ದಕ್ಷಿಣ ಭಾರತದ ಸಿನಿರಂಗದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾತೃ ವೆಂಕಟ್ ಕೆ ನಾರಾಯಣ್ ಅವರು ತಮಿಳು ನಟ ವಿಜಯ್ ಅವರ ಕಟ್ಟ ಕಡೆಯ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹರವಿಡುವ ಎಲ್ಲಾ..
ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಸಿನಿಮಾಗಳಲ್ಲೊಂದು ಜನನಾಯಗನ್..ದಳಪತಿ ವಿಜಯ್ (Thalapathy Vijay) ಕಟ್ಟ ಕಡೆಯ ಸಿನಿಮಾದಾಳವಾಗಿರುವ ಜನನಾಯಗನ್ (JANANAYAGAN) ಮೇಲೆ ತಮಿಳು ಸಿನಿರಸಿಕರು ಮಾತ್ರ ಇಡೀ ಇಂಡಿಯನ್ ಇಂಡಸ್ಟ್ರೀ ಕಾತುರ ಆತುರದಿಂದ ಕಾಯುತ್ತಿದೆ. ಅದಕ್ಕೆ ಕಾರಣ ಈ ಚಿತ್ರದ ಬಲವಾಗಿರುವ ಕೆವಿಎನ್ ((KVN) Productions). ಹಾಗೂ ಇಂತಿಪ್ಪ ದಳಪತಿ ವಿಜಯ್..
ಸಿನಿರಂಗಕ್ಕೆ ಬೈ ಬೈ ಹೇಳಿ ಖಾದಿ ತೊಟ್ಟು ರಾಜಕೀಯದಲ್ಲಿ ದಾಳ ಹಾಕೋದಿಕ್ಕೆ ರೆಡಿಯಾಗಿರುವ ಮಾಸ್ಟರ್ ಕೊನೆ ಸಿನಿಮಾ ಜನ ನಾಯಗನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಪೊಂಗಲ್ ಹಬ್ಬಕ್ಕೆ ಕಮಾಲ್ ಮಾಡೋದಿಕ್ಕೆ ದಳಪತಿ ಬಾಕ್ಸಾಫೀಸ್ ಅಖಾಡಕ್ಕೆ ಇಳಿಯುತ್ತಿದೆ. 2026 ಜನವರಿ 15ರಂದು ಬಹುನಿರೀಕ್ಷಿತ ಸಿನಿಮಾ ಜನ ನಾಯಗನ್ ತೆರೆಗೆ ಬರ್ತಿದೆ. ನಾವು ಮೊದ್ಲೇ ಹೇಳಿದಂಗೆ ವಿಜಯ್ ಕೊನೆ ಚಿತ್ರವಾಗಿರೋದ್ರಿಂದ ಬಹಳ ಅದ್ಧೂರಿಯಾಗಿ ಕೆವಿಎನ್ ಪ್ರೊಡಕ್ಷನ್ ಸಿನಿಮಾ ನಿರ್ಮಾಣ ಮಾಡುತ್ತಿದೆ
ಏನಾಗ್ತಿದೆ ಟಾಕ್ಸಿಕ್ ಅಡ್ಡಾದಲ್ಲಿ ಅಡ್ಡಿ?..ಈ ವರ್ಷವೂ ಬರಲ್ಲ ಯಾಕೆ ರಾಕಿಭಾಯ್!
ಈ ಬಾರಿಯ ಪೊಂಗಲ್ ದಳಪತಿ ಅಭಿಮಾನಿಗಳಿಗೆ ಮಾತ್ರವಲ್ಲ ಅಖಂಡ ಸಿನಿಮಾಪ್ರೇಮಿಗಳಿಗೂ ವಿಶೇಷವಾಗಿರುವಂತೆ ಕೆವಿಎನ್ ಸಂಸ್ಥೆ ತಮ್ಮ ನಿರ್ಮಾಣದ ಜನ ನಾಗಯನ್ ಚಿತ್ರವನ್ನು ಪೊಂಗಲ್ ಹಬ್ಬಕ್ಕೆ ಬೆಳ್ಳಿತೆರೆ ಅಖಾಡಕ್ಕೆ ಇಳಿಸುತ್ತಿದೆ. ಈ ಮೂಲಕ ದಳಪತಿ ವಿಜಯ್ ಅವರಿಗೆ ಅಂತಿಮ ಸಿನಿಮಾ ವಿದಾಯ ಹೇಳುವ ಎಲ್ಲಾ ರೀತಿಯ ಸಕಲ ತಯಾರಿ ಮಾಡಿಕೊಂಡಿದೆ. ಒಬ್ಬ ಸೂಪರ್ ಸ್ಟಾರ್ ಕೊನೆಯ ಚಿತ್ರ ಹೇಗೆಲ್ಲಾ ಇರಲಿದೆ? ಅದಕ್ಕೆ ಬೇಕಾದ ಬಲ, ಬೆಂಬಲ ಎಲ್ಲವನ್ನೂ ಕೆವಿಎನ್ ಕೊಂಚವೂ ಏರುಪೇರಾಗದಂತೆ ಒದಗಿಸಿದೆ.
ಹೆಚ್ ವಿನೋದ್ ಎಂಬ ಅದ್ಭುತ ಸಿನಿಮಾಕರ್ಮಿಯಿಂದ ತಯಾರಾಗುತ್ತಿರುವ ಜನ ನಾಯಗನ್ ಗೆ ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ರಾಕಿಂಗ್ ಮ್ಯೂಸಿಕ್ ಕಿಕ್, ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಲಿವುಡ್ ನಟ ಬಾಬಿ ಡಿಯೋಲ್, ಗೌತಮ್ ವಾಸುದೇವ ಮೆನನ್, ಪ್ರಿಯಾಮಣಿ, ಪ್ರಕಾಶ್ ರಾಜ್, ವರಲಕ್ಷ್ಮಿ ಶರತ್ ಕುಮಾರ್ ಮುಂತಾದದವರ ತಾರಾಮೆರಗು ಜನ ನಾಯಗನ್ ಅಂದವನ್ನು ಹೆಚ್ಚಿಸಿದೆ.
ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..
ದಕ್ಷಿಣ ಭಾರತದ ಸಿನಿರಂಗದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾತೃ ವೆಂಕಟ್ ಕೆ ನಾರಾಯಣ್ (Venkat K Narayan) ಅವರು ತಮಿಳು ನಟ ವಿಜಯ್ ಅವರ ಕಟ್ಟ ಕಡೆಯ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹರವಿಡುವ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಹೇಳಿಕೇಳಿ ತಮಿಳು ಚಿತ್ರರಂಗದ ಬಾಕ್ಸಾಫೀಸ್ ಕಿಂಗ್ ಎನಿಸಿಕೊಂಡಿರುವ ಮಾಸ್ಟರ್ ಮೇನಿಯಾ ಪೊಂಗಲ್ ನಲ್ಲಿ ಜೋರಾಗಿರಲಿದೆ ಎಂಬ ಸೂಚನೆಯಂತೂ ಸಿಕ್ಕಿದೆ. ಅದಕ್ಕೆ ಸಂಪೂರ್ಣವಾದ ಸಹಕಾರವೂ ಕೆವಿಎನ್ ನೀಡಿದೆ. ಈ ಮೂಲಕ ದಳಪತಿ ಅಭಿಮಾನಿಗಳು ಪೊಂಗಲ್ ಹಬ್ಬವನ್ನು ವಿಶೇಷವಾಗಿ ಆಚರಿಸುವ ಖುಷಿಯಲ್ಲಿದ್ದಾರೆ.