ಮದ್ವೆಗೆ ಮೊದಲೂ ಸೆಕ್ಸ್ ಸೀನ್‌ಗೆ ನಂಗೂ ಸೈಫ್ ಗೂ ರಿಹರ್ಸಲ್ ಬೇಕಿರಲಿಲ್ಲ: ಕರೀನಾ ಕಪೂರ್

By Suvarna News  |  First Published Dec 16, 2023, 3:10 PM IST

ಸೈಫ್ ಆಲಿಖಾನ್, ಕರೀನಾ ಕಪೂರ್ ಅನೇಕ ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ಈ ಸೆಕ್ಸ್‌ಗೆ ಸಂಬಂಧಿಸಿ ಸೀನ್‌ಗಳಿಗೆಲ್ಲ ರಿಹರ್ಸಲ್ಲೇ ಬೇಕಿರಲಿಲ್ಲವಂತೆ!


ಇಂದಿಗೂ ಸೈಫ್ ಆಲಿಖಾನ್, ಕರೀನಾ ಕಪೂರ್ ಬಾಲಿವುಡ್‌ನ ಹಾಟ್ ಜೋಡಿ. ರಾಯಲ್ ಜೋಡಿ ಅಂತಲೇ ಫೇಮಸ್. ಇವರ ಫ್ಯಾಮಿಲಿ ಲೈಫು ಬಿ ಟೌನ್‌ನಲ್ಲಿ ಆಗಾಗ ಚರ್ಚೆ ಆಗೋ ವಿಷಯ. ಕರೀನಾ ಮತ್ತು ಸೈಫ್ ಸಂಬಂಧದ ಬಗ್ಗೆ ಜೋಕ್‌ಗಳೂ ಇವೆ. ಕರೀನಾಗಿಂತ ಹಲವು ವರ್ಷ ದೊಡ್ಡವರಾದ ಸೈಫ್ ಮೊದಲ ಮದುವೆಗೆ ಕರೀನಾ ಬಂದಿದ್ದರಂತೆ. ಆಗ ಆಕೆ ಚಿಕ್ಕ ಹುಡುಗಿ. ಪುಟ್ಟ ಹುಡುಗಿಯನ್ನ ಮುದ್ದಿನಿಂದ 'ಬೇಟಿ' ಅಂತ ಸೈಫ್ ಕರೆದಿದ್ದರಂತೆ. ಆದರೆ ಹಣೇಬರಹ ನೋಡಿ, ಆಗ ಮಗುವಿನಂತೆ ಕಂಡಾಕೆಯೇ ಮುಂದೆ ಇವರ ಎರಡನೇ ಪತ್ನಿ ಆದರು. ಮದುವೆಗೆ ಮುನ್ನ ಹಲವು ವರ್ಷಗಳ ಕಾಲ ತಮ್ಮ ಸಂಬಂಧ ಮುಂದುವರಿಸಿಕೊಂಡು ಬಂದಿದ್ದ ಸೈಫ್‌ ಮತ್ತು ಕರೀನಾ, ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬೋಲ್ಡ್‌ ಸೀನ್‌ಗಳಲ್ಲೂ ಮೈ ಚಳಿ ಬಿಟ್ಟು ಈ ಜೋಡಿ ಕಾಣಿಸಿಕೊಂಡಿದೆ. ಇದೀಗ ಮದುವೆಗೂ ಮುನ್ನ ಸಿನಿಮಾವೊಂದರ ಆಪ್ತ ದೃಶ್ಯಗಳ ಚಿತ್ರೀಕರಣದ ಬಗ್ಗೆ ಕರೀನಾ ಮಾತನಾಡಿದ್ದಾರೆ.

ಅಂದಹಾಗೆ ಸೈಫ್ ಮತ್ತು ಕರೀನಾ ಲಿವ್‌ಇನ್‌ ರಿಲೇಶನ್‌ಶಿಪ್‌ನಲ್ಲೂ (Live In Relationship) ಖುಷಿಯಾಗಿಯೇ ಇದ್ದರು. ಮದುವೆಗೆ ಮುನ್ನ ಹಲವು ವರ್ಷಗಳ ಕಾಲ ತಮ್ಮ ಸಂಬಂಧ ಮುಂದುವರಿಸಿಕೊಂಡು ಬಂದಿದ್ದ ಸೈಫ್‌ ಮತ್ತು ಕರೀನಾ, ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬೋಲ್ಡ್‌ ಸೀನ್‌ಗಳಲ್ಲೂ ಮೈ ಚಳಿ ಬಿಟ್ಟು ಈ ಜೋಡಿ ಕಾಣಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಆ ಪೈಕಿ 2009ರಲ್ಲಿ ತೆರೆಗೆ ಬಂದ 'ಕುರ್ಬನ್' ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕರೀನಾ ಮತ್ತು ಸೈಫ್ ಜೋಡಿಯ ಆಪ್ತ ದೃಶ್ಯಗಳು ಚಿತ್ರದ ಹೈಲೈಟ್‌ಗಳಲ್ಲೊಂದಾಗಿತ್ತು. ಈಗ ಅಂದಿನ ಆ ದೃಶ್ಯದ ಬಗ್ಗೆಯೇ ಕರೀನಾ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ, ಕರೀನಾ ರೌಂಡ್‌ ಟೇಬಲ್‌ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ, ಬಾಲಿವುಡ್‌ನ ಮತ್ತೋರ್ವ ನಟ ಸಿದ್ಧಾರ್ಥ್ ಮಲ್ಹೋತ್ರಾ, ಕುರ್ಬಾನ್ ಚಿತ್ರದ ಬಗ್ಗೆ ಮಾತನಾಡುತ್ತ, ಸೈಫ್ ಅಲಿ ಖಾನ್ ಜತೆಗೆ ಚಿತ್ರೀಕರಿಸಿದ ಸೆಕ್ಸ್‌ ದೃಶ್ಯದ ಬಗ್ಗೆ ಕೇಳಿದರು. ಅದಕ್ಕೆ ಯಾವುದೇ ಮುಲಾಜಿಲ್ಲದೆ, ಕರೀನಾ ಉತ್ತರ ನೀಡಿದರು. ಕರೀನಾ ಅವರ ಉತ್ತರಕ್ಕೆ ಅಲ್ಲಿದ್ದವರೆಲ್ಲ ಕೊಂಚ ನಿಬ್ಬೆರಗಾದರು.

Tap to resize

Latest Videos

19 ಫ್ಲಾಪ್‌ ಸಿನಿಮಾದಲ್ಲಿ ನಟಿಸಿದಾಕೆ ಈಗ ಭಾರತದ ಅತ್ಯಂತ ಶ್ರೀಮಂತ ನಟಿ, ಒಟ್ಟು ಆಸ್ತಿ ಮೌಲ್ಯ ಗೊತ್ತಾದ್ರೆ ಶಾಕ್ ಆಗ್ತೀರಾ!

'2009ರಲ್ಲಿ ನಾವು ಪರಸ್ಪರ ಡೇಟಿಂಗ್ (Dating) ಮಾಡುತ್ತಿದ್ದೆವು. ಸಿನಿಮಾದಲ್ಲಿ ಈ ರೀತಿಯ ದೃಶ್ಯ ಇದೆ. ಒಂದು ಬಾರಿ ರಿಹರ್ಸಲ್‌ ಮಾಡಿ ಎಂದು ನಿರ್ದೇಶಕರು ಹೇಳಿದ್ದರು. ಅವರ ಮಾತಿಗೆ, ನಾವೂ ಈಗಾಗಲೇ ಆಡಿಷನ್ ಮಾಡಿ ಪರ್ಫೆಕ್ಟ್ ಆಗಿದ್ದೇವೆ. ಯಾವುದೇ ತೊಂದರೆ ಇಲ್ಲ. ಆಪ್ತ ದೃಶ್ಯಗಳನ್ನು ಚಿತ್ರೀಕರಿಸಬಹುದು' ಎಂದಿದ್ದಾರೆ ಕರೀನಾ. ಹೀಗೆ ಹೇಳುತ್ತಿದ್ದಂತೆ, ಸ್ವತಃ ಕರೀನಾ ಸೇರಿ ಕಾಜೋಲ್‌, ಸಿದ್ಧಾರ್ಥ್‌ ನಗಾಡಿದ್ದಾರೆ.

ಐದು ವರ್ಷ ಲೀವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದ (relation) ಕರೀನಾ ಮತ್ತು ಸೈಫ್‌ ಮದುವೆ ಆದ ಬಗೆಯನ್ನೂ ವಿವರಿಸಿದ್ದಾರೆ. ʼಲಿವಿನ್‌ನಲ್ಲಿ ನಾವಿಬ್ಬರೂ ಖುಷಿಯಾಗಿದ್ದೆವು. ಆದರೆ ಮಕ್ಕಳ ಬಗ್ಗೆ ಯೋಚಿಸಿ ಮದುವೆಯಾಗಲು ನಿರ್ಧರಿಸಿದೆವು ಎಂದು ಮ್ಯಾಗಜೀನ್‌ವೊಂದಕ್ಕೆ ಈ ಹಿಂದೆ ಸಂದರ್ಶನ ನೀಡಿದ್ದರು ಕರೀನಾ. 'ನಾವು ಮಕ್ಕಳಿಗಾಗಿ ಮಾತ್ರ ಮದುವೆಯಾಗಿದ್ದೇವೆ. ಇಲ್ಲದಿದ್ದರೆ, ನಾವು ಲೀವ್‌ ಇನ್‌ (livein) ರಿಲೇಷನ್‌ ಶಿಪ್‌ನಲ್ಲಿಯೇ ಸಂತೋಷದಿಂದ ಇದ್ದೆವು. ನಮಗೆ ಮಕ್ಕಳು (children) ಬೇಕು ಎಂಬ ಕಾರಣಕ್ಕೆ ಮದುವೆ ಆಗುವುದಾಗಿ ನಿರ್ಧರಿಸಿದೆವು’ ಎಂದು ಹೇಳಿದ್ದಾರೆ.

ಕರೀನಾ ಕಪೂರ್‌ನ್ನೇ 2 ತಿಂಗಳು ತನ್ನಿಂದೇ ಅಲೆಯುವಂತೆ ಮಾಡಿದ್ದರಂತೆ ಶಾಹೀದ್‌

ಬಾಲಿವುಡ್‌ನ ತಾರಾ ಜೋಡಿಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಭಾರೀ ಫೇಮಸ್ (famouse). ಇದೀಗ ಈ ಜೋಡಿಯ ಮದುವೆ ಆಗಿ 11 ವರ್ಷಗಳ ಮೇಲಾದವು. ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಹೀಗಿರುವಾಗಲೇ ಇದೇ ನಟಿ ಮದುವೆ ಹಿಂದಿನ ಕೆಲ ಇಂಟ್ರೆಸ್ಟಿಂಗ್‌ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದು ಬಾಲಿವುಡ್ ಮಂದಿ ಕಣ್ಣರಳಿಸೋ ಹಾಗೆ ಮಾಡಿದೆ.

click me!