ಅಮಿತ್ ಶಾ ಭೇಟಿಯಾದ ಅಶಾ ಭೋಸ್ಲೆ, ಅಭಿ ನಾ ಜಾವೋ ಚೋಡ್ಕರ್ ಸಾಂಗ್ ಹಾಡಿದ ಗಾಯಕಿ!

Published : Mar 06, 2024, 07:08 PM IST
ಅಮಿತ್ ಶಾ ಭೇಟಿಯಾದ ಅಶಾ ಭೋಸ್ಲೆ, ಅಭಿ ನಾ ಜಾವೋ ಚೋಡ್ಕರ್ ಸಾಂಗ್ ಹಾಡಿದ ಗಾಯಕಿ!

ಸಾರಾಂಶ

ಬಾಲಿವುಡ್ ದಿಗ್ಗಜ ಗಾಯಕಿ ಅಶಾ ಭೋಸ್ಲೆ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ಈ ಭೇಟಿ ವೇಳೆ ಬಾಲಿವುಡ್ ಖ್ಯಾತ ಹಾಡು ಅಭಿ ನಾ ಜಾವೋ ಚೋಡ್ಕರ್ ಹಾಡು ಹಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮುಂಬೈ(ಮಾ.06) ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಬಾಲಿವುಡ್ ದಿಗ್ಗಜ ಗಾಯಕಿ ಅಶಾ ಭೋಸ್ಲೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.  ವಿಶೇಷ ಅಂದರೆ ಈ ಭೇಟಿ ವೇಳೆ ಅಶಾ ಭೋಸ್ಲಾ 1961ರ ದಶಕಗ ಬಾಲಿವುಡ್‌ನ ಜನಪ್ರಿಯ ಅಭಿ ನಾ ಜಾವೋ ಚೋಡ್ಕರ್ ಹಾಡು ಹಾಡಿದ್ದಾರೆ. ಭೋಸ್ಲೆ ಹಾಡು ಮೆಚ್ಚಿದ ಅಮಿತ್ ಶಾ ಅಭಿನಂದಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಮುಂಬೈನಲ್ಲಿ ಅಶಾ ಭೋಸ್ಲೆ ಅವರ ಅತ್ಯುತ್ತಮ ಫೋಟೋಗಳ ಸರಮಾಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣ ಮಾಡಿದ್ದಾರೆ. ಈ ವೇಳೆ ಆಶಾ ಭೋಸ್ಲೆ ಹಾಗೂ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಶಾ ಭೋಸ್ಲೆ ಮೊಮ್ಮಗಳು ಕೂಡ ಈ ವೇಳ ಹಾಜರಿದ್ದರು. 1961ರ ಹಮ್ ದೋನೋ ಬಾಲಿವುಡ್ ಚಿತ್ರದ ಅಭಿ ನಾ ಜಾವೋ ಚೋಡ್ಕರ್ ಹಾಡನ್ನು ಹಾಡಿದ್ದಾರೆ.

ಭಾರತದ ಶ್ರೀಮಂತ ಮಹಿಳಾ ಗಾಯಕಿ, ಶ್ರೇಯಾ ಘೋಷಾಲ್, ಸುನಿಧಿ, ನೇಹಾ ಕಕ್ಕರ್ ಇವರು ಯಾರೂ ಅಲ್ಲ!

ಅಶಾ ಭೋಸ್ಲೆ ಭೇಟಿ ಕುರಿತು ಅಮಿತ್ ಶಾ ಸಂತಸ ಹಂಚಿಕೊಂಡಿದ್ದಾರೆ. ಅಶಾ ಜಿಯನ್ನು ಭೇಟಿಯಾಗುವುದು ಯಾವತ್ತೂ ಅತ್ಯಂತ ಸಂತಸ ಹಾಗೂ ಆಹ್ಲಾದಕರ. ಇಂದು ಮುಂಬೈನಲ್ಲಿ ಅಶಾ ಜೀ ಅವರೊಂದಿಗೆ ಭಾರತೀಯ ಸಂಗೀತ, ಸಂಸ್ಕೃತಿ ಕುರಿತು ಅತ್ಯುತ್ತ ಚರ್ಚೆ ಮಾಡಿದ್ದೇನೆ. ಅವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅವರ ಸುಮುಧುರ ಧ್ವನಿ ಸಂಗೀತ ಕ್ಷೇತ್ರಕ್ಕೆ ಆಶೀರ್ವಾದವಾಗಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಅಶಾ ಭೋಸ್ಲೆ ಮೊಮ್ಮಗಳು ಝನೈ ಭೋಸ್ಲೆ ಕೂಡ ಈ ಸಂಭ್ರಮದ ಘಳಿಗೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ಅಶ್ಲಾ ಭೋಸ್ಲೆಯ ಅತ್ಯುತ್ತಮ ಫೋಟೋಗಳನ್ನು ತೆಗೆದು ಫೋಟೋಗ್ರಾಫರ್ ಗೌತಮ್ ರಾಜ್ಯಾಧ್ಯಕ್ಷ  ಇದೀಗ ಸಂಗ್ರಹ ಮಾಲಿಕೆಯಾಗಿ ಅನಾವರಣ ಮಾಡಿದ್ದಾರೆ. ಈ ಮೂಲಕ ದಿಗ್ಗಜ ಗಾಯಕಿಗೆ ಗೌರವ ಸಲ್ಲಿಸಲಾಗಿದೆ. 

 

 

ಮುಂಬೈನಲ್ಲಿ ವಿವಿಧ ಕಾರ್ಯಕ್ರಮಗಳ ಬಳಿಕ ಅಮಿತ್ ಶಾ, ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಅಭೂತಪೂರ್ವ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಹೆಜ್ಜೆ ಹಾಕಲು ಸೂಚಿಸಿದ್ದಾರೆ. ಸೀಟು ಹಂಚಿಕೆಯಲ್ಲಿ ಗೊಂದಲಗಳಾಗಬಾರದು. 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಅವಿರತ ಶ್ರಮಿಸಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರೆ.

ಮದ್ವೆಯಾಗಲೂ ಆಶಾಗೆ ರಿಸ್ಟ್ರಿಕ್ಟ್ ಮಾಡಿದ್ರಾ ಲತಾ ಮಂಗೇಶ್ಕರ್, ತಂಗಿ ಮೇಲೆ ಹೊಟ್ಟೆಕಿಚ್ಚಿತ್ತಾ ಅಕ್ಕಂಗೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?