ಜಗತ್ತಿನಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಟೈಗರ್ 3 ಸಿನಿಮಾದಲ್ಲಿ ನಟಿಸಿರುವ ಕಾರಣಕ್ಕೆ ನಟಿ ಕತ್ರಿನಾ ಸದ್ಯ ಭಾರೀ ಟ್ರೆಂಡ್ ಆಗಿದ್ದಾರೆ. ಸಲ್ಮಾನ್ ಖಾನ್ ನಾಯಕತ್ವದ ಟೈಗರ್ ಸರಣಿಯ 3 ಚಿತ್ರಕ್ಕೂ ಕತ್ರಿನಾ ಕೈಫ್ ಅವರೇ ನಾಯಕಿಯಾಗಿದ್ದಾರೆ. ಹೀಗಾಗಿ ಟೈಗರ್ ಹೀರೋಯಿನ್ ಎಂದು ನಟಿ ಕತ್ರಿನಾರನ್ನು ಕರೆಯಬಹುದು ಎಂಬುದು ಲೇಟೆಸ್ಟ್ ಹೇಳಿಕೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಸದ್ಯ ನಿರಾಳವಾಗಿದ್ದಾರಂತೆ. ಕಾರಣ, ಸಲ್ಮಾನ್ ಖಾನ್ ಜತೆ ಕತ್ರಿನಾ ನಟಿಸಿರುವ 'ಟೈಗರ್ 3' ಚಿತ್ರವು ಒಂದು ವಾರದಲ್ಲಿ ರೂ. 200 ಕೋಟಿ ಗಳಿಸಿದ್ದು, ನಿರೀಕ್ಷಿತ ಮಟ್ಟವನ್ನು ತಲುಪದಿದ್ದರೂ ಸಿನಿಮಾ ಚೆನ್ನಾಗಿ ಗಳಿಕೆ ದಾಖಲಿಸಿದೆ. ಕತ್ರಿನಾ ತಮ್ಮ ಟೈಗರ್ 3 ಚಿತ್ರದ ಪ್ರಮೋಶನ್ ಕೆಲಸ ಮುಗಿಸಿ ಸದ್ಯ ಕೆಲವು ಸಂದರ್ಶನಗಳನ್ನು ಕೊಡುವುದರಲ್ಲಿ ನಿರತರಾಗಿದ್ದಾರೆ. ಅದೇ ವೇಳೆ, ಕತ್ರಿನಾ ಗಂಡ, ನಟ ವಿಕ್ಕಿ ಕೌಶಲ್ ತಮ್ಮ ಮುಂಬರುವ 'ಸಾಮ್ ಬಹಾದೂರ್' ಚಿತ್ರದ ಪ್ರಮೋಶನ್‌ನಲ್ಲಿ ಬ್ಯುಸಿ ಆಗಿದ್ದಾರೆ.
'ನಾವಿಬ್ಬರೂ ರಾತ್ರಿಯಲ್ಲಿ ಎರಡು ಹಡಗುಗಳಂತೆ ಆಗಿದ್ದೇವೆ. ನಾನು ಟೈಗರ್ 3 ಚಿತ್ರದ ಬಿಡುಗಡೆ ಬಳಿಕ ಸಂದರ್ಶನಗಳನ್ನು ಮುಗಿಸಿ ಮನೆಗೆ ವಾಪಸ್ಸಾದರೆ, ನನ್ನ ಗಂಡ ವಿಕ್ಕಿ ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಮುಂಬರುವ ಸಾಮ್ ಬಹಾದೂರ್ ಚಿತ್ರದ ಪ್ರಮೋಶನ್‌ಗೆಂದು ಕೊಲ್ಕತಾಗೆ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ನಾವು ಇಬ್ಬರೂ ರಾತ್ರಿ ಒಟ್ಟಿಗೇ ಮನೆಯಲ್ಲಿ ಇರುವುದೇ ಅಪರೂಪ ಎಂಬಂತಾಗಿದೆ' ಎಂದಿದ್ದಾರೆ. 'ತಾವಿಬ್ಬರೂ ಸಿನಿಮಾಗಳ ಕೆಲಸದಲ್ಲಿ ಬ್ಯುಸಿ ಆಗಿದ್ದೇವೆ' ಎಂಬರ್ಥದಲ್ಲಿ ಕತ್ರಿನಾ ಈ ಮಾತು ಹೇಳಿದ್ದಾರೆ.
ಹೆಂಡ್ತಿ ಅಪ್ಪ ಕತ್ತಿಗೆ ಮಚ್ಚು ಹಿಡಿದು, ತಿರುಪತಿಗೆ ಕರಕೊಂಡು ಹೋಗಿದ್ರು; ನಿರಂಜನ್ ದೇಶಪಾಂಡೆ
ಟೈಗರ್ ಫ್ರಾಂಚೈಸಿ ಸರಣಿಯ ಚಿತ್ರವಾದ 'ಟೈಗರ್ 3' ಕಳೆದ ವಾರ (12 ನವೆಂಬರ್ 2023) ರಂದು ಬಿಡುಗಡೆಯಾಗಿದೆ. ಒಂದು ವಾರದಲ್ಲಿ ರೂ. 200 ಕೋಟಿ ಕಲೆಕ್ಷನ್ ದಾಖಲಿಸಿ ಮುನ್ನುಗ್ಗುತ್ತಿದೆ. ಈ ಕಾರಣಕ್ಕೆ ನಟಿ ಕತ್ರಿನಾ ಎಕ್ಸೈಟ್ ಆಗಿದ್ದಾರಂತೆ. ನಾನು ಟೈಗರ್ ಸಿರೀಸ್ ಚಿತ್ರದಲ್ಲಿ ಝೋಯಾ ಪಾತ್ರದಲ್ಲಿ ನಟಿಸಿದ್ದೇನೆ. ಇದೇ ಪಾತ್ರವನ್ನು ಬೇಸ್ ಆಗಿ ತೆಗೆದುಕೊಂಡು ಇನ್ನೂ ಡೆಪ್ತ್ ಇರುವ ಪಾತ್ರವೊಂದರ ಸುತ್ತ ಆದಿತ್ಯ ಚೋಪ್ರಾ ನಿರ್ದೇಶನದ ಸಿನಿಮಾವೊಂದು ಬರಲಿದ್ದು, ಅದಕ್ಕೀಗ ನಾನು ಸಿದ್ಧಳಾಗುತ್ತಿದ್ದೇನೆ' ಎಂದಿದ್ದಾರೆ ನಟಿ ಕತ್ರಿನಾ ಕೈಫ್.
ಲವ್ ದೋಖಾಕ್ಕೆ ಚಾನ್ಸ್ ಕೊಡಲಿಲ್ಲ ಧಮೇಂದ್ರ, ಹೇಮಾ ಮಾಲಿನಿಗೆ ತಾಳಿ ಕಟ್ಟಲಿಲ್ಲ ಜಿತೇಂದ್ರ; ಶೋಭಾಳ ಕಥೆ ಏನಾಯ್ತು?
ಜಗತ್ತಿನಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಟೈಗರ್ 3 ಸಿನಿಮಾದಲ್ಲಿ ನಟಿಸಿರುವ ಕಾರಣಕ್ಕೆ ನಟಿ ಕತ್ರಿನಾ ಸದ್ಯ ಭಾರೀ ಟ್ರೆಂಡ್ ಆಗಿದ್ದಾರೆ. ಸಲ್ಮಾನ್ ಖಾನ್ ನಾಯಕತ್ವದ ಟೈಗರ್ ಸರಣಿಯ 3 ಚಿತ್ರಕ್ಕೂ ಕತ್ರಿನಾ ಕೈಫ್ ಅವರೇ ನಾಯಕಿಯಾಗಿದ್ದಾರೆ. ಹೀಗಾಗಿ ಟೈಗರ್ ಹೀರೋಯಿನ್ ಎಂದು ನಟಿ ಕತ್ರಿನಾರನ್ನು ಕರೆಯಬಹುದು ಎಂಬುದು ಲೇಟೆಸ್ಟ್ ಹೇಳಿಕೆ ಎನ್ನಬಹುದು. ಸಲ್ಮಾನ್ ಖಾನ್ ನಾಯಕತ್ವದಲ್ಲಿ ಟೈಗರ್ 3 ಚಿತ್ರವು ತೀವ್ರ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದೆ. ಆದರೆ, ನಿರೀಕ್ಷೆಯನ್ನು ನಿಜ ಮಾಡಿದೆಯೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.