ಅಮೀರ್ ಖಾನ್, ರವಿಚಂದ್ರನ್‌ಗೆ ಹೀರೋಯಿನ್ ಆಗಿದ್ದ ಈ ಸುಂದರಿ, ತನ್ನ ಗಂಡನಿಗೆ ಇನ್ನೊಂದು ಮದುವೆ ಆಗೋಕೆ ಹೇಳಿದ್ದಳು!

By Bhavani Bhat  |  First Published Jun 8, 2024, 2:14 PM IST

ಈಕೆ ಈಗಲೂ ಸುಂದರಿ. ತುಂಬು ಯವ್ವನದಲ್ಲಿ ಅಮೀರ್ ಖಾನ್, ಜಾಕಿ ಶ್ರಾಫ್, ರವಿಚಂದ್ರನ್ ಇವರಿಗೆಲ್ಲಾ ಹೀರೋಯಿನ್ ಆಗಿದ್ದವಳು. ಇವಳ ವೈಯಕ್ತಿಕ ಜೀವನವೂ ರೋಚಕವಾಗಿದೆ.


ಖುಷ್ಬು ಸುಂದರ್, ನಟಿ-ರಾಜಕಾರಣಿ, 80 ರ ದಶಕದಲ್ಲಿ ಬಾಲ ಕಲಾವಿದೆಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲವೇ ವರ್ಷಗಳಲ್ಲಿ, 16 ವರ್ಷ ತುಂಬುವ ಮೊದಲೇ, ಪ್ರಮುಖ ಪಾತ್ರಗಳಲ್ಲಿ ನಟಿಸಲು ಬೇಡಿಕೆ ಬರತೊಡಗಿತು. ಕನ್ನಡದಲ್ಲಿ ರವಿಚಂದ್ರನ್, ಹಿಂದಿಯಲ್ಲಿ ಜಾಕಿ ಶ್ರಾಫ್ ಮತ್ತು ಅಮೀರ್ ಖಾನ್ ಅವರಂತಹ ನಾಯಕರೊಂದಿಗೆ ಜೋಡಿಯಾದರು. ನಾಯಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ, ಖುಷ್ಬು ನಟ-ಚಲನಚಿತ್ರ ನಿರ್ಮಾಪಕ ಸುಂದರ್ ಸಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಒಂದು ಕಾಲದಲ್ಲಿ ಸುಂದರ್ ಬೇರೊಬ್ಬರನ್ನು ಮದುವೆಯಾಗಲಿ ಎಂದು ಖುಷ್ಬು ಬಯಸಿದ್ದರಂತೆ.

ಖುಷ್ಬು ಮತ್ತು ಸುಂದರ್ 1995 ರಲ್ಲಿ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಶೀಘ್ರದಲ್ಲೇ ಡೇಟಿಂಗ್ ಪ್ರಾರಂಭಿಸಿದರು. 2000 ರಲ್ಲಿ, ದಾಂಪತ್ಯಕ್ಕೆ ಕಾಲಿಟ್ಟರು. ಇವರ ಮದುವೆಯ ಆರಂಭಿಕ ವರ್ಷಗಳು ಒತ್ತಡದಿಂದ ಕೂಡಿದ್ದವು. ಸುಂದರ್ ಇತ್ತೀಚೆಗೆ ಚೆನ್ನೈನಲ್ಲಿ ತಮ್ಮ ಮುಂಬರುವ ಚಿತ್ರ ಅರಣ್ಮನೈ 4 ರ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಖುಷ್ಬು ಮಗು ಹೆರಲು ಯತ್ನಿಸಿದರು. ಆದರೆ‌ ಸಾಧ್ಯವಾಗಲಿಲ್ಲ. ಅವರು ತಾಯಿಯಾಗಲು ಸಾಧ್ಯವಿಲ್ಲ ಎಂದು ವೈದ್ಯರು ಪರೀಕ್ಷಿಸಿದ ಬಳಿಕ ಹೇಳಿದರು. ಎದೆಗುಂದದ ಖುಷ್ಬು, ಸುಂದರ್‌ಗೆ ಮಕ್ಕಳನ್ನು ನೀಡಲು ಸಾಧ್ಯವಾಗದ ಕಾರಣ ತನ್ನನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗು ಎಂದು ಹೇಳಿದರು. ಆದರೆ, ಸುಂದರ್ ಪತ್ನಿಯನ್ನು ಬಿಡಲು ಒಪ್ಪಲಿಲ್ಲ. ಕೊನೆಗೇ ವೈದ್ಯರೇ ತಪ್ಪು ಮಾಡಿದ್ದು ಗೊತ್ತಾಯಿತು. ಖುಷ್ಬು ನಂತರ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು !

Latest Videos

 ಕಂಗನಾ ನಂಗೆ ಇಷ್ಟ ಅಂತಲ್ಲ, ಆದ್ರೆ ಅವಳ ಕೆನ್ನೆಗೆ ಹೊಡೆದಿದ್ದು ತಪ್ಪು: ಬಾಲಿವುಡ್ ಸೆಲೆಬ್ರಿಟಿಗಳು

ಖುಷ್ಬು 1970 ರಲ್ಲಿ ಬಾಂಬೆಯಲ್ಲಿ, ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಒರಿಜಿನಲ್ ಹೆಸರು ನಖತ್ ಖಾನ್. 1980 ರಲ್ಲಿ ಅಕೆ ಚಲನಚಿತ್ರಗಳಲ್ಲಿ ನಟಿಸತೊಡಗಿದಾಗ ಆಕೆಗೆ ಇಟ್ಟ ಹೊಸ ಹೆಸರು ಖುಷ್ಬು. ಆಕೆಯ ಮೊದಲ ಪಾತ್ರವು ದಿ ಬರ್ನಿಂಗ್ ಟ್ರೈನ್‌ನಲ್ಲಿ ಬಾಲ ಕಲಾವಿದೆಯಾಗಿತ್ತು. ನಂತರ ನಸೀಬ್, ಲಾವಾರಿಸ್ ಮತ್ತು ಕಾಲಿಯಾ ಮುಂತಾದ ಇತರ ಬಾಲಿವುಡ್ ಹಿಟ್‌ಗಳಲ್ಲಿ ಕಾಣಿಸಿಕೊಂಡರು. ಅಮಿತಾಬ್ ಬಚ್ಚನ್ ಅವರೊಂದಿಗೆ ಹಲವಾರು ಬಾರಿ ಬೆಳ್ಳಿಪರದೆಯನ್ನು ಹಂಚಿಕೊಂಡರು. 1985 ರಲ್ಲಿ, ತಮ್ಮ 15 ನೇ ವಯಸ್ಸಿನಲ್ಲಿ ಜಾನೂನಲ್ಲಿ ಪ್ರಮುಖ ನಟಿಯಾಗಿ ಪದಾರ್ಪಣೆ ಮಾಡಿದರು. ಕೆಲವು ವರ್ಷಗಳ ನಂತರ ಅಮೀರ್ ಖಾನ್ ಜೊತೆ ದೀವಾನಾ ಮುಜ್ ಸಾ ನಹಿನ್ ನಲ್ಲಿ ಜೋಡಿಯಾದರು.

undefined

80 ರ ದಶಕದ ಉತ್ತರಾರ್ಧದಲ್ಲಿ, ದಕ್ಷಿಣ ಭಾರತದಲ್ಲಿ ಅವರ ಚಲನಚಿತ್ರಗಳು ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಲು ಆರಂಭಿಸಿದಾಗ ತನ್ನ ನೆಲೆಯನ್ನು ಚೆನ್ನೈಗೆ ಸ್ಥಳಾಂತರಿಸಿದರು. 90 ರ ದಶಕದ ಅಂತ್ಯದ ನಂತರ, ಖುಷ್ಬು ಚಲನಚಿತ್ರ ನಟನೆಗೆ ಬೈ ಹೇಳಿ, ಕುಟುಂಬ ಮತ್ತು ಮಕ್ಕಳಿಗಾಗಿ ಸಮಯವನ್ನು ವಿನಿಯೋಗಿಸಿದರು. ಅದರೂ 2021 ರಲ್ಲಿ ರಜನಿಕಾಂತ್ ಅಭಿನಯದ ಅಣ್ಣಾತ್ತೆಯೊಂದಿಗೆ ತೆರೆಗೆ ಪುನರಾಗಮನ ಮಾಡಿದರು.

ಪವನ್ ಕಲ್ಯಾಣ್ ಎರಡನೇ ಹೆಂಡತಿ ರೇಣು ದೇಸಾಯಿಗೆ ಎರಡನೇ ಮದ್ವೆಯಂತೆ!

2023 ರಲ್ಲಿ, ಖುಷ್ಬು ತಾನು ಬಾಲ್ಯದಲ್ಲಿ ತನ್ನ ತಂದೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳಿದರು. ಯೂಟ್ಯೂಬ್ ಚಾನೆಲ್ ಮೋಜೋ ಸ್ಟೋರಿಯಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ನಟಿ, “ನನಗೆ ಬಹಳ ಕಷ್ಟ ನೀಡಿದ ಕಠಿಣ ಸಮಯವದು... ಇದನ್ನು ಮರೆಯಲಾರೆ, ಕ್ಷಮಿಸಲಾರೆ. ಆದರೆ ಅದನ್ನು ನನ್ನ ಹಿಂದೆ ಬಿಟ್ಟು ಮುಂದುವರಿದಿದ್ದೇನೆ. ಅದು ನನ್ನ ತಂದೆಯಿಂದ ನಾನು ಎದುರಿಸಿದ ದೌರ್ಜನ್ಯ. ಒಂದು ಮಗುವನ್ನು ಹೀಗೆ ಅಸಹ್ಯವಾಗಿ ದುರುಪಯೋಗಪಡಿಸಿಕೊಂಡಾಗ ಅದು ಮಗುವಿಗೆ ಜೀವನದುದ್ದಕ್ಕೂ ಗಾಯವನ್ನು ಉಂಟುಮಾಡುತ್ತದೆ. ಇದು ಹುಡುಗಿ ಅಥವಾ ಹುಡುಗ ಎನ್ನದೆ ಯಾವುದೇ ಮಗುವಿಗೂ ಅನ್ವಯವಾಗುವ ಸಂಗತಿ. ಹೆಚ್ಚಿನ ಜನರು ಅದರಿಂದ ಹೊರಬರಲು ಸಾಧ್ಯವಿಲ್ಲ" ಎಂದಿದ್ದರು.

ಖುಷ್ಬು 2010 ರಲ್ಲಿ ರಾಜಕೀಯಕ್ಕೆ ಸೇರಿದರು. ಅವರು ಆರಂಭದಲ್ಲಿ ಡಿಎಂಕೆಯ ಭಾಗವಾಗಿದ್ದರು, 2014 ರಲ್ಲಿ ಕಾಂಗ್ರೆಸ್ ಸೇರಿದರು. ಮತ್ತು ಅಂತಿಮವಾಗಿ 2020 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಖುಷ್ಬು 2021 ರಿಂದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಅವರು ಈಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಜೊತೆಗಿದ್ದಾರೆ. ತಮಿಳುನಾಡಿನ ಜನ ಈಕೆಗೆ ಒಂದು ದೇವಸ್ಥಾನವನ್ನೂ ಕಟ್ಟಿದ್ದಾರೆ !

click me!