ಪತ್ನಿ ಟ್ವಿಂಕಲ್‌ ವಿರುದ್ಧ ಕ್ರಿಸ್ ರಾಕ್ ಗೇಲಿ ಮಾಡಿದರೆ ಏನ್‌ ಮಾಡ್ತೀರಾ? ಅಕ್ಷಯ್ ಉತ್ತರಕ್ಕೆ ಬೆಚ್ಚಿದ KJ

Published : Jul 20, 2022, 09:50 AM ISTUpdated : Jul 20, 2022, 09:52 AM IST
ಪತ್ನಿ ಟ್ವಿಂಕಲ್‌ ವಿರುದ್ಧ ಕ್ರಿಸ್ ರಾಕ್ ಗೇಲಿ ಮಾಡಿದರೆ ಏನ್‌ ಮಾಡ್ತೀರಾ? ಅಕ್ಷಯ್ ಉತ್ತರಕ್ಕೆ ಬೆಚ್ಚಿದ KJ

ಸಾರಾಂಶ

ಈಗ ಅಕ್ಷಯ್‌ ಕುಮಾರ್ ಅವರಿಗೆ ನಿಮ್ಮ ಪತ್ನಿ ಹಾಗೂ ನಟಿ ಟ್ವಿಂಕಲ್‌ ಖನ್ನಾ ಬಗ್ಗೆ  ಕ್ರಿಸ್ ರಾಕ್ ಹಾಸ್ಯ ಮಾಡಿದರೆ ಏನು ಮಾಡುವಿರಿ ಎಂದು ನಟ ಕರಣ್‌ ಜೋಹರ್ ಕೇಳಿದ್ದು, ಇದಕ್ಕೆ ಅಕ್ಷಯ್‌ ಕುಮಾರ್ ಆತನ ತಿಥಿಗೆ ಆಗುವ ವೆಚ್ಚವನ್ನು ನಾನೇ ನೋಡಿಕೊಳ್ಳುವೆ ಎಂದು ಉತ್ತರಿಸುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.

ನವ ದೆಹಲಿ: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ತನ್ನ ಪತ್ನಿ ಜಡಾ ಪಿಂಕೆಟ್ ಸ್ಮಿತ್  ಬಗ್ಗೆ ಹಾಸ್ಯ ಮಾಡಿದ ನಟ ಕ್ರಿಸ್ ರಾಕ್ ಕೆನ್ನೆಗೆ ನಟ ವಿಲ್ ಸ್ಮಿತ್ ಬಾರಿಸಿದ್ದು, ನಂತರ ಅದು ದೊಡ್ಡ ವಿವಾದವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಕ್ಷಯ್‌ ಕುಮಾರ್ ಅವರಿಗೆ ನಿಮ್ಮ ಪತ್ನಿ ಹಾಗೂ ನಟಿ ಟ್ವಿಂಕಲ್‌ ಖನ್ನಾ ಬಗ್ಗೆ  ಕ್ರಿಸ್ ರಾಕ್ ಹಾಸ್ಯ ಮಾಡಿದರೆ ಏನು ಮಾಡುವಿರಿ ಎಂದು ನಟ ಕರಣ್‌ ಜೋಹರ್ ಕೇಳಿದ್ದು, ಇದಕ್ಕೆ ಅಕ್ಷಯ್‌ ಕುಮಾರ್ ಆತನ ತಿಥಿಗೆ ಆಗುವ ವೆಚ್ಚವನ್ನು ನಾನೇ ನೋಡಿಕೊಳ್ಳುವೆ ಎಂದು ಉತ್ತರಿಸುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ. ಜೊತೆಗೆ ತಮ್ಮ ಪತ್ನಿ ಮೇಲಿನ ಪ್ರೀತಿ ಅಭಿಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳಲಾಗಿದೆ.  ಕಾಫಿ ವಿತ್ ಕರಣ್ ಸೀಸನ್‌ 7 ಇನ್ನಷ್ಟೇ ಪ್ರಸಾರವಾಗಬೇಕಿದೆ. ಸೀಸನ್ ಏಳರ ಮೊದಲ ಸಂಚಿಕೆಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಈ ಸೀಸನ್‌ನ ಮೊದಲ ಸಂಚಿಕೆಯಲ್ಲಿ ಅತಿಥಿಗಳಾಗಿ ಅಕ್ಷಯ್ ಕುಮಾರ್ ಮತ್ತು ಸಮಂತಾ ರುತ್ ಪ್ರಭು ಆಗಮಿಸಿದ್ದು, ಆ ಸಂಚಿಕೆಯ ಪ್ರೋಮೋ ವೀಡಿಯೊವನ್ನು ಮಂಗಳವಾರ (ಜು.19) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪ್ರೋಮೋದಲ್ಲಿ ಕರಣ್ ಜೋಹರ್, 'ಕ್ರಿಸ್ ರಾಕ್ ಟೀನಾ (ಟ್ವಿಂಕಲ್ ಖನ್ನಾ) ಬಗ್ಗೆ ತಮಾಷೆ ಮಾಡಿದರೆ ನೀವು ಏನು ಮಾಡುತ್ತೀರಿ ಎಂದು ಅಕ್ಷಯ್ ಕುಮಾರ್ ಅವರನ್ನು ಕೇಳಿದ್ದಾರೆ. ಇದಕ್ಕೆ ಅಕ್ಷಯ್‌ಕುಮಾರ್‌ 'ಅವರ ಅಂತ್ಯಕ್ರಿಯೆಗೆ ತಗಲುವ ವೆಚ್ಚವನ್ನು ನಾನು ಪಾವತಿಸುತ್ತೇನೆ' ಎಂದು ಹೇಳಿದ್ದಾರೆ. 

 

Akshay Kumar About Wife: ಹೆಂಡತಿ, ಅತ್ತೆಯ ಒತ್ತಡ, ಇಷ್ಟವಿಲ್ಲದ ಕೆಲಸ ಮಾಡ್ತಾರಂತೆ ಅಕ್ಷಯ್ ಕುಮಾರ್

ಮಾರ್ಚ್ 27ರಂದು ನಡೆದ ಆಸ್ಕರ್ ಸಮಾರಂಭದಲ್ಲಿ ಡಾಕ್ಯುಮೆಂಟರಿ ಫೀಚರ್ ವಿಭಾಗದ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್(Chris Rock), ನಟ ವಿಲ್ ಸ್ಮಿತ್(Will Smith) ಪತ್ನಿ ಹಾಗೂ, ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿ ನಟ ವಿಲ್ ಸ್ಮಿತ್ ಅವರಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು, ವಿಶ್ವದಾದ್ಯಂತ ಚರ್ಚೆ ನಡೆದಿತ್ತು. ಕ್ರಿಸ್ ರಾಕ್ ತನ್ನ ಪತ್ನಿಯ ಬಗ್ಗೆ ತಮಾಷೆ ಮಾಡಿದ ಕಾರಣಕ್ಕೆ ವೇದಿಕೆಯ ಮೇಲೆ ಹೋಗಿ ವಿಲ್ ಸ್ಮಿತ್ ಕಪಾಳಕ್ಕೆ ಬಾರಿಸುವ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದರು. ಕಪಾಳಕಕ್ಕೆ ಬಾರಿಸಿ ಬಂದ ಸ್ಮಿತ್ ನನ್ನ ಪತ್ನಿ ಬಗ್ಗೆ ಮಾತನಾಬೇಡ ಎಂದು ಕಿರುಚಾಡಿದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು' ಎಂದು ಸ್ಮಿತ್ ಕೂಗಾಡಿದ್ದರು. ಈ ಘಟನೆ ಎಲ್ಲರಿಗೂ ಶಾಕ್ ನೀಡಿದ್ದು. ಕಪಾಳಕ್ಕೆ ಬಾರಿಸಿದ ಕೆಲವೇ ನಿಮಿಷಗಳಲ್ಲಿ ವಿಲ್ ಸ್ಮಿತ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದು ಬೀಗಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಲ್ ಸ್ಮಿತ್ ಕಣ್ಣೀರು ಹಾಕಿದ್ದರು. ವಿವಾದ ಬಳಿಕ ವಿಲ್ ಸ್ಮಿತ್ ಕ್ಷಮೆ ಕೇಳಿದರು ಸಹ ಈ ಬಗ್ಗೆ ಚರ್ಚೆ ಮುಂದುವರೆದಿತ್ತು.

Oscar 2022; ವೇದಿಕೆ ಮೇಲೆ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ ವಿಲ್ ಸ್ಮಿತ್, ವಿಡಿಯೋ ವೈರಲ್

ವಿಲ್ ಸ್ಮಿತ್ ವಿರುದ್ಧಕ್ರಮ ತೆಗೆದುಕೊಳ್ಳುವಂತೆ ಅನೇಕರು ಆಗ್ರಹಿಸಿದ್ದರು. ಈ ಪ್ರಕರಣ ಬಳಿಕ ನಟ ವಿಲ್ ಸ್ಮಿತ್ ಆಸ್ಕರ್ ಅಕಾಡೆಮಿಗೆ ರಾಜಿನಾಮೆ ನೀಡಿದ್ದರು. ಅಲ್ಲದೆ ಸಂಸ್ಥೆಯು ವಿಧಿಸುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಹೇಳಿದರು. ನನ್ನ ನಡವಳಿಕೆ 94ನೇ ಅಕಾಡೆಮಿ ಅವಾರ್ಡ್ ನಲ್ಲಿ ನನ್ನ ಕ್ರಮ ಆಘಾತಕಾರಿಯಾಗಿತ್ತು. ಅತಿಯಾದ ನೋವು ಮತ್ತು ಕ್ಷಮಿಸಲಾಗದ್ದು ಎಂದು ಹೇಳಿದ್ದರು.

ಅದಾಗ್ಯೂ ನಂತರ ಅವರನ್ನು ಆಸ್ಕರ್‌ ಪ್ರಶಸ್ತಿ ಸಮಾರಂಭದಿಂದ 10 ವರ್ಷಗಳ ಕಾಲ ದೂರ ಇಡಲಾಗಿದೆ. ಆಸ್ಕರ್ ಪ್ರಶಸ್ತಿ ವಿತರಿಸುವ 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆಂಡ್ ಸೈನ್ಸ್' ಸಂಸ್ಥೆಯೂ ವಿಲ್ ಸ್ಮಿತ್ ಅವರನ್ನು 10 ವರ್ಷಗಳ ಸಮಾರಂಭದಿಂದ ನಿಷೇಧ ಮಾಡಿರುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಅಂಡ್ ಸೈನ್ಸ್ ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಸ್ಮಿತ್ ಭಾಗವಹಿಸುಂತಿಲ್ಲ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?