'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!

'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!

Published : Mar 25, 2026, 05:11 PM IST

ಶ್ರೀಲೀಲಾ ಸದ್ಯ ಬಾಲಿವುಡ್​ಗೆ ಕಾಲಿಟ್ಟಿದ್ದು 2 ಹಿಂದಿ ಪ್ರಾಜೆಕ್ಟ್​ಗಳಲ್ಲಿ ನಟಿಸ್ತಾ ಇದ್ದಾರೆ. ಅದ್ರಲ್ಲೂ ಕಾರ್ತಿಕ್ ಆರ್ಯನ್ ಜೊತೆ ನಟಿಸ್ತಾ ಇರೋ ಆಶಿಕಿ-3 ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಇನ್ನು, ಧನುಷ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಟಿಸ್ತಾ ಇದ್ದು ಕಾಲಿವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ.

ಶ್ರೀಲೀಲಾಗೆ ಶಾಪ? ಕಿಸ್​ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್..! ಲೀಲಾ ಕುಣಿದ ಸಾಂಗ್ಸ್ ಹಿಟ್, ಸಿನಿಮಾ ಮಾತ್ರ ಫ್ಲಾಪ್!
ಕಿಸ್ ಬ್ಯೂಟಿ ಶ್ರೀಲೀಲಾಗೆ ಅಂಟಿಕೊಂಡಿರೋ ಆ ಶಾಪ ಏನ್ ಮಾಡಿದ್ರೂ ಬಿಟ್ಟುಹೋಗ್ತಾ ಇಲ್ಲ. ಸದ್ಯ ಶ್ರೀಲೀಲಾ ನಟಿಸಿದ್ದ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಪ್ಲಾಫ್ ಆಗೋದ್ರೊಂದಿಗೆ ಮತ್ತೆ ಶಾಪ ನಿಜ ಅಂತ ಪ್ರೂವ್ ಆಗಿದೆ. ಅಷ್ಟಕ್ಕೂ ಏನದು ಲೀಲಾಗಂಟಿರೋ ಶಾಪ ಈ ಸ್ಟೋರಿ ನೋಡಿ.

ಉಸ್ತಾದ್ ಭಗಂತ್ ಸಿಂಗ್ ಬಾಕ್ಸಾಫೀಸ್​ನಲ್ಲಿ ಫ್ಲಾಪ್..!
ಹೌದು, ಕಳೆದ ವಾರ ಧುರಂಧರ್ ಸಿನಿಮಾ ಜೊತೆಗೆ ಟಾಲಿವುಡ್ ಮೂವಿ ಉಸ್ತಾದ್ ಭಗತ್ ಸಿಂಗ್ ಕೂಡ ರಿಲೀಸ್ ಆಗಿತ್ತು. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಈ ಮೂವಿ ಮೊದಲ ದಿನ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡ್ರೂ ಆ ಬಳಿಕ ಡಲ್ ಆಗಿತ್ತು. 150 ಕೋಟಿ ಬಜೆಟ್​ನ ಈ ಮೂವಿ ಇಲ್ಲಿವರೆಗೂ ಗಳಿಸಿರೋದು 65 ಕೋಟಿ ಮಾತ್ರ ಕೋಟಿ ಮಾತ್ರ.  

ಪವನ್ ಕಲ್ಯಾಣ್ ಪಾಲಿಟಿಕ್ಸ್​​ಗೆ ಬಂದು ಸದ್ಯ ಆಂಧ್ರ ಡಿಸಿಎಂ ಆಗಿದ್ದಾರೆ. ಇದು ಪವನ್ ಕೊನೆ ಚಿತ್ರ ಅಂತ ಕೂಡ ಪ್ರಚಾರ ಮಾಡಲಾಗಿತ್ತು. ಅಷ್ಟಾಗಿಯೂ ಸಿನಿಮಾ ದೊಡ್ಡ ಸಕ್ಸಸ್ ಕಾಣೊದ್ರಲ್ಲಿ ವಿಫಲ ಆಯ್ತು.

ಆದ್ರೆ ಈ ಸೋಲಿಗೆ ಪವನ್​ಗಿಂತ ಹೆಚ್ಚಾಗಿ ಶ್ರೀಲೀಲಾ ಕಡೆಗೆ ಎಲ್ಲರೂ ಬೆರಳು ತೋರಿಸ್ತಾ ಇದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ಆರ್.ಜೆ ಲೀಲಾ ಅನ್ನೋ ಪಾತ್ರ ಮಾಡಿದ್ರು. ಆದ್ರೆ ಲೀಲಾ ಮೋಡಿ ವರ್ಕ್ ಆಗಿಲ್ಲ.

ಲೀಲಾ ಕುಣಿದ ಸಾಂಗ್ಸ್ ಹಿಟ್.. ಸಿನಿಮಾ ಮಾತ್ರ ಫ್ಲಾಪ್..!
ಹೌದು ಶ್ರೀಲೀಲಾ ಕರೀಯರ್​ನಲ್ಲಿ ಬಹುತೇಕ ಇಂಥದ್ದೇ ಬ್ಲಂಡರ್ ಆಗ್ತಾ ಬಂದಿದೆ. ಲೀಲಾ ಸ್ಕ್ರೀನ್ ಪ್ರೆಸೆನ್ಸ್ ಮುದ್ದು ಮುದ್ದಾಗಿ ಇರುತ್ತೆ, ಆಕೆ ನರ್ತನವಂತೂ ನವಿಲು ನಾಚುವಂತೆ ಇರುತ್ತೆ. ಹಾಡು ಸೂಪರ್ ಡೂಪರ್ ಹಿಟ್ ಆಗುತ್ತೆ. ಆದ್ರೆ ಸಿನಿಮಾ ಮಾತ್ರ ಗೆಲ್ಲಲ್ಲ.

ಶ್ರೀಲೀಲಾ ಕನ್ನಡದಲ್ಲಿ ನಟಿಸಿದ ಕಿಸ್ ಕಥೆಯೂ ಅಷ್ಟೇ. ಹಾಡು ಸೂಪರ್ ಹಿಟ್ ಆದ್ವು, ಚಿತ್ರ ದೊಡ್ಡ ಸಕ್ಸಸ್ ಕಾಣಲಿಲ್ಲ. ಭರಾಟೆ, ಬೈಟು ಲವ್ ಚಿತ್ರಗಳ ಕಥೆಯೂ ಅಷ್ಟೇ.

ಟಾಲಿವುಡ್​ನಲ್ಲೂ ಅಷ್ಟೇ ಶ್ರೀಲೀಲಾ ಕುಣಿತವನ್ನ ಎಲ್ಲರೂ ಮೆಚ್ಚಿ ಕೊಂಡಾಡ್ತಾರೆ. ಆದ್ರೆ ಆಕೆ ನಟಿಸಿದ ಸಿನಿಮಾಗಳು ಯಾವವೂ ಬಿಗ್ ಹಿಟ್ ಆಗಿಲ್ಲ. ಭಗವಂತ್ ಕೇಸರಿ ಬಿಗ್ ಹಿಟ್ ಆಯ್ತು. ಆದ್ರೆ ಕ್ರೆಡಿಟ್ ಬಾಲಯ್ಯಗೆ ಹೋಯ್ತು.

ಇನ್ನೂ ಪುಷ್ಪ ಸಿನಿಮಾದಲ್ಲಿ ಶ್ರೀಲೀಲಾ ಕಿಸಕ್ ಅನ್ನೋ ಸಾಂಗ್​ಗೆ ನಡುಬಳುಕಿಸಿದ್ದು ಗೊತ್ತೇ ಇದೆ. ಪುಷ್ಪ ವರ್ಲ್ಡ್ ವೈಡ್ ಹಿಟ್ ಆಯ್ತು. ಅದರ ಕ್ರೆಡಿಟ್ ನಾಯಕಿ ರಶ್ಮಿಕಾಗೆ ಸಿಕ್ತೇ ಹೊರತಿ ಕಿಸಕ್ ಅಂತ ಕುಣಿದ ಲೀಲಾಗೆ ಸಿಗಲೇ ಇಲ್ಲ.

ಬಾಲಿವುಡ್​ನಲ್ಲಿ ಸಕ್ಸಸ್​ಖಾತೆ ತೆರೆಯೋ ನಿರೀಕ್ಷೆ..!
ಹೌದು ಶ್ರೀಲೀಲಾ ಸದ್ಯ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಎರಡು ಹಿಂದಿ ಪ್ರಾಜೆಕ್ಟ್​ಗಳಲ್ಲಿ ನಟಿಸ್ತಾ ಇದ್ದಾರೆ. ಅದ್ರಲ್ಲೂ ಕಾರ್ತಿಕ್ ಆರ್ಯನ್ ಜೊತೆ ನಟಿಸ್ತಾ ಇರೋ ಆಶಿಕಿ-3 ಬಗ್ಗೆ ದೊಡ್ಡ ನಿರೀಕ್ಷೆ ಇದೆ.

ಇನ್ನೂ ಧನುಷ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಟಿಸ್ತಾ ಇದ್ದು ಕಾಲಿವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ. ಸೋ ಸ್ಯಾಂಡಲ್​ವುಡ್. ಟಾಲಿವುಡ್​ನಲ್ಲಿ ಶಾಪಗ್ರಸ್ಥೆ ಅಂತ ಗುರುತಿಸಿಕೊಂಡಿರೋ ಲೀಲಾ ಕಾಲಿವುಡ್, ಬಾಲಿವುಡ್​ನಲ್ಲಾದ್ರೂ ಗೆದ್ದು ಆ ಶಾಪವಿಮೋಚನೆಗೆ ಒಳಗಾಗ್ತಾರಾ ಕಾದುನೋಡಬೇಕು.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ

03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
Read more