ಕತ್ರಿನಾ - ವಿಕ್ಕಿ ಮದುವೆಯಾಗಿ 1 ವರ್ಷ; ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರಗಳಿದು!

By Vaishnavi Chandrashekar  |  First Published Dec 9, 2022, 11:20 AM IST

ಅಭಿಮಾನಿಗಳಿಂದ ಅದ್ಧೂರಿ ವಾರ್ಷಿಕೋತ್ಸವ ಆಚರಣೆ. ವಿಕ್ಕಿ- ಕತ್ರಿನಾ ರೊಮ್ಯಾಂಟಿಕ್ ಫೋಟೋ ನಿರೀಕ್ಷೆಯಲ್ಲಿ....


ಬಾಲಿವುಡ್ ಕ್ಯಾಟ್‌ ಕತ್ರಿನಾ ಕೈಫ್‌ ಮತ್ತು ಹ್ಯಾಂಡ್ಸಮ್‌ ವಿಕ್ಕಿ ಕೌಶಲ್‌ ಡಿಸೆಂಬರ್ 9, 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಗಿರುವ ಕಾರಣ ಮೋಸ್ಟ್‌ ರೊಮ್ಯಾಂಟಿಕ್ ಫೋಟೋ ಅಥವಾ ವಿಡಿಯೋ ಅಪ್ಲೋಡ್ ಮಾಡಬೇಕು ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ ಆಂಡ್ ಕೈಫ್ ಮದುವೆ ಹೇಗಿತ್ತು, ಲವ್ ಹೇಗೆ ಶುರುವಾಯ್ತು ಎಂದು ಮತ್ತೊಮ್ಮೆ ಚರ್ಚೆ ಶುರುವಾಗಿದೆ...

ಮದುವೆ ಬಟ್ಟೆ:

Tap to resize

Latest Videos

ರಾಜಸ್ಥಾನದ ಸಿಕ್ಸ್‌ ಸೆನ್ಸ್‌ ಫೋರ್ಟ್‌ನಲ್ಲಿ ಆಪ್ತರ ಸಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತ್ತು.  sabyashachi ಬ್ರೈಡಲ್ ಕೆಂಪು ಲೆಹೆಂಗಾದಲ್ಲಿ ಕತ್ರಿನಾ ಮಿಂಚಿದ್ದಾರೆ. ಲೆಹೆಂಗಾ ಬಾರ್ಡರ್‌ನಲ್ಲಿ ವೆಲ್ವೆಟ್‌ ಬಟ್ಟೆಯಿಂದ ಡಿಸೈನ್ ಮಾಡಲಾಗಿದೆ. ಕತ್ರಿನಾ ನಿಶ್ಚಿತಾರ್ಥಕ್ಕೆ ಟಿಫನಿ ಆಂಡ್ ಕೋ ಅವರ ಉಂಗುರ, ಚೋಕರ್ ಮತ್ತು ಸ್ಟೇಟ್ಮೆಂಟ್ ಬಳೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಕತ್ರಿನಾ ಮದುವೆ ಲೆಹೆಂಗಾ ಸುಮಾರು 17 ಲಕ್ಷ ರೂಪಾಯಿ ಎನ್ನಲಾಗಿದೆ.

ರೋಮ್ಯಾಂಟಿಕ್ ಕ್ಷಣ:

ಪಿಂಕ್ವಿಲ್ಲಾ ಮತ್ತು ನೈಕಾ ಬ್ಯುಟಿ ಜಂಟಿಯಾಗಿ ನಡೆಸಿರುವ ಸಂದರ್ಶನದಲ್ಲಿ ರ್ಯಾಪಿಡ್ ಫಯರ್ ಗೇಮ್‌ ಆಡಿದ ಕತ್ರಿನಾ ಕೈಫ್ ವಿಕ್ಕಿ ಮತ್ತು ಇನ್ನಿತ್ತರ ಸ್ಟಾರ್‌ಗಳ ಬಗ್ಗೆ ಮಾತನಾಡಿದ್ದಾರೆ. ವಿಕ್ಕಿ ಕೌಶಾಲ್ ಪ್ರೀತಿಯ ಮತ್ತು ಕಿರಿಕಿರಿ ಅಭ್ಯಾಸ - ನನಗೆ ತುಂಬಾ ಇಷ್ಟ ಆಗುವುದು ಅಂದ್ರೆ ವಿಕ್ಕಿ ಹಾಡುವುದು ಮತ್ತು ಡ್ಯಾನ್ಸ್ ಮಾಡುವುದು. ಸುಮ್ಮನೆ ಸಂಗೀತ ಕೇಳಿದ್ದರೆ ಸಾಕು ಸಖತ್ ಎಂಜಾಯ್ ಮಾಡುತ್ತಾನೆ ಡ್ಯಾನ್ಸ್‌ ಮಾಡುವುದು ನೋಡಲು ಸಖತ್ ಖುಷಿಯಾಗುತ್ತದೆ. ಅದೆಷ್ಟೋ ಸಲ ನಿದ್ರೆ ಮಾಡಲು ಆಗದ ಸಮಯದಲ್ಲಿ ಪ್ಲೀಸ್ ನನಗೆ ಹಾಡು ಹೇಳು ಎಂದು ಒತ್ತಾಯ ಮಾಡುತ್ತೀನಿ. ಕಿರಿಕರಿ ಅಭ್ಯಾಸ ಅಂದ್ರೆ ವಿಕ್ಕಿ ಕೆಲವೊಮ್ಮೆ ತುಂಬಾ ಹಠವಾದಿ.ಜನರ ತಪ್ಪು ತಿಳುವಳಿಕೆ - ಈ ವಿಚಾರದ ಬಗ್ಗೆ ಗೊತ್ತಿಲ್ಲ ಆದರೆ ಪ್ರತಿಯೊಬ್ಬರು ದಿನದಿಂದ ದಿನಕ್ಕೆ ಬದಲಾಗುತ್ತಾರೆ. ಕೆಲವೊಂದು ದಿನ ಚೆನ್ನಾಗಿರುತ್ತದೆ ಕೆಲವೊಂದು ದಿನ ಕೆಟ್ಟದಾಗಿರುತ್ತದೆ ಒಂದೊಂದು ದಿನ ತುಂಬಾ ತಾಳ್ಮೆ ಇರುತ್ತೆ ಮತ್ತೊಂದು ದಿನ ಸ್ಟ್ರೆಸ್ ಹೆಚ್ಚಿರುತ್ತದೆ ಹೀಗಾಗಿ ನಾವು ಯಾವತ್ತು ಹೇಗಿರುತ್ತೀವಿ ಅದರ ಮೇಲೆ ಅಭಿಪ್ರಾಯ ಮೂಡುತ್ತದೆ. 

ಈ ದಿನ ಪ್ರೆಗ್ನೆನ್ಸಿ ಆನೌನ್ಸ್‌ ಮಾಡ್ತಾರಂತೆ ಕತ್ರಿನಾ ಕೈಫ್‌!

2018ರಲ್ಲಿ ರಿಲೀಸ್ ಆಗಿದ್ದ ವಿಕ್ಕಿ ಕೌಶಲ್ ನಟನೆಯ ಮನ್ಮರ್ಜಿಯಾನ್‌ ನೋಡಿ ಇಷ್ಟು ಅದ್ಭುತವಾಗಿ ಮಾಡಿದ್ದಾರಲ್ಲಾ ಎಂದು ನಿರ್ಮಾಪಕರ ಬಳಿ  ಹೇಳಿದ್ದೆ ಎಂದು ಕತ್ರಿನಾ ಹೇಳಿದ್ದಾರೆ.  ಮನ್ಮರ್ಜಿಯಾನ್‌ ನೋಡಿದ ಬಳಿಕ ವಿಕ್ಕಿ ಕೌಶಲ್ ಕಡೆ ಗಮನ ಹೆಚ್ಚಾಯಿತು ಎಂದು ಕತ್ರಿನಾ ಕೈಫ್ ಹೇಳಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕತ್ರಿನಾ, 'ನನಗೆ ಆನಂದ್ ಎಲ್ ರೈ (ನಿರ್ಮಾಪಕ) ಅವರು ಮನ್ಮರ್ಜಿಯಾನ್‌ ಸಿನಿಮಾದ ಪ್ರೋಮೋ ತೋರಿಸಿದರು. ನನಗೆ ಇನ್ನು ನೆನಪಿದೆ, ನಾನು ಈ ವ್ಯಕ್ತಿ ಯಾರು? ಎಂದು ಹೇಳಿದ್ದೆ. ಅದ್ಭುತವಾಗಿ ನಟಿಸಿದ್ದರು.  ತುಂಬಾ ನೈಜವಾಗಿ ನಟಿಸಿದ್ದರು. ಅವರಲ್ಲಿ ಅಪಾರ ಪ್ರತಿಭೆ ಇದೆ' ಎಂದು ಹೇಳಿದರು. ಅಲ್ಲಿಂದ ವಿಕ್ಕಿ ಕೌಶಲ್ ಮೇಲೆ ಗಮನ ಹೆಚ್ಚಾಯಿತು ಎಂದು ಕತ್ರಿನಾ ಹೇಳಿದ್ದಾರೆ. 

ಮದುವೆಯಾದ 6 ತಿಂಗಳಿಗೆ ಮತ್ತೊಬ್ಬರ ಜತೆ ವಿಕ್ಕಿ ಕೌಶಾಲ್; ಉತ್ತರ ಕೊಟ್ಟ ಪತ್ನಿ ಕತ್ರಿನಾ ಕೈಫ್!

ಈ ದುಬಾರಿ ವಸ್ತುಗಳ ಓನರ್‌ ಕತ್ರಿನಾ ಕೈಫ್‌:

ಲಂಡನ್‌ನಲ್ಲಿ ಕತ್ರಿನಾ ಕೈಫ್, 7.2 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ಇಬ್ಬರೂ ಮುಂಬೈ ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕತ್ರಿನಾ ಕೈಫ್ ತನ್ನ ಸಹೋದರಿ ಇಸಾಬೆಲ್ಲೆ ಕೈಫ್ ಅವರೊಂದಿಗೆ ಮುಂಬೈನ ಅಂಧೇರಿ ವೆಸ್ಟ್‌ನ ಮೌರ್ಯದಲ್ಲಿ ಎರಡು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.   ಅಪಾರ್ಟ್ಮೆಂಟ್ ಬೆಲೆ 45 ಕೋಟಿ ಎಂದು ಅಂದಾಜಿಸಲಾಗಿದೆ. ಕತ್ರಿನಾ ಕೈಫ್ ಐಷಾರಾಮಿ ರೇಂಜ್ ರೋವರ್ ವೋಗ್ ಎಲ್‌ಡಬ್ಲ್ಯೂಬಿ ಮಾಲೀಕರಾಗಿದ್ದಾರೆ. ರೇಂಜ್ ರೋವರ್ ವೋಗ್ ಎಲ್‌ಡಬ್ಲ್ಯೂಬಿ ಐಷಾರಾಮಿ ಕಾರು ತಯಾರಕರ ಪ್ರಮುಖ ಮಾದರಿಯಾಗಿದ್ದು, ಇದರ ಬೆಲೆ 2.37 ಕೋಟಿ ರೂಪಾಯಿ. 

click me!