ಆಸ್ಕರ್‌ಗೆ ಎಂಟ್ರಿ ಕೊಟ್ಟ ಲಾಪತ ಲೇಡಿಸ್ ಕದ್ದ ಸಿನಿಮಾನ? ಈ ವಿಷ್ಯುವಲ್ ನೋಡಿ..

Published : Apr 01, 2025, 09:59 PM ISTUpdated : Apr 02, 2025, 09:45 AM IST
ಆಸ್ಕರ್‌ಗೆ ಎಂಟ್ರಿ ಕೊಟ್ಟ ಲಾಪತ ಲೇಡಿಸ್ ಕದ್ದ ಸಿನಿಮಾನ? ಈ ವಿಷ್ಯುವಲ್ ನೋಡಿ..

ಸಾರಾಂಶ

ಕಿರಣ್‌ ರಾವ್ ನಿರ್ದೇಶನದಲ್ಲಿ ಇತ್ತೀಚೆಗೆ ಆಸ್ಕರ್‌ಗೆ ಎಂಟ್ರಿಕೊಟ್ಟಿದ್ದ ಜನಪ್ರಿಯ ಸಿನಿಮಾ ಲಾಪತ ಲೇಡೀಸ್‌ ಕದ್ದ ಚಿತ್ರ ಅನ್ನೋ ಸುದ್ದಿ ವೈರಲ್ ಆಗ್ತಿದೆ. ಅದಕ್ಕೆ ಸರಿಯಾಗಿ ಈ ವಿಷ್ಯುವಲ್ ಕೂಡ ಸಿಕ್ಕಿದೆ.

ಕಿರಣ್‌ ರಾವ್ ಇತ್ತೀಚೆಗೆ ಇಂಗ್ಲೀಷ್‌ ಮ್ಯಾಗಜಿನ್‌ ಒಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ 'ನಂಗೆ ನನ್ನ ಇಷ್ಟಾನಿಷ್ಟ ಏನು, ನನ್ನ ಐಡೆಂಟಿಟಿ ಏನು ಅಂತ ಕಂಡುಕೊಳ್ಳೋಕೇ ಭಾಳ ವರ್ಷ ಹಿಡಿಯಿತು. ನನ್ನಂಥ ಸುಶಿಕ್ಷಿತ ಹೆಣ್ಣುಮಗಳ ಕಥೆಯೇ ಹೀಗಾದರೆ ಇನ್ನು ತೀರಾ ಸಾಮಾನ್ಯ ಹೆಣ್ಣುಮಕ್ಕಳ ಕಥೆ ಹೇಗಿರಬೇಡ,, ' ಅಂದಿದ್ದರು. ಜೊತೆಗೆ ಇನ್ನೊಂದು ವಿಚಾರವನ್ನೂ ಹಂಚಿಕೊಂಡಿದ್ದರು. ಇವರು ಧೋಬಿ ಘಾಟ್ ಸಿನಿಮಾವನ್ನು ಅಮೀರ್‌ ಖಾನ್ ಜೊತೆಗೆ ಮಾಡಿದಾಗ ಅಮೀರ್‌ ಖಾನ್‌ ಹೆಂಡತಿ ಅಂತ ಇವ್ಳ ಹೆಸರು ಹಾಕಿದ್ದಾರೆ, ನಿಜಕ್ಕೂ ಕೆಲಸ ಮಾಡಿದ್ದೆಲ್ಲ ಅಮೀರ್ ಖಾನೇ ಆಗಿರ್ತಾರೆ. ಈಕೆಗೆ ಆತನ ಹೆಂಡತಿ ಅನ್ನೋ ಕಾರಣಕ್ಕೆ ಕ್ರೆಡಿಟ್‌ ಸಿಕ್ಕಿದೆ ಅಷ್ಟೇ. ಅದು ಬಿಟ್ಟು ಈಕೆ ಈ ಸಿನಿಮಾದಲ್ಲಿ ಏನೂ ಕೆಲಸ ಮಾಡಿರಲಿಕ್ಕಿಲ್ಲ' ಅಂತ. ಆದರೆ ಸಿನಿಮಾಕ್ಕಾಗಿ ತಾನೂ ಕೆಲಸ ಮಾಡ್ತೀನಿ, ತಾನೂ ಸಿನಿಮಾ ಮೇಕಿಂಗ್‌ ಭಾಗ, ನಿರ್ದೇಶನ, ನಿರ್ಮಾಣದ ಜಾಗದಲ್ಲಿ ತನ್ನ ಹೆಸರಿದ್ದರೆ ನಿಜಕ್ಕೂ ಅಲ್ಲಿ ತಾನೇ ಕೆಲಸ ಮಾಡಿರ್ತೀನಿ ಅನ್ನೋದು ಜನರಿಗೆ ಮನದಟ್ಟಾಗಲು ಲಾಪತ ಲೇಡಿಸ್ ಸಿನಿಮಾನೇ ಬರಬೇಕಾಯ್ತು ಅಂತ ಈ ನಟಿ ಹೇಳ್ಕೊಂಡಿದ್ದಾರೆ.

ಆಕೆ ಹೇಳಿರುವುದರಲ್ಲಿ ಅತಿಶಯೋಕ್ತಿ ಇಲ್ಲ. ಇವತ್ತಿಗೂ ಯಾವುದೇ ಫೀಲ್ಡ್‌ನಲ್ಲಿ ಹೆಣ್ಣಿನ ಕೆಲಸವನ್ನು ಗುರುತಿಸುವ ಮಾನದಂಡಗಳೇ ಬೇರೆ ಇರುತ್ತವೆ. ಇರಲಿ, ನಾವಿಲ್ಲಿ ಹೇಳಹೊರಟ ಸಬ್ಜೆಕ್ಟ್‌ ಅದಲ್ಲ, ಬದಲಾಗಿ ಇತ್ತೀಚೆಗೆ ಆಸ್ಕರ್‌ಗೆ ಇಂಡಿಯಾದಿಂದ ನಾಮಿನೇಟ್‌ ಆಗಿರುವ ಲಾಪತ ಲೇಡಿಸ್‌ ಸಿನಿಮಾದ ಬಗ್ಗೆ. ಈ ಸಿನಿಮಾವನ್ನು ತನ್ನ ಸ್ವಂತ ಕಥೆಯಿಂದ ಮಾಡಿದ್ದಾಗಿ ನಿರ್ದೇಶಕಿ ಕಿರಣ್‌ ರಾವ್ ಹೇಳಿದ್ರು. ಸೋ, ಎಲ್ಲ ಕಡೆ ಇದು ಕಿರಣ್‌ ರಾವ್ ಅವರ ಸ್ವತಂತ್ರ್ಯ ಸಿನಿಮಾ. ಅವರದೇ ಕಥೆ ಎಂದೆಲ್ಲ ಸುದ್ದಿಯಾಯ್ತು. ಆದರೆ ಬುದ್ಧವಂತ ನೆಟ್ಟಿಗರೊಬ್ಬರು ಈ ಸಿನಿಮಾ ಕದ್ದದ್ದು ಅನ್ನೋದನ್ನು ಸಾಕ್ಷಿ ಸಮೇತ ಹಿಡಿದು ತಂದು ಸೋಷಲ್‌ ಮೀಡಿಯಾದಲ್ಲಿ ಬಿಟ್ಟಿದ್ದಾರೆ. ಅದಕ್ಕೊಂದು ಸುದೀರ್ಘ ನೋಟ್‌ ಅನ್ನೂ ನೀಡಿದ್ದಾರೆ. 

ಮಾಜಿ ಪತ್ನಿಯರ ಜೊತೆ ಈದ್ ಹಬ್ಬ ಆಚರಿಸಿದ ಅಮೀರ್ ಖಾನ್, ಈಗಿನ ಪ್ರೇಯಸಿಯೂ ಜೊತೆಗಿದ್ಲಾ!?

ಸೋಷಲ್‌ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರೋ ಸ್ಕಿನ್‌ ಡಾಕ್ಟರ್‌ ಅಕೌಂಟ್‌ನಲ್ಲಿರುವ ನೋಟ್‌ ಹೀಗಿದೆ - 'ಕಿರಣ್ ರಾವ್ ಅವರ 'ಲಪತಾ ಲೇಡೀಸ್', ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿದ್ದು, ಇದನ್ನು ಮೂಲ ಕೃತಿ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ, 2019 ರ 'ಬುರ್ಕಾ ಸಿಟಿ' ಎಂಬ ಕಿರುಚಿತ್ರದಿಂದ ಪ್ರೇರಿತವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುವ ಈ 19 ನಿಮಿಷಗಳ ಚಲನಚಿತ್ರವು ನವವಿವಾಹಿತ ಪುರುಷನೊಬ್ಬನ ಪತ್ನಿ ಒಂದೇ ರೀತಿಯ ಬುರ್ಖಾ ಧರಿಸುವುದರಿಂದ ವಿನಿಮಯ ಮಾಡಿಕೊಳ್ಳುವುದನ್ನು ಅನುಸರಿಸುತ್ತದೆ. ನಂತರ ಅವನು ಅವಳನ್ನು ಹುಡುಕಲು ಪ್ರಯಾಣ ಬೆಳೆಸುತ್ತಾನೆ. ಈ ವಿಡಂಬನಾತ್ಮಕ ಹಾಸ್ಯವು, ಮಹಿಳೆಯರನ್ನು ಅನನ್ಯ ವ್ಯಕ್ತಿಗಳ ಬದಲಿಗೆ ಪರಸ್ಪರ ಬದಲಾಯಿಸಬಹುದಾದ ವಸ್ತುಗಳಾಗಿ ಪರಿಗಣಿಸುವ ಸಮಾಜದ ಅಸಂಬದ್ಧತೆಯನ್ನು ಎತ್ತಿ ತೋರಿಸುತ್ತದೆ, ತೀವ್ರ ಪಿತೃಪ್ರಭುತ್ವ, ಲಿಂಗ ಆಧಾರಿತ ನಿರ್ಬಂಧಗಳು ಮತ್ತು ಗುರುತಿನ ನಷ್ಟವನ್ನು ಟೀಕಿಸುತ್ತದೆ. ಕಿರಣ್ ರಾವ್ 'ಲಪತಾ ಲೇಡೀಸ್' ಅನ್ನು ಅದೇ ವಿಷಯದೊಂದಿಗೆ, ಬುರ್ಖಾಗಳನ್ನು ಗುಂಘಟ್‌ಗಳೊಂದಿಗೆ ಬದಲಾಯಿಸಿದರು. ಈ ಚಿತ್ರವು ಪಿತೃಪ್ರಭುತ್ವ, ಸಾಮಾಜಿಕ ರೂಢಿಗಳು ಮತ್ತು ಮಹಿಳೆಯರ ಗುರುತಿನ ಬಗ್ಗೆ ಅದೇ ಸಂದೇಶವನ್ನು ಹೊಂದಿದೆ. ರವಿ ಕಿಶನ್ ಪೊಲೀಸ್ ಠಾಣೆಯ ದೃಶ್ಯವೂ ಸಹ ಹೆಚ್ಚು ಪ್ರೇರಿತವಾಗಿದೆ' ಎಂದಿದ್ದಾರೆ. 

ಡ್ರೆಸ್ ಚೇಂಜ್ ಮಾಡುವಾಗ ಕೋಣೆಗೆ ನುಗ್ಗಿದ ನಿರ್ದೇಶಕ, ಮುಂದೇನಾಯ್ತು? ನಟಿ ಶಾಲಿನಿ ಬಿಚ್ಚಿಟ್ಟ ಘಟನೆ

ಇದಕ್ಕೆ ಈಗ ಕಿರಣ್‌ ಏನು ಉತ್ತರ ಕೊಡ್ತಾರೆ ಅಂತ ಗೊತ್ತಿಲ್ಲ. ಮಾಜಿ ಗಂಡ ಹಾಗೂ ಆತನ ಮೊದಲ ಹೆಂಡತಿಯೊಂದಿಗೆ ಇತ್ತೀಚೆಗೆ ತಾನೇ ರಂಜಾನ್‌ ಆಚರಿಸಿಕೊಂಡಿರುವ ಕಿರಣ್‌ಗೆ ಈ ಸುದ್ದಿ ಹಬ್ಬದ ಶಾಕ್‌ನಂತೆ ಕಾಣಬಹುದು ಅಂತ ಜನ ಮಾತಾಡಿಕೊಳ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!