ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್ ನಟನೆಯ ʼL2; Empuraan' ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ʼL2; Empuraan' ಸಿನಿಮಾ ತೆರೆ ಕಂಡಿದ್ದು, ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿರಬಹುದು ಎಂಬ ಪ್ರಶ್ನೆ ಎದ್ದಿರಬಹುದು. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರತದಲ್ಲಿ 22 ಕೋಟಿ ರೂಪಾಯಿ ಬಾಚಿದೆ ಎಂದು ಹೇಳಲಾಗಿದೆ. ಮಲಯಾಳಂ ಚಿತ್ರರಂಗದಲ್ಲೇ ಇದು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.
ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಆಗಿದೆ?
ಮಲಯಾಳಂ ಭಾಷೆಯಲ್ಲಿ 19.45 ಕೋಟಿ ರೂಪಾಯಿ, ತೆಲುಗು ಭಾಷೆಯಲ್ಲಿ 1.2 ಕೋಟಿ ರೂಪಾಯಿ, ತಮಿಳು ಭಾಷೆಯಲ್ಲಿ 80 ಲಕ್ಷ ರೂಪಾಯಿ, ಕನ್ನಡ ಭಾಷೆಯಲ್ಲಿ 5 ಲಕ್ಷ ರೂಪಾಯಿ, ಹಿಂದಿ ಭಾಷೆಯಲ್ಲಿ 50 ಲಕ್ಷ ರೂಪಾಯಿ ಗಳಿಕೆ ಮಾಡಿದೆಯಂತೆ. ಇನ್ನು ವಿದೇಶವನ್ನೂ ಸೇರಿಸಿದರೆ 50 ಕೋಟಿ ರೂಪಾಯಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ಈ ವೀಕೆಂಡ್‌ನಲ್ಲಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.
ʼಮಲಯಾಳಂ ಚಿತ್ರರಂಗದ ಲೆಜೆಂಡ್ʼ ಮಮ್ಮುಟ್ಟಿಗೆ ಕ್ಯಾನ್ಸರ್ ವದಂತಿ: ಅಧಿಕೃತ ಸ್ಪಷ್ಟನೆ ನೀಡಿದ PR Team!
ಈ ಸಿನಿಮಾದಲ್ಲಿ ಯಾರಿದ್ದಾರೆ?
ಈ ಸಿನಿಮಾಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಅಭಿಮನ್ಯು ಸಿಂಗ್, ಥೋವೀನೋ ಥಾಮಸ್, ಸೂರಜ್, ಸಾನಿಯಾ ಅಯ್ಯಪ್ಪನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನು ಹೊಗಳಿದ್ದ ರಾಜಮೌಳಿ!
ನಿರ್ದೇಶಕ ಎಸ್ ಎಸ್ ರಾಜಮೌಳಿ, ರಜನೀಕಾಂತ್ ಸೇರಿಂತೆ ಸಾಕಷ್ಟು ದಿಗ್ಗಜರು Empuraan Movie ಟ್ರೇಲರ್ ನೋಡಿ ಹೊಗಳಿದ್ದರು. ಅಷ್ಟೇ ಅಲ್ಲದೆ ಇದು ಬ್ಲಾಕ್‌ಬಸ್ಟರ್ ಸಿನಿಮಾ ಆಗುವ ಎಲ್ಲ ಸೂಚನೆಯೂ ಕಾಣ್ತಿದೆ ಅಂತ ರಾಜಮೌಳಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. 'Empuraan Movie' ಟ್ರೇಲರ್ ಮೊದಲ ದೃಶ್ಯವೇ ನನ್ನ ಗಮನ ಸೆಳೆದಿದೆ. ಮೋಹನ್‌ಲಾಲ್ ತೆರೆ ಮೇಲೆ ಕಂಡಾಗ ಅಲ್ಲೊಂದು ಆಕರ್ಷಕ ಶಕ್ತಿ ಕಾಣುತ್ತದೆ. ಇಲ್ಲಿ ದೊಡ್ಡ ಮಟ್ಟದ ಮೇಕಿಂಗ್ ಇದೆ, ಅದ್ಭುತ ಆಕ್ಷನ್ ಕೂಡ ಇದೆ” ಎಂದು ರಾಜಮೌಳಿ ಅವರು ಪೃಥ್ವಿರಾಜ್, ಮೋಹನ್‌ಲಾಲ್ ಅವರನ್ನು ಟ್ಯಾಗ್ ಮಾಡಿ ಬರೆದುಕೊಂಡಿದ್ದರು. ಸೂಪರ್ ಸ್ಟಾರ್ ನಟ ರಜನೀಕಾಂತ್, ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ಈ ಸಿನಿಮಾದ ಟ್ರೇಲರ್ ಮೆಚ್ಚಿದ್ದಾರೆ.
ಕೈಹಿಡಿದು ಎಳೆದ ಅಭಿಮಾನಿ; ಕಪಾಳ ಮೋಕ್ಷ ಮಾಡಿದ ರಾಗಿಣಿ ದ್ವಿವೇದಿ ವಿಡಿಯೋ ವೈರಲ್!
ಯಾವ ಫಾರ್ಮ್ಯಾಟ್‌ನಲ್ಲಿದೆ?
ಸಂಪೂರ್ಣವಾಗಿ ಅನಾಮಾರ್ಫಿಕ್ ಫಾರ್ಮ್ಯಾಟ್‌ನಲ್ಲಿ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾದ ಮೂರನೇ ಭಾಗವು ಇದೇ ಫಾರ್ಮ್ಯಾಟ್‌ನಲ್ಲಿ ಬರಲಿದೆಯಂತೆ ಎಂದು ನಿರ್ದೇಶಕ ಪೃಥ್ವಿರಾಜ್ ಹೇಳಿದ್ದಾರೆ.
ಈ ಸಿನಿಮಾ ನೋಡಿ ಎಂದು ಬೆಂಗಳೂರಿನ ಗುಡ್ ಶೆಫರ್ಡ್ ಕಾಲೇಜು ರಜೆ ಘೋಷಣೆ ಮಾಡಿರೋದು ಮಾತ್ರ ದೊಡ್ಡ ವಿವಾದ ಸೃಷ್ಟಿ ಮಾಡಿತ್ತು.