ದೀಪಿಕಾ ಪಡುಕೋಣೆ ವಿರುದ್ಧ ಸೊಕ್ಕಿನ ಮಾತನಾಡಿದ ನಟಿ ಕರೀನಾ ಕಪೂರ್ ಖಾನ್‌ಗೆ ನೆಟ್ಟಿಗರು ಹೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರೊಫೆಷನಲ್ ಜಲಸಿ ಎನ್ನುವುದು ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಂಡುಬರುತ್ತದೆ. ಅದರಲ್ಲಿಯೂ ಸಿನಿ ಪ್ರಪಂಚದಲ್ಲಿ ಇದು ಒಂದು ಹೆಜ್ಜೆ ಮುಂದೆಯೇ ಎಂದು ಹೇಳಬಹುದು. ಕೆಲವು ತಾರೆಯರು ತಮ್ಮನ್ನು ತಾವು ಏನೋ ಅಂದುಕೊಂಡು ಬಿಟ್ಟಿರುತ್ತಾರೆ. ಉಳಿದ ತಾರೆಯರ ಜೊತೆ ಅವರನ್ನು ಹೋಲಿಕೆ ಮಾಡಿದರೆ ಅಥವಾ ಅವರ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಜಂಭದ ಉತ್ತರವೇ ಸಿಗುತ್ತದೆ, ಇಲ್ಲವೇ ಕೊಂಕು ಮಾತಿನ ಉತ್ತರ ಸಿಗುತ್ತದೆ. ಈಗ ಅದೇ ರೀತಿಯ ಕೊಂಕು ಮಾತನಾಡಿರುವ ನಟಿ ಕರೀನಾ ಕಪೂರ್ ಖಾನ್‌ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಕಾಫಿ ವಿತ್ ಕರಣ್ ಸೀಸನ್ 8ರ ಇತ್ತೀಚಿನ ಸಂಚಿಕೆಯಲ್ಲಿ ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಕರೆಸಲಾಗಿತ್ತು. ಇವರಿಬ್ಬರೂ ಸ್ಟಾರ್ ನಟಿಯರೇ. ರ್ಯಾಪಿಡ್ ಫೈರ್ ರೌಂಡ್ನಲ್ಲಿ ಕರಣ್ ಜೋಹರ್ ಅವರು, ಕರೀನಾ ಕಪೂರ್ ಅವರಿಗೆ ದೀಪಿಕಾ ಪಡುಕೋಣೆ ಅವರು ನಿಮ್ಮ ಸ್ಪರ್ಧಿಯೇ ಎಂದು ಪ್ರಶ್ನಿಸಿದರು. ಆಗ ಕರೀನಾ ಕಪೂರ್ ಅದಕ್ಕೆ ಉತ್ತರಿಸಲಿಲ್ಲ. ಕರಣ್ ಜೋಹರ್ ಇನ್ನೊಮ್ಮೆ ಆ ಪ್ರಶ್ನೆಯನ್ನು ಕೇಳಿದಾಗ, ಕರೀನಾ ಕಪೂರ್, ಈ ಪ್ರಶ್ನೆಯನ್ನು ನನಗ್ಯಾಕೆ ಕೇಳುತ್ತೀರಿ, ಅವಳ್ಯಾಕೆ ನನ್ನ ಸ್ಪರ್ಧಿ ಆಗುತ್ತಾಳೆ, ಅವಳೇನಿದ್ದರೂ ಆಲಿಯಾ ಭಟ್ (ಅಂದರೆ ಇತ್ತೀಚಿಗೆ ಬಂದ ನಟಿ ಎನ್ನುವ ಕಾರಣಕ್ಕೆ) ಸ್ಪರ್ಧಿಯಾಗಲಷ್ಟೇ ಸಾಧ್ಯ ಎಂದರು.
ಬಿಗ್ಬಾಸ್ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?
ಆಗ ಕೂಡಲೇ ಆಲಿಯಾ ಅವರು ದೀಪಿಕಾ ಅವರು ನನ್ನ ಸೀರಿಯರ್. ಅವರು ನನ್ನ ಸ್ಪರ್ಧಿ ಹೇಗೆ ಆಗುತ್ತಾರೆ? ದಯವಿಟ್ಟು ಈ ಪ್ರಶ್ನೆ ನನಗೆ ಅಲ್ಲ ಎಂದರು. ಮೊದಲಿಗೆ ಕರೀನಾ ಹೇಳಿದ ಮಾತಿಗೆ ಕರಣ್ ಮತ್ತು ಆಲಿಯಾ ಇಬ್ಬರೂ ನಕ್ಕರು. ನಂತರ ಇನ್ನೊಂದು ಪ್ರಶ್ನೆಯ ಸಂದರ್ಭದಲ್ಲಿ ಆಲಿಯಾ, ದೀಪಿಕಾ ಅವರ ನಟನೆಯನ್ನು ಶ್ಲಾಘಿಸಿದರು. ಕರೀನಾ ಕಪೂರ್ ಈ ಕೊಂಕು ಮಾತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟು ಅಹಂಕಾರ ಒಳ್ಳೆಯದಲ್ಲ ಎಂದಿದ್ದಾರೆ. ಇದೇ ವೇಳೆ ಕೆಲವರು ಕೆಲ ತಿಂಗಳ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿಯವರು ಕರೀನಾ ಅಹಂಕಾರಿ ಎಂದು ಹೇಳಿದ ಮಾತನ್ನು ನೆನಪಿಸಿದ್ದಾರೆ. ಅದೇನೆಂದರೆ ಒಮ್ಮೆ ನಾರಾಯಣ ಮೂರ್ತಿ ಅವರು, 'ನಾನು ಲಂಡನ್‌ನಿಂದ ಬರುತ್ತಿದ್ದೆ ಆಗ ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ತುಂಬಾ ಜನರು ಅವರ ಬಳಿ ಬಂದು ಹಲೋ ಹೇಳುತ್ತಿದ್ದರು. ಆದರೆ ಅವರು ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ನನಗೆ ಅದು ಆಶ್ಚರ್ಯವಾಯಿತು. ಯಾರೇ ನಮ್ಮ ಬಳಿ ಬಂದರೂ ಎದ್ದು ನಿಂತು ಸ್ವಲ್ಪ ಮಾತನಾಡಿದರೆ ಅದು ಅವರಿಗೆ ಖುಷಿ ಕೊಡುತ್ತದೆ. ಆದರೆ ಕರೀನಾ ಮಾತ್ರ ಅಸಡ್ಡೆ ತೋರಿದ್ದರು. ಇದು ಅಹಂಕಾರ ಎನಿಸಿತ್ತು' ಎಂದಿದ್ದರು. ಇದನ್ನೇ ಮತ್ತೆ ನೆಟ್ಟಿಗರು ಕರೀನಾಗೆ ನೆನಪು ಮಾಡಿಸಿದ್ದಾರೆ.
ಅಂದಹಾಗೆ ಕರೀನಾ ಕಪೂರ್ 2000 ರಲ್ಲಿ ರೆಫ್ಯೂಜಿ ಸಿನಿಮಾದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ದೀಪಿಕಾ 2007 ರಲ್ಲಿ ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಏತನ್ಮಧ್ಯೆ, 2012 ರಲ್ಲಿ ಬಿಡುಗಡೆಯಾದ ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ನಲ್ಲಿ ಆಲಿಯಾ ಮೊದಲ ನಟನೆಯನ್ನು ಮಾಡಿದರು.
ಅಮಿತಾಭ್ ಸರ್ ಪ್ಲೀಸ್ ಪ್ಲಿಸ್... ಫೈನಲ್ ಮ್ಯಾಚ್ ನೋಡ್ಬೇಡಿ ಅಂತಿದ್ದಾರೆ ನೆಟ್ಟಿಗರು! ಅಷ್ಟಕ್ಕೂ ಆಗಿದ್ದೇನು?