ಬಾಲಿವುಡ್ ನಟ ಆಮೀರ್ ಖಾನ್ ಸದ್ಯ 3ನೇ ಮದುವೆಗೆ ರೆಡಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತಲೆದಿಂಬಿನ ಮೇಲೆ ಇರುವ ಪ್ರೀತಿಯ ಕುರಿತು ಮಾಜಿ ಪತ್ನಿ, ಕಿರಣ್ ರಾವ್ ಮಾತನಾಡಿದ್ದಾರೆ.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಇದೀಗ ಮೂರನೆಯ ಮದುವೆಗೆ ರೆಡಿಯಾಗಿದ್ದಾರೆ. ಆಕೆಯ ಹೆಸರು ಗೌರಿ. ಅವರನ್ನು ಇದಾಗಲೇ ಆಮೀರ್ ಜನರಿಗೆ ಪರಿಚಯಿಸಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್ ಅವರ ಮದುವೆ ಸಮಾರಂಭಕ್ಕೆ ಕಿರಣ್ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.
ಈ ಬಗ್ಗೆ ಅವರ ಫ್ಯಾನ್ಸ್ಗೆ ಚೆನ್ನಾಗಿ ತಿಳಿದಿದ್ದರೂ, ಆಮೀರ್ ಖಾನ್ ಅವರ ತಲೆದಿಂಬಿನ ಮೇಲಿನ ಪ್ರೀತಿ ಮಾತ್ರ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಅಷ್ಟಕ್ಕೂ, ಆಮೀರ್ ಖಾನ್, ಎಲ್ಲಿಯೇ ಪ್ರಯಾಣ ಮಾಡುವುದಿದ್ದರೂ ದಿಂಬನ್ನು ಹಿಡಿದುಕೊಂಡು ಹೋಗುವುದನ್ನು ಹೆಚ್ಚಾಗಿ ಕಾಣಬಹುದು, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪೋಸ್ ನೀಡುವುದನ್ನು ಹೆಚ್ಚಾಗಿ ಕಾಣಬಹುದು. ಅವರ ಈ ಅಭ್ಯಾಸವು ವರ್ಷಗಳಿಂದ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡುತ್ತಲೇ ಬಂದಿದೆ. ಆದರೆ ನಟ ಮಾತ್ರ ಈ ಬಗ್ಗೆ ಎಲ್ಲಿಯೂ ತುಟಿಕ್ ಪಿಟಿಕ್ ಅನ್ನಲಿಲ್ಲ. ಆದರೆ, ಇದೀಗ ಮೂರನೆಯ ಮದುವೆಗೆ ರೆಡಿಯಾದ್ರೂ ಆ ದಿಂಬನ್ನು ಮಾತ್ರ ಬಿಡುತ್ತಿಲ್ಲ.
ಅವಳು ದೂರವಾದ ಮೇಲೆ ದೊಡ್ಡ ಕುಡುಕನಾಗಿದ್ದೆ, ಫುಲ್ ಬಾಟಲ್ ಕುಡೀತಿದ್ದೆ: ಅಂದಿನ ದಿನ ನೆನೆದ ಆಮೀರ್ ಖಾನ್
ಇದರ ಬಗ್ಗೆ ಈಗ ಆಮೀರ್ ಎರಡನೆಯ ಮಾಜಿ ಪತ್ನಿ, ನಿರ್ಮಾಪಕಿ ಕಿರಣ್ ರಾವ್ ರಿವೀಲ್ ಮಾಡಿದ್ದಾರೆ. ANI ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಕಿರಣ್ ರಾವ್ ಅವರು, ಪ್ರತಿ ಪ್ರವಾಸದ ಸಮಯದಲ್ಲಿ ಆಮೀರ್ ತಮ್ಮೊಂದಿದಗೆ ದಿಂಬನ್ನು ಒಯ್ಯುವ ಅಭ್ಯಾಸದ ಬಗ್ಗೆ ರಿವೀಲ್ ಮಾಡಿದ್ದಾರೆ. ಆಮೀರ್ಗೆ ಆ ದಿಂಬು ಎಂದರೆ ತುಂಬಾ ಇಷ್ಟ. ಅವರು ಇದಾಗಲೇ ಎರಡು ಬಾರಿ ಡಿವೋರ್ಸ್ ಪಡೆದರೂ, ಅವರ ವಿಶಿಷ್ಟ ಪ್ರಯಾಣ ಶೈಲಿ ಬದಲಾಗಿಲ್ಲ. ಅವರು ಪ್ರಯಾಣದ ಸಮಯದಲ್ಲಿ ಮಲಗುವುದನ್ನು ಆನಂದಿಸುತ್ತಾರೆ. ಮಲಗುವಾಗ ಅವರಿಗೆ ದಿಂಬು ಬೇಕೇ ಬೇಕು. ಆದ್ದರಿಂದ ಎಲ್ಲಿಯೇ ಪ್ರಯಾಣಿಸುವುದಿದ್ದರೂ ಆ ದಿಂಬನ್ನು ಒಯ್ಯುತ್ತಾರೆ ಎಂದಿದ್ದಾರೆ. ಅದೇ ದಿಂಬಿನಿಂದ ವಿಮಾನವನ್ನೂ ಹತ್ತುತ್ತಾರೆ ಎಂದು ಕಿರಣ್ ರಾವ್ ಹೇಳಿದ್ದಾರೆ.
ಆಮೀರ್ ಖಾನ್ ಅವರ ದಿಂಬುಗಳ ಮೇಲಿನ ಪ್ರೀತಿ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದ ಪ್ರಚಾರದ ಸಮಯದಲ್ಲಿ ಬಯಲಾಗಿತ್ತು. ನಟಿ ಕರೀನಾ ಕಪೂರ್ ಕೂಡ ಒಮ್ಮೆ ವಿಮಾನದಿಂದ ತೆಗೆದ ಚಿತ್ರವನ್ನು ಹಂಚಿಕೊಂಡಿದ್ದರು, ಅದರಲ್ಲಿ ಆಮೀರ್ ದಿಂಬಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವಾಗ ಆಕೆ ಅವರ ಪಕ್ಕದಲ್ಲಿ ಪೋಸ್ ನೀಡಿದ್ದರು. ಅವರು ಅದಕ್ಕೆ ತಮಾಷೆಯಾಗಿ ಶೀರ್ಷಿಕೆ ನೀಡಿದ್ದಳು, ಆಮೀರ್ ಅವರ ದಿಂಬನ್ನು ತನ್ನ "ನೆಚ್ಚಿನ ಸಹನಟಿ" ಎಂದು ಕರೆದಿದ್ದರು. ಇದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದ ಆಮೀರ್ ಖಾನ್, ಅಭಿಮಾನಿಗಳು ದಿಂಬಿನ ಬಗ್ಗೆ ಹೆಚ್ಚು ಗಮನ ಹರಿಸಬೇಡಿ ಎಂದು ಹೇಳಿದ್ದರು.
ಶಾರುಖ್, ಆಮೀರ್ ಖಾನ್ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?