ಭಾರತವನ್ನು ಎದುರು ಹಾಕಿಕೊಂಡು ಸುಮ್ಮನಿರಲಾಗದೇ ಇರುವೆ ಬಿಟ್ಕೊಂಡ ಮಾಲ್ಡೀವ್ಸ್‌ಗೆ ಮುಟ್ಟುನೋಡಿಕೊಳ್ಳೋ ಪಾಠ ಕಲಿಸಿದ್ದಾರೆ ಬಾಲಿವುಡ್ ಸ್ಟಾರ್ಸ್. ಏನಿದು ವಿವಾದ?
ಚೀನಾದ ಜೊತೆ ಕೈಜೋಡಿಸಿ, ಭಾರತಕ್ಕೇ ಪಾಠ ಕಲಿಸಲು ಹೋಗಿದ್ದ ಮಾಲ್ಡೀವ್ಸ್‌ಗೆ ಇದೀಗ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ ಪರಿಸ್ಥಿತಿ ಎದುರಾಗಿದೆ. ಪ್ರೀತಿಯಿಂದ ಇದ್ದ ಭಾರತದ ವೈರತ್ವ ಕಟ್ಟಿಕೊಳ್ಳಲು ಮುಂದಾಗಿದ್ದ ಮಾಲ್ಡೀವ್ಸ್ ಇದೀಗ ಭಾರತದ ಕಾಲು ಹಿಡಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮಾಲ್ಡೀವ್ಸ್ ಎಂದರೆ ಪ್ರವಾಸಿಗರಿಗೆ ಅದೊಂದು ರೀತಿಯ ಸ್ವರ್ಗ ಇದ್ದಂತೆ. ಅದರಲ್ಲಿಯೂ ಭಾರತೀಯರು ಅದರಲ್ಲಿಯೂ ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ನೀಡುವುದು ಮಾಮೂಲು. ಇದೇ ಕಾರಣಕ್ಕೆ ಇಲ್ಲಿ ಪ್ರವಾಸೋದ್ಯಮ ಹೆಚ್ಚಾಗಲು, ದೇಶದ ಬೊಕ್ಕಸಕ್ಕೆ ಹಣ ಹರಿದು ಬರಲು ಭಾರತದ ಕೊಡುಗೆ ಅತಿ ದೊಡ್ಡದಾಗಿದೆ. ಆದರೆ ಇದೀಗ ತಾನೇ ಹೆಣೆದ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದೆ ಮಾಲ್ಡೀವ್ಸ್.
ಅದೇ ಇನ್ನೊಂದೆಡೆ, ಸದಾ ಒಂದು ಹೆಜ್ಜೆ ಮುಂದಕ್ಕೆ ಯೋಚನೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ಮಾಲ್ಡೀವ್ಸ್ನಂತೆಯೇ ಸುಂದರವಾಗಿರುವ ಲಕ್ಷದ್ವೀಪವನ್ನೇ ಅಭಿವೃದ್ಧಿ ಮಾಡುವ ಪಣ ತೊಟ್ಟು ಅಲ್ಲಿಗೆ ಹೋಗಿದ್ದರು. ಖುದ್ದು ಪ್ರಧಾನಿಯೊಬ್ಬರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟು ಲೈಫ್ಜಾಕೆಟ್ ಮೂಲಕ ಸಮುದ್ರಕ್ಕೆ ಇಳಿದ ಫೋಟೋ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ವೈರಲ್ ಆಯಿತು. ಲೈಫ್ಜಾಕೆಟ್ ತೊಟ್ಟು ಪ್ರಧಾನಿಯವರು ಈ ರೀತಿ ಮಾಡಿದ್ದರ ಹಿಂದಿರುವ ಉದ್ದೇಶವನ್ನು ಅರಿಯದ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಕುಹಕವಾಡುತ್ತಲೇ ಇದ್ದಾರೆ. ಆದರೆ ಪ್ರಧಾನಿಯವರ ಬಹು ದೂರದ ದೃಷ್ಟಿ ಸುಳ್ಳಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಈ ಫೋಟೋ ವೈರಲ್ ಆಗುತ್ತಲೇ ದೊಡ್ಡ ಮಟ್ಟದಲ್ಲಿ ಹಲ್ಚಲ್ ಆಗಿದೆ. ಮಾಲ್ಡೀವ್ಸ್‌ಗೆ ಧಿಕ್ಕಾರ ಹಾಕುತ್ತಲೇ ಲಕ್ಷದ್ವೀಪಕ್ಕೆ ಸ್ವಾಗತ ಕೋರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
undefined
ಹೊಗಳದಿದ್ದರೂ, ತೆಗಳಬೇಡಿ, ಭಾರತೀಯರನ್ನು ಗೆಲ್ಲದೇ ಭಾರತವನ್ನು ಗೆಲ್ಲಲಾಗದು!
ಬೈಕಾಟ್ಮಾಲ್ಡೀವ್ಸ್ ಟ್ರೆಂಡ್ ಅಂತೂ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಅಭಿಮಾನವಾಗಿದೆ. ಇದಕ್ಕೆ ಇದಾಗಲೇ ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್, ಕಂಗನಾ ರಣಾವತ್, ಸೇರಿದಂತೆ ಹಲವು ಸಿನಿ ತಾರೆಯರು ಕೈಜೋಡಿಸಿದ್ದಾರೆ. ಯಾವಾಗ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟು ಮಾಲ್ಡೀವ್ಸ್‌ಗೆ ತಕ್ಕ ಪಾಠ ಕಲಿಸಿದರೋ ಬಹಳ ವಿಚಿತ್ರ ಹಾಗೂ ಕುತೂಹಲ ಬೆಳವಣಿಗೆಯೊಂದು ಮಾಲ್ಡೀವ್ಸ್ ಕನಸಿನಲ್ಲಿಯೂ ಊಹಿಸಿಕೊಳ್ಳಲಾಗದಂತೆ ನಡೆದು ಹೋಗಿದೆ. ಸಹಸ್ರಾರು ಮಂದಿ ಮಾಲ್ಡೀವ್ಸ್ ಟ್ರಿಪ್ ರದ್ದು ಮಾಡಿದ್ದಾರೆ. ಅಲ್ಲಿಯ ಹೋಟೆಲ್ಗಳಲ್ಲಿ ಮಾಡಿರುವ ಬುಕಿಂಗ್ಗಳನ್ನು ಕ್ಯಾನ್ಸಲ್ ಮಾಡಲಾಗಿದೆ.
ಅದೇ ಇನ್ನೊಂದೆಡೆ ಇತ್ತ ಭಾರತದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ಲೇವಡಿ ಮಾಡುವ ಒಂದು ವರ್ಗ ಹುಟ್ಟಿಕೊಂಡಿದ್ದರೆ, ಅತ್ತ ಮಾಲ್ಡೀವ್ಸ್ನಲ್ಲಿ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಿಯ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ. ಇದೀಗ ಬಾಲಿವುಡ್ ನಟ-ನಟಿಯರು ಮಾಲ್ಡೀವ್ಸ್ ಬೈಕಾಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಧಕ್ಕೆ ಉಂಟಾಗಿದೆ. ಈ ಹಿಂದೆ ಕೂಡ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳಲ್ಲಿ ಮದುವೆ ಮಾಡಿಕೊಳ್ಳುವ ಬದಲು ಭಾರತದಲ್ಲಿಯೇ ಮದುವೆ ಮಾಡಿಕೊಳ್ಳುವಂತೆ ಸೆಲೆಬ್ರಿಟಿಗಳಿಗೆ ಕರೆ ಕೊಟ್ಟಿದ್ದರು. ಈ ಮೂಲಕ ದೇಶದ ಆರ್ಥಿಕತೆಗೆ ಬಹು ದೊಡ್ಡ ಕೊಡುಗೆ ಆಗಲಿದೆ ಎಂದಿದ್ದರು. ಇದರ ಇನ್ನೊಂದು ಭಾಗವಾಗಿ ಮಾಲ್ಡೀವ್ಸ್ ತನ್ನ ಅವಸಾನವನ್ನು ತಾನೇ ತಂದುಕೊಂಡಿದೆ. #Lakshadweep #BucketList #ExploreIndianIslands #DekhoApnaDesh ಎಂಬೆಲ್ಲಾ ಹ್ಯಾಷ್ಟ್ಯಾಗ್ಗಳು ಟ್ರೆಂಡಿಂಗ್ ಆಗಿವೆ.
ಮಾಲ್ಡೀವ್ಸ್‌ಗೆ ಮತ್ತೊಂದು ಸ್ಟ್ರೋಕ್, ಶೀಘ್ರದಲ್ಲೇ ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ!