'ದಬಾಂಗ್ -3' ಬಿಟ್ಟು ಕ್ರಿಕೆಟ್‌ ಸ್ಟಾರ್‌ಗಳ ಕಾಣಿಸಿಕೊಂಡ ಸುದೀಪ್-ಸಲ್ಲುಭಾಯ್!

By Suvarna News  |  First Published Dec 16, 2019, 2:52 PM IST

ಕಿಚ್ಚ ಸುದೀಪ್- ಸಲ್ಮಾನ್ ಖಾನ್ ದಬಾಂಗ್ -3 ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಶನ್ ಬ್ಯುಸಿ ನಡುವೆಯೇ ಇದ್ದಕ್ಕಿದ್ದಂತೆ ಕ್ರಿಕೆಟರ್ಸ್‌ಗಳ ಜೊತೆ ಕಾಣಿಸಿಕೊಂಡಿದ್ದಾರೆ. ಕಾರಣವೇನು? ಇಲ್ಲಿದೆ ನೋಡಿ.  


ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ 'ದಬಾಂಗ್ -3' ಡಿಸಂಬರ್ 20 ರಂದು ತೆರೆಗೆ ಬರಲು ಸಿದ್ಧವಾಗಿದೆ. 

ಸದ್ಯ ದಬಾಂಗ್ -3 ತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. ಇತ್ತೀಚಿಗಷ್ಟೇ ದಬಾಂಗ್-  3 ಕಪಿಲ್ ಶರ್ಮಾ ಶೋನಲ್ಲಿ ಪಾಲ್ಗೊಂಡಿತ್ತು. ಸಲ್ಮಾನ್- ಪ್ರಭುದೇವ್, ಸುದೀಪ್ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸಿತು. ಕಿಚ್ಚ ಸುದೀಪ್‌ಗೆ ಬೆಲ್ಲವನ್ನು ಕೊಟ್ಟು ನೊಣದ ಬಳಿ ಯಾವಾಗಲೂ ಬೆಲ್ಲ ಇರಬೇಕು ಎಂದು ತಮಾಷೆ ಮಾಡಲಾಯಿತು.

Tap to resize

Latest Videos

undefined

'ನಂದ ಲವ್ಸ್ ನಂದಿತಾ'ದಲ್ಲಿ ಮಿಂಚಿದ ಜಿಂಕೆ ಮರಿ ಈಗ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ!

ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಇದೀಗ ಕ್ರಿಕೆಟರ್ಸ್‌ಗಳನ್ನು ಭೇಟಿ ಮಾಡಿದ್ದಾರೆ. ಅರೇ, ದಬಾಂಗ್- 3 ಗೂ ಕ್ರಿಕೆಟ್‌ಗೂ ಏನ್ ಸಂಬಂಧ ಎಂದುಕೊಳ್ಳಬೇಡಿ.  ಪ್ರಮೋಶನ್‌ಗಾಗಿ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಭಾಗಿಯಾಗಿದ್ದರು. ಭರತ್ ಚಿಪ್ಳಿ, ಜೆ ಅರುಣ್ ಕುಮಾರ್, ವಿಜಯ್ ಭಾರದ್ವಾಜ್ ಹಾಗೂ ವೆಂಕಟೇಶ್ ಪ್ರಸಾದ್ ಜೊತೆ ಕಾಣಿಸಿದ್ದಾರೆ. 

 

It's always a special moment ,,,to meet u all.🤗🤗 https://t.co/ZX7xCx1YlI

— Kichcha Sudeepa (@KicchaSudeep)

Chulbul Pandey and Bali Singh heat up the cricket fever at Star Sports studio! pic.twitter.com/cGS2VnZO6W

— Salman Khan Films (@SKFilmsOfficial)

 

click me!