ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ 'ಕಿಯಾರಾ ಬೆಸ್ಟ್‌ ವೈಫ್ ಆಗ್ತಾಳೆ' ಎಂದ ನೀತು ಕಪೂರ್

By Suvarna NewsFirst Published Jun 21, 2022, 5:02 PM IST
Highlights

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ (Sidharth Malhotra) ಅವರೊಂದಿಗೆ ಕಿಯಾರಾ ಅಡ್ವಾಣಿ (Kiara Advani) ಡೇಟಿಂಗ್ ರುಮರ್ಸ್‌ ಕೇಳಿಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಬೆಸ್ಟ್‌ ವೈಫ್ ಎಂಬ ಬಿರುದು ಕಿಯಾರಾ ಅವರಿಗೆ ನೀಡಿದ್ದಾರೆ. 

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ (Sidharth Malhotra) ಅವರೊಂದಿಗೆ ಕಿಯಾರಾ ಅಡ್ವಾಣಿ (Kiara Advani) ಡೇಟಿಂಗ್ ರುಮರ್ಸ್‌ ಕೇಳಿಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಬೆಸ್ಟ್‌ ವೈಫ್ ಎಂಬ ಬಿರುದು ಕಿಯಾರಾ ಅವರಿಗೆ ನೀಡಿದ್ದಾರೆ. ಇತ್ತೀಚಿಗಷ್ಟೆ  ಹಿರಿಯ ನಟಿ ನೀತು ಕಪೂರ್ ಕಿಯಾರಾ ಅವರನ್ನು ಹಾಡಿ ಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ, ನೀತು ಕಪೂರ್ (Neetu kapoor) ರವರು ಸಿದ್ಧಾರ್ಥ್‌ ಮತ್ತು ಕಿಯಾರಾ ಮದುವೆಯ ಬಗ್ಗೆ ಮಾತನಾಡಿದ್ದಾರೆ ಮತ್ತು ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ ಮತ್ತು 'ಪ್ರತಿಯೊಬ್ಬರಿಗೂ ಅವರವರ ಸಮಸ್ಯೆಗಳಿರುತ್ತವೆ' ಎಂದಿದ್ದಾರೆ. 

'ಇಂದಿನ ಕಾಲದ ಸಂಬಂಧ ಹೇಗಿವೆ ಎಂದರೆ ಜನರು ತಮ್ಮ ವೈಯಕ್ತಿಕ ವಿಚಾರಗಳಿಗೆ ಮನಸ್ಥಾಪಕ್ಕೆ ಒಳಗಾಗಿ ದೂರವಾಗುತ್ತಾರೆ ಅಥವಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ' ಎಂದು ಹೇಳಿದರು. 1980 ರಲ್ಲಿ ನಟ ರಿಷಿ ಕಪೂರ್ ಅವರೊಂದಿಗೆ ನೀತು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳು, ಅವರೇ ರಿದ್ಧಿಮಾ ಕಪೂರ್ ಮತ್ತು ನಟ ರಣಬೀರ್ ಕಪೂರ್. ರಿಷಿ ಕಪೂರ್ ಕ್ಯಾನ್ಸರ್‌ನೊಂದಿಗೆ ಹೋರಾಡಿ ಏಪ್ರಿಲ್‌ 30,2020 ರಂದು ಇಹಲೋಕ ತ್ಯಜಿಸಿದರು. ನ್ಯೂಯಾರ್ಕ್‌ಗೆ ಚಿಕಿತ್ಸೆಗಾಗಿ ಅವರು ಹೋದಾಗ ನೀತು ಅವರ ಜೊತೆಗಿದ್ದರು. ರಿಷಿ ಸಾವಿನ ನಂತರ ನೀತು ಮುಂಬರುವ ಜಗ್‌ಜಗ್ ಜೀಯೋ ಮೂಲಕ ಮತ್ತೆ ಬಾಲಿವುಡ್‌‌ಗೆ ಮರಳುತ್ತಿದ್ದಾರೆ.

'ಮದುವೆ ಎಂಬುವುದು ಬರೀ ಮಾತಿಗಷ್ಟೇ ಆಗಬಾರದು ಇಬ್ಬರು ಸಮಾನರಾದ ಪ್ರೀತಿ ಹೊಂದಿರಬೇಕು, ಸಹಾಯ ಮಾಡಬೇಕು ನಾನು ಹೆಚ್ಚು ತಾನು ಹೆಚ್ಚು ಅನ್ನುವ ಭಾವನೆ ಬರಬಾರದು ಪ್ರತಿಯೊಬ್ಬರಿಗೂ ಅವರವರ ಸಮಸ್ಯೆಗಳಿರುತ್ತವೆ ತಾಳ್ಮೆಯಿಂದ ಇದ್ದರೆ ಸಂತೋಷದ ದಾಂಪತ್ಯವನ್ನು ಹೊಂದಲು ಸಾಧ್ಯವಿದೆ, ಹೊಂದಾಣಿಕೆಗಳು  ಮತ್ತು ಹೆದರಿಸುತ್ತದೆ. ಕೆಲ ಸಂಬಂಧ ಮದುವೆಯ ಕೆಲ ವರ್ಷಗಳ ನಂತರ   ಸಂಬಂಧಗಳು ಮುರಿದು ಬೀಳುತ್ತೀರಿ ಅಥವಾ ವಿಚ್ಛೇದನವಾಗುತ್ತವೆ ಎಂಬ ಹೇಳಿಕೆಗಳು ಸಹಜ ನಾವುಗಳು ಈ ತೀರ್ಮಾನಗಳಿಗೆ ಶೀಘ್ರವಾಗಿ ಬರುತ್ತೇವೆ. ಆದರೆ, ನಾವೆಲ್ಲರೂ ಸ್ವಲ್ಪ ಹೆಚ್ಚು ತಾಳ್ಮೆಯಿಂದಿರಬೇಕು ಮತ್ತು ವಿಷಯಗಳು ಸಂಭವಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು' ಎಂದು ನೀತು ಕಪೂರ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದರು. 

Kiara Advani ಮತ್ತು Sidharth Malhotra ಮತ್ತೆ ಒಂದಾಗಿದ್ದು ಹೇಗೆ?

ನೀತು ಕಪೂರ ಅವರಿಗೆ ಕಿಯಾರಾ ಬಗ್ಗೆ ಕೇಳಿದಾಗ, 'ಕಿಯಾರಾ ತುಂಬಾ ಒಳ್ಳೆಯವಳು ಮತ್ತು ಅವಳು ಅತ್ಯುತ್ತಮ ಹೆಂಡತಿಯಾಗುತ್ತಾಳೆ. ಅವಳು ತುಂಬಾ ಸಿಹಿಯಾಗಿ ಮಾತನಾಡುವ ಮತ್ತು ಪ್ರೀತಿಪಾತ್ರ ಹುಡುಗಿ' ಎಂದು ನೀತು ಹೇಳಿದರು. ಕಿಯಾರಾ ಮತ್ತು ಸಿದ್ಧಾರ್ಥ್ ಆಗಾಗ್ಗೆ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗೆ ಒಟ್ಟಿಗೆ ಹಾಜರಾಗುತ್ತಾರೆ ಆದರೆ ಅವರ ಸಂಬಂಧವನ್ನು ಎಂದಿಗೂ ಯಾರ ಹತ್ತಿರವು ಹೇಳಿಕೊಂಡಿಲ್ಲ. ಇತ್ತೀಚೆಗೆ, ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಇವರಿಬ್ಬರು ಆಳವಾದ ಸಂಭಾಷಣೆ ನಡೆಸುತ್ತಿದ್ದ ದೃಶ್ಯ ವೈರಲ್ ಆಗಿತ್ತು.  

ಕಿಯಾರಾ ಇತ್ತೀಚೆಗೆ ಡೇಟಿಂಗ್ ವದಂತಿ ಬಗ್ಗೆ 'ನಾನು ಅದರಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿಲ್ಲ, ವಿಶೇಷವಾಗಿ ಅದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರಿದಾಗ. ವೃತ್ತಿಪರ ವಿಷಯದಲ್ಲಿ, ನನ್ನ ಅಥವಾ ನನ್ನ ಕುಟುಂಬದ ಮೇಲೆ ಪರಿಣಾಮ ಬೀರುವ ಯಾವುದನ್ನಾದರೂ ಹೇಳಿರುವ ಅನುಭವವನ್ನು ನಾನು ಎಂದಿಗೂ ಹೊಂದಿಲ್ಲ, ಅದು ನಾನು ಇಷ್ಟಪಡುತ್ತೇನೆ, ಇದು ಎಲ್ಲಿಂದ ಬರುತ್ತದೆ' ಎಂದು ಹೇಳಿದರು.

ಬ್ರೇಕಪ್ ವದಂತಿ ನಡುವೆಯೂ ಒಟ್ಟಿಗೆ ಕಾಣಿಸಿಕೊಂಡ ಕಿಯಾರಾ - ಸಿದ್ಧಾರ್ಥ್; ವಿಡಿಯೋ ವೈರಲ್

ಕಿಯಾರಾ ಕೊನೆಯದಾಗಿ ಭೂಲ್ ಭುಲೈಯಾ 2 ನಲ್ಲಿ ತಬು, ಕಾರ್ತಿಕ್ ಆರ್ಯನ್, ಸಂಜಯ್ ಮಿಶ್ರಾ ಮತ್ತು ರಾಜ್‌ಪಾಲ್ ಯಾದವ್ ಅವರೊಂದಿಗೆ ಕಾಣಿಸಿಕೊಂಡರು. ಅವರು ಮುಂದೆ ನೀತು, ಅನಿಲ್ ಕಪೂರ್ ಮತ್ತು ವರುಣ್ ಧವನ್ ಅವರೊಂದಿಗೆ ಜಗ್‌ಜಗ್ ಜೀಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಮೆಹ್ತಾ ನಿರ್ದೇಶಿಸಿದ ಈ ಚಿತ್ರದಲ್ಲಿ ಮನೀಶ್ ಪಾಲ್ ಸಹ ನಟಿಸಿದ್ದಾರೆ.
 

click me!