ತೆರೆಮೇಲೆ ಕಲ್ಪನಾ ಚಾವ್ಲಾ ಬಯೋಪಿಕ್: ಭಾರತದ ಮೊದಲ ಮಹಿಳಾ ಗಗನಯಾತ್ರಿ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟಿ

By Shruthi Krishna  |  First Published Jun 4, 2023, 1:07 PM IST

ತೆರೆಮೇಲೆ ಬರಲು ಸಿದ್ಧವಾಗುತ್ತಿದೆ ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಬಯೋಪಿಕ್. ಕಲ್ಪನಾ ಚಾವ್ಲಾ ಆಗಿ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. 


ಭಾರತದ ಮೊದಲ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಜೀವನ ತೆರೆಮೇಲೆ ತರುವ ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತು ಕಳೆದ ಕೆಲವು ತಿಂಗಳಿಂದ ಮಾತು ಕೇಳಿಬರುತ್ತಿದೆ. ಈಗಾಗಲೇ ಹಿಂದಿಯಲ್ಲಿ ಅನೇಕ ಬಯೋಪಿಕ್‌ಗಳು ಬಂದಿವೆ ಹಾಗೂ ತಯಾರಾಗುತ್ತಿವೆ. ಇದೀಗ ಕಲ್ಪನಾ ಚಾವ್ಲಾ ಬಯೋಪಿಕ್ ಕೂಡ ಸುದ್ದು ಮಾಡುತ್ತಿದೆ. ದುರಂತ ಅಂತ್ಯ ಕಂಡ ಹೆಮ್ಮೆಯ ಭಾರತೀಯಳ ಬಯೋಪಿಕ್‌ನಲ್ಲಿ ಬಾಲಿವುಡ್ ಸ್ಟಾರ್ ನಟಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅದು ಮತ್ಯಾರು ಅಲ್ಲ ಶ್ರದ್ದಾ ಕಪೂರ್.

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕಲ್ಪನಾ ಚಾವ್ಲಾ ಆಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶ್ರದ್ಧಾ ಇತ್ತೀಚೆಗೆ ಕೂದಲಿಗೆ ಕತ್ತರಿ ಹಾಕಿ ತನ್ನ ಲುಕ್ ಬದಲಾಯಿಸಿಕೊಂಡಿದ್ದಾರೆ. ಕಲ್ಪನಾ ಚಾವ್ಲಾ ಹಾಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅನುಮಾನ ದಟ್ಟವಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದು ವೈರಲ್ ಆಗಿದೆ. ಹರಿದಾಡುತ್ತಿರುವ ಪೋಸ್ಟರ್ ಅಧಿಕೃತನ ಅಥವಾ ಎಡಿಟೆಡ್ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ ಕಲ್ಪನಾ ಚಾವ್ಲಾ ಆಗಿ ಶ್ರದ್ಧಾ ಕಾಣಿಸಿಕೊಳ್ಳುತ್ತಿರುವುದು ಬಹುತೇಕ ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. 

Tap to resize

Latest Videos

ಅಕ್ಕಾ ನಿನ್ ಗಂಡ ಹೇಗಿರಬೇಕು? ಶ್ರದ್ಧಾ ಕಪೂರ್ ಹೇಳೋದ ಒಮ್ಮೆ ಕೇಳಿಸಿಕೊಳ್ಳಿ!

ಅಂದಹಾಗೆ ಕಲ್ಪನಾ ಚಾವ್ಲಾ ಬಯೋಪಿಕ್‌ಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಆನಂದ್ ಎಲ್ ರೈ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವೈರಲ್ ಆಗಿರುವ ಪೋಸ್ಟರ್‌ನಲ್ಲಿ ಎಆರ್ ರಹಮಾನ್ ಹೆಸರು ಕೂಡ ಇದೆ. ಕಲ್ಪನಾ ಚಾವ್ಲಾ ಅನ್‌ಟೋಲ್ಡ್ ಸ್ಟೋರಿ ಎಂದು ಟೈಟಲ್ ಇದೆ. ಇನ್ನೂ ವಿಶೇಷ ಎಂದರೆ ಬಾಲಿವುಡ್ ಸ್ಟಾರ್‌ಗಳಾದ ಆಮೀರ್ ಕಾನ್ ಮತ್ತು ಅಭಿಷೇಕ್ ಬಚ್ಚನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. 

ಬಾಹ್ಯಾಕಾಶ ನೌಕೆಗೆ ಕಲ್ಪನಾ ಚಾವ್ಲಾ ಹೆಸರು!

ಶ್ರದ್ಧಾ ಕಪೂರ್ ಕೊನೆಯದಾಗಿ ತು ಜೂಟಿ ಮೈನ್ ಮಕ್ಕರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ರಣಬೀರ್ ಕಪೂರ್ ಜೊತೆ ನಟಿಸಿದ್ದರು. ತು ಜೂಟಿ ಮೈನ್ ಮಕ್ಕರ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿತ್ತು. ಆ ಸಿನಿಮಾ ಬಳಿಕ ಶ್ರದ್ಧಾ ಕಲ್ಪನಾ ಚಾವ್ಲಾ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಶ್ರದ್ಧಾ ಕಪೂರ್ ಸದ್ಯ ಸ್ತ್ರೀ 2 ನಲ್ಲಿ ನಟಿಸುತ್ತಿದ್ದಾರೆ. ಕಲ್ಪನಾ ಚಾವ್ಲಾ ಆಗಿ ಶ್ರದ್ಧಾ ಕಪೂರ್ ತೆರೆಮೇಲೆ ಬರುತ್ತಾರಾ, ಭಾರತದ ಹೆಮ್ಮೆಯ ಪುತ್ರಿ ಕಲ್ಪನಾ ಚಾವ್ಲಾ ಅವರ ಬಗ್ಗೆ ಅಪರೂಪದ ವಿಚಾರಗಳು ಸಿನಿಮಾ ಮೂಲಕ ಅನಾವರಣ ಆಗುತ್ತಾ ಕಾದು ನೋಡಬೇಕಿದೆ. 
 

click me!