ಮದ್ವೆಯಾಗಿ 4 ತಿಂಗಳಿಗೆ ನಟಿ ಖುಷ್ಬೂ ಡಿವೋರ್ಸ್‌?; ಪ್ರಭು ಜೊತೆಗಿನ ಸಂಬಂಧ, ಸತ್ಯ ತೆರೆದಿಟ್ಟ ನಟಿ ಕಾಕಿನಾಡ ಶ್ಯಾಮಲಾ

Published : Apr 14, 2023, 04:58 PM IST
ಮದ್ವೆಯಾಗಿ 4 ತಿಂಗಳಿಗೆ ನಟಿ ಖುಷ್ಬೂ ಡಿವೋರ್ಸ್‌?; ಪ್ರಭು ಜೊತೆಗಿನ ಸಂಬಂಧ, ಸತ್ಯ ತೆರೆದಿಟ್ಟ ನಟಿ ಕಾಕಿನಾಡ ಶ್ಯಾಮಲಾ

ಸಾರಾಂಶ

ಚಿನ್ನ ತಂಬಿ ಚಿತ್ರಕ್ಕೆ 32 ವರ್ಷ. ಈಗ ವೈರಲ್ ಆಗುತ್ತಿದೆ ಪ್ರಭು ಮತ್ತು ಖುಷ್ಬೂ ಲವ್ ಸ್ಟೋರಿ. ಮದುವೆ ಆಗಿದ್ದು ನಿಜವೇ?

ಬಹುಭಾಷಾ ನಟ ಪ್ರಭು ಮತ್ತು ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ನಟಿಸಿರುವ ಚಿನ್ನ ತಂಬಿ ಸಿನಿಮಾ ಬಿಡುಗಡೆಯಾಗಿ 32 ವರ್ಷ ಪೂರೈಸಿದೆ. ಈ ಸೂಪರ್ ಹಿಟ್ ಸಿನಿಮಾವನ್ನು ಕನ್ನಡದಲ್ಲಿ ರವಿಚಂದ್ರನ್ ರಾಮಚಾರಿ ಎಂದು ರಿಮೇಕ್ ಮಾಡಿದ್ದರು. ಸಿನಿಮಾ ರಿಲೀಸ್ ಅಥವಾ ಹಿಟ್ ಬಗ್ಗೆ ಮಾತುಕಥೆ ನಡೆಯುತ್ತಿಲ್ಲ..ಬದಲಿಗೆ ಖುಷ್ಬೂ ಮತ್ತು ಪ್ರಭು ಲವ್‌ ಸ್ಟೋರಿ ಚರ್ಚೆಯಾಗುತ್ತಿದೆ. 

'ನಂಬಲು ಅಸಾಧ್ಯ. ಚಿನ್ನ ತಂಬಿ ಸಿನಿಮಾ ರಿಲೀಸ್ ಆಗಿ 32 ವರ್ಷಗಳು ಕಳೆದಿದೆ. ತಮಿಳು ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ಸಿನಿಮಾ. ಕಲ್ಪನೆಗೂ ಮೀರಿದ ಜನರು ಪ್ರೀತಿ ತೋರಿಸಿದ್ದಾರೆ. ಇಂತಹ ಅದ್ಭುತ ಸಿನಿಮಾ ನೀಡಿದಕ್ಕೆ ಪಿ ವಾಸು ಸರ್ ಮತ್ತು ಪ್ರಭು ಸರ್ ಅವರಿಗೆ ವಂದನೆಗಳು. ಸೂಪರ್ ಹಿಟ್ ಹಾಡುಗಳ್ನು ಕೊಟ್ಟ ಇಳಯರಾಜ ಸರ್‌ ಧನ್ಯವಾದಗಳು' ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿರುವ ಫೋಟೋದಲ್ಲಿ ಖುಷ್ಬೂ ಮತ್ತು ಪ್ರಭು ಒಟ್ಟಿಗೆ ನೋಡಿ ಜನರು ಶಾಕ್ ಆಗಿದ್ದಾರೆ. 

ಖುಷ್ಬು ಜೊತೆ ಚಿರಂಜೀವಿ ಸಖತ್ ಡ್ಯಾನ್ಸ್; ವಿಡಿಯೋ ವೈರಲ್

ಹೌದು! ಈ ಸಿನಿಮಾ ಸಮಯದಲ್ಲಿ ಖುಷ್ಬೂ ಮತ್ತು ಪ್ರಭು ಪ್ರೀತಿಸಲು ಆರಂಭಿಸಿದರು ಎನ್ನುವ ಮಾತುಗಳಿದೆ. 'ಪ್ರಭು ಜೊತೆ ನಾನು ನಾಲ್ಕು ವರ್ಷ ಪ್ರೀತಿಯಲ್ಲಿದ್ದೆ. 1993ರಲ್ಲಿ ಪ್ರಭು ಅವರ ಪೋಯೆಸ ಗಾರ್ಡನ್‌ನಲ್ಲಿರುವ ಮನೆಯಲ್ಲಿ ಮದುವೆ ಮಾಡಿಕೊಂಡೆವು. ಆ ಸಮಯದಲ್ಲಿ ಪ್ರಭುಗೆ ಆಗಲೇ ಮದುವೆ ಆಗಿತ್ತು ಹೀಗಾಗಿ ಅವರ ತಂದೆ ಶಿವಾಜಿ ಗಣೇಶ್‌ ನಮ್ಮ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದರು. ಮೊದಲ ಪತ್ನಿ ಜೊತೆ ಜಗಳವಾಗಿ ಜಗಳವಾಗಿ ನಾಲ್ಕು ತಿಂಗಳಿಗೆ ದೂರಾದೆವು' ಎಂದು ಹಲವು ವರ್ಷಗಳ ಹಿಂದೆ ಇಂಗ್ಲಿಷ್‌ ಸಂದರ್ಶನದಲ್ಲಿ ಖುಷ್ಬೂ ಹೇಳಿದ್ದರು. 

ಈ ವಿಚಾರಕ್ಕೆ ಕಾಕಿನಾಡ ಶ್ಯಾಮಲಾ ಈಗ ರಿಯಾಕ್ಟ್ ಮಾಡಿದ್ದಾರೆ. 'ಖುಷ್ಬೂ ತುಂಬಾ ಒಳ್ಳೆಯ ಹುಡುಗಿ ಅಕೆ ಪ್ರಭುನ ತುಂಬಾ ಪ್ರೀತಿಸುತ್ತಿದ್ದಳಿ. ಒಬ್ಬರು ಮತ್ತೊಬ್ಬರ ಪ್ರಾಣ ಎನ್ನುವಂತೆ ಇದ್ದರು. ಈ ಕಾರಣಕ್ಕೆ ಪ್ರಭು ಮೊದಲು ಮದುವೆ ಆಗಿದ್ದರೂ ಖುಷ್ಬೂನ ಎರಡನೇ ಮದುವೆ ಅಗಿದ್ದು. ಆದರೆ ಪ್ರಭು ಮನೆಯಲ್ಲಿ ಗಲಾಟೆ ಆಗಿ ಇಬ್ಬರು ದೂರವಾದರು. ಆಗ ನನಗೆ ಬೇಸರ ಆಯ್ತು' ಎಂದು ಶ್ಯಾಮಲಾ ಮಾತನಾಡಿದ್ದಾರೆ.

ಇದಾಗ ಕೆಲವು ವರ್ಷಗಳದಲ್ಲಿ ಖುಷ್ಬೂ ಮತ್ತು ನಿರ್ದೇಶಕ ಪಿ ಸುಂದರ್ ಪ್ರೀತಿಸಿ ಮದುವೆ ಮಾಡಿಕೊಂಡರು. 2000ರಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತ್ತು. ಖುಷ್ಬೂಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ. 

ತಂದೆಯಿಂದಲ್ಲೇ ನಟಿ ಖುಷ್ಬೂಗೆ ಲೈಂಗಿಕ ದೌರ್ಜನ್ಯ; ತಾಯಿ ಕೂಡ ನಂಬಲ್ಲ ಅನ್ನೋ ಭಯವಿತ್ತು ಎಂದ 'ಶಾಂತಿ ಕ್ರಾಂತಿ' ನಟಿ

ಐ ಲವ್‌ ಯು ಹೇಳಿಲ್ಲ: 

1995ರಲ್ಲಿ ಮುರೈ ಮಾವನ್ ಸಿನಿಮಾದಲ್ಲಿ ಖುಷ್ಬು ನಟಿಸಿದ್ದಾರೆ, ಈ ಚಿತ್ರಕ್ಕೆ ಸಿ ಸುಂದರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ. ಆದರೆ ಅಂದಿನಿಂದ ಇಬ್ಬರೂ ಐ ಲವ್ ಯೂ (I love You) ಎಂದು ಹೇಳಿಲ್ಲವಂತೆ. ಈ ವೀಕೆಂಡ್ ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ತಮ್ಮ ಲವ್‌ ಸ್ಟೋರಿ ಹೇಳುತ್ತಾ ನಾಚಿ ನೀರಾಗಿದ್ದಾರೆ. ಐ ಲವ್ ಯು ಹೇಳಿಲ್ಲ ಅಂದಿದಕ್ಕೆ ಸೆಟ್‌ನಲ್ಲಿರುವ ಪ್ರತಿಯೊಬ್ಬರು ಒತ್ತಾಯ ಮಾಡಿ ಪತಿಗೆ ಪೋನ್ ಮಾಡಿಸಿದ್ದಾರೆ. ಫೋನ್ ತೆಗೆದು ಕಾಲ್ ಮಾಡಲು ಮುಂದಾಗುತ್ತಾರೆ ಆಗ ಪತಿ ಹೆಸರನ್ನು ಸ್ವೀಟ್ ಹಾರ್ಟ್‌ (Sweetheart) ಎಂದು ಸೇವ್ ಮಾಡಿರುವುದಾಗಿ ತಿಳಿಸುತ್ತಾರೆ. ಕರೆ ಮಾಡಿ ಲವ್ ಯು ಹೇಳುತ್ತಾರಾ ಇಲ್ವಾ ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿರಿಕ್ ಕಿಲಾಡಿ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ; ಶಾಕಿಂಗ್‌ ಮೂಡ್‌ಗೆ ನೆಟ್ಟಿಗರನ್ನು ದೂಡಿದ ಸ್ಟಾರ್ ನಟಿ!
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ