ಮದ್ವೆಯಾದ್ರೂ ಎಕ್ಸ್​ ಬಾಯ್​ಫ್ರೆಂಡ್​ ಜತೆಗಿನ ಸವಿಸವಿ ನೆನಪು ಮೆಲುಕು ಹಾಕಿದ್ರು ಈ ಬಾಲಿವುಡ್​ ನಟಿಯರು!

By Suvarna News  |  First Published Nov 23, 2023, 1:35 PM IST

ನಟಿಯರಾದ ಆಲಿಯಾ ಭಟ್​ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮಾಜಿ ಬಾಯ್​ಫ್ರೆಂಡ್​ಗಳ ಜೊತೆಗಿನ ಸವಿಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರು ಹೇಳಿದ್ದೇನು?
 


ಮೊದಲ ಪ್ರೀತಿ ಮರೆಯಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಇನ್ನು ನಟ-ನಟಿಯರ ವಿಷಯಕ್ಕೆ ಬರುವುದಾದರೆ ಇವರ ಪೈಕಿ ಹಲವರಿಗೆ ತಮ್ಮ ಮೊದಲ ಪ್ರೀತಿ ಯಾವುದು ಎಂದು ತಿಳಿಯುವುದು ಕಷ್ಟವೇ. ಏಕೆಂದರೆ ಡೇಟಿಂಗ್​, ಸಂಬಂಧ, ಲಿವ್​-ಇನ್​, ಬ್ರೇಕಪ್​ ಎಲ್ಲವೂ ಇಲ್ಲಿ ಮಾಮೂಲು. ಇದರ ಹೊರತಾಗಿಯೂ ಆಗಾಗ್ಗೆ ನಟರು ತಮ್ಮ ಹಳೆಯ ಬಾಯ್​ಫ್ರೆಂಡ್, ಗರ್ಲ್​ಫ್ರೆಂಡ್ಸ್​ಗಳನ್ನು ನೆನಪು ಮಾಡಿಕೊಳ್ಳುವುದು ಇದೆ. ಅದೇ ರೀತಿ ಇದೀಗ ನಟಿಯರಾದ ಅನುಷ್ಕಾ ಶರ್ಮಾ ಮತ್ತು  ಕಾಫಿ ವಿತ್​ ಕರಣ್​ ಷೋನಲ್ಲಿ ಎಕ್ಸ್​ಗಳ ನೆನಪು ಮೆಲುಕು ಹಾಕಿದ್ದಾರೆ. 

ಅನುಷ್ಕಾ ಶರ್ಮಾ ಅವರ ವಿಷಯಕ್ಕೆ ಬರುವುದಾದರೆ, ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರನ್ನು ಮದುವೆಯಾಗುವ ಮುನ್ನ ಇವರ ಹೆಸರು ಕೆಲವರ ಜೊತೆ ಥಳಕು ಹಾಕಿಕೊಂಡಿದ್ದರೂ, ಹೆಚ್ಚಾಗಿ ಕೇಳಿಬಂದದ್ದು, ನಟ ರಣವೀರ್ ಸಿಂಗ್ ಜೊತೆ. ಇದೀಗ ರಣವೀರ್​ ದೀಪಿಕಾ ಪಡುಕೋಣೆ ಜೊತೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರೂ, ಅನುಷ್ಕಾ ಆ ದಿನಗಳನ್ನು ಕರಣ್​ ಷೋನಲ್ಲಿ ಮೆಲುಕು ಹಾಕಿದ್ದಾರೆ. ಈ ಷೋ ಸಮಯದಲ್ಲಿ ಅನುಷ್ಕಾ ಅವರ ಹಳೆಯ ವಿಡಿಯೋ ಒಂದನ್ನು ಪ್ರದರ್ಶಿಸಲಾಯಿತು. ಅದರಲ್ಲಿ ಅವರು ತಮ್ಮ ಮತ್ತು ರಣವೀರ್​ ಸಿಂಗ್​ ಅವರ ಸಂಬಂಧದ ಕುರಿತು ಮಾತನಾಡಿದ್ದಾರೆ.  ಇವರಿಬ್ಬರೂ  2010 ರ ಚಲನಚಿತ್ರ ಬ್ಯಾಂಡ್ ಬಾಜಾ ಬಾರಾತ್​ನಲ್ಲಿ ನಟಿಸಿದ್ದರು. ಇದಾದ ಬಳಿಕ ತಾವು  ರಣವೀರ್ ಸಿಂಗ್​ ಜೊತೆ ಎಂದಿಗೂ ಡೇಟಿಂಗ್ ಮಾಡದಿರಲು ನಿರ್ಧರಿಸಿರುವುದಾಗಿ ಅನುಷ್ಕಾ ಹೇಳಿದ್ದರು.    ರಣವೀರ್ ಬಾಯ್ ಫ್ರೆಂಡ್ ಆಗಲು ಸಾಧ್ಯವಿಲ್ಲ. ಅವರು 'ಕಠಿಣ ಪರಿಶ್ರಮಿ ಮತ್ತು 'ಉತ್ತಮ' ವ್ಯಕ್ತಿಯಾಗಿದ್ದರೂ, ಬಾಯ್​ಫ್ರೆಂಡ್​​ ಆಗಲು ಸಾಧ್ಯವಿಲ್ಲ ಎಂದಿದ್ದರು. ಉದ್ಯಮದಲ್ಲಿ ಅವರು ದೊಡ್ಡ ಹೆಸರು ಮಾಡಬೇಕು, ಆದ್ದರಿಂದ ಅವರ ಜೊತೆ ಡೇಟಿಂಗ್​ ಮಾಡಲ್ಲ ಎಂದಿದ್ದರು. ಅವರು ಉದ್ಯಮದಲ್ಲಿ ಬಹುದೊಡ್ಡ ವ್ಯಕ್ತಿಯಾಗಲು ನನ್ನ ಸಹಕಾರ ಅಗತ್ಯವಿದೆ. ಆದ್ದರಿಂದ ಈಗಲೇ ಅವರಿಗೆ ಡೇಟಿಂಗ್​ ಎಂದೆಲ್ಲಾ ತಲೆಕೆಡಿಸುವುದಿಲ್ಲ ಎಂದಿದ್ದರು.

Tap to resize

Latest Videos

ಕರೀನಾ ಮನೆಯಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಗಂಡಂದಿರ ಫೋಟೋ! ಬಯಲಾಯ್ತು ಗುಟ್ಟು...
  
ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆ ಕೊಟ್ಟವರು ನಟಿ ಆಲಿಯಾ ಭಟ್​. ಕಾಫಿ ವಿತ್​ ಕರಣ್​ನಲ್ಲಿ  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಹೊಸ ಅತಿಥಿಗಳಾಗಿದ್ದರು. ಆ ಸಮಯದಲ್ಲಿ ಆಲಿಯಾ ಭಟ್​ ಮಾತನಾಡಿದ ವಿಡಿಯೋ ಒಂದನ್ನು ಪ್ಲೇ ಮಾಡಲಾಯಿತು. ಅದರಲ್ಲಿ  ಆಲಿಯಾ ವರುಣ್ ಮತ್ತು ಸಿದ್ಧಾರ್ಥ್ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ಸಿದ್ಧಾರ್ಥ್​ ನನ್ನ  ಜೀವನದ ಮೊದಲ ಪ್ರೀತಿಯಾಗಿದ್ದು, ಈ ಪ್ರೀತಿಯನ್ನು ನೀಡಿದ್ದಕ್ಕಾಗಿ  ಧನ್ಯವಾದ ಎಂದರು. ಅವನು ತುಂಬಾ ಉಲ್ಲಾಸಭರಿತನಾಗಿದ್ದ, ಧೈರ್ಯಶಾಲಿಯಾಗಿದ್ದ ಎಂದು ಸಿದ್ಧಾರ್ಥ್​ ಅವರನ್ನು ಆಲಿಯಾ ಹಾಡಿ ಹೊಗಳಿದರು.  "ಸಿದ್ ನಿಜವಾಗಿಯೂ ಒಳ್ಳೆಯ ಗಾಯಕ. ಅವನು ತುಂಬಾ ಆರೋಗ್ಯವಂತ ವ್ಯಕ್ತಿ, ಆದ್ದರಿಂದ ಅವನು ಪಾರ್ಟಿಯನ್ನು ಮಾಡುವುದಿಲ್ಲ.  ಅವನು  ಅಂತರ್ಗತವಾಗಿರುವ ಪಂಜಾಬಿ. ಅದು ಹೇಗೆ ಎಂದು ಅವನಿಗೆ ತಿಳಿದಿದೆ. ತುಂಬಾ ಒಳ್ಳೆಯ ಮನುಷ್ಯ ಎಂದರು.
 
ಮತ್ತಷ್ಟು ಸಿದ್ಧಾರ್ಥ್​ ಬಗ್ಗೆ ಹೊಗಳಿದ ಆಲಿಯಾ, ಆತ ತುಂಬಾ ಧೈರ್ಯಶಾಲಿ, ತುಂಬಾ ಒಳ್ಳೆಯ ನಡತೆ,  ಕರುಣಾಮಯಿ. ಅದಕ್ಕಾಗಿಯೇ ಆತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾನೆ. ನಾನು ಸಿಧ್​ಗೆ ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಅವನು ನನ್ನ ಜೀವನದ ಮೊದಲ ಪ್ರೀತಿಯನ್ನು ಕೊಟ್ಟಿದ್ದಾನೆ ಎಂದರು.

Wedding Anniversary: ವಿವಾಹಿತ ರಾಜ್​ ಕುಂದ್ರಾ ಮೇಲೆ ಶಿಲ್ಪಾಗೆ ಹುಟ್ಟಿತ್ತು ಮೋಹ: ಆ ಭೇಟಿ ಕಾಮಕ್ಕೆ ತಿರುಗಿತ್ತು ಎಂದ ನಟಿ!

click me!