Rishabh Pant ಹುಟ್ಟುಹಬ್ಬಕ್ಕೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಶುಭ ಕೋರಿದ ನಟಿ ಊರ್ವಶಿ ರೌಟೆಲಾ..!

Published : Oct 04, 2022, 05:05 PM ISTUpdated : Oct 04, 2022, 05:25 PM IST
Rishabh Pant ಹುಟ್ಟುಹಬ್ಬಕ್ಕೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಶುಭ ಕೋರಿದ ನಟಿ ಊರ್ವಶಿ ರೌಟೆಲಾ..!

ಸಾರಾಂಶ

ನಟಿ ಊರ್ವಶಿ ರೌಟೆಲಾ ಹ್ಯಾಪಿ ಬರ್ತಡೇ ಎಂದು ಶುಭ ಕೋರಿ ಇನ್ಸ್ಟಾಗ್ರಾಮ್‌ ಪೋಸ್ಟ್‌ ಮಾಡಿದ್ದಾರೆ. ಇಂದು ರಿಷಭ್‌ ಪಂತ್ ಹುಟ್ಟುಹಬ್ಬ ಹಿನ್ನೆಲೆ ನೆಟ್ಟಿಗರು ಕ್ರಿಕೆಟಿಗನಿಗೆ ನಟಿ ಶುಭ ಕೋರಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. 

ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್ (Rishabh Pant) ಹಾಗೂ ನಟಿ ಊರ್ವಶಿ ರೌಟೆಲಾ (Urvashi Rautela) ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇವರಿಬ್ಬರ ಜಗಳ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈಗ ಇವರಿಬ್ಬರು ರಾಜಿ ಮಾಡಿಕೊಂಡರಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ನಟಿ ಊರ್ವಶಿ ರೌಟೆಲಾ ಇನ್ಸ್ಟಾಗ್ರಾಂ ರೀಲ್ಸ್‌ನಲ್ಲಿ (Instagram Reels) ಪೋಸ್ಟ್‌ ಮಾಡಿರುವ ಹೊಸ ವಿಡಿಯೋ (Video). ಮಂಗಳವಾರ ಹೊಸ ವಿಡಿಯೋ ಹಾಕಿಕೊಂಡಿರುವ ಊರ್ವಶಿ ರೌಟೆಲಾ, ನಕ್ಕಿರುವುದನ್ನು ಹಾಗೂ ಫ್ಲೈಯಿಂಗ್ ಕಿಸ್‌ (Flying Kiss) ಕೊಟ್ಟಿರುವ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ವೇಲೆ, ನಟಿ ಆಕರ್ಷಕವಾದ ಕೆಂಪು ಡ್ರೆಸ್‌ ಅನ್ನೂ ತೊಟ್ಟಿದ್ದರು. ಈ ರೀಲ್ಸ್‌ನಲ್ಲೇನು ವಿಶೇಷ ಅಂತೀರಾ..? ಇದರಲ್ಲಿ ಅವರು ರೆಡ್‌ ಬಲೂನ್‌ ಎಮೋಜಿಯನ್ನು ಹಾಕಿಕೊಂಡಿದ್ದು, ಅದರಲ್ಲಿ ಅವರು ಹುಟ್ಟುಹಬ್ಬದ ಶುಭಾಶಯಗಳು (Happy birthday) ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‌ನಲ್ಲಿ ಯಾರಿಗೆ ಹುಟ್ಟುಹಬ್ಬದ ಶುಭ ಕೋರಿದ್ದು ಎಂದು ಬರೆದಿಲ್ಲವಾದರೂ, ಸಾಮಾಜಿಕ ಜಾಲತಾಣ ಬಳಕೆದಾರರು ನಟಿ ರಿಷಭ್‌ ಪಂತ್‌ಗೆ ಶುಭಾಶಯ ಕೋರಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಅಕ್ಟೋಬರ್ 4 ರಂದು ಕ್ರಿಕೆಟಿಗ (Cricketer) ರಿಷಭ್‌ ಪಂತ್ ತಮ್ಮ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 
 
ಊರ್ವಶಿ ರೌಟೆಲಾ ಅವರ ಈ ವಿಡಿಯೋವನ್ನು ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶೇರ್‌ ಮಾಡಿಕೊಳ್ಳುತ್ತಿದ್ದು, ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿಊರ್ವಶಿ ಮಿಸ್ಟರ್‌ ಆರ್‌ಪಿ (RP) ಎಂದು ಹೇಳಿದ್ದರು. ಇದನ್ನು ರಿಷಭ್‌ ಪಂತ್ ಎಂದೇ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ಪಟ್ಟಿದ್ದರು. 

ಇದನ್ನು ಓದಿ: ಪಾಕಿಸ್ತಾನಿ ಬೌಲರ್‌ಗೆ ಬೋಲ್ಡ್‌ ಆದ ಬಾಲಿವುಡ್‌ ನಟಿ? ನೆಟ್ಟಿಗ್ಗರ ಕೆಂಗಣ್ಣಿಗೆ ಗುರಿ

ಇನ್ನು, ನಟಿ ಊರ್ವಶಿಯ ಇತ್ತೀಚಿನ ಈ ಪೋಸ್ಟ್‌ಗೆ ಕಮೆಂಟ್‌ ಮಾಡಿದ ಇನ್ಸ್ಟಾಗ್ರಾಮ್‌ ಬಳಕೆದಾರರೊಬ್ಬರು, ಇಂದು ರಿಷಭ್‌ ಪಂತ್ ಅವರ ಹುಟ್ಟುಹಬ್ಬ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ, ಕ್ಯಾಪ್ಷನ್‌ ರಾಣಿ ಎಂದೂ ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, ನಟಿಗೆ ಕ್ಷಮೆ ಕೇಳುವಂತೆ ಹಾಗೂ ಆಕೆಯ ಮಾತನ್ನು ಕೇಳುವಂತೆಯೂ ಕ್ರಿಕೆಟಿಗ ರಿಷಭ್‌ ಪಂತ್‌ಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಮತ್ತೊಬ್ಬರು ಅಣ್ಣ, ನೀವು ಇದನ್ನು ಅರ್ಥ ಮಾಡಿಕೊಂಡಿದ್ದೀರ ಅಲ್ಲವೇ ಎಂದೂ ಬರೆದುಕೊಂಡಿದ್ದಾರೆ. ಅಲ್ಲದೆ, ಮತ್ತೊಬ್ಬ ವ್ಯಕ್ತಿ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಊರ್ವಶಿ ರೌಟೆಲಾ ರಿಷಭ್‌ ಪಂತ್‌ಗೆ ಪರೋಕ್ಷವಾಗಿ ಶುಭ ಕೋರುತ್ತಿದ್ದಾರೆ. ನಿಜವಾದ ಒನ್‌ ಸೈಡೆಡ್‌ ಲವ್ ಎಂದು ಪೋಸ್ಟ್‌ ಮಾಡಿದ್ದಾರೆ.
 
2019 ರಲ್ಲಿ ರಿಷಭ್‌ ಪಂತ್ ತಾನು ಊರ್ವಶಿ ರೌಟೆಲಾ ಜತೆಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ವಿಷಯವನ್ನು ನಿರಾಕರಿಸಿದ್ದರು ಹಾಗೂ ನಂತರ ಇಶಾ ನೇಗಿಯೊಂದಿಗಿನ ತನ್ನ ಸಂಬಂಧವನ್ನು ಅಧಿಕೃತಗೊಳಿಸಿದ್ದರು. 

ಇದನ್ನೂ ಓದಿ: ಹಾರ್ದಿಕ್‌ಗೆ ಕೈ ಕೊಟ್ಟು ರಿಷಬ್ ಜೊತೆ ಡೇಟಿಂಗ್ ನಡೆಸ್ತಾ ಇದಾರಾ ಊರ್ವಶಿ?

ಈ ಪರೋಕ್ಷ ಹುಟ್ಟುಹಬ್ಬದ ವಿಶ್‌ಗೂ ಮುನ್ನ ರಿಷಭ್‌ ಪಂತ್ ಹಾಗೂ ಊರ್ವಶಿ ರೌಟೆಲಾ ಜಗಳದಿಂದಾಗಿಯೇ ಸುದ್ದಿಯಾಗಿದ್ದರು.  ಮಿಸ್ಟರ್‌ ಆರ್‌ಪಿ ತನ್ನನ್ನು ಮೀಟ್‌ ಮಾಡಲು ಹೋಟೆಲ್‌ ಲಾಬಿಯಲ್ಲಿ ಸುಮಾರು 10 ಗಂಟೆಗಳ ಕಾಲ ಕಾದು ಕುಳಿತಿದ್ದರು. ಆದರೆ, ತಾನು ಮನೆಯಲ್ಲೇ ಮಲಗಿದ್ದೆ. ನಂತರ, ಆತನ 16 - 17 ಮಿಸ್ಡ್‌ ಕಾಲ್‌ಗಳನ್ನು ನೋಡಿ ತನಗೆ ಬೇಸರವಾಯಿತು ಎಂದೂ ಕನ್ನಡದ ಚಿತ್ರವೊಂದರಲ್ಲಿಯೂ ನಟಿಸಿರುವ ನಟಿ ಊರ್ವಶಿ ರೌಟೆಲಾ ಹೇಳಿಕೊಂಡಿದ್ದರು. ಇದಕ್ಕೆ ಇನ್ಸ್ಟಾಗ್ರಾಮ್‌ ಸ್ಟೋರಿಗಳ ಮೂಲಕ ರಿಷಭ್‌ ಪಂತ್ ಪ್ರತಿಕ್ರಿಯೆ ನೀಡಿ ನಟಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!
ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?