ಜಾಂಡೀಸ್‌ಗೆ ಬಲಿಯಾದ ಖ್ಯಾತ ನಟ ಸೂರ್ಯ ಕಿರಣ್

Published : Mar 14, 2024, 11:30 AM ISTUpdated : Mar 14, 2024, 11:40 AM IST
ಜಾಂಡೀಸ್‌ಗೆ ಬಲಿಯಾದ ಖ್ಯಾತ ನಟ ಸೂರ್ಯ ಕಿರಣ್

ಸಾರಾಂಶ

ಸತ್ಯಂ ಮತ್ತು ರಾಜು ಬೈ ಖ್ಯಾತಿಯ ನಿರ್ದೇಶಕ ಸೂರ್ಯ ಕಿರಣ್ ಜಾಂಡೀಸ್‌ನಿಂದ ಕೊನೆಯುಸಿರೆಳೆದಿದ್ದಾರೆ.

ತೆಲುಗು ಚಿತ್ರರಂಗ ಖ್ಯಾತ ನಟ ಹಾಗೂ ನಿರ್ದೇಶಕ ಸೂರ್ಯ ಕಿರಣ್ ಜಾಂಡೀಸ್‌ನಿಂದ ಕೊನೆಯುಸಿರೆಳೆದಿದ್ದಾರೆ. ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ48 ವರ್ಷ ಸೂರ್ಯ ಕಿರಣ್‌ಗೆ ಸಿನಿಮಾ ಅಂದ್ರೆ ಪಂಚ ಪ್ರಾಣ. 'ನಿರ್ದೇಶಕ ಸೂರ್ಯ ಕಿರಣ್ ಜಾಂಡೀಸ್‌ನಿಂದ ಅಗಲಿದ್ದಾರೆ. ಸತ್ಯಂ ಮತ್ತು ರಾಜು ಬೈ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್‌ನಲ್ಲೂ ಸ್ಪರ್ಧಿಸಿದ್ದರು. ಓಂ ಶಾಂತಿ' ಎಂದು ಪಿಆರ್‌ಓ ಸುರೇಶ್ ಪೋಸ್ಟ್‌ ಮಾಡಿದ್ದರು.

ಬಿಗ್ ಬಾಸ್ ಖ್ಯಾತಿಯ ಸೂರ್ಯ ಕಿರಣ್ ಸತ್ಯಂ ಚಿತ್ರದ ಮೂಲಕ ಟಾಲಿವುಡ್‌ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಸುಮಂತ್‌ ಮತ್ತು ಜೆನಿಲಿಯಾ ದೇಶಮುಖ್‌ ಜೋಡಿಯಾಗಿ ಅಭಿನಯಿಸಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೆ ಸುಮಾರು 150 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಇತ್ತು. ಇಷ್ಟೇ ಅಲ್ಲದೆ 2006ರಲ್ಲಿ ಬ್ರಹ್ಮಾಸ್ತ್ರಂ, 2007ರಲ್ಲಿ ರಾಜು ಬೈ ಮತ್ತು 2020ರಲ್ಲಿ ಚಾಪ್ಟರ್ 6 ನಿರ್ದೇಶನ ಮಾಡಿದ್ದರು. 

ಜಾಂಡೀಸ್‌ನಿಂದ ಶೀಘ್ರ ಪರಿಹಾರ ಬೇಕಾ? ಈ ಆಹಾರ ಬಿಟ್ಟುಬಿಡಿ!

ನಟನೆ ಮತ್ತು ನಿರ್ದೇಶನಕ್ಕೆ ಸೂರ್ಯ ಕಿರಣ್ ಗುಡ್ ಬೈ ಹೇಳಿದ ಮೇಲೆ ಬಿಗ್ ಬಾಸ್ ಸೀಸನ್ 4 ತೆಲುಗು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. 2020ರಲ್ಲಿ ನಡೆದ ಈ ಶೋನಿಂದ ಮೊದಲು ಹೊರ ಬಂದ ಸ್ಪರ್ಧಿನೇ ಸೂರ್ಯ ಕಿರಣ್ ಆಗಿದ್ದರು. 

ಸೂರ್ಯ ಕಿರಣ್ ಮೂಲತಃ ಕೇರಳದವರು ಆದರೆ ಸೂರ್ಯ ಹುಟ್ಟಿದ್ದು ಚೆನ್ನೈನಲ್ಲಿ. 1978ರಲ್ಲಿ ಬಾಲನಟನಾಗಿ ‘Snehikkhan Oru Pennu' ಸಿನಿಮಾದಲ್ಲಿ ನಟಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಮಾಸ್ಟರ್ ಸೂರ್ಯ ಎಂದು ಖ್ಯಾತಿ ಪಡೆದಿದ್ದರು. ಸೂರ್ಯ ಕಿರಣ್ ಕಲ್ಯಾಣಿ ಎಂಬುವವರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು ಆದರೆ ವೈಯಕ್ತಿಕ ಕಾರಣಗಳಿಂದ ದೂರವಾಗಿ ಬಿಟ್ಟರು. 

Eye Health: ಕಣ್ಣುಗಳಲ್ಲಿ ಉಂಟಾಗುವ ಈ ಲಕ್ಷಣಗಳನ್ನು ಅಲಕ್ಷಿಸಬೇಡಿ

ಸೂರ್ಯ ಕಿರಣ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?