KGF 2 ಚಿತ್ರದಲ್ಲಿ ಅಧೀರ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಸಂಜಯ್ ದತ್ ಕ್ಯಾನ್ಸರ್ ನಿಂದ ಅನುಭವಿಸಿದ ಕಷ್ಟವನ್ನು ಬಹಿರಂಗ ಪಡಿಸಿದರು. ಕ್ಯಾನ್ಸರ್ ಎಂದು ಗೊತ್ತಾದ ಬಳಿಕ ಸಂಜಯ್ ದತ್ 2-3 ಗಂಟೆ ಕಾಲ ಗಳಗಳನೆ ಅತ್ತಿದ್ದರಂತೆ. ಈ ಬಗ್ಗೆ ಸಂಜಯ್ ದತ್ ಬಹಿರಂಗ ಪಡಿಸಿದರು.
ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್(Sanjay Dutt) ಇದೀಗ ಅಧೀರನಾಗಿ ಅಬ್ಬರಿಸುತ್ತಿದ್ದಾರೆ. ಕೆಜಿಎಫ್-2 (KGF 2)ಸಿನಿಮಾದ ಅಧೀರ ಪಾತ್ರದ ಸಂಜಯ್ ದತ್ ಮತ್ತೆ ಆರ್ಭಟಿಸುತ್ತಿದ್ದಾರೆ. ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್-2 ಸಿನಿಮಾಗೆ ಬಾಲಿವುಡ್ ನಲ್ಲಿ ಅತೀ ಹೆಚ್ಚು ಬೇಡಿಕೆ ಬರಲು ಕಾರಣಗಳಲ್ಲಿ ಸಂಜಯ್ ದತ್ ಕೂಡ ಒಬ್ಬರು. ರಾಕಿ ಭಾಯ್ ಮತ್ತು ಅಧೀರನ ಫೈಟ್ ನೋಡಿ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ವೇಳೆ ಸಂಜಯ್ ದತ್ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದರು. ಕ್ಯಾನ್ಸರ್ ಎನ್ನುವ ಮಹಾಮಾರಿ ಸಂಜಯ್ ದತ್ ಅವರನ್ನು ಬಿಟ್ಟಿಲ್ಲ. ಕೆಜಿಎಫ್2 ಸಿನಿಮಾ ಚಿತ್ರೀಕರಣ ವೇಳೆಯೇ ಕ್ಯಾನ್ಸರ್ ಇರುವುದು ಗೊತ್ತಾಯಿತು.
ಈ ವಿಚಾರ ಗೊತ್ತಾದ ಬಳಿಕ ಸಂಜಯ್ ದತ್ 2-3ಗಂಟೆಗಳ ಕಾಲ ಗಳಗಳನೇ ಅತ್ತಿದ್ದರಂತೆ. ಈ ಬಗ್ಗೆ ಸಂಜಯ್ ದತ್ ಬಹಿರಂಗ ಪಡಿಸಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿದ ಸಂಜಯ್ ದತ್ ಲಾಕ್ ಡೌನ್ ಸಮಯದಲ್ಲಿ ಕ್ಯಾನ್ಸರ್ ಬಗ್ಗೆ ತಿಳಿದ ಬಳಿಕ ಆರಂಭದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿರುವುದಾಗಿ ಹೇಳಿದರು. 'ಲಾಕ್ ಡೌನ್ ನಲ್ಲಿ ಸಾಮಾನ್ಯ ದಿನವಾಗಿತ್ತು. ನಾನು ಮೆಟ್ಟಿಲು ಹತ್ತುವಾಗ ನನಗೆ ಉಸಿರಾಡಲು ಕಷ್ಟಾಗುತ್ತಿತ್ತು' ಎಂದು ಹೇಳಿದ್ದಾರೆ.
'ನಾನು ಸ್ನಾನ ಮಾಡಿದ ನಂತರ ಸಹ ನನಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಏನಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಅದ್ದರಿಂದ ನಾನು ನನ್ನ ವೈದ್ಯರನ್ನು ಭೇಟಿಯಾದೆ. ಎಕ್ಸ್ ರೇ ಮಾಡಿಸಿದೆ. ನನ್ನ ಶ್ವಾಶಕೋಶದಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ತುಂಬಿಕೊಂಡಿತ್ತು. ಅದನ್ನೆಲ್ಲ ಹೊರಹಾಕಬೇಕಿತ್ತು. ಮೊದಲು ಇದು ಟಿಬಿ ಎಂದು ಭಾವಿಸಿದ್ದರು. ಬಳಿಕ ಗೊತ್ತಾಯಿತು ಇದು ಕ್ಯಾನ್ಸರ್ ಎಂದು. ಇದನ್ನು ಎದುರಿಸುವುದು ಹೇಗೆ ಎನ್ನುವುದು ನನಗೆ ದೊಡ್ಡ ಸಮಸ್ಯೆಯಾಗಿತ್ತು. ಆಗ ನನ್ನ ತಂಗಿ ಬಂದಳು. ನಾನು ನನಗೆ ಕ್ಯಾನ್ಸರ್ ಬಂದಿದೆ. ಈಗ ಏನು? ಮುಂದಿನದನ್ನು ಯೋಚಿಸಿ ಅದು ಮಾಡೋಣ ಇದು ಮಾಡೋಣ ಎಂದು ಯೋಚಿಸುತ್ತಿದ್ದರು. ಆದರೆ ನಾನು ಎರಡು-ಮೂರು ಗಂಟೆಗಳ ಕಾಲ ಅಳುತ್ತಿದ್ದೆ. ಏಕೆಂದರೆ ನಾನು ನನ್ನ ಮಕ್ಕಳು ಮತ್ತು ಹೆಂಡತಿ ಎಲ್ಲದರ ಬಗ್ಗೆ ಯೋಚಿಸುತ್ತಿದೆ. ಬಳಿಕ ನಾನು ಮೊದಲು ವೀಕ್ ಆಗಬಾರದು ಅಂದುಕೊಂಡೆ. ಮೊದಲು ಯುಎಸ್ ಗೆ ಹೋಗಿ ಚಿಕಿತ್ಸೆ ಪಡೆಯಲು ನಿರ್ಧರಿಸಿದೆವು. ಆದರೆ ನಮಗೆ ವೀಸಾ ಸಿಗಲಿಲ್ಲ. ಹಾಗಾಗಿ ಇಲ್ಲೇ ಚಿಕಿತ್ಸೆ ಪಡೆಯಲು ನಿರ್ಮಾನಿಸಿದೆ' ಎಂದು ಸಂಜಯ್ ದತ್ ಹೇಳಿದ್ದಾರೆ.
KGF 2 ಸಂಜಯ್ ದತ್ ವೃತ್ತಿ ಜೀವನದ ವಿಶೇಷ ಸಿನಿಮಾ; ಮಾನ್ಯತಾ ದತ್
ಬಳಿಕ ಯಾರೆಲ್ಲ ಸಹಾಯಕ್ಕೆ ಧಾವಿಸಿದರು ಮತ್ತು ಕುಟುಂಬ ಹೇಗೆ ಬೆಂಬಲಕ್ಕೆ ನಿಂತಿತು ಎಂದು ಸಂಜಯ್ ದತ್ ಬಹಿರಂಗ ಪಡಿಸಿದರು. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರು ಸಂಜಯ್ ಅವರಿಗೆ ವೈದ್ಯರನ್ನು ಹೇಗೆ ಶೀಫಾರಸು ಮಾಡಿದರು ಎಂಬುದನ್ನು ಹಂಚಿಕೊಂಡರು. 'ನನಗೆ ಕೂದಲು ಉದುರುತ್ತದೆ ಎಂದು ಹೇಳಿದರು. ಮತ್ತೆ ವಾಂತಿ ಆಗುತ್ತದೆ ಎಂದರು. ನಾನು ಒಪ್ಪಿಲ್ಲ. ಆಗ ವೈದ್ಯರು ಕೂದಲು ಉದುರುವುದಿಲ್ಲ, ವಾಂತಿ ಆಗಲ್ಲ, ಹಾಸಿಗೆ ಹಿಡಿಯಲ್ಲ ಎಂದರು. ನಾನು ನನ್ನ ಕಿಮೋಥೆರಪಿ ಮಾಡಿಸಿದೆ. ಬಳಿಕ ಹಿಂದಿರುಗಿದೆ. ದುಬೈ ಕೀಮೋ ಮಾಡಿಸಲು ಹೋಗುತ್ತಿದ್ದೆ ನಂತರ ಬ್ಯಾಡ್ಮಿಂಟನ್ ಕೋರ್ಟ್ ಗೆ ಹೋಗಿ ಎರಡು-ಮೂರು ಗಂಟೆಗಳ ಕಾಲ ಆಟ ಆಡುತ್ತಿದ್ದೆ' ಎಂದರು.
KGF 2 Film Review: ನೆತ್ತರಲ್ಲಿ ಬರೆದ ಸುವರ್ಣ ಯುಗದ ಚರಿತ್ರೆ
ಕ್ಯಾನ್ಸರ್ ವಿರುದ್ಧ ಹೋರಾಡಲು ಹೇಗೆ ಶ್ರಮಿಸಿದರು ಎಂದು ಸಂಜಯ ದತ್ ಹೇಳಿದರು. 'ಪ್ರತಿದಿನ ವರ್ಕೌಟ್ ಮಾಡುತ್ತಿದ್ದ ಬಗ್ಗೆಯೂ ಹೇಳಿದ್ದಾರೆ. ಜಿಮ್ ಗೆ ಹೋಗುತ್ತಿದ್ದೇನೆ. ತೂಕವನ್ನು ಇಳಿಸಿಕೊಳ್ಳುತ್ತಿದ್ದೇನೆ. ನಾನು ನನ್ನ ಸ್ನಾಯುಗಳನ್ನು ಮರಳಿ ಪಡೆಯುತ್ತಿದ್ದೇನೆ. ನಾನು ಹಳೆಯ ವ್ಯಕ್ತಿಯಾಗುತ್ತಿದ್ದೇನೆ. ನಿಮಗೆ ಗೊತ್ತಿರುವ ಸಂಜಯ್ ದತ್ ಆಗಲು ನಾನು ಬಯಸುತ್ತಿದ್ದೇನೆ. ನಾನು ನನ್ನನ್ನು ಹೋಗಲು ಬಿಟ್ಟಿದ್ದೇನೆ' ಎಂದು ಹೇಳಿದರು.