ಶಾರುಖ್​ ಚಿತ್ರದಲ್ಲಿ ನಟನೆಗೆ ₹1 ಪಡೆದ ಪಾಕ್​ ನಟ, ವರ್ಷಗಳ ಬಳಿಕ ಕಾರಣ ಬಹಿರಂಗ!

By Suvarna News  |  First Published Jun 4, 2023, 4:23 PM IST

2007ರಲ್ಲಿ ಬಿಡುಗಡೆಗೊಂಡ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಲು ಪಾಕಿಸ್ತಾನದ ನಟ ಜಾವೇದ್​ ಶೇಖ್​ ಒಂದು ರೂಪಾಯಿ ಪಡೆದಿದ್ದು, ಅದರ ವಿಷಯ ಈಗ ಬಹಿರಂಗಗೊಂಡಿದೆ. 
 


ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಚಿತ್ರ ಓಂ ಶಾಂತಿ ಓಂ (Om Shanthi Om) 2007 ರಲ್ಲಿ ಬಿಡುಗಡೆಯಾಯಿತು, ಇದು ಬಾಕ್ಸ್ ಆಫೀಸ್‌ ಚಿಂದಿ ಉಡಾಯಿಸಿತು.  ಕುತೂಹಲದ ಸಂಗತಿ ಎಂದರೆ ಇದು ದೀಪಿಕಾ ಪಡುಕೋಣೆ ಅವರ ಮೊದಲ ಹಿಂದಿ ಚಿತ್ರ. ಈ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.  ಓಂ ಶಾಂತಿ ಓಂ ಚಿತ್ರದಲ್ಲಿ ಶಾರುಖ್ ಖಾನ್​ ಮತ್ತು ದೀಪಿಕಾ ಇಬ್ಬರೂ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಅದೇ ಸಮಯದಲ್ಲಿ, ಪಾಕಿಸ್ತಾನಿ ನಟ ಜಾವೇದ್ ಶೇಖ್ ಕೂಡ ಈ ಚಿತ್ರದ ಭಾಗವಾಗಿದ್ದರು. ಇದರಲ್ಲಿ ಜಾವೇಶ್​ ಶಾರುಖ್​ ಅವರ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಪಾತ್ರದಲ್ಲಿರುವ ಓಂ ಪ್ರಕಾಶ್ ಮಖೀಜಾ (ಶಾರುಖ್ ಖಾನ್) 1970ರ ದಶಕದ ಚಲನಚಿತ್ರೋದ್ಯಮದಲ್ಲಿ ಓರ್ವ ಕೆಳದರ್ಜೆಯ ಕಲಾವಿದನಾಗಿರುತ್ತಾನೆ. ಆತ ಮತ್ತು ಆತನ ಸ್ನೇಹಿತ ಪಪ್ಪು (ಶ್ರೇಯಸ್ ತಲ್ಪಾಡೆ) ಇಬ್ಬರೂ ನಾಯಕ ನಟರಾಗಿ ಯಶಸ್ಸು ಗಳಿಸಲು ಪ್ರಯತ್ನಿಸುತ್ತಿರುತ್ತಾರೆ. ಓಂನ ತಾಯಿಯಾದ ಬೇಲಾ ಮಖೀಜಾ (ಕಿರಣ್ ಖೇರ್), ಸ್ವತಃ ಓರ್ವ ಕೆಳದರ್ಜೆಯ ಕಲಾವಿದೆಯಾಗಿದ್ದು, ತನ್ನ ಮಗನ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹಗಳನ್ನು ನೀಡುತ್ತಿರುತ್ತಾಳೆ. ಆತ ಚಲನಚಿತ್ರ ಕಲಾವಿದೆ ಶಾಂತಿ ಪ್ರಿಯಾಳನ್ನು (ದೀಪಿಕಾ ಪಡುಕೋಣೆ) ಪ್ರೀತಿಸುತ್ತಿರುತ್ತಾನೆ. ಇದು ಚಿತ್ರದ ಕಥಾವಸ್ತು.

ಚಿತ್ರ ಬಿಡುಗಡೆಗೊಂಡು ಹಲವು ವರ್ಷಗಳ ಬಳಿಕ ಕುತೂಹಲದ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಈ ಚಿತ್ರದಲ್ಲಿ ಶಾರುಖ್​ ಅವರ ತಂದೆಯ ಪಾತ್ರದಲ್ಲಿ ನಟಿಸಲು ಜಾವೇದ್​ (Javed Shekh) ಅವರು ಒಂದು ರೂಪಾಯಿಯ ಸಂಭಾವನೆ ಕೇಳಿದ್ದರು ಎನ್ನುವ ವಿಷಯ.   ಸಂದರ್ಶನವೊಂದರಲ್ಲಿ ಮಾತನಾಡಿರುವ  ಜಾವೇದ್ ಶೇಖ್, ' ಶಾರುಖ್ ಖಾನ್ ಮ್ಯಾನೇಜರ್ ನನ್ನ ಬಳಿಗೆ ಬಂದರು. ನೀವು ಒಪ್ಪಂದಕ್ಕೆ ಸಹಿ ಹಾಕಲು ಬಯಸಿದರೆ, ನೀವು ಎಷ್ಟು ಶುಲ್ಕ ವಿಧಿಸುತ್ತೀರಿ ಎಂದು ಹೇಳಿದರು? ನಾನು ಹಣ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಅವರಿಗೆ ಅಚ್ಚರಿಯಾಯಿತು.  ಏಕೆ ಎಂದು ಕೇಳಿದರು. ಶಾರುಖ್ ಖಾನ್ ಅವರ ದೊಡ್ಡ ಚಿತ್ರದಲ್ಲಿ ಅವರ ತಂದೆಯ ಪಾತ್ರದಲ್ಲಿ ನಟಿಸುತ್ತಿರುವುದು ನನಗೆ ಸಂದ ಗೌರವ ಎಂದರು. ಭಾರತದಲ್ಲಿ ಎಷ್ಟೋ ನಟರಿದ್ದಾರೆ, ಯಾರನ್ನಾದರೂ ಕೇಳಿದರೆ ಅವರು ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಆದರೆ ನೀವು ನನ್ನನ್ನು ಆಯ್ಕೆ ಮಾಡಿದರೆ ಅದು ನನಗೆ ಗೌರವದ ವಿಷಯವಾಗಿದೆ ಎಂದು ಹೇಳಿದೆ ಎಂದರು. 

Tap to resize

Latest Videos

ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್​ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ

ಫರಾ ಖಾನ್ ಮತ್ತು ಶಾರುಖ್ ಖಾನ್ ಕಾರಣದಿಂದ ನಾನು ಹಣ ತೆಗೆದುಕೊಳ್ಳುವುದಿಲ್ಲ ಎಂದು ಮ್ಯಾನೇಜರ್‌ಗೆ (Manager)ಹೇಳಿದ್ದೇನೆ ಎಂದು ಅವರು ಹೇಳಿದರು. 'ಅದಕ್ಕೆ ಮ್ಯಾನೇಜರ್​ ಒಪ್ಪಲಿಲ್ಲ. ಕಂಪೆನಿಯ ಕೆಲವು ನಿಯಮಗಳಿರುವುದರಿಂದ ಹೀಗೆ ಉಚಿತವಾಗಿ ಸಾಧ್ಯವಾಗುವುದಿಲ್ಲ  ಸಾರ್ ಎಂದರು. ಆಗ ನಾನು ಬೇರೆ ದಾರಿ ಕಾಣದೇ ಶಾರುಖ್ ಅವರಿಗೆ ತಿಳಿಸಿ, ನಾನು ಇದಕ್ಕೆ  ಒಂದು ರೂಪಾಯಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದೆ. ನೀವು ಒಪ್ಪಂದದಲ್ಲಿ ಏನಾದರೂ ಬರೆಯಲು ಬಯಸಿದರೆ, ಅದರಲ್ಲಿ ಒಂದು ರೂಪಾಯಿ ಬರೆಯಿರಿ ಎಂದೆ.  ಅವರು ಶಾರುಖ್ ಖಾನ್ ಬಳಿಗೆ ಹೋಗಿ ಹೇಳಿದರು. ಆದರೆ ಅವರಿಂದ ಬಂದ ಚೆಕ್​ ನೋಡಿ  ನೋಡಿ ಆಶ್ಚರ್ಯವಾಗಿ ಹೋಯಿತು. ಹೆಚ್ಚಿನ ಮೊತ್ತ ನೀಡಿದ್ದರು' ಎಂದಿರೋ  ಜಾವೇದ್ ಶೇಖ್ ಎಷ್ಟು ಹಣ ಎಂದು ರಿವೀಲ್​ ಮಾಡಲಿಲ್ಲ. ಆದರೆ ಒಂದು ರೂಪಾಯಿ ಕೇಳಿರುವುದಕ್ಕೆ ಪರ-ವಿರೋಧ ಚರ್ಚೆ ಶುರುವಾಗಿದೆ. ಶಾರುಖ್​ ಚಿತ್ರದಲ್ಲಿ ಪಾಕಿಸ್ತಾನದ ನಟ ಏಕೆ ಬಂದ ಎಂದು ಕೆಲವರು ಕೇಳಿದರೆ, ಒಂದು ರೂಪಾಯಿ ಕೇಳಿ ಬಾಲಿವುಡ್​ಗೆ ಅವಮಾನ ಮಾಡಲಾಗಿದೆ ಎಂದಿದ್ದಾರೆ. ಕೆಲವರು ಶಾರುಖ್​ ಅವರ ತೇಜಸ್ಸನ್ನು ಹೊಗಳಿದ್ದಾರೆ.
 
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಓಂ ಶಾಂತಿ ಓಂ ಚಿತ್ರವನ್ನು ಫರಾ ಖಾನ್ ನಿರ್ದೇಶಿಸಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಚಿತ್ರವಾಗಿತ್ತು. ಈ ಹಿಂದೆ, ಜಾವೇದ್ ಶೇಖ್ ಫರಾ ಖಾನ್ ಅವರ ಪತಿ ಶಿರಿಶ್ ಕುಂದರ್ ಅವರ ಜಾನೆಮನ್ (2006) ಚಿತ್ರದಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ, ಅವರು 'ನಮಸ್ತೆ ಲಂಡನ್', 'ಜನ್ನತ್', 'ಮೈ ನೇಮ್ ಈಸ್ ಆಂಥೋನಿ ಗೊನ್ಸಾಲ್ವಿಸ್', 'ಯುವರಾಜ್' ಮತ್ತು 'ತಮಾಶಾ' ಮುಂತಾದ ಅನೇಕ ಬಾಲಿವುಡ್ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ ತೋರಿಸಿದ್ದಾರೆ.

Sara Ali Khan: ಬಾಯ್​ಫ್ರೆಂಡ್​ ಶುಭ್​ಮನ್​ ಗಿಲ್​ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ

click me!