ಮಹಾಕುಂಭದಲ್ಲಿ ವೈರಲ್ ಆಗಿ ಬಳಿಕ ಬಾಲಿವುಡ್ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಮೊನಾಲಿಸಾ ಸಿನಿಮಾ ಕರಿಯರ್ ಆರಂಭಗೊಳ್ಳುವ ಮೊದಲೇ ಅಂತ್ಯಗೊಂಡಿತಾ? ನಿರ್ದೇಶಕನ ಬಂಧನದಿಂದ ಮೊನಾಲಿಸಾ ಮುಂದಿನ ನಡೆ ಏನು?
ನವದೆಹಲಿ(ಏ.01) ಮಹಾಕುಂಭದ ಮೂಲಕ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವೈರಲ್ ಬೆಡಗಿ ಮೊನಾಲಿಸಾ ಭೊಸ್ಲೆ ಸಿನಿಮಾ ಕರಿಯರ್ ಅತಂತ್ರವಾಗಿದೆ. ವೈರಲ್ ವಿಡಿಯೋದಿಂದ ಡೈರಿ ಆಫ್ ಮಣಿಪುರ ಬಾಲಿವುಡ್ ಸಿನಿಮಾದಲ್ಲಿ ಮೊನಾಲಿಸಿ ಅವಕಾಶಗಿಟ್ಟಿಸಿಕೊಂಡು ಭಾರಿ ಸದ್ದು ಮಾಡಿದ್ದರು. ಆದರೆ ಇದೀಗ ಈ ಆಫರ್ ನೀಡಿದ ನಿರ್ದೇಶಕ ಅರೆಸ್ಟ್ ಆಗಿದ್ದಾನೆ. ಹೀಗಾಗಿ ಮೊನಾಲಿಸಾ ಸಿನಿಮಾ ಕರಿಯರ್ ಕುರಿತು ಆತಂಕ ಮನೆ ಮಾಡಿದೆ. ನಿರ್ದೇಶಕನೇ ಅರೆಸ್ಟ್ ಆಗಿರುವ ಕಾರಣ ಮಣಿಪುರ್ ಸಿನಿಮಾ ಸದ್ಯಕ್ಕೆ ನಿರ್ಮಾಣವಾಗುವ ಯಾವುದೇ ಲಕ್ಷಣವಿಲ್ಲ. ಇದೇ ಸಿನಿಮಾ ಮೂಲಕ ಹೊಸ ಸಿನಿ ಕರಿಯರ್ ಆರಂಭಿಸಲು ಮುಂದಾಗಿದ್ದ ಮೊನಾಲಿಸಾಗೆ ಹೊಡೆತ ಬಿದ್ದಿದೆ.
ಮೊನಾಲಿಸಾ ಮುಂದಿನ ನಡೆ ಏನು?
ನಿರ್ದೇಶಕ ಸನೋಜ್ ಮಿಶ್ರಾ ಬಂಧನ ಪ್ರಮುಖವಾಗಿ ಮೊನಾಲಿಸ ಹಾಗೂ ಆಕೆಯ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಕುಂಭ ಮೇಳೆ, ಜಾತ್ರೆ ಸೇರಿದಂತೆ ವಿವಿಧ ಪ್ರಮುಖ ಉತ್ಸವಗಳಲ್ಲಿ ಮಣಿ, ಮಾಲೆ, ಸರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ, ಏಕಾಏಕಿ ಸ್ಟಾರ್ ಆಗಿ ಮಿಂಚಿದ್ದಳು. ಇದರ ಬೆನ್ನಲ್ಲೇ ಸಿನಿಮಾ ಆಫರ್ ಕೂಡ ಒಲಿದು ಬಂದಿತ್ತು. ಆದರೆ ನಿರ್ದೇಶಕನ ಬಂಧನದಿಂದ ಮೊನಾಲಿಸಾ ಸಿನಿಮಾ ಸೆಟ್ಟೇರುವ ಸಾಧ್ಯತೆ ಕಡಿಮೆ. ಹೀಗಾಗಿ ಮೊನಾಲಿಸಾ ಮುಂದೇನು ಮಾಡುತ್ತಾರೆ? ಮತ್ತೆ ಮಣಿ ಮಾಲೆ, ಸರ ಮಾರಾಟ ಮಾಡುವುದು ಸುಲಭದ ಮಾತಲ್ಲ. ಕಾರಣ ಈಕೆ ಈಗ ಸೆಲೆಬ್ರೆಟಿ, ಈ ಹಿಂದೇ ಯಾವುದೇ ಅಡ್ಡಿ ಆತಂಕವಿಲ್ಲದೆ ಕೆಲಸ ಮಾಡಿದಂತೆ ಇನ್ನು ಸಾಧ್ಯವಿಲ್ಲ.
ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಅರೆಸ್ಟ್
ಆದರೆ ಮೊನಾಲಿಸಾ ಈಗಾಗಲೇ ಸ್ಟಾರ್ ಆಗಿದ್ದಾಳೆ. ಸಿನಿಮಾಗಾಗಿ ತರಭೇತಿ ಪಡೆಯುತ್ತಿದ್ದ ಮೊನಾಲಿಸಾಗೆ ಒಂದು ದಿನವೂ ಪುರುಸೊತ್ತಿಲ್ಲ. ಪ್ರತಿ ದಿನ ಒಂದಲ್ಲ ಒಂದೂ ಪಟ್ಟಣ, ನಗರದಲ್ಲಿ ಕಾರ್ಯಕ್ರಮವಿದೆ. ಮಳಿಗೆ ಉದ್ಘಾಟನೆ, ಪಟ್ಟಣದ ಜಾತ್ರೆಯ ಅತಿಥಿ ಸೇರಿದತೆ ಹಲವು ಕಾರ್ಯಕ್ರಮಗಳಿಗೆ ಮೊನಾಲಿಸಾ ಅತಿಥಿಯಾಗಿದ್ದಾಳೆ. ಸದ್ಯ ಮುಂದಿನ 3 ರಿಂದ 4 ತಿಂಗಳು ಸತತ ಕಾರ್ಯಕ್ರಮಗಳು ಬುಕಿಂಗ್ ಆಗಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೇರಳದಲ್ಲಿ ಜ್ಯೂವೆಲ್ಲರಿ ಶಾಪ್ ಉದ್ಘಾಟನೆಯಲ್ಲಿ ಮೊನಾಲಿಸಿ ಪಾಲ್ಗೊಂಡಿದ್ದರು. ನೇಪಾಳದಲ್ಲಿನ ಶಿವರಾತ್ರಿ ಕಾರ್ಯಕ್ರಮದಲ್ಲೂ ಮೊನಾಲಿಸಾ ಅತಿಥಿಯಾಗಿ ಪಾಲ್ಗೊಂಡಿದ್ದರು. ಇನ್ನು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೊನಾಲಿಸಾ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಸೀರಿಯಲ್‌ನಲ್ಲಿ ಮೊನಾಲಿಸಾ?
ಸನೋಜ್ ಮಿಶ್ರಾ ಬಂಧನದಿಂದ ಸದ್ಯ ಮಣಿಪುರ್ ಸಿನಿಮಾ ಸಾಧ್ಯತಗಳು ಕ್ಷೀಣಿಸಿವೆ. ಹಾಗಂತ ಮತ್ತೊದು ಸಿನಿಮಾದಲ್ಲಿ ಮೊನಾಲಿಸಾಳಿಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಕಾರಣ ಮೊನಾಲಿಸಾ ಈಗಷ್ಟೇ ನಟನೆ ಕಲಿಯುತ್ತಿದ್ದಾಳೆ. ಹೀಗಾಗಿ ತಕ್ಷಣವೇ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆದರೆ ಮೂಲಗಳ ಪ್ರಕಾರ ಮೊನಾಲಿಸಾ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗೆಸ್ಟ್ ಅಪ್ಪಿಯರೆನ್ಸ್ ಪಾತ್ರದಲ್ಲಿ ಪ್ರಮುಖ ಧಾರವಾಹಿಯಲ್ಲಿ ಮೊನಾಲಿಸಾ ಕಾಣಿಕೊಳ್ಳಲಿದ್ದಾರೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ.
ಸದ್ಯ ಮೊನಾಲಿಸಾ ಹಲವು ಆಹ್ವಾನಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸೀರಿಯಲ್‌ನಲ್ಲಿ ಅಭಿನಯಿಸುವ ಸಾಧ್ಯತೆ ಇದೆ. ಈ ಮೂಲಕ ತಮ್ಮ ಬಣ್ಣದ ಬದುಕಿನ ಕರಿಯರ್ ಆರಂಭಿಸುವ ಸಾಧ್ಯತಗಳು ಗೋಚರಿಸುತ್ತಿದೆ. ಇತ್ತ ಸನೋಜ್ ಮಿಶ್ರಾ ಶೀಘ್ರದಲ್ಲೇ ಬಿಡುಗಡೆಯಾದರೆ ಸಿನಿಮಾ ಅವಕಾಶ ಗರಿಗೆದರಲಿದೆ. ಇನ್ನು ಸೋಶಿಯಲ್ ಮೀಡಿಯಾ ಮೂಲಕ ಈಗಲೂ ಮೊನಾಲಿಸಾ ವೈರಲ್ ಆಗುತ್ತಿದ್ದಾರೆ. ಮೊನಾಲಿಸಾ ಈಗ ಹಾಕುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದೆ.
ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವ ಕಾರಣ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಭಾರತ ಮಾತ್ರವಲ್ಲ ಮೊನಾಲಿಸಾಗೆ ಮನಸೋತ ನೇಪಾಳ, ಭರ್ಜರಿ ಸ್ಟೆಪ್ಸ್ ಹಾಕಿದ ವೈರಲ್ ಬೆಡಗಿ