ಕುಂಭಮೇಳದ ಬೆಡಗಿ ಮೊನಾಲಿಸಾ ಪಾಡು ಸದ್ಯ ಯಾರಿಗೂ ಬೇಡವಾಗಿದೆ. ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದ ನಿರ್ದೇಶಕ ಜೈಲು ಸೇರಿದ್ದಾರೆ. ಅವಕಾಶ ಕೊಡ್ತೇವೆ ಎಂದವರು ಒಬ್ಬೊಬ್ಬರಾಗಿ ಕಳಚಿಕೊಳ್ಳುತ್ತಿದ್ದಾರೆ.
ಮಹಾಕುಂಭದ ಸೆನ್ಸೇಷನ್ 17 ವರ್ಷದ ಮೊನಾಲಿಸಾ ಸದ್ಯ ಭಾರಿ ಸುದ್ದಿಯಲ್ಲಿದ್ದಾಳೆ. ಇವಳ ಹೆಸರು ಹೇಳಿಕೊಂಡು ದುಡ್ಡು ಮಾಡಿಕೊಂಡವರು ಅದೆಷ್ಟೋ ಮಂದಿ. ಯೂಟ್ಯೂಬರ್ಗಳಿಗಂತೂ ಈಕೆ ದೊಡ್ಡ ಮಟ್ಟದಲ್ಲಿ ಆಹಾರವಾದಳು. ಇದರಿಂದ ತನ್ನ ಬದುಕೇ ಸರ್ವನಾಶವಾಯಿತು ಎಂದು ಮೊನಾಲಿಸಾ ಅತ್ತ ಹೇಳುತ್ತಿದ್ದಂತೆಯೇ ಇತ್ತ ಅವಳಿಗೆ ಅವಕಾಶಗಳ ಬಾಗಿಲೇ ಹರಿದು ಬಂತು. ಸೋಷಿಯಲ್ ಮೀಡಿಯಾದಲ್ಲಿ ಮೊನಾಲಿಸಾಳ ಎಐ ವಿಡಿಯೋ ಚಿತ್ರಿಸಿ ತಮಗೆ ಬೇಕಾದ ರೀತಿಯಲ್ಲಿ ಶೃಂಗಾರ ಮಾಡಿ, ವಿಡಿಯೋ ಹರಿಬಿಡುವುದು ಮುಂದುವರೆದಂತೆ ಆಕೆಗೆ ಬಾಲಿವುಡ್ನಲ್ಲಿಯೂ ಆಫರ್ ಸಿಕ್ಕಿಬಿಟ್ಟಿತು. ಮಣಿಪುರ ಡೈರಿಯಲ್ಲಿ ಆಕೆಗೆ ಅವಕಾಶ ಸಿಕ್ಕಿತು. ಆದರೆ ಮೋನಾಲಿಸಾ ಅದೃಷ್ಟ ಸರಿಯಿಲ್ಲ. ಮೊದಲೇ ಆಕೆಯನ್ನು ಬಲೀ ಕಾ ಬಕರಾ ಮಾಡುತ್ತಿರುವುದಾಗಿ ಸುದ್ದಿಯಾಗಿತ್ತು. ಅದರಂತೆಯೇ ಚಿತ್ರದಲ್ಲಿ ಅವಕಾಶ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಅತ್ಯಾ*ರ ಆರೋಪದ ಅಡಿ ಬಂಧಿಸಲಾಗಿದೆ.
ತನ್ನನ್ನು ಚಿತ್ರನಟಿ ಮಾಡುವುದಾಗಿ ಹೇಳಿ ಸನೋಜ್ ಸುಳ್ಳು ಭರವಸೆ ನೀಡಿ ಶೋಷಣೆ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ ಆರೋಪದ ಅಡಿ ದೆಹಲಿ ಪೊಲೀಸರು ಸನೋಜ್ ಮಿಶ್ರಾ ಅವರನ್ನು ಬಂಧಿಸಿದ್ದಾರೆ. 2020 ರಲ್ಲಿ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿರುವುದನ್ನು ನೋಡಿ ಸನೋಜ್ ಮಿಶ್ರ ನನ್ನನ್ನು ಸಂಪರ್ಕಿಸಿದ್ದರು. ಬಳಿಕ ಈ ಸಂಪರ್ಕ ಜೋರಾಯಿತು. ಜೂನ್ 2021 ರಲ್ಲಿ ಭೇಟಿಯಾಗಲು ಬಾ ಎಂದು ಕರೆದರು. ನಾನು ಬರಲು ನಿರಾಕರಿಸಿದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಬೆದರಿಕೆಗೆ ಹೆದರಿ ಮರುದಿನ ನಾನು ಅವರನ್ನು ಭೇಟಿಯಾಗಲು ಒಪ್ಪಿಕೊಂಡೆ. ಮಿಶ್ರಾ ಅವರು ರೆಸಾರ್ಟ್‌ಗೆ ಕರೆದೊಯ್ದು ಮಾದಕ ದ್ರವ್ಯ ನೀಡಿ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೇ ನನ್ನ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದರು. ಕರೆದಾಗ ಬರದೇ ಇದ್ದರೆ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದರು. ಮಿಶ್ರಾ ಹಲವು ಬಾರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮದುವೆಯ ಸುಳ್ಳು ಭರವಸೆಗಳನ್ನು ನೀಡಿ ಸಿನಿಮಾಗಳಲ್ಲಿ ಪಾತ್ರಗಳನ್ನು ನೀಡುವುದಾಗಿ ಹೇಳಿದ್ದರು ಎಂದು ದೂರಿದ್ದಾಳೆ.
ಮೊನಾಲಿಸಾಗೆ ವಜ್ರದ ಹಾರ! 'ಬಲಿ ಕಾ ಬಕ್ರಾ' ಆಗ್ತಿದ್ದಾಳಾ ಕುಂಭಮೇಳದ ಸುಂದರಿ? ಅಭಿಮಾನಿಗಳಲ್ಲಿ ಆತಂಕ...
ಇದರಿಂದಾಗಿ ಸದ್ಯ ಸನೋಜ್ ಅರೆಸ್ಟ್ ಆಗಿದ್ದಾರೆ. ಆದರೆ ಇದರ ನಡುವೆಯೇ, ಮೋನಾಲಿಸಾಗೆ ಮಾಡೆಲಿಂಗ್ ಆಫರ್ ಸಿಕ್ಕಿದ್ದವು. ಆದರೆ ಮಾಡೆಲಿಂಗ್, ಫಿಲ್ಮ್ ಶೂಟಿಂಗ್ ಅದೂ ಇದೂ ಅಂತೆಲ್ಲಾ ಎಲ್ಲೆಂದರಲ್ಲಿ ಈಕೆಯನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿರುವುದು ನೋಡಿ ಈಕೆಯ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದು ಇದೆ. ಆ ವಿಡಿಯೋಗಳ ಪೈಕಿ ಕೆಲವು ವಿಡಿಯೋಗಳನ್ನು ನೋಡಿದ ನೆಟ್ಟಿಗರಿಂದ ಕೆಲವು ಅನುಮಾನಗಳ ಕಮೆಂಟ್ಸ್ಗಳೂ ಹರಿದಾಡಿದ್ದವು. ತನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿರುವುದನ್ನು ಮೊನಾಲಿಸಾ ಖುಷಿಯಿಂದ ಹೇಳಿಕೊಂಡಿದ್ದರೂ ಕೆಲವು ವಿಡಿಯೋಗಳಲ್ಲಿ ಆಕೆ ಅನ್ಕನ್ಫರ್ಟ್ ಎನ್ನಿಸುವುದನ್ನು ನೋಡಬಹುದಾಗಿದೆ. ಇದು ಒಂದೆಡೆಯಾದಾರೆ, ಕೇರಳದ ಜ್ಯುವೆಲ್ಲರಿ ಷಾಪ್ ಒಂದರ ಉದ್ಘಾಟನೆ ವೇಳೆ ಮೊನಾಲಿಸಾಳನ್ನು ಕರೆಸಿ ಕೋಟಿ ಕೋಟಿ ಬೆಲೆ ಬಾಳುವ ಹಾರಗಳನ್ನು ಹಾಕಿದ್ದರು ಸನೋಜ್. ಇದು ಕೂಡ ಭಾರಿ ಅನುಮಾನಕ್ಕೆ ಕಾರಣವಾಗಿತ್ತು.
ಆದರೆ, ಇದೀಗ ಮೋನಾಲಿಸಾ ಅಳುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ತನ್ನ ಪಾಡಿಗೆ ತಾನು ಇದ್ದ ಯುವತಿ, ಸೋಷಿಯಲ್ ಮೀಡಿಯಾ ಗಮನ ಸೆಳೆದು, ರಾತ್ರೋರಾತ್ರಿ ಸ್ಟಾರ್ ಆಗಿರುವುದಕ್ಕೆ ಖುಷಿ ಪಟ್ಟದ್ದೇ ಬಂತು. ಆಕೆಗೆ ಡಿಮಾಂಡ್ ಜಾಸ್ತಿಯಾಗುತ್ತಿದ್ದರೂ, ಮೊನಾಲಿಸಾ ಫ್ಯಾನ್ಸ್ ಕಳವಳ ವ್ಯಕ್ತಪಡಿಸುತ್ತಿದ್ದರೇ ವಿನಾ, ಈಕೆಗೆ ಯಾವುದೇ ವಿಚಾರ ಗೊತ್ತಿದ್ದಂತೆ ಇರಲಿಲ್ಲ. ಆದರೆ ಇದೀಗ ರೇಪ್ ಕೇಸ್ನಲ್ಲಿ ಸನೋಜ್ ಮಿಶ್ರಾ ಅರೆಸ್ಟ್ ಆಗುತ್ತಿದ್ದಂತೆಯೇ ಕನಸಿನ ಗೋಪುರ ಕಳಚಿ ಹೋಗಿದೆ. ಮುಂದಿನ ದಿಕ್ಕು ಕಾಣದೇ ಮೊನಾಲಿಸಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಇಂಥ ಅವಕಾಶಗಳು ಕ್ಷಣಿಕ ಎನ್ನುವುದು ಆಕೆಗೆ ತಿಳಿಯದೇ ಹೋಗಿದೆ. ಇಷ್ಟೆಲ್ಲಾ ಪ್ರಸಿದ್ಧಿಗೆ ಬಂದ ಮೇಲೆ ಪುನಃ ರುದ್ರಾಕ್ಷಿ ಮಾರಾಟ ಮಾಡಲು ಹೋಗುವಂತೆಯೂ ಕಾಣಿಸುತ್ತಿಲ್ಲ. ಜನರೂ ಇವಳನ್ನು ಮರೆಯುತ್ತಿದ್ದಾರೆ. ಮಾಡೆಲಿಂಗ್ ಅದೂ ಇದೂ ಆಫರ್ ಕೊಟ್ಟವರೂ ಒಬ್ಬೊಬ್ಬರಾಗಿ ಕಳಚಿಕೊಳ್ಳುತ್ತಿದ್ದಾರೆ. ಇದರಿಂದ ಮೊನಾಲಿಸಾ ಬದುಕು ಯಾರಿಗೂ ಬೇಡವಾಗಿದೆ!
ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್