1200 ಕೋಟಿ ರೂಪಾಯಿ ಒಡೆಯ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರು ಹಣ ನಿರ್ವಹಣೆ ಹೇಗೆ ಮಾಡೋದು ಎಂದು ಟಿಪ್ಸ್ ನೀಡಿದ್ದಾರೆ.
‘ಕೂತು ಉಂಡರೂ ಕುಡಿಕೆ ಹೊನ್ನು ಸಾಲದು’ ಎನ್ನುತ್ತಾರೆ. ಅಂತೆಯೇ ಎಷ್ಟೇ ದುಡ್ಡಿದ್ದರೂ ಕೂಡ ಅದನ್ನು ನಿಭಾಯಿಸೋಕೆ ಕಲಿಯಬೇಕು. 1200 ಕೋಟಿ ರೂಪಾಯಿ ಒಡೆಯ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರು ಹೇಗೆ ಹಣ ಉಳಿಸುತ್ತೇನೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸಾರಾ ಅಲಿ ಖಾನ್, ಹಣದ ಉಳಿತಾಯ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ.
ಸಾರಾ ಅಲಿ ಖಾನ್ ಹೇಳಿದ್ದೇನು?
“ಮೊತ್ತ ಸಣ್ಣದಾಗಿದ್ದರೂ ಕೂಡ ನಾವು ಬೇರೆ ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಬೇಕು ಎನ್ನೋದನ್ನು ನಾನು ಕಲಿತಿದ್ದೇನೆ. ನನ್ನ ಗೂಗಲ್ ಪೇ ಒಟಿಪಿ ಕೂಡ ನನ್ನ ತಾಯಿಗೆ ಹೋಗುತ್ತದೆ. ನಾನು ವಿಮಾನ ಟಿಕೆಟ್ ಬುಕ್ ಮಾಡಲು ಕೂಡ ನನ್ನ ತಾಯಿ ಒಟಿಪಿ ಕೊಡಬೇಕಾಗುತ್ತದೆ. ನನ್ನ ಹಣವನ್ನು ತಾಯಿಯೇ ನಿಭಾಯಿಸುತ್ತಾರೆ. ನಾನು ಎಲ್ಲಿದ್ದೀನಿ? ಏನು ಮಾಡುತ್ತಿದ್ದೇನೆ ಎನ್ನೋದು ಸೋಶಿಯಲ್ ಮೀಡಿಯಾ ಮೂಲಕ ಗೊತ್ತಾಗುತ್ತದೆ. ಚಿನ್ನ, ರಿಯಲ್ ಎಸ್ಟೇಟ್, ಸ್ಟಾಕ್ ಮಾರ್ಕೆಟ್‌ಗಳಲ್ಲಿ ನಾನು ಹಣ ಹೂಡಿಕೆ ಮಾಡ್ತೀನಿ” ಎಂದು ನಟಿ ಸಾರಾ ಅಲಿ ಖಾನ್ ಹೇಳಿದ್ದಾರೆ.
ಸಾರಾ ಅಲಿ ಖಾನ್ ಆದಾಯ ಎಷ್ಟು?
2024 ವರದಿ ಪ್ರಕಾರ ಸಾರಾ ಅಲಿ ಖಾನ್ ಅವರು 41 ಕೋಟಿ ರೂಪಾಯಿ ಒಡತಿ ಎನ್ನಲಾಗಿದೆ. ಇನ್ನು ಸಿನಿಮಾವೊಂದಕ್ಕೆ ಮಿನಿಮಮ್ 3 ಕೋಟಿ ರೂಪಾಯಿ, ಜಾಹೀರಾತುಗಳಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇನ್ನು ಕಾರ್ಯಕ್ರಮಗಳಿಗೆ ಅವರು ಭಾಗವಹಿಸಿ, ಅಲ್ಲಿಯೂ ಹಣ ಪಡೆಯುತ್ತಾರೆ.
ಅಮೃತಾ ಸಿಂಗ್ ಮಗಳು ಸಾರಾ!
ನಟ ಅಮೃತಾ ಸಿಂಗ್, ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್. ಸೈಫ್ ಅವರ ಏಕೈಕ ಪುತ್ರಿ ಇವರು. ಸೈಫ್, ಅಮೃತಾ ಮಧ್ಯೆ ಹನ್ನೆರಡು ವರ್ಷಗಳ ಅಂತರ ಇದ್ದು, ( ಸೈಫ್‌ಗಿಂತ ಅಮೃತಾ ದೊಡ್ಡವರು ) ಮನಸ್ತಾಪದಿಂದ ಈ ಜೋಡಿ ಡಿವೋರ್ಸ್ ಪಡೆದಿದೆ. ಅಮೃತಾ ಸಿಂಗ್, ಸೈಫ್ ಜೋಡಿಗೆ ಇಬ್ರಾಹಿಂ ಖಾನ್ ಎಂಬ ಗಮನಿದ್ದು, ಇವರು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕರೀನಾ-ಸೈಫ್ ಜೋಡಿಗೆ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಸೈಫ್ ಅವರು ಕರೀನಾ ಕಪೂರ್‌ರನ್ನು ಮದುವೆಯಾಗಿದ್ದಾರೆ. ಸೈಫ್‌ಗಿಂತ ಕರೀನಾ ಹತ್ತು ವರ್ಷ ಚಿಕ್ಕವರು.
ಕರೀನಾ ಕಪೂರ್ ಬಾಳಲ್ಲೂ ಬಿರುಗಾಳಿ? ಮದುವೆ, ವಿಚ್ಛೇದನದ ಬಗ್ಗೆ ಬರೆದುಕೊಂಡ ಸೈಫ್ ಅಲಿ ಖಾನ್ ಪತ್ನಿ!
ಪಾಲಕರ ಧರ್ಮ ಬೇರೆ ಬೇರೆ!
ಸಾರಾ ಅಲಿ ಖಾನ್ ತಂದೆ ಮುಸ್ಲಿಂ, ತಾಯಿ ಹಿಂದು. ಸಾರಾ ಅವರು ಎರಡೂ ಧರ್ಮವನ್ನು ಪಾಲಿಸ್ತಾರೆ. ದೇವಸ್ಥಾನಗಳಿಗೂ ಭೇಟಿ ಕೊಡುವ ಸಾರಾ, ನಮಾಜ್ ಕೂಡ ಮಾಡುತ್ತಾರೆ.
ಸಿನಿಮಾಗಳು
ಅನುರಾಗ್ ಬಸು ಜೊತೆಗೆ ಒಂದು ಸಿನಿಮಾ, ʼಸ್ಕೈ ಫೋರ್ಸ್ʼ ಸಿನಿಮಾದಲ್ಲಿ ಸಾರಾ ನಟಿಸಿದ್ದಾರೆ. ಇನ್ನು ಕಳೆದ ವರ್ಷ ಸಾರಾ ಅವರ ಮೂರು ಸಿನಿಮಾ ರಿಲೀಸ್ ಆದರೂ ಕೂಡ ಒಂದೂ ಯಶಸ್ಸು ಕಂಡಿರಲಿಲ್ಲ.