
ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ(Shahana) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೇರಳ ಮೂಲದ 20 ವರ್ಷದ ನಟಿ ಶಹಾನಾ ಕೋಝಿಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ(Found Dead in her Kozhikode flat). ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ. ರಾತ್ರಿ 11 ಗಂಟೆಗೆ ಪರಂಬಿಲ್ ಬಜಾರ್ ನಲ್ಲಿರುವ ಬಾಡಿಗೆ ಫ್ಲಾಟ್ ನಲ್ಲಿ ಶಹಾನಾ ಶವ ಕಿಟಕಿಯ ಗ್ರಿಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.
ಚೇವಾಯೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇದು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದಾರೆ. ಸದ್ಯ ಶಹಾನಾ ಪತಿ ಪರಂಬಿಲ್ ಬಜಾರ್ ಮೂಲದ ಸಜಾದ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಜಾದ್ ಮತ್ತು ಶಹಾನಾ ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ನಡೆಯುತ್ತಿತ್ತು ಎನ್ನಲಾಗಿದ್ದು ಕೌಂಟುಬಿಕ ದೌರ್ಜನ್ಯ ಹಗೂ ಕೊಲೆಯ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
Koppal: ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!
ಶಹಾನಾ ಕುಟುಂಬದವರು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಹಾನಾ ತಾಯಿ ನನ್ನ ಮಗಳು ಯಾವಾಗಲೂ ತನ್ನ ಪತಿಯಿಂದ ಕೌಟುಂಬಿಕ ದೌರ್ಜನ್ಯದ ಎದುರಿಸುತ್ತಿದ್ದರು ಎಂದು ದೂರುತ್ತಿದ್ದಳು. ಅವಳು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳು ನಮ್ಮೆಲ್ಲರನ್ನು 20ನೇ ವರ್ಷದ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ್ದಳು ಎಂದು ಹೇಳಿದ್ದಾರೆ.
ನೋಡಲು ಸುಂದರವಾಗಿಲ್ಲ ಅಂತ ಹೆಂಡ್ತಿಗೆ ಕಿರುಕುಳ: ಗಂಡನ ಕಾಟ ತಾಳದೆ ಮಹಿಳೆ ಆತ್ಮಹತ್ಯೆ
ಸದ್ಯ ಶಾಹಾನಾ ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೊ ಎನ್ನುವುದು ಬಹಿರಂಗವಾಗಲಿದೆ. ಶಹಾನಾ ರೂಪದರ್ಶಿಯಾಗಿ ಖ್ಯಾತಿ ಗಳಿಸಿದ್ದರು. ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಹಾನಾ ದೊಡ್ಡ ನಟಿಯಾಗುವ ಕನಸು ಕಂಡದ್ದರು. ಆದರೆ ಕನಸು ನನಸಾಗುವ ಮೊದಲೇ ಸಹಾನಾ ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.