ನಡೆಯಲಿದೆ. ಸಾಮಾನ್ಯ ವಿಮಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋ ಡಿಜಿಟ್ ಕಂಪನಿಯು ಗ್ರೇ ಮಾರುಕಟ್ಟೆಯಲ್ಲಿ ಉತ್ತಮ ಪ್ರೀಮಿಯಂ ಪಡೆಯುತ್ತಿದೆ.