ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರವನ್ನು ಸಮಂತಾ ಅವರ ಪಿಆರ್ ಟೀಂ ಲೀಕ್ ಮಾಡಿದೆ ಎಂದು ನಾಗಚೈತನ್ಯ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಸಮಂತಾ ಮತ್ತು ಅವರ ಪಿಆರ್ ತಂಡದ ಜೊತೆ ನಾಗಚೈತನ್ಯ ಅಭಿಮಾನಿಗಳ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ನಾಗಚೈತನ್ಯ ಡೇಟಿಂಗ್ ವಿಚಾರವನ್ನು ಹಬ್ಬಿಸಿದೆ ಎಂದು ನಾಗ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಇದರಿಂದ ಕೆರಳಿರುವ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಟಾಲಿವುಡ್ ಸ್ಟಾರ್ ನಟಿ ಸಮಂತಾ (Samantha) ಮತ್ತು ನಟ ನಾಗಚೈತನ್ಯ (Naga Chaitanya) ಇಬ್ಬರು ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿದೆ. ಇದೀಗ ಮತ್ತೆ ನಾಗಚೈತನ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಈ ಬಾರಿ ನಾಗಚೈತನ್ಯ ಸದ್ದು ಮಾಡುತ್ತಿರುವುದು ಸಮಂತಾ ವಿಚಾರಕ್ಕೆ ಅಲ್ಲ ಬದಲಾಗಿ ಗರ್ಲ್‌ಫ್ರೆಂಡ್ ವಿಚಾರವಾಗಿ. ಹೌದು, ನಾಗಚೈತನ್ಯ ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಮತ್ತೋರ್ವ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಾಗ್ ಡೇಟಿಂಗ್ ಮಾಡುತ್ತಿರುವ ನಟಿ ಮತ್ಯಾರು ಅಲ್ಲ ಮೇಡ್ ಇನ್ ಹೆವನ್ ನಟಿ ಶೋಭಿತಾ ದುಲಿಪಾಲಾ (Sobhita Dhulipala). ನಾಗ್ ಮತ್ತು ಶೋಭಿತಾ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು ಇಬ್ಬರು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಶೋಭಿತಾ ಇತ್ತೀಚಿಗೆ ನಾಗಚೈತನ್ಯ ಅವರ ಜುಬ್ಲಿಹಿಲ್ಸ್‌ನಲ್ಲಿರುವ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಇಬ್ಬರೂ ಕದ್ದುಮುಚ್ಚಿ ಓಡಾಡುತ್ತಿದ್ದಾರೆ, ಪ್ರವಾಸಕ್ಕೂ ಹೋಗುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಇಬ್ಬರೂ ನಾಗ್ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಜೊತೆಗೆ ಕಾರಿನಲ್ಲಿ ಒಟ್ಟಿಗೆ ಹೊರಟು ಹೋಗಿದ್ದಾರೆ. ಇಬ್ಬರ ಡೇಟಿಂಗ್ ವಿಚಾರ ವೈರಲ್ ಆಗುತ್ತಿದ್ದಂತೆ ಸಮಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸಮಂತಾರಿಂದ ನಾಗಚೈತನ್ಯ ದೂರ ಆಗಲು ಕಾರಣ ಶೋಭಿತಾ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ನಾಗಚೈತನ್ಯ ಅಭಿಮಾನಿಗಳು ಇದನ್ನು ಅಲ್ಲಗಳೆಯುತ್ತಿದ್ದಾರೆ.
ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರವನ್ನು ಸಮಂತಾ ಅವರ ಪಿಆರ್ ಟೀಂ ಲೀಕ್ ಮಾಡಿದೆ ಎಂದು ನಾಗಚೈತನ್ಯ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಸಮಂತಾ ಮತ್ತು ಅವರ ಪಿಆರ್ ತಂಡದ ಜೊತೆ ನಾಗಚೈತನ್ಯ ಅಭಿಮಾನಿಗಳ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ನಾಗಚೈತನ್ಯ ಡೇಟಿಂಗ್ ವಿಚಾರವನ್ನು ಹಬ್ಬಿಸಿದೆ ಎಂದು ನಾಗ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಇದರಿಂದ ಕೆರಳಿರುವ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಮಂತಾಗೆ ಗುಡ್‌ಬೈ ಬಳಿಕ ಶೋಭಿತಾ ಜೊತೆ ನಾಗಚೈತನ್ಯ ಲವ್ವಿಡವ್ವಿ?
'ಹುಡುಗಿಯರ ಮೇಲಿನ ವಂದತಿಗಳು ನಿಜವಾಗಿರಲೇ ಬೇಕು. ಆದರೆ ಹುಡುಗರ ಮೇಲಿನ ವದಂತಿಯನ್ನು ಹುಡುಗಿಯರು ಮಾಡುತ್ತಾರೆ. ಹುಡುಗರೇ ಈಗಲಾದರೂ ತಿಳಿದುಕೊಳ್ಳಿ. ನಾವು ಇದರಿಂದ ತುಂಬಾ ದೂರ ಬಂದಿದ್ದೇವೆ. ನೀವು ಕೂಡ ಮೂವ್ ಆನ್ ಆಗಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆ ಗಮನ ಕೊಡಿ, ಮೂವ್ ಆನ್ ಆಗಿ' ಎಂದು ಸಮಂತಾ ಹೇಳಿದ್ದಾರೆ. ಸಮಂತಾ ಪ್ರತಿಕ್ರಿಯೆಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೂಪರ್ ಪ್ರತಿಕ್ರಿಯೆ ಎಂದು ಕಾಮೆಂಟ್ ಮಾಡಿ ಸಮಂತಾ ಬೆಂಬಲಕ್ಕೆ ನಿಂತಿದ್ದಾರೆ.
Samantha; 30 ಸಾವಿರ ಬಿಕಿನಿ ಪ್ರಮೋಷನ್‌ಗೆ ಇಷ್ಟೊಂದು ಹಣ ಪಡೆದ್ರಾ ಸ್ಯಾಮ್!
ನಟಿ ಶೋಭಿತಾ ಜೊತೆ ನಾಗಚೈತನ್ಯ ಅನೇಕ ಬಾರಿ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಶೋಭಿತಾ ಅಬಿನಯದ ಮೇಜರ್ ಸಿನಿಮಾದ ಪ್ರಮೋಷನ್ ವೇಳೆ ತಂಗಿದ್ದ ಹೋಟೆಲ್‌ನಲ್ಲಿ ನಾಗಚೈತನ್ಯ ಕೂಡ ಜೊತೆಯಲ್ಲಿದ್ದರು ಎಂದು ವರದಿಯಾಗಿದೆ. ಅಲ್ಲದೆ ಇತ್ತೀಚಿಗಷ್ಟೆ ಶೋಭಿತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಾಗಚೈತನ್ಯ ಕೂಡ ಜೊತೆಯಲ್ಲಿದ್ದರು ಎನ್ನಲಾಗಿದೆ. ಈ ಎಲ್ಲಾ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ನಾಗಚೈತನ್ಯ ಅಭಿಮಾನಿಗಳು ಸಮಂತಾ ಮತ್ತು ಅವರ ತಂಡದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೀಗ ಸಮಂತಾ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.