Kiara-Sidharth Wedding; ಶೇರ್ಷಾ ಹಾಡಿಗೆ ಡಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟ ಕಿಯಾರಾ, ವಿಡಿಯೋ ವೈರಲ್

By Shruthi KrishnaFirst Published Feb 10, 2023, 5:52 PM IST
Highlights

ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾಣಿ ಇತ್ತೀಚಿಗಷ್ಟೆ ಅದ್ದೂರಿಯಾಗಿ ಹಸೆಮಣೆ ಏರಿದರು. ಇಬ್ಬರ ಮದುವೆ ವಿಡಿಯೋ ಔಟ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾಣಿ ಇತ್ತೀಚಿಗಷ್ಟೆ ಅದ್ದೂರಿಯಾಗಿ ಹಸೆಮಣೆ ಏರಿದರು. ಅನೇಕ ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದ ಈ ಜೋಡಿ ಶೇರ್ಷಾ ಸಿನಿಮಾ ಬಳಿಕ ಬಹಿರಂಗವಾಯಿತು. ಶೇರ್ಷಾ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇಬ್ಬರೂ ಮದುವೆಯಾಗಿ ಎಂದು ಹಾರೈಸಿದರು. ಅದರಂತೆ ಸಿದ್-ಕಿಯಾರಾ ಹಸೆಮಣೆ ಏರಿದರು.  ಜೈಪುರದ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಅದ್ದೂರಿ ವಿವಾಹವಾದರು. ಇದೀಗ ಮೊದಲ ವಿಡಿಯೋ ಔಟ್ ಆಗಿದ್ದು ಕಿಯಾರಾ ಮಂಟಪಕ್ಕೆ ಎಂಟ್ರಿ ಕೊಡುವ ದೃಶ್ಯ ವೈರಲ್ ಆಗಿದೆ. ಶೇರ್ಷಾ ಹಾಡಿಗೆ ಹೆಜ್ಜೆ ಹಾಕುತ್ತಾ ಕಿಯಾರಾ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸಿದ್ಧಾರ್ಥ್‌ನನ್ನು ತಬ್ಬಿಕೊಂಡರು. ಈ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಅದ್ದೂರಿ ಮದುವೆ

Latest Videos

ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ಮದುವೆ ಫೋಟೋಗಳನ್ನು ರಿವೀಲ್ ಮಾಡುವವರೆಗೂ ಮದುವೆ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಬಳಿಕ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸೂರ್ಯಗಢ ಹೋಟೆಲ್​ನಲ್ಲಿ ಸಿದ್ಧಾರ್ಥ್-ಕಿಯಾರಾ ಮದುವೆ ನಡೆದಿದೆ. ಇಬ್ಬರ ಮದುವೆಗೆ ಬಾಲಿವುಡ್​ನ ಅನೇಕ ಗಣ್ಯರು ಹಾಜರಾಗಿದ್ದರು. ಮದುವೆ ಬಳಿಕ ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರೂ ಫೆಬ್ರವರಿ 7ರ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡರು ಈ ಫೋಟೋಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಅನೇಕರು ಗಣ್ಯರು ಅಭಿನಂದಿಸಿದ್ದಾರೆ. 

ಲವ್ ಮ್ಯಾರೇಜ್

ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರೂ ಪ್ರೀತಿ ಮದುವೆಯಾದವರು. ಅನೇಕ ವರ್ಷಗಳಿಂದ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಶೇರ್‌ಷಾ ಸಿನಿಮಾ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಯಿತು. ಆದರೆ ಇಬ್ಬರೂ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಮದುವೆ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಇಬ್ಬರೂ ಅದ್ದೂರಿಯಾಗಿ ಹಸೆಮಣೆ ಏರುವ ಮೂಲಕ ಪತಿ-ಪತ್ನಿಯರಾಗಿದ್ದಾರೆ. 



ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿಯಾರಾ-ಸಿದ್ಧಾರ್ಥ್‌ ಜೋಡಿಗೆ ಕ್ಷಮೆ ಕೇಳಿದ ರಾಮ್ ಚರಣ್ ಪತ್ನಿ; ಕಾರಣವೇನು?

ಕಿಯಾರಾ ಸಿನಿಮಾಗಳು

ನಟಿ ಕಿಯಾರಾ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಕಿಯಾರಾ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ನಟನೆಯ 15ನೇ ಸಿನಿಮಾದಲ್ಲಿ ಕಿಯಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಈ ಸಿನಿಮಾದೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಇನ್ನು ಕಿಯಾರಾ ಕೊನೆಯದಾಗಿ ಗೋವಿಂದ ನಾಮ್ ಮೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾ ಜೊತೆಗೆ ಹಿಂದಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. 

ಹೆಂಡತಿ ಹೆಸರನ್ನು ಮೆಹೇಂದಿ ಹಾಕಿಸಿಕೊಂಡ ಸಿದ್ಧಾರ್ಥ್; ಮ್ಯಾಚಿಂಗ್‌ ಔಟ್‌ಫಿಟ್‌ನಲ್ಲಿ ಸ್ವೀಟ್‌ ಹಂಚಿದ ಕಿಯಾ-ಸಿದ್ಧ್

ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾಗಳು 

 ಇನ್ನು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ಮಿಷನ್ ಮಜ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದರು. ಸದ್ಯ ಯೋಧ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಪೋರ್ಸ್ ಎನ್ನುವ ವೆಬ್ ಸೀರಿನಲ್ಲಿ ನಟಿಸುತ್ತಿದ್ದಾರೆ.   
 

click me!