KSRTC ಬಸ್‌ನಲ್ಲಿ ನಟಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಯುವಕನಿಗೆ ಜೈಲಿನ ಬಳಿ ಅದ್ಧೂರಿ ಸ್ವಾಗತ!

By BK Ashwin  |  First Published Jun 4, 2023, 5:56 PM IST

ಕಾರಾಗೃಹದಲ್ಲಿದ್ದ 28 ವರ್ಷದ ಯುವಕನಿಗೆ ಆತ ಜಾಮೀನಿನ ಮೇಲೆ ಬಿಡುಗಡೆಯಾದಾಗ ಚಪ್ಪಾಳೆ ತಟ್ಟಿ ಹಾರ ಹಾಕಿ ಸನ್ಮಾನ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. 


ತಿರುವನಂತಪುರಂ (ಜೂನ್ 4, 2023): ಕೇರಳದಲ್ಲಿ ಬಸ್ಸಿನಲ್ಲಿ ನಟಿಯನ್ನು ನೋಡಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಅದ್ಧೂರಿ ಸ್ವಾಗತ ನೀಡಿರೋ ಘಟನೆ ನಡೆದಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಗೆ ತನ್ನ ಖಾಸಗಿ ಅಂಗ ಪ್ರದರ್ಶಿಸಿದ ಮತ್ತು ಹಸ್ತಮೈಥುನ ಮಾಡಿದ ಆರೋಪದ ಮೇಲೆ ಕಳೆದ ತಿಂಗಳು ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟ ಸವದ್ ಶಾ ಗೆ ಅದ್ಧೂರಿ ಸ್ವಾಗತ ದೊರೆತಿದೆ. 

ನಮ್ಮ ನೆರೆಯ ರಾಜ್ಯದ ಆಲ್ ಕೇರಳ ಪುರುಷರ ಸಂಘ (ಎಕೆಎಂಎ) ಹಾರ ಹಾಕಿ ಆತನನ್ನು ಅದ್ಧೂರಿಯಾಗಿ ಸ್ವಾಗತಿಸಿದೆ ಎಂದು ತಿಳಿದುಬಂದಿದೆ. ಅಲುವಾ ಉಪ ಕಾರಾಗೃಹದಲ್ಲಿದ್ದ 28 ವರ್ಷದ ಯುವಕ ಜಾಮೀನಿನ ಮೇಲೆ ಬಿಡುಗಡೆಯಾದಾಗ ತನ್ನ ಸಂಘಟನೆಯು ಹಾರ ಹಾಕಿ ಸ್ವಾಗತಿಸಲಿದೆ ಎಂದು ಎಕೆಎಂಎ ಅಧ್ಯಕ್ಷ ವಟ್ಟಿಯೂರ್ಕಾವು ಅಜಿತ್ ಕುಮಾರ್ ಶುಕ್ರವಾರ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದರು.

Tap to resize

Latest Videos

ಇದನ್ನು ಓದಿ: Watch: KSRTC ಬಸ್‌ನಲ್ಲಿ ಇಬ್ಬರು ಹುಡುಗಿಯರ ಮಧ್ಯೆಯೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!

Savad Sha got Bail and Grand welcome By his Community members !

Last month (19th May), He was arrested for masturbating while sitting among women on a bus in Kozhikode, Kerala + pic.twitter.com/GtKR0oFsUo

— Ashwini Shrivastava (@AshwiniSahaya)

ಜೈಲಿನ ಹೊರಗೆ ಯುವಕನನ್ನು ಹೂಮಾಲೆ ಹಾಕಿ ಸನ್ಮಾನಿಸಲಾಯಿತು. ಹೊರಗೆ ಬರುತ್ತಿದ್ದ ವೇಳೆ ಚಪ್ಪಾಳೆ ತಟ್ಟಿ ಹಾರ ಹಾಕಿದ ಘಟನೆ ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದು,  ವಿಡಿಯೋದ ವೈರಲ್‌ ಆಗುತ್ತಿದ್ದು, ಹಲವರು ಸಂಘದ ವರ್ತನೆ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದು ಕಮ್ಯೂನಿಸ್ಟ್ ರಾಜ್ಯ ಕೇರಳದಲ್ಲಿ ಮಾತ್ರ ಸಾಧ್ಯ ಎಂದೂ ಟ್ವೀಟ್‌ ಮಾಡುತ್ತಿದ್ದಾರೆ. 

ಘಟನೆಯ ಹಿನ್ನೆಲೆ..
ಕಳೆದ ತಿಂಗಳು ಕೇರಳದ ತ್ರಿಶೂರ್‌ನಿಂದ ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದ್ದು ಸಂಚಲನ ಮೂಡಿಸಿತ್ತು. ಆ ಬಸ್ಸಿನಲ್ಲಿ ನಟಿ ನಂದಿತಾ ಪ್ರಯಾಣಿಸುತ್ತಿದ್ದರು. ಸವದ್ ಶಾ ಎಂಬ ಯುವಕ ಬಂದು ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಮೊದಮೊದಲು ನಂದಿತಾಳೊಂದಿಗೆ ಸಹಜವಾಗಿಯೇ ಮಾತಾಡಿದ. ನೀವು ಎಲ್ಲಿಗೆ ಹೋಗುತ್ತಿದ್ದೀರಿ..? ನಿಮ್ಮ ಪ್ರದೇಶದಲ್ಲಿ ಟ್ರಾಫಿಕ್ ಇದೆಯೇ? ನಾನು ಕೂಡ ಅಲ್ಲಿಗೆ ಹೋಗುತ್ತಿದ್ದೇನೆ. ತಿನ್ನಲು ಒಳ್ಳೆಯ ಅಂಗಡಿ ಯಾವುದು ಎಂದು ಆತ ಕೇಳಿದ. ಆದರೆ ಕೆಲವು ನಿಮಿಷಗಳ ನಂತರ, ಸವದ್‌ ಶಾ ನಂದಿತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ಆರೋಪಿಸಲಾಗಿತ್ತು. 

ಇದನ್ನೂ ಓದಿ: ಮಗನನ್ನು ಕೊಂದು ತಲೆಯ ಭಾಗವನ್ನು ಬೇಯಿಸಿ ತಿಂದ ಕ್ರೂರಿ ತಾಯಿ: ಕಾರಣ ಕೇಳಿದ ಪೊಲೀಸರೇ ಬೆಚ್ಚಿ ಬಿದ್ರು!

ನಟಿಯ ಕಾಲಿನ ಮೇಲೆ ಮೊದಲು ಕೈ ಇಟ್ಟ ಆತ ನಂತರ ಆಕೆಯ ಸೊಂಟದ ಮೇಲೆ ಕೈ ಇಟ್ಟಿದ್ದಾನೆ. ಮಿಸ್‌ ಆಗಿ ಈ ರೀತಿ ಆಗಿರಬಹುದು ಎಂದು ಮೊದಲು ನಟಿ ನಂದಿತಾಗೆ ಅನಿಸಿದ್ರೂ ಆತನ ಮುಂದುವರಿದ ವರ್ತನೆಗೆ ಬೆಚ್ಚಿಬಿದ್ದಿದ್ದಾರೆ. ಆತ ತನ್ನ ಪ್ಯಾಂಟ್‌ ಜಿಪ್‌ ತೆರೆದು ತನ್ನ ಶಿಶ್ನವನ್ನು ಸ್ಪರ್ಶಿಸಿಕೊಂಡಿದ್ದಾನೆ.  ಇದರಿಂದ ಬೆಚ್ಚಿಬಿದ್ದ ನಂದಿತಾ ತಕ್ಷಣ ಕಿಟಕಿ ಪಕ್ಕ ಕುಳಿತು ಫೋನ್ ತೆಗೆದುಕೊಂಡು ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಹಾಕಿದ್ದಾಳೆ.

ಇದನ್ನು ಗಮನಿಸದ ಆತ ಕೆಲವೇ ನಿಮಿಷಗಳಲ್ಲಿ ಶಿಶ್ನವನ್ನು ಹೊರತೆಗೆದಿದ್ದಾನೆ ಎಂದೂ ತಿಳಿದುಬಂದಿದೆ. ನಂತರ ನಟಿ ಕಿರುಚಿಕೊಂಡಿದ್ದು, ಕಂಡಕ್ಟರ್‌ಗೆ ವಿಷಯ ತಿಳಿದು ಆತ ಬಸ್ ನಿಲ್ಲಿಸಿದ್ದಾರೆ. ಬಸ್‌ ನಿಂತಾಗ ಕಂಡಕ್ಟರ್‌ನನ್ನು ತಳ್ಳಿ ಓಡಿ ಹೋಗಿದ್ದರೂ, ಕಂಡಕ್ಟರ್ ಕೊನೆಗೆ ಆತನನ್ನು ಹಿಡಿದು ಒದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಜೈಲು ಸೇರಿದ್ದ ಆತ ನಿನ್ನೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 

ಇದನ್ನೂ ಓದಿ: Bengaluru Crime: 82 ವರ್ಷದ ವೃದ್ಧೆ ಹತ್ಯೆ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾದ ‘ಕಿಂಗ್ ಕೊಹ್ಲಿ’

ಆದರೂ, ಜೈಲಿನ ಹೊರಗೆ ಅವರನ್ನು ಹೂಮಾಲೆ ಹಾಕಿ ಸನ್ಮಾನಿಸಲಾಗಿದೆ. ಚಪ್ಪಾಳೆ ತಟ್ಟಿ ಹಾರ ಹಾಕಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

click me!