ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ, ಮಹಿಳಾ ಪ್ರಧಾನ ಸಿನಿಮಾ ಟೀಸರ್ ಔಟ್

ಸಿಕಂದರ್ ಸಿನಿಮಾ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇದೀಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ವಾರಿಯರ್ ಅವತರಾದಲ್ಲಿ ಕಾಣಿಸಿಕೊಂಡಿರುವ ಮಹಿಳಾ ಪ್ರಧಾನ ಸಿನಿಮಾ ಗರ್ಲ್‌ಫ್ರೆಂಡ್ ಟೀಸರ್ ಸಾಂಗ್ ಬಿಡುಗಡೆಯಾಗಿದೆ. ರಶ್ಮಿಕಾ ಅವತಾರ ತೀವ್ರ ಕುತೂಹಲ ಕೆರಳಿಸಿದೆ.

Rashmika Mandanna First female centric movie The Girlfriend poster teaser song out

ಹೈದರಾಬಾದ್(ಏ.06) ಬ್ಲಾಕ್‌ಬಸ್ಟರ್ ಸಿನಿಮಾ ನೀಡಿರುವ ರಶ್ಮಿಕಾ ಮಂದಣ್ಣ ಇದೀಗ ಭಾರತೀಯ ಸಿನಿಮಾ ರಂಗದ ಬಹು ಬೇಡಿಕೆಯ ನಟಿ. ರಶ್ಮಿಕಾ ಮಂದಣ್ಮ ಅಭಿನಯದ ಆ್ಯನಿಮಲ್, ಪುಷ್ಪಾ2, ಛಾವ ಬ್ಲಾಕ್‌ಬಸ್ಟರ್ ಸಿನಿಮಾ ಆಗಿದ್ದರೆ, ಸಿಕಂದರ್ ರಶ್ಮಿಕಾ ಹಿಂದಿನಿ ಸಿನಿಮಾ ಮಟ್ಟಕ್ಕೆ ಬರಲಿಲ್ಲ. ಇದು ರಶ್ಮಿಕಾ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿತ್ತು. ಇದೀಗ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಸಾಂಗ್ ಬಿಡುಗಡೆಯಾಗಿದೆ.

ದಿ ಗರ್ಲ್‌ಫ್ರೆಂಡ್
ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಮಹಿಳಾ ಪ್ರಧಾನ ಸನಿಮಾ ಹೆಸರು ದಿ ಗರ್ಲ್‌ಫ್ರೆಂಡ್. ಈ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಸಾಂಗ್ ಬಿಡುಗಡೆಯಾಗಿದೆ. ಈ ಸಿನಿಮಾ ಪೋಸ್ಟರ್ ಭಾರಿ ಕುತೂಹಲ ಕೆರಳಿಸಿದೆ. ಕಾರಣ ರಶ್ಮಿಕಾ ಮಂದಣ್ಣ ವಾರಿಯರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಈ ಪೋಸ್ಟರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಟೀಸರ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಸಂಪೂರ್ಣ ರಶ್ಮಿಕಾ ಮಂದಣ್ಣ ಅವರಿಸಿಕೊಂಡಿದ್ದಾರೆ. ಯುವತಿಯ ಜೀವನದಲ್ಲಿನ ಘಟೆಗಳು, ಸವಾಲುಗಳು ಹಾಗೂ ಸಿಹಿ ಕಹಿಗಳ ಮಿಶ್ರಣ ಈ ಟೀಸರ್‌ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

Latest Videos

ಓಮನ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಣೆ, ಯಾರ ಜೊತೆಗೆ?

ಲವ್ ಸ್ಟೋರಿ-ದೀಕ್ಷಿತ್ ಶೆಟ್ಟಿ ಕಾಂಬಿನೇಶನ್
ದಿ ಗರ್ಲ್‌ಫ್ರೆಂಡ್ ಸಿನಿಮಾ ತೆಲುಗು ಭಾಷೆಯಲ್ಲಿ ನಿರ್ಮಾಣಗೊಳ್ಳುತ್ತಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ಈ ಸಿನಿಮಾ ಸಂಪೂರ್ಣ ಲವ್ ಸ್ಟೋರಿ ಸಿನಿಮಾ ಆಗಿದೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ದೀಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕಾಲೇಜು ದಿನಗಳಲ್ಲಿ ಪ್ರೀತಿ, ಮುಂದಿನ ದಿನಗಳಲ್ಲಿ ಬರವು ಸವಾಲು, ಜೊತೆಗೆ ಆ್ಯಕ್ಷನ್ ಸೀನ್‌ಗಳಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ವಾರಿಯರ್ ಅವತಾರ
ರಶ್ಮಿಕಾ ಮಂದಣ್ಣ ದಿ ಗರ್ಲ್‌ಫ್ರೆಂಡ್ ಸಿನಿಮಾದ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ವಾರಿಯರ್ ಅವತಾರದಲ್ಲಿದ್ದಾರೆ. ಇಲ್ಲಿ ಖಡ್ಗ ಹಾಗೂ ಪಿಸ್ತೂಲ್ ಬಳಸಿಕೊಳ್ಳಲಾಗಿದೆ. ಈ ಮೂಲಕ ದಿ ಗರ್ಲ್‌ಫ್ರೆಂಡ್ ಪವರ್‌ಪ್ಯಾಕ್ ಪರ್ಫಾಮೆನ್ಸ್ ಒಳಗೊಂಡಿರಲಿದೆ ಅನ್ನೋ ಸೂಚನೆಯನ್ನು ನೀಡಿದೆ.ಸದ್ಯ ದಿ ಗರ್ಲ್‌ಫ್ರೆಂಡ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರ ತಂಡ ಹೇಳಿದೆ 

ದಿ ಗರ್ಲ್‌ಪ್ರೆಂಡ್ ಪೋಸ್ಟರ್ ಹಾಗೂ ಟೀಸರ್ ಸಾಂಗ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಹೊಸ ಅವತಾರದಲ್ಲಿ ನೋಡಲು ಕಾತುರರಾಗಿರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಈ ಸಿನಿಮಾ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Rahul Ravindran (@rahulr_23)

 

ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಸಿನಿ ರಸಿಕರನ್ನು ರಂಜಿಸುವಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಸಲ್ಮಾನ್ ಖಾನ್ ಬಹುನಿರೀಕ್ಷಿತ ಸಿನಿಮಾ ಇದಾಗಿತ್ತು. ಸೂಪರ್ ಹಿಟ್ ಸಿನಿಮಾಗಳ ನಾಯಕಿ ಎಂದೇ ಗುರುತಿಸಿಕೊಂಡಿದ್ದ ರಶ್ಮಿಕಾ ಸಿಕಂದರ್ ಮೂಲಕ ಹಿನ್ನಡೆ ಅನುಭವಿಸಿರುವುದು ನಿಜ. ಆದರೆ ಈ ಹಿನ್ನಡೆ ದಿ ಗರ್ಲ್‌ಫ್ರೆಂಡ್ ಸಿನಿಮಾ ಮೂಲಕ ದೂರವಾಗಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಇದಕ್ಕೂ ಮುನ್ನ ಅಭಿನಯಸಿದ ಛಾವ ಸಿನಿಮಾ ಭಾರಿ ಯಶ್ಸಸು ಕಂಡಿತ್ತು. ವಿಕ್ಕಿ ಕೌಶಾಲ್ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಇನ್ನು ಅಲ್ಲು ಅರ್ಜುನ್ ಜೊತೆೆಗಿನ ಪುಷ್ಪಾ 2 ಸಿನಿಮಾ ಹಲವು ದಾಖಲೆ ಮುರಿದಿತ್ತು. 

ಪರಾಕ್ರಮ ಮೆರೆದ ವಿಕ್ಕಿ ಕೌಶಲ್-ರಶ್ಮಿಕಾ ಜೋಡಿ, ಬಾಲಿವುಡ್‌ಗೆ ಭಾರೀ ಸಕ್ಸಸ್ ಕೊಟ್ರು!..ಅಲೆಲೇ...
 

vuukle one pixel image
click me!