Adipurush; ಪ್ರಭಾಸ್‌ಗೆ ಬೆವರು ಒರೆಸಲು ತನ್ನದೇ ದುಪಟ್ಟಾ ನೀಡಿದ ಕೃತಿ, ವಿಡಿಯೋ ವೈರಲ್

By Shruiti G Krishna  |  First Published Oct 4, 2022, 5:17 PM IST

ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಈವೆಂಟ್‌ನ ಕೆಲವು ಸುಂದರ ಕ್ಷಣಗಳ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಭಾಸ್‌ಗೆ ಕೃತಿ ದುಪಟ್ಟಾ ನೀಡಿರುವ ವಿಡಿಯೋ ವೈರಲ್ ಆಗಿದೆ. 


ತೆಲುಗು ಸ್ಟಾರ್ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟನೆಯ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಬಂದ ಆದಿಪುರುಷ್ ಟೀಸರ್ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಚಿತ್ರದ ವಿಎಫ್‌ಎಕ್ಸ್, ರಾವಣ ಹಾಗೂ ರಾಮನ ಪಾತ್ರವನ್ನು ತೋರಿಸಿದ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಈ ನಡುವೆ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಈವೆಂಟ್‌ನ ಕೆಲವು ಸುಂದರ ಕ್ಷಣಗಳ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಪ್ರಭಾಸ್ ಮತ್ತು ಕೃತಿ ಸನೊನ್ ಜೋಡಿ ಈಗಾಗಲೇ ಅಭಿಮಾನಿಗಳ ಹೃದಯ ಗೆದ್ದಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಪ್ರಭಾಸ್ ಜೊತೆ ಕೃತಿ ಹೆಸರು ವೈರಲ್ ಆಗಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ಹೀಗಿರುವಾಗ ಪ್ರಭಾಸ್‌ಗೆ ಬೆವರು ಒರೆಸಲು ತನ್ನದೇ ದುಪಟ್ಟಾ ನೀಡುವ ಮೂಲಕ ಮತ್ತೆ ಕೃತಿ-ಪ್ರಭಾಸ್ ಹೆಸರು ವೈರಲ್ ಆಗಿದೆ. ಆದಿಪುರುಷ್ ಟೀಸರ್ ರಿಲೀಸ್ ಈವೆಂಟ್‌ನಲ್ಲಿ ಪ್ರಭಾಸ್, ಓಂ ರಾವುತ್, ಕೃತಿ ಸನೊನ್ ನಿಂತಿದ್ದರು. ಸಿಕ್ಕಾಪಟ್ಟೆ ಸೆಖೆಯಿಂದ ಪ್ರಭಾಸ್ ಬೆವರುತ್ತಿದ್ದರು. ಮುಖದಲ್ಲಿ ಬೆವರು ಇಳಿದು ಹೋಗುತ್ತಿತ್ತು. ಪ್ರಭಾಸ್ ತನ್ನ ಕೈಯಲ್ಲೇ ಬೆವರು ಒರೆಸಿಕೊಳ್ಳುತ್ತಿದ್ದರು. ಕೃತಿ ಪ್ರಭಾಸ್ ಮುಖವನ್ನು ನೋಡುತ್ತಿದ್ದರು. ಪ್ರಭಾಸ್ ಪಕ್ಕನೆ ಇದ್ದ ಕೃತಿ ತನ್ನ ದುಪಟ್ಟಾವನ್ನು ಬೆವರು ಒರೆಸಿಕೊಳ್ಳಿ ಎಂದು ನೀಡಿದರು. ಈ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದ್ದು ವೈರಲ್ ಆಗಿದೆ. 

ತ್ರಿಪುಂಡ ತಿಲಕವೆಲ್ಲಿ, ಜನಿವಾರವೆಲ್ಲಿ...? ಆದಿಪುರುಷ್' ನಿರ್ದೇಶಕ ಓಂ ರಾವುತ್ ವಿರುದ್ಧ ಬಿಜೆಪಿ ವಾಗ್ದಾಳಿ!

Tap to resize

Latest Videos

ಅಂದಹಾಗೆ ಆದಿಪುರುಷ್ ಟೀಸರ್ ರಾಮನ ಜನ್ಮಭೂಮಿ ಅಯೋದ್ಯೆಯಲ್ಲಿ ರಿಲೀಸ್ ಮಾಡಲಾಗಿದೆ. ಪ್ರಭಾಸ್ ಮತ್ತು ಕೃತಿ ವಿಡಿಯೋಗೆ ಅಭಿಮಾನಿಗಳು ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಜೋಡಿ ಸೂಪರ್ ಎನ್ನುತ್ತಿದ್ದಾರೆ. ಅಂದಹಾಗೆ ಇತ್ತೀಚಿಗಷ್ಟೆ ಪ್ರಭಾಸ್ ಮತ್ತು ಕೃತಿ ಸನೂನ್ ಡೇಟಿಂಗ್ ಮಾಡುತ್ತಿದ್ದಾರೆ, ಪ್ರಭಾಸ್ ಕೃತಿ ಅವರನ್ನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿಯ ಬೆನ್ನಲ್ಲೇ ಇಬ್ಬರ ಕ್ಯೂಟ್ ವಿಡಿಯೋ ವೈರಲ್ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.

Giving Her Saree To To Sweep His Sweat

Great Bonding 👏 pic.twitter.com/eTwJKtBONZ

— North Prabhas FC (@NorthPrabhasFC)

Adipurush; ಟೀಸರ್ ನೋಡಿ ಗರಂ ಆದ್ರಾ ಪ್ರಭಾಸ್? ಕೋಪದಿಂದ ನಿರ್ದೇಶಕರನ್ನು ಕರೆದ ವಿಡಿಯೋ ವೈರಲ್

ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಇನ್ನು ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಆದಿಪುರುಷ್ ಮುಂದಿನ ವರ್ಷ 2023ರಲ್ಲಿ ರಿಲೀಸ್ ಆಗುತ್ತಿದೆ.   
 

click me!