ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ; ಚಿತ್ರಮಂದಿರಕ್ಕೆ ಬೆಂಕಿ, ಗಡಿಪಾರು, ಮಲಯಾಳಂ ಮೊದಲ ನಟಿಯ ರೋಚಕ ಪಯಣ

By Shruthi KrishnaFirst Published Feb 10, 2023, 5:14 PM IST
Highlights

ಮಲಯಾಳಂನ ಮೊದಲ ಮಹಿಳಾ ನಾಯಕಿ ಪಿಕೆ ರೋಸಿ 120ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಪಿಕೆ ರೋಸಿಯ ರೋಚಕ ಸಿನಿಮಾ ಪಯಣ ಇಲ್ಲಿದೆ.

ಮಲಯಾಳಂ ಸಿನಿಮಾರಂಗದ ಮೊದಲ ಮಹಿಳಾ ನಾಯಕಿ, ಮಾಲಿವುಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಪಿಕೆ ರೋಸಿ ಅವರ ಜನ್ಮದಿನ. ರೋಸಿ ಅವರ 120ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಪಿ.ಕೆ ರೋಸಿ ಫೆಬ್ರವರಿ 10, 1903 ರಂದು ಕೇರಳದ ತಿರುವನಂತಪುರನಲ್ಲಿ ಜನಿಸಿದರು. ಮೊದಲ ಮಹಿಳಾ ನಾಯಕಿಯಾಗಿ ಮಿಂಚುವ ಜೊತೆಗೆ ಅನೇಕ ನಟಿಯರಿಗೆ ಸಿನಿಮಾರಂಗಕ್ಕೆ ದಾರಿ ತೋರಿದವರು. 

ಪಿಕೆ ರೋಸಿ, 1903 ರಂದು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ರಾಜಮ್ಮ ಆಗಿ ಜನಿಸಿದರು. ಬಾಲ್ಯದಲ್ಲೇ ಕಲೆಯ ಬಗ್ಗೆ ಆಪರ ಆಸಕ್ತಿ ಅದರಲ್ಲೂ ವಿಶೇಷವಾಗಿ ನಟನೆ ಎಂದರೆ ತುಂಬಾ ಪ್ರೀತಿ. ವಿನಮ್ರ ಕುಟುಂಬದ ಹಿನ್ನೆಲೆಯಿಂದ ಬಂದ ರೋಸಿಗೆ ಚಿತ್ರರಂಗ ಎಂಟ್ರಿ ಅಷ್ಟು ಸುಲಭವಾಗಿರಲಿಲ್ಲ. ಚಿಕ್ಕವಳಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅನೇಕ ಕಷ್ಟಗಳ ನಡುವೆಯೂ ಪಿಕೆ ರೋಸಿ ಕಲೆಯ ಮೇಲಿನ ಆಸಕ್ತಿ ಕಳೆದುಕೊಂಡಿಲ್ಲ, ಸಂಗೀತದ ಮೇಲಿನ ಪ್ರೀತಿ ಕಮ್ಮಿ ಆಗಿಲ್ಲ. 

ಚಿತ್ರರಂಗ ಎಂಟ್ರಿ

ಮಲಯಾಳಂ ಚಿತ್ರರಂಗದ ಪಿತಾಮಹ ಎಂದೇ ಕರೆಯಲ್ಪಡುವ ಜೆಸಿ ಡೇನಿಯಲ್, 1920 ರ ದಶಕದ ಉತ್ತರಾರ್ಧದಲ್ಲಿ ತಮ್ಮ 'ವಿಗತಕುಮಾರನ್' ಚಿತ್ರಕ್ಕೆ ನಾಯಕಿ ಹುಡುಕುತ್ತಿದ್ದರು. ನಿರ್ದೇಶಕ ಜೆಸಿ ಡೇನಿಯಲ್ ಸ್ನೇಹಿತ ಹಾಗೂ ಆ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದ ಜಾನ್ಸನ್, ರೋಸಿಯ ಹೆಸರನ್ನು ಸೂಚಿಸಿದರು. ಈ ವಿಚಾರ ರೋಸಿಗೆ ಖುಷಿಗೆ ಪಾರವೇ ಇಲ್ಲದಂತೆ ಆಯಿತು. ಆದರೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಮೊದಲು ರೋಸಿಗೆ ಚಿಂತೆಯಾಯಿತು. ರೋಸಿಯ ಕುಟುಂಬ ಆಗ ಚರ್ಚ್‌ನಲ್ಲಿ ಕೆಲಸ ಮಾಡುತ್ತಿತ್ತು. ನಿರ್ದೇಶಕ ಜೆಸಿ ಡೇನಿಯಲ್ ನೀಡಿದ ವೇತನವು ಉತ್ತಮವಾಗಿರುವುದರಿಂದ ಅವಳನ್ನು ಸಿನಿಮಾದಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. 

5 ರೂಪಾಯಿ ಕೂಲಿ 

ಚಿತ್ರದಲ್ಲಿ ನಟಿಸುವುದು, ಅದರಲ್ಲೂ ಮಲಯಾಳಂನ ಮೊದಲ ಚಲನಚಿತ್ರದಲ್ಲಿ ನಟಿಸುವುದು ಗ್ಲಾಮರಸ್ ಕೆಲಸವಾಗಿರಲಿಲ್ಲ. ಕಾರವಾನ್‌ಗಳಿರಲಿ ಪಿಕಪ್ ಮತ್ತು ಡ್ರಾಪ್‌ಗಳ ಸೇವೆಯೂ ಇರಲಿಲ್ಲ. ರೋಸಿ ಪ್ರತಿದಿನ ಶೂಟಿಂಗ್ ಸೆಟ್‌ಗೆ ನಡೆದುಕೊಂಡೆ ಬರುತ್ತಿದ್ದರು. ಬೆಳಿಗ್ಗೆ 9ಕ್ಕೆ ಸೆಟ್‌ಗೆ ತಲುಪುತ್ತಿದ್ದರು. ನಟಿಯಾಗಿ  ತನ್ನ ಪಾತ್ರವನ್ನು ನಿರ್ವಹಿಸುವುದು ಅವರ ಕೆಲಸವಾಗಿತ್ತು. ಆದರೆ ರೋಸಿ ಶೂಟಿಂಗ್ ಮುಗಿದ ಬಳಿಕ ಅಡಿಗೆ ಮನೆ ಸ್ವಚ್ಛಗೊಳಿಸುತ್ತಿದ್ದರು, ಪಾತ್ರೆಗಳನ್ನು ತೊಳೆಯುತ್ತಿದ್ದರು. ಬಳಿಕ ರೋಸಿ ಮನೆಗೆ ವಾಪಾಸ್ ಹೋಗುತ್ತಿದ್ದರು. ರೋಸಿ ದಿನಕ್ಕೆ 5 ರೂ. ಪಡೆಯುತ್ತಿದ್ದರು. 

3 ಹಿಂದೂ ಮಕ್ಕಳನ್ನು ತನ್ನ ಮಕ್ಕಳಂತೆ ಬೆಳೆಸಿದ ಮುಸ್ಲಿಂ ಮಹಿಳೆಯ ಹೃದಯಸ್ಪರ್ಶಿ ಕಥೆ ತೆರೆ ಮೇಲೆ

ನಾಯರ್ ಸರೋಜಿನಿಯಾಗಿ ನಟನೆ

ಜೆಸಿ ಡೇನಿಯಲ್ ನಿರ್ದೇಶನದ‘ವಿಗತಕುಮಾರನ್’ ಚಿತ್ರದಲ್ಲಿ ಪಿಕೆ ರೋಸಿ, ನಾಯರ್ ಮಹಿಳೆ ಸರೋಜಿನಿ ಪಾತ್ರದಲ್ಲಿ ಕಾಣಿಸಿಕೊಂಡರು. ಪಿಕೆ ರೋಸಿ ಕ್ಯಾಮರಾ ಮುಂದೆ ಹೇಗೆ ನಟಿಸಬೇಕು ಎಂದು  ಪರಿಣಿತಳಾಗಿರಲಿಲ್ಲ. ಅಲ್ಲದೇ ಯಾರು ಇರಲಿಲ್ಲ. ಜೆಸಿ ಡೇನಿಯಲ್ ಅವರ ನಿರ್ದೇಶನವನ್ನು  ಅನುಸರಿಸ, ತಮ್ಮ ಸಾಮರ್ಥ್ಯಕ್ಕೆ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಿದರು. 

ದಲಿತ ಮಹಿಳೆಯಿಂದ ನಾಯರ್ ಪಾತ್ರ, ರೊಚ್ಚಿಗೆದ್ದ ಜನ ಚಿತ್ರಮಂದಿಕ್ಕೆ ಬೆಂಕಿ 

ತಿರುವನಂತಪುರಂನ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಆದರೆ  ಪಿಕೆ ರೋಸಿ ಅವರನ್ನು ಪ್ರದರ್ಶನ ಸ್ಥಳದಿಂದ ದೂರವಿರುವಂತೆ ಕೇಳಿಕೊಳ್ಳಲಾಯಿತು. ದಲಿತ ಮಹಿಳೆಯಾಗಿದ್ದ ಪಿಕೆ ರೋಸಿ ಸಿನಿಮಾದಲ್ಲಿ ಮೇಲ್ಜಾತಿ ನಾಯರ್ ಮಹಿಳೆಯಾಗಿ ನಟಿಸಿದ್ದರು. ಹಾಗಾಗಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇದರಿಂದ ಜನರು ಆಕ್ರೋಶಗೊಂಡರು. ಅಲ್ಲದೇ ಚಿತ್ರದಲ್ಲಿ ಪಿಕೆ ರೋಸಿ ಕೂದಲಿನ ಮೇಲಿದ್ದ ಹೂವಿಗೆ ನಾಯಕ ಚುಂಬಿಸುವ ದೃಶ್ಯವಿತ್ತು. ಆ ದೃಶ್ಯ ಬರುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಯಿತು. ರೊಚ್ಚಿಗೆದ್ದ ಜನ ಚಿತ್ರಮಂದಿರದ ಪರದೆ ಸುಟ್ಟು ಹಾಕಿದರು. ಅಷ್ಟೆಯಲ್ಲ ಪಿಕೆ ರೋಸಿ ಅವರ ಗುಡಿಸಲನ್ನು ಸುಟ್ಟು ಹಾಕಿದರು.

ಹೊಂಬಾಳೆಯ ಮತ್ತೊಂದು ಸಿನಿಮಾದಲ್ಲಿ ಫಹಾದ್; ಸಿಬಿಐ ಅಧಿಕಾರಿಯಾಗಿ ಕನ್ನಡಿಗರ ಮುಂದೆ 'ಪುಷ್ಪ' ಸ್ಟಾರ್

ಮೊದಲ ಮಹಿಳಾ ನಾಯಕಿ 

ಮೊದಲ ಸಿನಿಮಾಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಯಿತು. ಪಿಕೆ ರೋಸಿಯನ್ನು ರಾಜ್ಯದಿಂದ ಗಡಿಪಾರು ಮಾಡಲು ಒತ್ತಾಯಿಸಲಾಯಿತು. ಪಿಕೆ ರೋಸಿ ಕನ್ಯಾಕುಮಾರಿ ಟ್ರಕ್ ಮೂಲಕ ಪರಾರಿಯಾದರು.  ಬಳಿಕ ಪಿಕೆ ರೋಸಿ ಟ್ರಕ್ ಡ್ರೈವರ್‌ನ ಮದುವೆಯಾಗಿ ಸಿನಿಮಾದಿಂದ ದೂರ ಇದ್ದರೂ ಎನ್ನುವ ಸುದ್ದಿಯೂ ಇದೆ. ಪಿಜೆ ರೋಸಿ ಬಣ್ಣದ ಲೋಕದಿಂದ ಮಾಯವಾದರು. ಆದರೆ ರೋಸಿಯ ನಟನೆ ಉತ್ಸಹ ನೂರಾರು ಮಹಿಳೆಯರಿಗೆ ಸ್ಫೂರ್ತಿಯಾಯಿತು. ಚಿತ್ರರಂಗದ ದಾರಿ ತೆರೆಯಿತು. ಮಹಿಳೆಯರಿಗೆ ಬಣ್ಣದ ಲೋಕದಲ್ಲಿ ಅವಕಾಶ ಇಲ್ಲದ ಸಮಯದಲ್ಲಿ ರೋಸಿ ಎಂಟ್ರಿ ಅನೇಕ ಮಹಿಳೆಯರಿಗೆ ದೈರ್ಯ ನೀಡಿತು. ಇಂದಿಗೂ ಮಲಯಾಳಂ ಸಿನಿಮಾರಂಗ ಪಿಕೆ ರೋಸಿಯನ್ನು ಮೊದಲ ಮಹಿಳಾ ನಾಯಕಿ ಎಂದು ಗೌರವಿಸುತ್ತದೆ, ಗೂಗಲ್ ಡೂಡಲ್ ಮಾಡಿ ಗೌರವಿಸಿದ್ದು ವಿಶೇಷವಾಗಿದೆ.  

click me!