Wedding Anniversary ದಿನ ಶಾಕಿಂಗ್​ ಹೇಳಿಕೆ ಕೊಟ್ಟ ರಣಬೀರ್​ ಕಪೂರ್​

By Suvarna News  |  First Published Apr 14, 2023, 4:49 PM IST

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಾರಾ ಜೋಡಿ ಇಂದು ಮೊದಲನೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪತಿ ರಣಬೀರ್​ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ. ಏನದು?
 


ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ ಕ್ಯೂಟ್​ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. 2022ರ ಇದೇ ದಿನ ಅಂದರೆ ಏಪ್ರಿಲ್​ 14ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಸಿರಿತ್ತು. ಬಾಲಿವುಡ್​ನ ಕ್ಯೂಟ್​ ದಂಪತಿ ಎಂದೇ ಇವರು ಫೇಮಸ್​. ಈಗ ಮಗುವೊಂದರ ಪಾಲಕರಾಗಿದ್ದಾರೆ ಇಬ್ಬರೂ.  2022ರಲ್ಲಿ ಏಪ್ರಿಲ್​ 14ರಂದು ನಟ ರಣಬೀರ್​ ಕಪೂರ್​ (Ranbeer Kapoor) ಅವರ ಜೊತೆ ಮದುವೆಯಾಗಿರುವ ಆಲಿಯಾ, ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್​ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್​ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು.  ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಮಗುವಾದ ಬಳಿಕ ಸ್ವಲ್ಪ ತಿಂಗಳು ಚಿತ್ರರಂಗದಿಂದ ದೂರವಿದ್ದ ಆಲಿಯಾ (Alia Bhatt), ಮತ್ತೆ ಕಮ್​ಬ್ಯಾಕ್​ ಮಾಡಿದ್ದಾರೆ. ಹೀಗೆ ಪತ್ನಿಯಾಗಿ ಹಾಗೂ ತಾಯಿಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ಆಲಿಯಾ, ಕುರಿತು ಪತಿ ರಣಬೀರ್​ ಕಪೂರ್​ ಈಚೆಗೆ ಹೊಗಳಿಕೆ ವ್ಯಕ್ತಪಡಿಸಿದ್ದರು. ಆಲಿಯಾ ನಟಿಯಾಗಿ, ತಾಯಿಯಾಗಿ  ಅದ್ಭುತ ಪಾತ್ರ ನಿರ್ವಹಿಸುತ್ತಿದ್ದಾಳೆ ಎಂದಿದ್ದರು. ಆಲಿಯಾ  ಕುರಿತು  ಮಾತುಗಳನ್ನಾಡಿದ ಅವರು,  ಆಲಿಯಾ ಎಲ್ಲ  ಪಾತ್ರಗಳನ್ನೂ   ಅದ್ಭುತವಾಗಿ ನಿರ್ವಹಿಸುತ್ತಿದ್ದಾಳೆ. ಆಕೆ  ಉತ್ತಮ ತಾಯಿಯಂತೆ ತೋರುತ್ತಿದ್ದಾಳೆ.  ತಾಯಿಯಾಗಿ,  ನಟಿಯಾಗಿ ಆಕೆ  ಅದ್ಭುತವಾಗಿದ್ದಾಳೆ, ಆದರೆ ಆಕೆ ಪತ್ನಿಗಿಂತಲೂ ತಾಯಿಯಾಗಿಯೇ ಉತ್ತಮ ಆಗಿದ್ದಾಳೆ' ಎಂದು ರಣಬೀರ್​ ಕಪೂರ್​ ಹೇಳಿದ್ದರು.  ಅಂದರೆ ಮಗುವಾದ ಮೇಲೆ ಪತ್ನಿಯಾಗಿ ಆಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಬದಲಿಗೆ ತಾಯಿಯಾಗಿಯೇ ಹೆಚ್ಚು ಬಿಜಿ ಆಗಿದ್ದಾಳೆ ಎಂದಿದ್ದರು.

Tap to resize

Latest Videos

ಮಗಳು 25 ವರ್ಷದವರೆಗೆ ಹೀಗಿರಬೇಕು ಎಂದಿದ್ದಾರೆ ನಟಿ Alia Bhatt!

ಇದೀಗ  ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರೋ ಸಮಯದಲ್ಲಿ ರಣಬೀರ್​ ಕಪೂರ್​ ಇನ್ನೊಂದು ಹೇಳಿಕೆ ಕೊಟ್ಟಿದ್ದಾರೆ.  ರಣಬೀರ್ ಕಪೂರ್ ಅವರು ಆಲಿಯಾ ಭಟ್ ಒಟ್ಟಿಗೆ ಇರುವಾಗಲೆಲ್ಲಾ ಅವರನ್ನು ಹೇಗೆ ರಕ್ಷಿಸುತ್ತಾರೆ ಎಂಬುದರ ಕುರಿತು ಅಭಿಮಾನಿಗಳಿಗೆ ಗೊತ್ತಿದ್ದದ್ದೇ.  ಏರ್‌ಪೋರ್ಟ್‌ನಂತಹ ಜನನಿಬಿಡ ಸ್ಥಳಗಳಲ್ಲಿದ್ದಾಗಲೆಲ್ಲಾ  ಈ ಪತಿಯಾರ ಪತ್ನಿಯನ್ನು  ಹತ್ತಿರ ಹಿಡಿದುಕೊಂಡು ನಡೆದಿದ್ದ ಫೋಟೋ ಭಾರಿ ವೈರಲ್​ ಆಗಿತ್ತು. ಆದರೆ ಇವೆಲ್ಲವುಗಳ ನಡುವೆ ಈಗ ರಣಬೀರ್​ ಕಪೂರ್​ ಶಾಕಿಂಗ್​ (Shocking) ಹೇಳಿಕೆ ಕೊಟ್ಟಿದ್ದಾರೆ.

ಅದೇನೆಂದರೆ, ನಾನು ಆಲಿಯಾಳಿಗೆ  ಉತ್ತಮ ಪತಿ ಅಲ್ಲ ಎಂದು ಸೂಪರ್ ಸ್ಟಾರ್ ಹೇಳಿದ್ದಾರೆ. ಫ್ರೀ ಪ್ರೆಸ್ ಜರ್ನಲ್‌ ಜೊತೆ ಮಾತನಾಡಿರುವ ನಟ,  ನನ್ನ ಜೀವನದ  ಎಲ್ಲಾ ಪಾತ್ರಗಳು ಇನ್ನೂ ಪ್ರಗತಿ ಹಂತದಲ್ಲಿವೆ.  ಉತ್ತಮ ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ವಾಸ್ತವವಾಗಿ, ನಾನು ನನ್ನನ್ನು ತುಂಬಾ ಒಳ್ಳೆಯ ಗಂಡ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.  ಮದುವೆಯ ನಂತರ ಜೀವನದಲ್ಲಿ ಒಟ್ಟಾರೆಯಾಗಿ ಒಳ್ಳೆಯದನ್ನೇ ಅನುಭವಿಸುತ್ತಿದ್ದೇನೆ. ಆದರೆ  ಒಟ್ಟಾರೆ ಜೀವನ ಪರಿಪೂರ್ಣವಾಗುತ್ತಿಲ್ಲ ಎನಿಸುತ್ತಿದೆ. ನಾನು ಆಲಿಯಾಳಿಗೆ ಅಷ್ಟೊಂದು ಉತ್ತಮ ಗಂಡನಲ್ಲ ಎನ್ನಿಸುತ್ತಿದೆ ಎಂದಿದ್ದಾರೆ. ನಾನು ಇನ್ನೂ  ಉತ್ತಮ ಗಂಡನಾಗಬೇಕೆನ್ನುವ (Husband) ಆಸೆ ಇದೆ. ಆ ಹಾದಿಯಲ್ಲಿ ತಯಾರಿ ನಡೆಸಿದ್ದೇನೆ.  ತಂದೆಯಾದ ಮೇಲೆ ಬೇರೆ ಜವಾಬ್ದಾರಿಗಳಿರುತ್ತವೆ. ನನ್ನ ದೃಷ್ಟಿಕೋನ ಕೂಡ ಬದಲಾಗಬೇಕಿದೆ. ಸದ್ಯ ಮಗಳು  ರಾಹಾಗಿಂತ ಏನೂ ಮುಖ್ಯವಲ್ಲ. ಆದರೆ ಜೀವನದಲ್ಲಿ ಎಲ್ಲವೂ ತುಂಬಾ ಮುಖ್ಯ ಎಂದು ಅವರು ಹೇಳಿದರು. 

Alia Bhatt: ಪತ್ನಿಯಿಂದ ದೂರವಿರಿ ಎಂದು ರಣಬೀರ್​ಗೆ ನೆಟ್ಟಿಗರ ಸಲಹೆ! ಯಾಕೆ ಗೊತ್ತಾ?

ರಣಬೀರ್ ಕಪೂರ್ ಎತ್ತರದಲ್ಲಿದ್ದಾರೆ. ಅವರ ಕೊನೆಯ ಎರಡು ಚಿತ್ರಗಳು ಬ್ರಹ್ಮಾಸ್ತ್ರ ಮತ್ತು ತು ಜೂಥಿ ಮೈನ್ ಮಕ್ಕರ್ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಇವೆರಡು ಚಿತ್ರಗಳು 100 ಕೋಟಿ ಗಡಿ ದಾಟಿವೆ.  ಪಠಾಣ್ ನಂತರ ಬ್ರಹ್ಮಾಸ್ತ್ರ ಬಾಲಿವುಡ್‌ಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ.  

click me!