ನಟ ಇಮ್ರಾನ್ ಹಶ್ಮಿಯ ತಬ್ಬಿ ತುಟಿಗೆ ಕಿಸ್ ಕೊಟ್ಟ ಸಲ್ಮಾನ್: ವಿಡಿಯೋ ನೋಡಿ ಛೀ ಛೀ ಎಂದ ಫ್ಯಾನ್ಸ್!
ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಅಭಿನಯದ ಟೈಗರ್-3 ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್‌ನಲ್ಲಿ ‘ಬಾಕ್ಸ್ ಆಫೀಸ್ ಟೈಗರ್’ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್ ಅವರ ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಲೇ ಇದು ಸಿಕ್ಕಾಪಟ್ಟೆ ಹಲ್ಚಲ್ ಸೃಷ್ಟಿಸಿತ್ತು. ಇದಕ್ಕೆ ಕಾರಣ ಕತ್ರಿನಾ ಕೈಫ್ ಟವಲ್ ತೊಟ್ಟು ಫೈಟ್ ಮಾಡಿದ ದೃಶ್ಯ. ಆ್ಯಕ್ಷನ್ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕತ್ರಿಕಾ, ಈ ಟ್ರೇಲರ್ನಲ್ಲಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. ಕತ್ರೀನಾ ಅವು, ಇನ್ನೋರ್ವ ನಟಿ ಮಿಚೆಲ್ ಜೊತೆ ಭರ್ಜರಿ ಫೈಟಿಂಗ್ ಮಾಡಿದ್ದಾರೆ. ಆ ಯುವತಿ ಕೂಡ ಇವರಂತೆಯೇ ಚಿಕ್ಕ ಟವೆಲ್ ಸುತ್ತಿಕೊಂಡಿದ್ದಾರೆ. ಫೈಟಿಂಗ್ ವೇಳೆ ಈ ಟವಲ್ಗಳನ್ನು ಇಬ್ಬರೂ ಎಳೆದಾಡಿದ್ದಾರೆ! ಇದನ್ನು ನೋಡಿ ಉಫ್ ಇನ್ನು ಈ ಕಣ್ಣಿನಿಂದ ಇನ್ನು ಏನೇನು ನೋಡಬೇಕೋ ಎಂದು ಸಿನಿ ಪ್ರಿಯರು ಹೇಳುತ್ತಿದ್ದರು.
ಅಂತೂ ಈ ಚಿತ್ರ ಬಿಡುಗಡೆಯಾಗಿ ಚೆನ್ನಾಗಿ ಓಡುತ್ತಿದೆ. ಆದರೆ 'ಟೈಗರ್ 3' ಯಶಸ್ಸಿನ ಸಂಭ್ರಮದಲ್ಲಿರುವ ಸಲ್ಮಾನ್ ಖಾನ್ ಸಹ-ನಟ ಇಮ್ರಾನ್ ಹಶ್ಮಿಗೆ ವೇದಿಕೆಯ ಮೇಲೆಯೇ ತುಟಿಗೆ ಕಿಸ್ ಮಾಡಲು ಹೋಗಿ ಮತ್ತೊಮ್ಮೆ ಹಲ್ಚಲ್ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಸ್ಪೆಷಲ್ ಸಕ್ಸಸ್ (Success Event) ಇವೆಂಟ್ ನಡೆದಿತ್ತು. ಇದರಲ್ಲಿ ಸಲ್ಮಾನ್ ಖಾನ್ ಅವರು ಸಹ ನಟ ಇಮ್ರಾನ್ ತುಟಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಸಿನಿಮಾ ಗೆಲ್ಲಿಸಿದ್ದಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇದಾದ ಬಳಿಕ ಅಲ್ಲಿಯೇ ಇದ್ದ ಇಮ್ರಾನ್ ಅವರನ್ನು ತಬ್ಬಿ ತುಟಿಗೆ ಕಿಸ್ ಮಾಡಿದ್ದಾರೆ.
ಕತ್ರೀನಾ ಟವಲ್ ತಂದ ಆಪತ್ತು? ಇಸ್ಲಾಮಿಕ್ ದೇಶಗಳಲ್ಲಿ ಸಲ್ಮಾನ್ ಖಾನ್ ಟೈಗರ್-3 ಚಿತ್ರ ಬ್ಯಾನ್!
ಇದನ್ನು ನೋಡಿ ಅಲ್ಲಿದ್ದ ಕತ್ರೀನಾ ಕೈಫ್ ಸೇರಿದಂತೆ ಪ್ರೇಕ್ಷಕರು ಜೋರಾಗಿ ನಕ್ಕರೂ ವಿಡಿಯೋ ನೋಡಿ ಫ್ಯಾನ್ಸ್ ಮಾತ್ರ ಛೀ ಛೀ ಅಂತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಸಲ್ಮಾನ್, ಈವೆಂಟ್ ಸಂದರ್ಭದಲ್ಲಿ ಕತ್ರೀನಾ ಕೂಡ ಪಕ್ಕದಲ್ಲಿಯೇ ಇದ್ದಾರೆ. ಹಾಗಾಗಿ ಸ್ವಲ್ಪ ರೊಮ್ಯಾನ್ಸ್ ಬೇಕು ಎನ್ನುತ್ತಲೇ ಇಮ್ರಾನ್ ಹಶ್ಮಿಯವರನ್ನು ತಬ್ಬಿ ಕಿಸ್ ಮಾಡಿದ್ದಾರೆ. ಇಮ್ರಾನ್ ಅವರು ಸಿನಿಮಾದಲ್ಲಿದ್ದರೆ ಇದೂ ಇರಬೇಕು ಎಂದ ಸಲ್ಮಾನ್ ಖಾನ್ ಹೇಳಿ ಹೀಗೆ ಮಾಡಿದ್ದು, ಇದನ್ನು ನೋಡಿದ ಫ್ಯಾನ್ಸ್ ಬೇಕಿತ್ತಾ ಇದೆಲ್ಲಾ ಅಂತಿದ್ದಾರೆ.
ಅಷ್ಟಕ್ಕೂ, ಸಲ್ಮಾನ್ ಹೀಗೆ ಮಾಡಲು ಕಾರಣವೂ ಇದೆ. ಅದೇನೆಂದರೆ, ಇಮ್ರಾನ್ ಹಶ್ಮಿ ಸೀರಿಯಲ್ ಕಿಸ್ಸರ್ ಎಂದೇ ಬಿ ಟೌನ್ನಲ್ಲಿ ಪ್ರಸಿದ್ಧಿ. ಅವರು ನಟಿಸಿದ ಸಿನಿಮಾಗಳಲ್ಲಿ ಲಿಪ್ಲಾಕ್ ಸೀನ್ ಇಲ್ಲದೆ ಸಿನಿಮಾ ನಡೆಯುವುದಿಲ್ಲ. ಇದೇ ಕಾರಣಕ್ಕೆ ಸಲ್ಮಾನ್ ಹೀಗೆ ಮಾಡಿದ್ದಾರೆ. ಇನ್ನು ‘ಟೈಗರ್ 3’ ಬಗ್ಗೆ ಹೇಳುವುದಾದರೆ, ಇದೇ 12ರಂದು ಚಿತ್ರ ಬಿಡುಗಡೆಯಾಗಿದ್ದು, ‘ಟೈಗರ್ 3’ ಮೊದಲ ದಿನವೇ 44 ಕೋಟಿ ಗಳಿಸಿದೆ. ಮೊದಲ ದಿನದ ಅತಿ ಹೆಚ್ಚು ಗಳಿಕೆಗಳ ಪಟ್ಟಿಯಲ್ಲಿ ‘ಟೈಗರ್ 3’ ಎರಡನೇ ಸ್ಥಾನದಲ್ಲಿದೆ. ‘ಗದರ್ 2’ ಸಿನಿಮಾವನ್ನು ಹಿಂದಿಕ್ಕಿದೆ. ನಂತರ ಅಂದುಕೊಂಡಷ್ಟು ಗಳಿಕೆ ಮಾಡುತ್ತಿಲ್ಲ.
ಈ ರಣವೀರ್ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ?