ಎಲ್ರೂ ಶಿಲ್ಪಾ ಶೆಟ್ಟಿಯಂಥ ಹೆಂಡ್ತಿಯನ್ನೇ ಬಯಸ್ತಾರೆ? ಸೌಂದರ್ಯ ಮಾತ್ರವಲ್ಲ ಪ್ರೀತಿಯಲ್ಲೂ ಎತ್ತಿದ ಕೈ ಅವಳು!

By Roopa Hegde  |  First Published Jun 8, 2024, 12:39 PM IST

ಎರಡು ಕೈ ತಟ್ಟಿದ್ರೆ ಮಾತ್ರ ಚಪ್ಪಾಳೆ ಎನ್ನುವ ಮಾತಿದೆ. ದಾಂಪತ್ಯ ಚೆನ್ನಾಗಿರಬೇಕೆಂದ್ರೆ ಅಲ್ಲಿ ಇಬ್ಬರ ಪಾತ್ರ ಮುಖ್ಯ. ಕುಟುಂಬದಲ್ಲಿ ಸಮಸ್ಯೆ ಕಾಣಿಸಿಕೊಳ್ತಿದ್ದಂತೆ ಪಲಾಯನ ಮಾಡುವ ಬದಲು ಎದ್ದು ನಿಂತು ಪತ್ನಿಯಾದವಳು ಪತಿಗೆ ಬೆಂಬಲ ನೀಡಿದ್ರೆ ಸಂಸಾರ ಮತ್ತಷ್ಟು ಸುಗಮವಾಗುತ್ತೆ. ಅದಕ್ಕೆ ನಟಿ ಶಿಲ್ಪಾಶೆಟ್ಟಿ ಉತ್ತಮ ನಿದರ್ಶನ.
 


ಬಾಲಿವುಡ್ ನಟಿ ಶಿಲ್ಪಾಶೆಟ್ಟಿ (Bollywood Actress Shilpa Shetty) ಬಗ್ಗೆ ವಿಶೇಷವಾಗಿ ಹೇಳ್ಬೇಕಾಗಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ನಟಿ ಶಿಲ್ಪಾ ಬಗ್ಗೆ ತಿಳಿದಿದೆ. ಮಂಗಳೂರಿನ ಬೆಡಗಿ ಶಿಲ್ಪಾ ಯೋಗ, ಫಿಟ್ನೆಸ್ , ಸೌಂದರ್ಯಕ್ಕೆ ಮಾತ್ರವಲ್ಲ ನಟನೆಯಲ್ಲೂ ಎತ್ತಿದ ಕೈ. 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಶಿಲ್ಪಾ, ಫಿಟ್ನೆಸ್ ವಿಷ್ಯಕ್ಕೆ ಮಾತ್ರ ಎಲ್ಲರಿಗೂ ಮಾದರಿಯಲ್ಲ. ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕು, ಕಷ್ಟದ ಸಮಯದಲ್ಲಿ ಪತಿ ಜೊತೆ, ಸಂಸಾರದ ಜೊತೆ ಹೇಗೆ ನಿಲ್ಲಬೇಕು ಎಂಬುದನ್ನು ಶಿಲ್ಪಾ ಶೆಟ್ಟಿಯಿಂದ ಕಲಿಯಬೇಕು ಅಂದ್ರೆ ಅತಿಶಯೋಕ್ತಿ ಅನ್ನಿಸದು. ಶಿಲ್ಪಾರಂತಹ ಪತ್ನಿಯನ್ನು ಬಹುತೇಕ ಪುರುಷರು ಬಯಸೋದು ಇದಕ್ಕೆ. ಈಗಿನ ದಿನಗಳಲ್ಲಿ ವಿಚ್ಛೇದನ ಜಾಸ್ತಿಯಾಗಿದೆ. ಸಣ್ಣಪುಟ್ಟ ವಿಷ್ಯಕ್ಕೂ ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ. ಆದ್ರೆ ಶಿಲ್ಪಾ ಮುಂದೆ ದೊಡ್ಡ ಸವಾಲಿತ್ತು. ಪತಿ ಜೈಲು ಸೇರಿದ್ದ. ಅಂಥ ಸಮಯದಲ್ಲಿ ಕೂಡ ಶಿಲ್ಪಾ ಪತಿ ರಾಜ್ ಕುಂದ್ರಾರ ಕೈ ಬಿಡಲಿಲ್ಲ. ಅವರ ಬೆನ್ನೆಲುಬಾಗಿ ನಿಂತು ಸಮಾಜವನ್ನು ಎದುರಿಸಿದ್ರು. ಪತ್ನಿ ಪಕ್ಕದಲ್ಲಿ ನಿಂತಿದ್ರಿಂದಲೇ ರಾಜ್ ಕುಂದ್ರಾ ಪ್ರಪಂಚದ ಮುಂದೆ ನಿಲ್ಲುವ ಧೈರ್ಯ ಮಾಡಿದ್ದು. 

ಜುಲೈ 19 ರಂದು ರಾಜ್ ಕುಂದ್ರಾ (Raj Kundra), ಪೋರ್ನ್ ಚಲನಚಿತ್ರಗಳನ್ನು (Porn Movies) ನಿರ್ಮಿಸಿ ಅದನ್ನು  ಮೊಬೈಲ್ (Mobile) ಅಪ್ಲಿಕೇಶನ್‌ಗಳಲ್ಲಿ ಸ್ಟ್ರೀಮ್ ಮಾಡಿ ಸಿಕ್ಕಿಬಿದ್ದಿದ್ದರು. ಅಶ್ಲೀಲ (Porn) ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರ ಹೆಸರು ಬೆಳಕಿಗೆ ಬಂದಿದ್ದಲ್ಲದೆ  ಇಡಿ ಕೂಡ ಹಣ ವರ್ಗಾವಣೆಯ ತನಿಖೆಯನ್ನು ಪ್ರಾರಂಭಿಸಿತ್ತು. ಪ್ರಕರಣ  ಹಲವು ವಿಭಿನ್ನ ತಿರುವುಗಳನ್ನು ಪಡೆದುಕೊಂಡಿತ್ತು.  ಕುಂದ್ರಾ ಒಟ್ಟೂ 63 ದಿನಗಳ ಕಾಲ ಜೈಲಿನಲ್ಲಿದ್ದರು. ಇದಾದ ಬಳಿಕ ಅವರಿಗೆ ಜಾಮೀನು ಸಿಕ್ಕಿತ್ತು. ಮನೆಗೆ ಬಂದ ರಾಜ್ ಕುಂದ್ರಾಗೆ ಮಾಧ್ಯಮಗಳ ಮುಂದೆ ಬರುವ ಧೈರ್ಯವಿರಲಿಲ್ಲ. ಆದ್ರೆ ಅವರಿಗೆ ಆಸರೆಯಾಗಿ ನಿಂತಿದ್ದು ಪತ್ನಿ ಶಿಲ್ಪಾ ಶೆಟ್ಟಿ. ರಾಜ್ ಕುಂದ್ರಾ ಜೈಲಿಗೆ ಹೋದಾಗ ಎಲ್ಲರ ಕಣ್ಣು ಬಿದ್ದಿದ್ದು ಶಿಲ್ಪಾ ಶೆಟ್ಟಿ ಮೇಲೆ. ಅವರ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿದ್ದವು. ಅವರನ್ನು ಅನೇಕರು ಅನುಮಾನದಿಂದ ನೋಡಿದ್ದರು. ಎಲ್ಲಿ ಹೋದ್ರೂ ಮಾಧ್ಯಮಗಳ ಕಣ್ಣು ಅವರ ಮೇಲಿತ್ತು.

Tap to resize

Latest Videos

ಒಂಟಿಯಾಗಿದ್ದಾಗ GOOGLEನಲ್ಲಿ ಇದನ್ನೆಲ್ಲಾ ಹುಡುಕಾಡ್ತಾರೆ ಯುವತಿಯರು!

ನಷ್ಟ ಅನುಭವಿಸಿದ್ರೂ ಪತಿ ಬಿಡದ ಶಿಲ್ಪಾ ಶೆಟ್ಟಿ : ರಾಜ್ ಕುಂದ್ರಾ ಅಶ್ಲೀಲ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಶಿಲ್ಪಾ ಶೆಟ್ಟಿ ತಮ್ಮ ವೃತ್ತಿಪರ ಜೀವನದಲ್ಲಿ (Career) ಸಾಕಷ್ಟು ನೋವನ್ನು ಅನುಭವಿಸಿದರು. ಅವರು ಅನೇಕ ಸಿನಿಮಾ, ಶೋಗಳನ್ನು ಕಳೆದುಕೊಳ್ಬೇಕಾಯ್ತು.  ಪತಿಯಿಂದ ಅಷ್ಟೆಲ್ಲ ನಷ್ಟ ಅನುಭವಿಸಿದ್ರೂ ನಟಿ, ಪತಿ ರಾಜ್ ಕುಂದ್ರಾ ಅವರನ್ನು ಬಿಡಲಿಲ್ಲ. ಜೀವನದ ಸವಾಲಿನ ಸಮಯದಲ್ಲಿ ನಿಜವಾದ ಒಡನಾಡಿಯಂತೆ ರಾಜ್ ಕುಂದ್ರಾ ಅವರನ್ನು ಶಿಲ್ಪಾ ಬೆಂಬಲಿಸಿದರು.

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರ ವೃತ್ತಿ ಮಾತ್ರವಲ್ಲ ವೈಯಕ್ತಿಕ ಇಮೇಜ್ ಮೇಲೂ ಇದು ಪರಿಣಾಮ ಬೀರಿತ್ತು. ಜನರು ಅವನನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ವಿವಿಧ ರೀತಿಯ ಮೀಮ್‌ ಹರಿದಾಡಿತ್ತು. ಈ ಬಗ್ಗೆ ಶಿಲ್ಪಾ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ವೈಯಕ್ತಿಕ ಇಮೇಜ್ ಗಿಂತ ಕುಟುಂಬ ಮತ್ತು ಗಂಡನ ಬಗ್ಗೆ ಮಾತ್ರ ಯೋಚಿಸಿದ್ದರು. ರಾಜ್ ಕುಂದ್ರಾ ಅವರಿಗೆ ಬೆಂಬಲ ನೀಡಿದ್ರು. 

ಮನಗೆದ್ದ ಸೊಸೆ ಐಶ್ವರ್ಯಗೆ ಅತ್ತೆಯ ಉಡುಗೊರೆ, ಡಿಕೆಶಿ ಪುತ್ರಿ ಹೆಗಲಿಗೆ ಹೊಸ ಜವಾಬ್ದಾರಿ!

ಏಕಾಂಗಿಯಾಗಿ ಹೋರಾಡಿದ ಶಿಲ್ಪಾ : 2021 ನಿಜವಾಗ್ಲೂ ಶಿಲ್ಪಾ ಶೆಟ್ಟಿಯವರಿಗೆ ಸವಾಲಾಗಿತ್ತು. ಜೈಲಿಗೆ ಹೋದ ಪತಿ ಒಂದ್ಕಡೆಯಾದ್ರೆ ಅವರನ್ನು ಬಿಡಿಸುವ ಪ್ರಯತ್ನ, ನ್ಯಾಯಾಲಯದ ತಿರುಗಾಟ, ಮಕ್ಕಳ ನಿರ್ವಹಣೆ, ತಮ್ಮ ಕೆಲಸ ಎಲ್ಲವನ್ನೂ ಒಂಟಿಯಾಗಿ ಮಾಡಿದ ಶಿಲ್ಪಾ ಆರ್ಥಿಕ ಸಮಸ್ಯೆಯನ್ನು ಕೂಡ ಸರಿಯಾಗಿ ನಿಭಾಯಿಸಿದ್ದರು. ಎಲ್ಲರ ಮುಂದೆ ರಾಜ್ ಕುಂದ್ರಾಗೆ ಸಂಪೂರ್ಣ ಬೆಂಬಲ ನೀಡಿದ್ರೂ ಅಗತ್ಯ ಬಂದಾಗ ಗಂಡನಿಗೆ ಛಿಮಾರಿ ಹಾಕಲು ಶಿಲ್ಪಾ ಶೆಟ್ಟಿ ಹಿಂದೆ ಸರಿಯೋದಿಲ್ಲ. ಎಲ್ಲ ಕ್ಷೇತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಶಿಲ್ಪಾರಂತ ಹುಡುಗಿ ಸಿಕ್ಕಿದ್ರೆ ಯಾರು ಬೇಡ ಅಂತಾರೆ. 

click me!