ಇಂದು ಸ್ಯಾಂಡಲ್ವುಡ್ನಲ್ಲಿ ಸಕತ್ ಫೇಮಸ್ ಆಗಿರೋ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು, ಹಿಂದೊಮ್ಮೆ ಕಿಡ್ನಿ ಮಾರಲು ಮುಂದಾಗಿದ್ದರು. ಏನಿದು ಘಟನೆ?
ಸ್ಯಾಂಡಲ್ವುಡ್ (Sandalwood) ಕಂಡ ಅಪರೂಪದ ನಿರ್ದೇಶಕ ರವಿ ಬಸ್ರೂರ್. `ಬಿಲಿಂಡರ್' ಚಿತ್ರದಲ್ಲಿ ನಾಯಕನಾಗಿ ಕೂಡ ನಟಿಸಿದ್ದ ರವಿ ಅವರು, ನಿರ್ದೇಶಕ ಮಾತ್ರವಲ್ಲದೇ ಪ್ರತಿಭಾವಂತ ಸಂಗೀತ ನಿರ್ದೇಶಕ, ಸಂಭಾಷಣಾಕಾರ, ನಿರ್ಮಾಪಕ ಮತ್ತು ಗೀತರಚನಾಕಾರ ಕೂಡ ಹೌದು. ಇವರ ಚಿತ್ರಗಳಲ್ಲಿ ಹಿನ್ನೆಲೆ ಸಂಗೀತಗಳು ಅದ್ಭುತವಾಗಿರುತ್ತದೆ. 1983 ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ರವಿ ಅವರು 2014 ರಲ್ಲಿ ತೆರೆಕಂಡ `ಉಗ್ರಂ' (Ugram) ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವುದರೊಂದಿಗೆ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು. ಇದಕ್ಕೂ ಮೊದಲು ಅಂದರೆ 2012ರಲ್ಲಿ ಅವರು ತಮ್ಮ ಮೊದಲ ಕನ್ನಡ ಆಲ್ಬಮ್ ಪಣ್ಕ್ ಮಕ್ಕಳ್ ಬಿಡುಗಡೆ ಮಾಡಿದರು. ನಂತರ `ಕರ್ವ',`ಮಫ್ತಿ',`ಅಂಜನಿಪುತ್ರ',`ಕಟಕ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ರವಿ ಬಸ್ರೂರು, `ಅಂಜನಿಪುತ್ರ' ಚಿತ್ರದ ಗೀತೆಯೊಂದಕ್ಕೆ ಸೈಮಾ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಇವರಿಗೆ ಲಭಿಸಿದೆ. ನಂತರ ಇವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳಿಗೆ ಲೆಕ್ಕವೇ ಇಲ್ಲ. ಕುಂದಾಪುರ ಕನ್ನಡ ಭಾಷೆಯಲ್ಲಿ `ಗರಗರ ಮಂಡಲ' ಮತ್ತು `ಬಿಲಿಂಡರ್' ಎಂಬ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಕೂಡ ಮಿಂಚಿದ್ದಾರೆ.
2017 ರಲ್ಲಿ ಭಾನಮತಿ ಮತ್ತು ಮಾಟ-ಮಂತ್ರಗಳ ಕುರಿತ ಚಿತ್ರ `ಕಟಕ' ವನ್ನು ನಿರ್ದೇಶಿಸಿ ಕೂಡ ಫೇಮಸ್ ಆದವರು. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ ರವಿ ಬಸ್ರೂರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಹಾಡುಗಳಿಗೂ ಅವರು ಸಂಗೀತ ಸಂಯೋಜಿಸಿದ್ದಾರೆ. ಕೆಜಿಎಫ್ (KGF) ಸಂಗೀತ ನಿರ್ದೇಶನ ಮಾಡಿ ಸಕತ್ ಫೇಮಸ್ ಆದರು.
ಇಷ್ಟೆಲ್ಲಾ ಫೇಮಸ್ ಆಗಿರೋ ರವಿ (Ravi Basrur) ಅವರ ಜೀವನದಲ್ಲಿ ಹಲವಾರು ಕರಾಳ ಘಟನೆಗಳು ನಡೆದಿವೆ. ಬಹುತೇಕ ಯಶಸ್ವಿ ವ್ಯಕ್ತಿಯ ಹಿಂದೆ ನೋವಿನ ಸರಮಾಲೆಯೇ ಇರುತ್ತದೆ. ಅತ್ಯಂತ ಕಡುಬಡತನವನ್ನು ಕಂಡು, ಕಷ್ಟಪಟ್ಟು ದುಡಿದು ಮೇಲಕ್ಕೆ ಬಂದವರೇ ಹೆಚ್ಚು. ಅಂಥವರಲ್ಲಿ ಒಬ್ಬರು ರವಿ ಬಸ್ರೂರ್. ಈಗ ಅವರು ಯಶಸ್ವಿಯ ಉತ್ತುಂಗದಲ್ಲಿ ಇದ್ದಾರೆ. ಇಂದು ಒಂದು ಸಿನಿಮಾಗಾಗಿ ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಅವರು ಈ ಮಟ್ಟಕ್ಕೆ ಬೆಳೆಯಲು ಎದುರಿಸುವ ಸಮಸ್ಯೆಗಳ ಬಗ್ಗೆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮೂರು ಮದುವೆ, ಹಲವರ ಜೊತೆ ಲಿವ್ ಇನ್... ಹೀಗಿದ್ರೂ ಕಮಲ ಹಾಸನ್ ಒಂಟಿಯಾಕೆ?
ಹೌದು. ರವಿ ಬಸ್ರೂರು ಅವರ ಜೀವನದ ಕಥೆ ಬಹಳ ನೋವಿನಿಂದ ಕೂಡಿದೆ. ಕೆಲ ವರ್ಷಗಳ ಹಿಂದೆ ಹಸಿದಾಗ ಊಟ ಮಾಡಲು ಕೂಡ ತಮ್ಮ ಜೇಬಿನಲ್ಲಿ 10 ರೂಪಾಯಿ ಕೂಡ ಇರಲಿಲ್ಲ ಎನ್ನುವುದನ್ನು ಈಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಾವು ಉಳಿಯಲು ಸರಿಯಾದ ನೆಲೆ ಇಲ್ಲದೆಯೆ ಶೌಚಾಲಯದಲ್ಲಿ ಉಳಿದುಕೊಂಡಿರುವ ಬಗ್ಗೆಯೂ ಅವರ ತಿಳಿಸಿದ್ದಾರೆ. ಇದಕ್ಕಿಂತಲೂ ಘನಘೋರವಾದದ್ದು, ಅತ್ಯಂತ ಕಷ್ಟದ ಸಮಯದಲ್ಲಿ ಮನೆ ನಡೆಸುವುದು ಸಾಧ್ಯವೇ ಇಲ್ಲ ಎಂದಾದಾಗ ತಮ್ಮ ಕಿಡ್ನಿಯನ್ನು ಮಾರಲು ನಿರ್ಧರಿಸಿದ್ದು! ನಮ್ಮ ಕುಟುಂಬ ಮೂರ್ತಿ ಕೆತ್ತನೆಯ ಕುಟುಂಬ. ನನಗೆ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ (God Father) ಇರಲಿಲ್ಲ. ಮನೆ ನಿಭಾಯಿಸಲು ಶಿಲ್ಪಿ, ಕಾರ್ಮಿಕ, ಪೇಂಟರ್ ಮತ್ತು ಟೈಲರ್ ಆಗಿಯೂ ಕೆಲಸ ಮಾಡಿದ್ದೆ. ಅದೊಂದು ಸಮಯದಲ್ಲಿ ಮನೆ ನಿರ್ವಹಣೆಯೇ ಕಷ್ಟವಾಯಿತು. ಆಗ ಕಿಡ್ನಿ ಮಾರಲು ನಿರ್ಧರಿಸಿದ್ದೆ ಎಂದು ರವಿ ಹೇಳಿಕೊಂಡಿದ್ದಾರೆ.
ಒಮ್ಮೆ ಪಬ್ನಲ್ಲಿ ಹಾಡಲು ಅವಕಾಶ ಸಿಕ್ಕ ಬಳಿಕ ಆದ ಘೋರ ದುರಂತದ ಕುರಿತೂ ನಟ ಹೇಳಿಕೊಂಡಿದ್ದಾರೆ. ಪಬ್ನಲ್ಲಿ ಹಾಡುವಂತೆ ಕೇಳಿಕೊಂಡಿದ್ದರು. ಬ್ಯಾಂಡ್ ಸಮೇತ ಹೋದಾಗ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು! ಹೇಗೋ ತಪ್ಪಿಸಿಕೊಂಡು ಥಾಣೆ ರೈಲ್ವೇ ನಿಲ್ದಾಣಕ್ಕೆ (Railway Station) ಹೋದೆ. ನನ್ನ ದುರಾದೃಷ್ಟ ಬೆನ್ನ ಹಿಂದೆಯೇ ಬಂದಿತ್ತು. ಅದೇ ಸಮಯದಲ್ಲಿ ಅಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಪೊಲೀಸರು ನನ್ನನ್ನು ಹಿಡಿದರು. ಬಾಂಬ್ಗಾಗಿ ನನ್ನನ್ನು ಶೋಧಿಸಿದರು. ನನ್ನ ಗಿಟಾರ್ ಮತ್ತು ತಬಲಾವನ್ನು ಮುರಿದು ಹಾಕಿದರು. ಅದೃಷ್ಟಕ್ಕೆ ನನ್ನ ಕೀಬೋರ್ಡ್ ಸೇಫ್ ಅಗಿತ್ತು. ಇದರಿಂದ ಭಯಗೊಂಡ ನಾನು ಬಾಂಬೆಯಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಶೌಚಾಲಯದಲ್ಲಿ ಕುಳಿತು ಅಳುತ್ತಿದ್ದೆ. ಇದೇ ಕಾರಣಕ್ಕೆ ಮನೆಯನ್ನು ನಡೆಸಲು ಕಿಡ್ನಿಯನ್ನು ಮಾರಲು ಮುಂದಾಗಿದ್ದೆ ಎಂಬ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ
ಧೈರ್ಯ ಮಾಡಿ ಕಿಡ್ನಿ ಮಾರಲು ಮಂಗಳೂರಿನ ಆಸ್ಪತ್ರೆಗೆ ಹೋದಾಗ ಆಪರೇಷನ್ ಥಿಯೇಟರ್ ನೋಡಿ ಭಯದಿಂದ ಆಸ್ಪತ್ರೆಯಿಂದ ಓಡಿ ಹೋಗಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ನಂತರ ಸಾರ್ವಜನಿಕ ಶೌಚಾಲಯದ ವಾಚ್ ಮ್ಯಾನ್ ಕೆಲಸಕ್ಕೆ ಸೇರಿಕೊಂಡು ನಂತರ ರೇಡಿಯೋ ಸ್ಟೇಷನ್ ನಲ್ಲಿ 15,000 ರೂ.ಗೆ ಕೆಲಸ ಮಾಡಿದ್ದರು. ಅವರ ಸಂಗೀತ ಅವರನ್ನು ಕೈ ಹಿಡಿಯಿತು. ಅರ್ಜುನ್ ಜನ್ಯ ಅವರೊಂದಿಗೆ ಮೊದಲ ಬಾರಿಗೆ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. 2014 ರ 'ಉಗ್ರಂ' (Ugram) ಚಿತ್ರದಲ್ಲಿ ಕೆಲಸ ಮಾಡುವ ಮೊದಲು, 64 ಚಿತ್ರಗಳಿಗೆ ಸಂಗೀತ ಸಂಯೋಜಿಸಿದರು. ಹೀಗೆ ಹಂತಹಂತವಾಗಿ ಮೇಲಕ್ಕೆ ಬಂದು ಇಂದು ಈ ಮಟ್ಟ ತಲುಪಿದ್ದಾರೆ. ಈಗ ಅವರ ಪುತ್ರ ಪವನ್ ಬಸ್ರೂರು ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಕ್ಲಿಕ್ ಸಿನಿಮಾದಲ್ಲಿ ಬಾಲ ನಟನಾಗಿ ಬಣ್ಣ ಹಚ್ಚಿದ್ದಾನೆ.