
ಇದಾಗಲೇ ಹಲವಾರು ನಟಿಯರು ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಸಿನಿ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಕುರಿತು ಭಯಾನಕ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಇದೀಗ ಬಹುಭಾಷಾ ತಾರೆ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಕಾಲೇಜಿಗೆ ಹೋಗುವ ಸಮಯದಲ್ಲಿ ರಸ್ತೆಯ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಕೀರ್ತಿ ಸುರೇಶ್ ಕಡಿಮೆ ಅವಧಿಯಲ್ಲಿ ತಮಿಳು ಚಿತ್ರರಂಗದ ಅಭಿಮಾನಿಗಳಲ್ಲಿ ಸ್ಥಿರವಾದ ಸ್ಥಾನವನ್ನು ಸ್ಥಾಪಿಸಿದ್ದಾರೆ. ಅವರು 2000 ರಲ್ಲಿ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ಬಾಲತಾರೆಯಾಗಿ ಪದಾರ್ಪಣೆ ಮಾಡಿದರು ಮತ್ತು ನಂತರ ನಾಯಕಿಯಾದರು. ಆಕೆಯ ಚೊಚ್ಚಲ ಮಲಯಾಳಂ ಚಲನಚಿತ್ರೋದ್ಯಮದಲ್ಲಿದ್ದರೂ, ತಮಿಳು ಚಿತ್ರಗಳು ಅವರನ್ನು ಅಭಿಮಾನಿಗಳಲ್ಲಿ ಹೆಚ್ಚು ಗುರುತಿಸುವಂತೆ ಮಾಡಿತು. ವಿಕ್ರಮ್ ಪ್ರಭು ಅವರ 'ಇದು ಎನ್ನ ಮಾಯಂ' ಅವರ ಚೊಚ್ಚಲ ಚಿತ್ರವು ಫ್ಲಾಪ್ ಆಗಿತ್ತು... ನಂತರದ ರಜನಿ ಮುರುಗನ್ ಮತ್ತು ಶಿವಕಾರ್ತಿಕೇಯನ್ ಜೊತೆಗಿನ ರೆಮೋ ಚಿತ್ರಗಳು ಅವರನ್ನು ಮುಂಚೂಣಿಗೆ ತಂದವು.
ನಟಿ ಕೀರ್ತಿ ಸುರೇಶ್ ಮಹಿಳಾ ಕ್ರಿಕೆಟ್‌ನ ಬ್ರ್ಯಾಂಡ್ ಅಂಬಾಸಿಡರ್: ಭಾರತ vs ಆಸ್ಟ್ರೇಲಿಯಾ ಟಿಕೆಟ್ ಮಾರಾಟ
ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕೀರ್ತಿ ಸುರೇಶ್ ಅವರು ಮಹಿಳಾ ಕ್ರಿಕೆಟ್‌ನ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ದೇವರ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದರ ಪ್ರಯತ್ನವಾಗಿ, ಜನಪ್ರಿಯ ದಕ್ಷಿಣ ಭಾರತದ ತಾರೆಯಾಗಿರುವ ಕೀರ್ತಿ ಅವರಿಗೆ ಈ ಪಟ್ಟವನ್ನು ನೀಸಲಾಗಿದೆ. ಇದೇ 26 ರಂದು ತಿರುವನಂತಪುರದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ T20I ಗೆ ಆನ್‌ಲೈನ್ ಟಿಕೆಟ್ ಮಾರಾಟವನ್ನು ಕೀರ್ತಿ ಸುರೇಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ, ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತಮ್ಮ ಜೀವನದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನಡುರಸ್ತೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಕುಡುಕ ತನ್ನ ಮೇಲೆ ಒರಗಿ ತಮ್ಮ ಮೈ ಮೇಲೆ ಕೈ ಹಾಕಿದ ಎಂದು ಹೇಳಿದ್ದಾರೆ. ನಾನು ಏಕಾಏಕಿ ಆಘಾತಕ್ಕೆ ಒಳಗಾದೆ. ಅದನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂದು ಹೆದರಿ ಬಿಟ್ಟೆ. ನಂತರ ಧೈರ್ಯ ತಂದುಕೊಂಡು ಆತನ ಕೆನ್ನೆಗೆ ಹೊಡೆದೆ ಎಂದು ತಿಳಿಸಿದ್ದಾರೆ. ನಂತರ ಪ್ರತಿದಿನ ಹೇಗೆ ಭಯದಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ ಎಂದೂ ತಿಳಿಸಿದ್ದಾರೆ.
ಇನ್ನು ಕೀರ್ತಿ ಅವರ ಸಿನಿಮಾದ ಕುರಿತು ಹೇಳುವುದಾದರೆ, ಇವರು ನಟಿಸಿದ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ದೊಡ್ಡ ಸಕ್ಸಸ್‌ಗೆ ಕಾಯುತ್ತಿದ್ದ ಕೀರ್ತಿಗೆ ಮಾಮನ್ನನ್ ಸಿನಿಮಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದರು. ತಮಿಳಿನ ಮಾಮನ್ನನ್ ಸಿನಿಮಾ ಸಕ್ಸಸ್ ಆಗಿದ್ದು ಕೀರ್ತಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಸೌತ್ ಸುಂದರಿ ಬಾಲಿವುಡ್‌ಗೆ ಹಾರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಹಿಂದಿ ಸಿನಿಮಾ ಮಾಡಬೇಕು ಎನ್ನುವುದು ಕೀರ್ತಿ ಸುರೇಶ್ ಅವರ ಆಸೆಯಾಗಿತ್ತು. ಉತ್ತಮ ಪಾತ್ರಕ್ಕಾಗಿ ಕೀರ್ತಿ ಎದುರು ನೋಡುತ್ತಿದ್ದರು. ಅದರಂತೆ ಈಗ ಬಾಲಿವುಡ್‌ಗೂ ಜಿಗಿದಿದ್ದಾರೆ. ತಮ್ಮಿಷ್ಟದ ಪಾತ್ರ ಸಿಕ್ಕಿದ ಕಾರಣ ಕೀರ್ತಿ ಧೈರ್ಯವಾಗಿ ಹಿಂದಿಗೆ ಹಾರಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಇದೀಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಂದಹಾಗೆ ಈ ಚಿತ್ರದ VD18. 2024ರ ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಮೊದಲನೆ ನಾಯಕಿಯಾಗಿ ಕೀರ್ತಿ ಆಯ್ಕೆಯಾಗಿದ್ದಾರೆ.
ಕರೀನಾ ಮನೆಯಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಗಂಡಂದಿರ ಫೋಟೋ! ಬಯಲಾಯ್ತು ಗುಟ್ಟು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.