
ಉತ್ತರ ಭಾರತ ಮೂಲದ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಒಂದಲ್ಲೊಂದು ವಿಚಾರಕ್ಕೆ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಅದ್ಭುತ ನಟನೆ ಮೂಲಕ ದಕ್ಷಿಣ ಭಾರತ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ತಮನ್ನಾ ಇದೀಗ ಮತ್ತೊಂದು ವಿಚಾರಕ್ಕೆ ಅಭಿಮಾನಿಗಳ ಮನಗೆದಿದ್ದಾರೆ. ಚಪ್ಪಲಿ ತೆಗೆದಿಟ್ಟು ದೀಪ ಬೆಳಗಿಸಿದ ತಮನ್ನಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾ ಈ ನಡೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಈ ಘಟನೆ ನಡೆದಿದ್ದು ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ಅವಾರ್ಡ್ಸ್ (IFFM) 2022 ಉದ್ಘಾಟನಾ ಸಮಾರಂಭದಲ್ಲಿ. ಸಮಾರಂಭದ ಉದ್ಘಾಟನೆಗೆ ದೀಪವನ್ನು ಬೆಳಗಿಸಿದಾಗ ನಟಿ ತಮನ್ನಾ ಭಾಟಿಯಾ ಅವರು ತಮ್ಮ ತಪ್ಪಲಿ ತೆಗೆದಿಟ್ಟಿದ್ದಾರೆ. ಇದೇ ವೇದಿಕೆಯಲ್ಲಿ ತಮನ್ನಾ ಮಾತ್ರವಲ್ಲದೇ ಮತ್ತೋರ್ವ ಖ್ಯಾತ ನಟಿ ತಾಪ್ಸಿ ಪನ್ನು ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಉಪಸ್ಥಿತರಿದ್ದರು.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮೊದಲು ತಾಪ್ಸಿ ಪನ್ನು ದೀಪವನ್ನು ಬೆಳಗಿಸಿದರು. ಬಳಿಕ ತಾಪ್ಸಿ ತಮನ್ನಾರನ್ನು ಕರೆದು ದೀಪ ಬೆಳಗಿಸುವಂತೆ ಕ್ಯಾಂಡಲ್ ನೀಡಿದರು. ಆಗ ತಮನ್ನಾ ತಪ್ಪಲಿ ತೆಗೆದಿಟ್ಟು ದೀಪ ಬೆಳಗಿಸಲು ಬಂದರು. ಆಘ ಅಲ್ಲಿದ್ದವರು ಒಬ್ಬರು ತಮನ್ನಾ ನಡೆಯನ್ನು ಶ್ಲಾಘಿಸಿದರು. ಆಗ ತಮನ್ನಾ ಇದು ದಕ್ಷಿಣ ಭಾರತದ ಸಾಂಪ್ರದಾಯ ಎಂದು ಹೇಳಿದರು. ಬಳಿಕ ಬರಿಗಾಲಿನಲ್ಲಿ ದೀಪ ಬೆಳಗಿಸಿದರು. ತಮನ್ನ ಬಪ್ಪು ಮತ್ತು ಹಸಿರು ಬಣ್ಣದ ಡ್ರೆಸ್ ಧರಿಸಿದ್ದರು. ತಾಪ್ಸಿ ಕೂಡ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದರು.
ಮರೆವು ಹೆಚ್ಚಾಗುತ್ತಿರುವುದು ಭಯವಾಗ್ತಿದೆ; ನಟಿ ತಮನ್ನಾ
ತಮನ್ನಾ ಅವರ ಈ ವಿಡಿಯೋಗೆ ಅಭಿಮಾನಿಗಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ವಿಡಿಯೋ ಶೇರ್ ಮಾಡಿ 'ಸಂಸ್ಕೃತಿಗೆ ನೀಡಿದ ಗೌರವ' ಎಂದು ಹೇಳುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ 'ಇದು ಸೌತ್ ಇಂಡಿಯಾ ತಮನ್ನಾಗೆ ಕಲಿಸಿದ್ದು' ಎಂದು ಕಾಮೆಂಟ್ ಮಾಡಿದ್ದಾರೆ. 'ಚಿಕ್ಕ ವಿಷಯಗಳು ತುಂಬಾ ಮುಖ್ಯವಾಗುತ್ತದೆ' ಎಂದು ಮತ್ತೊರ್ವ ಹೇಳಿದ್ದಾರೆ. 'ತಮನ್ನಾ ಅವರ ಉತ್ತಮ ಗೆಸ್ಟರ್ ತೋರಿಸುತ್ತದೆ' ಎಂದು ಹೇಳುತ್ತಿದ್ದಾರೆ. 'ತಮನ್ನಾ ಸಂಸ್ಕೃತಿ, ಭಾರತದ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸಿದ್ದಾರೆ' ಎಂದು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಇರಿಸಿ ತಮನ್ನಾರನ್ನು ಹಾಡಿಹೊಗಳುತ್ತಿದ್ದಾರೆ.
ಹಸಿರು ಬಣ್ಣದ ಸೂಟ್ ಧರಿಸಿ ರಾತ್ರಿ ಏರ್‌ಪೋರ್ಟ್‌ಗೆ ಬಂದ ತಮನ್ನಾ; ಬೇರೆ ಬಟ್ಟೆ ಇಲ್ವಾ?
ಇತ್ತೀಚಿಗಷ್ಟೆ, ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವವು ತನ್ನ 13ನೇ ಆವೃತ್ತಿಯ ಪ್ರಶಸ್ತಿ ವಿಜೇತರನ್ನು ಘೋಷಿಸಿತು. ಇನ್ನು ತಮನ್ನಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಮಧುರ್ ಭಂಡಾರ್ಕರ್ ಅವರ ಬಬ್ಲಿ ಬೌನ್ಸರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸೆಪ್ಟಂಬರ್ 23ರಂದು ರಿಲೀಸ್ ಆಗುತ್ತಿದೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ತಯಾರಾಗುತ್ತಿದೆ. ಬಾಬ್ಲಿ ಬೌನ್ಸರ್ ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ತಮನ್ನಾ ಬಬ್ಲಿ ಬೌನ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.