Singer Arijit Singh Songs: ಬಾಲಿವುಡ್ ಗಾಯಕ ಅರ್ಜಿತ್ ಸಿಂಗ್ ಅವರ ಜನಪ್ರಿಯ ಹಾಡುಗಳ ಪಟ್ಟಿ ಇಲ್ಲಿದೆ. ಅವರ ಸುಮಧುರ ಗಾಯನದಿಂದ ಹಿಡಿದು ಹಾಡುಗಳ ವಿಶೇಷತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಮುಂಬೈ: ಬಾಲಿವುಡ್ ಸಿನಿಮಾ ಅಂದ್ರೆ ಅಲ್ಲಿ ಗಾಯಕ ಅರ್ಜಿತ್ ಸಿಂಗ್ ಹಾಡು ಇರಲೇಬೇಕು. ಕಿರುತೆರೆಯ ರಿಯಾಲಿಟಿ ಶೋನಿಂದ ಮುನ್ನಲೆಗೆ ಬಂದ ಅರ್ಜಿತ್ ಸಿಂಗ್ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಸಂಗೀತಕ್ಕೆ ಭಾಷೆ ಮುಖ್ಯ ಅಲ್ಲ ಅನ್ನೋದು ಸಾಬೀತಾದ ಮಾತು. ಹಾಡಿನ ಲಿರಿಕ್ಸ್ ಅರ್ಥವಾಗದಿದ್ರೂ ಇಂದು ಜನರು ಬೇರೆ ಭಾಷೆಯ ಹಾಡುಗಳನ್ನು ಕೇಳುತ್ತಾರೆ. ಅರ್ಜಿತ್ ಸಿಂಗ್ ಹಾಡುಗಳಿಗೆ ಹಿಂದಿ ಮಾತ್ರವಲ್ಲದೇ ಎಲ್ಲಾ ಭಾಷೆಯಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅರ್ಜಿತ್ ಸಿಂಗ್ ಸಂಗೀತ ಕಾರ್ಯಕ್ರಮ ಅಂದ್ರೆ ಸಂಗೀತಾಭಿಮಾನಿಗಳು ಸಾವಿರಾರು ರೂಪಾಯಿ ಹಣ ನೀಡಿ ಟಿಕೆಟ್ ಖರೀದಿಸುತ್ತಾರೆ. ಅರ್ಜಿತ್ ಸಿಂಗ್ ಧ್ವನಿಯಲ್ಲಿನ ಮ್ಯಾಜಿಕ್ ಕೇಳುಗರನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಈ ಲೇಖನದಲ್ಲಿ ಅರ್ಜಿತ್ ಸಿಂಗ್ ಅವರ ಹಾರ್ಟ್ ಟಚಿಂಗ್ ಹಾಡುಗಳನ್ನು ನೋಡೋಣ ಬನ್ನಿ.
ಟಾಪ್ 10: ಏ ದಿಲ್ ಹೈ ಮುಷ್ಕಿಲ್ (Ae Dil Hai Mushkil)
ಜೂನ್ 17, 224ರಂದು ಬಿಡುಗಡೆಯಾದ ಈ ಹಾಡು ಯುಟ್ಯೂಬ್‌ನಲ್ಲಿ 2.7 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಏ ದಿಲ್ ಹೈ ಮುಷ್ಕಿಲ್ ಸಿನಿಮಾದ ಟೈಟಲ್ ಟ್ರ್ಯಾಕ್ ಇದಾಗಿದ್ದು, ಅಮಿತಾಬ್ ಭಟ್ಟಾಚಾರ್ಯ ಅವರ ಸಾಹಿತ್ಯ ಮತ್ತು ಪ್ರೀತಮ್ ಅವರ ಸಂಗೀತವಿದೆ.
ಟಾಪ್ 9: ಜೋ ಬೀಗಿ ಥಿ ದುವಾ (Jo Bheji Thi Duaa)
ಶಾಂಘೈ ಸಿನಿಮಾದ ಸೂಪರ್ ಹಿಟ್ ಜೋ ಬೀಗಿ ಥಿ ದುವಾ ಹಾಡನ್ನು ನಿಮ್ಮ ಪ್ಲೇ ಲಿಸ್ಟ್‌ನಲ್ಲಿ ಮರೆಯದೇ ಸೇರಿಸಿಕೊಳ್ಳಿ. ಈ ಹಾಡನ್ನು ಅರ್ಜಿತ್ ಸಿಂಗ್ ಮತ್ತು ನಂದಿನಿ ಶ್ರೀಕರ್ ಜೊತೆಯಾಗಿ ಹಾಡಿದ್ದಾರೆ. ಯುಟ್ಯೂಬ್‌ನಲ್ಲಿ ಈ ಹಾಡಿಗೆ 97,647,918 ವ್ಯೂವ್ಸ್ ಬಂದಿದೆ. ವಿಶಾಲ್ - ಶೇಖರ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ.
ಟಾಪ್ 8: ಥೋಡಿ ಜಗಾ ದೇ ಮುಜೆ (thodi jagah de de mujhe)
ಸಿದ್ಧಾರ್ಥ ಮಲ್ಹೋತ್ರಾ ಅಭಿನಯದ ಮರ್‌ಜಾವಾನ್ ಸಿನಿಮಾದ ಥೋಡಿ ಜಗಾ ದೇ ಮುಜೆ ಹಾಡನ್ನು ಏಕಾಂತದಲ್ಲಿ ಕೇಳುವ ಪ್ಲೇ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಿ. ತನಿಷ್ಕ್ ಬಗ್ಚಿ ಅವರ ಸಂಗೀತ ಸಂಯೋಜನೆಗೆ ರಶ್ಮಿ ವಿರಾಗ್ ಅದ್ಭುತವಾಗಿ ಸಾಹಿತ್ಯವನ್ನು ಬರೆದಿದ್ದಾರೆ. ರಶ್ಮಿ ಅವರ ಪ್ರತಿಯೊಂದು ಪದಕ್ಕೂ ಅರ್ಜಿತ್ ಸಿಂಗ್ ಜೀವ ತುಂಬಿದ್ದಾರೆ.
ಟಾಪ್ 7: ಖರೀಯತ್ ಪೂಚೋ (Khariyat Poochho)
ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಚಿಚೋರೆ' ಸಿನಿಮಾದ ಈ ಹಾಡು ನಿಮ್ಮನ್ನು ಪ್ರೇಮದ ಅಲೆಯಲ್ಲಿ ತೇಲಿಸಿಕೊಂಡು ಹೋಗುತ್ತದೆ. ಈ ಹಾಡು ಪ್ರೀತಮ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿದ್ದು, ಅರ್ಜಿತ್ ಸಿಂಗ್ ಅವರ ಧ್ವನಿ ಕೇಳುಗರಲ್ಲಿ ಪ್ರತಿಬಾರಿಯೂ ಹೊಸ ರೋಮಾಂಚನ ಉಂಟು ಮಾಡುತ್ತದೆ . ಈ ಹಾಡು ಅಮಿತಾಭ್ ಭಟ್ಟಾಚಾರ್ಯ ಅವರ ಲೇಖನದಲ್ಲಿ ಅರಳಿದೆ.
ಟಾಪ್ 6: ಚಾಹುಂ ಮೇ ಆನಾ (Chahun Main Ya Naa)
2013ರಲ್ಲಿ ಬಿಡುಗಡೆಯಾದ ಆಶಿಕಿ-2 ಸಿನಿಮಾದ ಚಾಹುಂ ಮೇ ಆನಾ ಹಾಡು ಪ್ರೇಮಿಗಳಿಗೆ ಭಕ್ತಿ ಗೀತೆಯಾಗಿತ್ತು. ಜೀತ್ ಗಂಗೂಲಿ ಸಂಗೀತ ಸಂಯೋಜನೆಯ ಈ ಡ್ಯುಯೆಟ್ ಹಾಡನ್ನು ಅರ್ಜಿತ್ ಸಿಂಗ್ ಮತ್ತು ಪಲಕ್ ಮುಚ್ಚಲ್ ಹಾಡಿದ್ದಾರೆ.
ಟಾಪ್ 5: ತುಮ್ ಹಿ ಹೋ (Tum Hi Ho)
ಮ್ಯೂಸಿಕಲ್ ಸೂಪರ್ ಹಿಟ್ ಆಶಿಕ್-2 ಸಿನಿಮಾದ ಮತ್ತೊಂದು ಹಾಡು 'ತುಮ್ ಹಿ ಹೋ' ನರನಾಡಿಗಳಲ್ಲಿಯೂ ಪ್ರೇಮದ ಸಂಚಲವನ್ನು ಸೃಷ್ಟಿಸುತ್ತದೆ. 11 ವರ್ಷಗಳ ಹಿಂದೆ ಬಂದ ಹಾಡು ಇಂದಿಗೂ ಟ್ರೆಂಡ್‌ನಲ್ಲಿರುತ್ತದೆ. ಮಿಥುನ್ ಅವರ ಸಂಯೋಜನೆ ಮತ್ತು ಸಾಹಿತ್ಯದ ಹಾಡಿಗೆ ಅರ್ಜಿತ್ ಸಿಂಗ್ ಧ್ವನಿಯಾಗಿದ್ದಾರೆ.
ಟಾಪ್ 4: ಹಮಾರಿ ಅದೂರಿ ಕಹಾನಿ (Hamari Adhuri Kahani)
ಇಮ್ರಾನ್ ಹಶ್ಮಿ ಮತ್ತು ವಿದ್ಯಾ ಬಾಲನ್ ನಟನೆ ಪರಿಶುದ್ಧವಾದ ಪ್ರೇಮಕಥೆಯ ಹಮಾರಿ ಅದೂರಿ ಕಹಾನಿ ಟೈಟಲ್ ಟ್ರ್ಯಾಕ್ ಅರ್ಜಿತ್ ಸಿಂಗ್ ಅವರ ಧ್ವನಿಯಲ್ಲಿ ಕೇಳಬಹುದು. ಜೀತ್ ಗಂಗೂಲಿ ಸಂಯೋಜನೆ, ರಶ್ಮಿ ಸಿಂಗ್ ಮತ್ತು ವಿರಾಗ್ ಮಿಶ್ರಾ ಅವರ ಸಾಹಿತ್ಯ ಪ್ರೀತಿಯನ್ನು ಕಳೆದುಕೊಂಡ ಹೃದಯದ ನೋವನ್ನು ಸರಳ ಪದಗಳಲ್ಲಿ ಹೇಳುತ್ತದೆ.
ಟಾಪ್ 3: ಹಜಾರೋಂ ಮೇ ಕಿಸಿ ಕೋ ತಕ್‌ದೀರ್ (Hazaro me kisi ko taqdeer)
ಬಾಲಿವುಡ್ ಮತ್ತೊಂದು ಮ್ಯೂಸಿಕಲ್ ಹಿಟ್ ಸಿನಿಮಾ ಕಳಂಕ. ಈ ಚಿತ್ರದ ಹಜಾರೋಂ ಮೇ ಕಿಸಿ ಕೋ ತಕ್‌ದೀರ್ ಹಾಡು ನಿಮ್ಮ ಪ್ಲೇ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಿ. 2019ರಲ್ಲಿ ಬಿಡುಗಡೆಯಾದ ಈ ಹಾಡನ್ನು ಕೋಟ್ಯಂತರ ಜನರು ಕೇಳಿದ್ದಾರೆ. ಪ್ರೀತಮ್ ಮತ್ತು ಅಮಿತಾಭ್ ಭಟ್ಟಾಚರ್ಯ ಅವರ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಹಾಡಿನ ಜೊತೆಯಲ್ಲಿ ಅರ್ಜಿತ್ ಸಿಂಗ್ ಇದಕ್ಕೆ ಹಾರ್ಮೋನಿಯಂ ಸಹ ನುಡಿಸಿದ್ದಾರೆ.
ಟಾಪ್ 2: ಅಗರ್ ತುಮ್ ಸಾಥ್ ಹೋ (Agar Tum Saath Ho)
ಅರ್ಜಿತ್ ಸಿಂಗ್ ಅವರ ಹಾಡುಗಳ ಪೈಕಿ ಅಗರ್ ತುಮ್ ಸಾಥ್ ಹೋ ಟಾಪ್ 2ರ ಸ್ಥಾನದಲ್ಲಿದೆ. ತಮಾಷಾ ಸಿನಿಮಾದ ಈ ಹಾಡು ಪ್ರೇಮಿಗಳಿಗಾಗಿ ಮಾಡಿದ ಸಾಂಗ್. 2015ರಲ್ಲಿ ಬಿಡುಗಡೆಯಾದ ಅಗರ್ ತುಮ್ ಸಾಥ್ ಹೋ ಹಾಡನ್ನು ಅಲ್ಕಾ ಯುಗ್ನಿಕಾ ಮತ್ತು ಅರ್ಜಿತ್ ಸಿಂಗ್ ಜೊತೆಯಾಗಿ ಹಾಡಿದ್ದು, ಎ.ಆರ್.ರೆಹಮಾನ್ ಅವರ ಸಂಗೀತ ಹೊಂದಿದೆ. ಇರ್ಷಾದ್ ಕಮಲ್ ಈ ಹಾಡಿಗೆ ಪದಗಳನ್ನು ಜೋಡಿಸಿದ್ದಾರೆ.
ಟಾಪ್ 1: ಚೋಡ್ ದಿಯಾ ಓ ರಾಸ್ತಾ (Chhod Diya Wo Rasta)
ಚೋಡ್ ದಿಯಾ ಓ ರಾಸ್ತಾ ಹಾಡಿಗೆ ಇಡೀ ದೇಶವೇ ಫಿದಾ ಆಗಿದೆ. ಅರ್ಜಿತ್ ಸಿಂಗ್ ಅವರ ಟಾಪ್ ಹಾಡುಗಳಲ್ಲಿ ಇದಕ್ಕೆ ನಂಬರ್ ಒನ್ ಸ್ಥಾನ ನೀಡಲಾಗಿದೆ. ಕನಿಕಾ ಕಪೂರ್ ಅವರ ಸಂಗೀತ ಸಂಯೋಜನೆ ಹೊಂದಿರುವ ಹಾಡಿಗೆ ಶಬ್ಬಿರ್ ಅಹ್ಮದ್ ಲಿರಿಕ್ಸ್ ಬರೆದಿದ್ದಾರೆ. ಬ್ರೇಕಪ್ ಬಳಿಕ ಯುವಕನ ಮನದಾಳದ ಮಾತೇ ಈ ಹಾಡು. 2018ರಂದು ಈ ಹಾಡು ಯುಟ್ಯೂಬ್‌ನಲ್ಲಿ ರಿಲೀಸ್ ಆಗಿತ್ತು.