Katrina Kaif Wedding: ನಿಮ್ ಪಾಸ್ವರ್ಡ್ VicKat ಮದ್ವೆ ಥರ ಸೀಕ್ರೆಟ್ ಆಗಿಡಿ, ದೆಹಲಿ ಪೊಲೀಸರ ಪೋಸ್ಟ್

Suvarna News   | Asianet News
Published : Dec 11, 2021, 11:10 AM ISTUpdated : Dec 11, 2021, 11:21 AM IST
Katrina Kaif Wedding: ನಿಮ್ ಪಾಸ್ವರ್ಡ್ VicKat ಮದ್ವೆ ಥರ ಸೀಕ್ರೆಟ್ ಆಗಿಡಿ, ದೆಹಲಿ ಪೊಲೀಸರ ಪೋಸ್ಟ್

ಸಾರಾಂಶ

Katrina Kaif Wedding: ಬಾಲಿವುಡ್ ಜೋಡಿ ಮದುವೆ ಬ್ಗಗೆ ದೆಹಲಿ ಪೊಲೀಸ್ ಟ್ವೀಟ್ ಅಬ್ಬಾ ಎಷ್ಟು ಸೀಕ್ರೆಟ್ ಆಗಿಟ್ಟರು ಮದುವೆ ? ದೆಹಲಿ ಪೊಲೀಸರು ಶಾಕ್

ಕತ್ರೀನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ ಮದುವೆ ಬಗ್ಗೆ ಎಲ್ಲೆಡೆ ಮಾತು. ಎಷ್ಟು ಅಂದರೆ ಬಾಲಿವುಡ್ ಜೋಡಿಯ ಮದುವೆಯಿಂದ ದೆಹಲಿ ಪೊಲೀಸರೂ ಕೂಡಾ ಪ್ರಭಾವಿತರಾಗಿದ್ದಾರೆ. ಸ್ಟಾರ್ ಕಪಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಜೋಡಿ ಜೈಪುರಕ್ಕೆ ಹೋಗುವ ತನಕವೂ ಇವರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಬಗ್ಗೆ ಯಾವುದೇ ಖಚಿತ ಮಾಹಿತಿ ಇರಲಿಲ್ಲ. ಅಂತೂ ಈ ಜೋಡಿ ಸತಿಪತಿಗಳಾಗಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರ ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗಿದೆ. ಏನದು ಟ್ವೀಟ್ ? ಅದರಲ್ಲಿ ಮದುವೆ ಕುರಿತು ಏನಿದೆ ?

ಬಾಲಿವುಡ್ ಜೋಡಿಯ ಅದ್ಧೂರಿ ಮದುವೆ ವಿಚಾರವಾಗಿ ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದು ಸಾರ್ವಜನಿಕರಿಗೆ ಒಂದು ಸಲಹೆಯನ್ನು ಕೊಟ್ಟಿದ್ದಾರೆ. ಬಾಲಿವುಡ್ ಜೋಡಿ ಕತ್ರೀನಾ ಹಾಗೂ ವಿಕ್ಕಿ ಕೌಶಲ್ ಮದುವೆಯಂತೆ ನಿಮ್ಮ ಪಾಸ್ವರ್ಡ್‌ಗಳನ್ನು ಸೀಕ್ರೆಟ್ ಆಗಿಡಿ ಎಂದು ಬರೆದಿದ್ದಾರೆ. ವಿಕ್ಕಿ ಕತ್ರೀನಾ ಮದುವೆ ಸೆಕ್ಯುರಿಟಿ ಬಗ್ಗೆ ಸಾವಿರಾರು ಮೆಮ್ಸ್ ಹರಿದಾಡುತ್ತಿದ್ದು ಈ ಸಾಲಿಗೆ ದೆಹಲಿ ಪೊಲೀಸರ ಟ್ವೀಟ್ ಕೂಡಾ ಸೇರಿದೆ. ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಹೆಲೋ ಜನರೇ, ನಿಮ್ಮ ಪಾಸ್ವರ್ಡ್‌ಗಳನ್ನು #vickat ಮದುವೆ ತರ ಸೀಕ್ರೆಟ್ ಆಗಿಡಿಎ ಎಂದಿದ್ದಾರೆ.

ಕತ್ರೀನಾ ಉಟ್ಟ ಸೀರೆ ಬೆಲೆಯಲ್ಲಿ ಒಂದು ಸಿಂಪಲ್ ಮದ್ವೇನೇ ಮಾಡ್ಬೋದು

ಪೊಲೀಸ್ ಇಲಾಖೆ ಎಂದರೆ ಬಹಳ ಗಂಭೀರ, ಕಟ್ಟುನಿಟ್ಟು ಎಂದು ಅಂದುಕೊಳ್ಳಲಾಗಿದೆಯಾದರೂ ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಇಲಾಖೆಯೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿವೆ. ಜನರಲ್ಲಿ ಜಾಗೃತಿ ಮೂಡಿಸಲು, ಸೂಚನೆಗಳನ್ನು ಕೊಡಲು ತಮಾಷೆಯ ಮಾರ್ಗಗಗಳನ್ನು ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದ್ದು ಕಡಿಮೆ ಅತಿಥಿಗಳಷ್ಟೇ ಭಾಗಿಯಾಗಿದ್ದರು. ಒಂದು ವಾರ ಕಳೆದು ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಶನ್ ನಡೆಸಲಿದ್ದಾರೆ ಈ ಜೋಡಿ.

ವಿಡಿಯೋ, ಫೋಟೋಸ್‌ಗೆ ಡಿಮ್ಯಾಂಡ್

ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ವಿವಾಹವಾದ ಜೋಡಿಯ ಮದುವೆಯ ಫೋಟೋ ವಿಡಿಯೋ ಕವರೇಜ್, ಪ್ರಸಾರಕ್ಕಾಗಿ OTT ಪ್ಲಾಟ್‌ಫಾರ್ಮ್‌ನಿಂದ 100 ಕೋಟಿ ರೂಪಾಯಿಗಳನ್ನು ಆಫರ್ ಪಡೆದಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.

ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾದ ಸೆಲೆಬ್ರಿಟಿ ಜೋಡಿಗಳು ಈ ಪ್ರಸ್ತಾಪವನ್ನು ಸ್ವೀಕರಿಸುತ್ತಾರೆಯೇ ? ತಮ್ಮ ವಿವಾಹದ ಫೋಟೇಜ್ ಸ್ಟ್ರೀಮ್ ಮಾಡಲು OTT ಪ್ಲಾಟ್‌ಫಾರ್ಮ್ ಅನ್ನು ಅನುಮತಿಸುತ್ತಾರೆಯೇ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಇದು ಸೆಲೆಬ್ರಿಟಿ ಜೋಡಿಗಳಲ್ಲಿ ಇದು ಸಾಮಾನ್ಯವಾಗಿದೆ ಎನ್ನಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸೆಲೆಬ್ರಿಟಿಗಳು ತಮ್ಮ ಮದುವೆಯ ತುಣುಕನ್ನು ಪಾಪರಾಜಿಗಳಿಗೆ ಮಾರಾಟವಾಗಿ ಭಾರೀ ಆಕರ್ಷಕ ಮೊತ್ತವನ್ನು ಪಡೆಯುತ್ತಾರೆ.

ಲಸಿಕೆ ಹಾಕಿಕೊಂಡ ಅತಿಥಿಗಳು

ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿತ್ತು. ಅತಿಥಿಗಳು COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಮತ್ತು ಎರಡು ಬಾರಿ ಲಸಿಕೆ ಹಾಕಿದ ಅತಿಥಿಗಳು ಮಾತ್ರ ಸೆಲೆಬ್ರಿಟಿಗಳ ಮದುವೆಯಲ್ಲಿ ಭಾಗವಹಿಸಿದ್ದಾರೆ. ಈ ಮಾಹಿತಿಯನ್ನು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ರಾಜೇಂದ್ರ ಕಿಶನ್ ಅವರು ಹಂಚಿಕೊಂಡಿದ್ದರು. ಅಲ್ಲಿ ಮದುವೆಯ ಸ್ಥಳ ಫೋರ್ಟ್ ಬರ್ವಾರಾ ಇದೆ. ಆಯೋಜಕರು ನೀಡಿದ ಮಾಹಿತಿಯಂತೆ 120 ಅತಿಥಿಗಳನ್ನು ಮದುವೆಗೆ ಆಹ್ವಾನಿಸಲಾಗಿದ್ದು, ಡಿಸೆಂಬರ್ 7 ರಿಂದ ಡಿಸೆಂಬರ್ 10 ರ ನಡುವೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿಸಿ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!