ಆಮೀರ್ ಖಾನ್ ಡಿವೋರ್ಸ್ ಆದ ಬಳಿಕವಷ್ಟೇ ತಾವಿಬ್ಬರೂ ಡೇಟಿಂಗ್ ಶುರು ಮಾಡಿದ್ದು ಎಂದು ಎರಡನೆಯ ಮಾಜಿ ಪತ್ನಿ ಕಿರಣ್ ರಾವ್ ಹೇಳಿದ್ದಾರೆ. ಏನಿದು ವಿಷ್ಯ?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇಂದು ಅಂದರೆ ಮಾರ್ಚ್ 14 ಆಮೀರ್ ಖಾನ್ ಅವರಿಗೆ 59ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಮಾಜಿ ಪತ್ನಿ ಕಿರಣ್ ರಾವ್ ಕೆಲವೊಂದು ವಿಷಯಗಳನ್ನು ಬಹಿರಂಗಗೊಂಡಿದ್ದಾರೆ. ಅಂದಹಾಗೆ, ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್ ಅವರ ಮದುವೆ ಸಮಾರಂಭಕ್ಕೆ ಕಿರಣ್ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.
ಇದರ ನಡುವೆಯೇ, Laapataa ಎಂಬ ಚಿತ್ರದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ಅವರು ಒಟ್ಟಿಗೇ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರದರ್ಶನಗೊಂಡಿತು. 15 ವರ್ಷಗಳ ದಾಂಪತ್ಯದ ಬಳಿಕ ಆಮೀರ್ ಮತ್ತು ಕಿರಣ್ ಬೇರೆ ಬೇರೆಯಾದವರು. ಇದೀಗ ಡಿವೋರ್ಸ್ ಬಳಿಕ ಮತ್ತೆ ಪತಿ-ಪತ್ನಿ ಒಂದೇ ಕಡೆ ಕೆಲಸ ಮಾಡುತ್ತಿರುವುದನ್ನು ಕಂಡ ಹಲವರು ಹುಬ್ಬೇರಿಸಿದ್ದಾರೆ. ಆದ್ದರಿಂದ ವಿಚ್ಛೇದನದ ಬಳಿಕ ಒಟ್ಟಿಗೆ ಅದ್ಹೇಗೆ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆ ಆಮೀರ್ ಖಾನ್ ಅವರಿಗೆ ಎದುರಾಗುತ್ತಿದ್ದಂತೆಯೇ, ಆಮೀರ್ ಸ್ವಲ್ಪ ಗರಂ ಆದರು. ಪಾಪರಾಜಿಗಳು ಈ ಪ್ರಶ್ನೆ ಕೇಳಿದಾಗ ಸ್ವಲ್ಪ ಸಿಟ್ಟುಕೊಂಡರೂ ಸುಧಾರಿಸಿಕೊಂಡ ಆಮೀರ್ ಖಾನ್, ಯಾಕೆ ಪತಿ-ಪತ್ನಿ ದೂರದೂರವಾದ ಮೇಲೆ ಒಟ್ಟಿಗೇ ಕೆಲಸ ಮಾಡಬಾರದು ಎಂದು ಯಾವುದಾದ್ರೂ ಡಾಕ್ಟರ್ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದರು.
ಪತಿಯಾಗಿ ನನ್ನಲ್ಲಿದ್ದ ಕೊರತೆಯೇನು? ಡಿವೋರ್ಸ್ ಬಳಿಕ ಆಮೀರ್ ಕೇಳಿದ ಪ್ರಶ್ನೆಗೆ ಕಿರಣ್ ಹೇಳಿದ್ದಿಷ್ಟು...
ಆಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತ ಅವರಿಗೆ ಡಿವೋರ್ಸ್ ಕೊಡಲು ಕಿರಣ್ ರಾವ್ ಅವರೇ ಕಾರಣ ಎನ್ನುವ ಸುದ್ದಿ ಆಗಲೂ ಹರಡಿತ್ತು, ಈಗಲೇ ಇದರ ಸುದ್ದಿಯಾಗುತ್ತಲೇ ಇದೆ. ಲಗಾನ್ ಬಿಡುಗಡೆಯಾದ ಒಂದು ವರ್ಷದ ನಂತರ 2002 ರಲ್ಲಿ ಆಮೀರ್ ಮತ್ತು ರೀನಾ ತಮ್ಮ ಮದುವೆಯನ್ನು ಕೊನೆಗೊಳಿಸಿದರು. ಕುತೂಹಲಕಾರಿಯಾಗಿ, ಕಿರಣ್ ಲಗಾನ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು, ಇದು ಅವರ ಪತ್ನಿ ರೀನಾ ದತ್ತಾದಿಂದ ನಟನ ವಿಚ್ಛೇದನಕ್ಕೆ ಅಮೀರ್‌ನೊಂದಿಗಿನ ಪ್ರಣಯ ಸಂಬಂಧದ ಕಾರಣ ಎಂದು ಅನೇಕರು ನಂಬಲು ಕಾರಣವಾಯಿತು.
ಇದಕ್ಕೆ ಈಗ ಕಿರಣ್ ರಾವ್ ಸ್ಪಷ್ಟನೆ ನೀಡಿದ್ದಾರೆ. ಜೂಮ್‌ಗೆ ನೀಡಿದ ಸಂದರ್ಶನದಲ್ಲಿ, ಕಿರಣ್ ಅವರು ಆಮೀರ್ ಖಾನ್ ಅವರು ರೀನಾ ದತ್ತ ಅವರಿಗೆ ಡಿವೋರ್ಸ್ ಕೊಟ್ಟ ಬಳಿಕವಷ್ಟೇ ನಾವಿಬ್ಬರೂ ಡೇಟಿಂಗ್ ಪ್ರಾರಂಭಿಸಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. 2004 ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ವಿ ಎಂದಿರುವ ಅವರು, ಆಮೀರ್ ಮೊದಲ ಪತ್ನಿಗೆ ಡಿವೋಸ್ರ್ ಕೊಡುವಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಮೀರ್ ಮತ್ತು ನಾನು ಲಗಾನ್ ಸಮಯದಲ್ಲಿ ಸಂಬಂಧ ಹೊಂದಿದ್ದೇವೆ ಎಂದು ಹಲವರು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ಸ್ವದೇಶ್ ಸಮಯದಲ್ಲಿ ನಾನು ಮತ್ತು ಆಮೀರ್ ಒಟ್ಟಿಗೆ ಕೆಲಸ ಮಾಡಿದ್ದೆವು. ಅವರು ಆ ಸಮಯದಲ್ಲಿ ಮಂಗಲ್ ಪಾಂಡೆ ಚಿತ್ರೀಕರಣಕ್ಕೆ ಹೋಗುತ್ತಿದ್ದರು. ನಾವು ಅಶುತೋಷ್ ಗೋವಾರಿಕರ್ ಅವರೊಂದಿಗೆ ಕೋಕ್‌ಗಾಗಿ ಕೆಲವು ಜಾಹೀರಾತುಗಳನ್ನು ಚಿತ್ರೀಕರಿಸಿದ್ದೇವೆ ಮತ್ತು ಅಲ್ಲಿಯೇ ಆಮೀರ್ ಮತ್ತು ನಾನು ಮರುಸಂಪರ್ಕಿಸಿದೆವು. ಆ ಸಮಯದಲ್ಲಿ ನಮ್ಮ ನಡುವೆ ಏನೂ ಇರಲಿಲ್ಲ. ವಾಸ್ತವವಾಗಿ, ನಾನು ಲಗಾನ್‌ನಲ್ಲಿ ಅವನೊಂದಿಗೆ ಅಷ್ಟೇನೂ ಮಾತನಾಡಿರಲಿಲ್ಲ. ಲಗಾನ್ ಸಮಯದಲ್ಲಿ ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೆ. ಆದರೆ ಆಮೀರ್ ಅವರ ಡಿವೋರ್ಸ್ಗೆ ನಾನೇ ಕಾರಣ ಎಂದು ಹಲವರು ಈಗಲೂ ಭಾವಿಸುತ್ತಿದ್ದು, ಅದು ಸರಿಯಾದದ್ದಲ್ಲ ಎಂದಿದ್ದಾರೆ. ಈಗ ಇಬ್ಬರಿಗೂ ಡಿವೋರ್ಸ್ ಕೊಟ್ಟ ಮೇಲೆ, ಮತ್ಯಾಕೆ ಹಳೆಯ ವಿಷಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಮದುವೆ ಗಂಡು-ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದು, ಕುಟುಂಬಗಳ ನಡುವೆ ಅನ್ನೋದು ನಾನ್ಸೆನ್ಸ್- ವಿದ್ಯಾ ಬಾಲನ್