ಸ್ತನದ ಕ್ಯಾನ್ಸರ್‌ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!

By Vaishnavi Chandrashekar  |  First Published Dec 9, 2022, 10:03 AM IST

38ನೇ ಹುಟ್ಟುಹಬ್ಬದ ದಿನವೇ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ. ಮತ್ತೆ ಹುಟ್ಟಿರುವೆ ಎಂದೆನಿಸುತ್ತಿದೆ.... 


ಮೋಹಿನಿ 9886788888 ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಟಾಲಿವುಡ್‌ ನಟಿ ಹಂಸ ನಂದಿನಿ 2021ರಲ್ಲಿ ಸ್ತನದ ಕ್ಯಾನ್ಸರ್ ಇರುವುದಾಗಿ ಹೇಳಿಕೊಂಡಿದ್ದರು. ಸುಮಾರು 16 ಕೀಮೋಥೆರಪಿ ಮುಗಿಸಿಕೊಂಡು, ತಲೆ ಕೂದಲು ಶೇವ್ ಮಾಡಿಸಿಕೊಂಡು ಬಿಗ್ ಬ್ರೇಕ್‌ ನಂತರ ಮತ್ತೆ ವೃತ್ತಿ ಜೀವನ ಆರಂಭಿಸಿದ್ದಾರೆ. 38ನೇ ಹುಟ್ಟುಹಬ್ಬ ಸ್ಪೆಷಲ್ ಆಗಿರಬೇಕೆಂದು ಕೆಲಸಕ್ಕೆ ಹಿಂದಿರುಗಿರುವುದಾಗಿ ಬರೆದುಕೊಂಡಿದ್ದಾರೆ.

ಹಂಸ ನಂದಿನಿ ಪೋಸ್ಟ್‌:

Tap to resize

Latest Videos

'ಸಿನಿಮಾ ಸೆಟ್‌ಗೆ ಬಂದಿರುವೆ, ಮರು ಹುಟ್ಟಿರುವೆ ಎನ್ನುವ ಭಾವನೆ ನನ್ನದ್ದು. ಈ ವರ್ಷದ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಪೆಷಲ್ ಮಾಡುತ್ತಿರುವೆ. ಕ್ಯಾಮೆರಾ ಮುಂದೆ ಆದಷ್ಟು ಜೀವಂತವಾಗಿರುವೆ ನಾನು. ಈ ದಿನವನ್ನು ನನ್ನ ಕೋ-ಸ್ಟಾರ್ ಮತ್ತು ಹೊಸ ಸಿನಿಮಾ ತಂತ್ರಜ್ಞರ ಜೊತೆ ಆಚರಿಸಿಕೊಳ್ಳುತ್ತಿರುವೆ. ನಿಮ್ಮೆಲ್ಲರ ಪ್ರೀತಿ ಮತ್ತು ಸಪೋರ್ಟ್‌ ಇಲ್ಲದೆ ಇಷ್ಟು ಸಾಧ್ಯವಾಗುತ್ತಿರಲಿಲ್ಲ. ನನ್ನ ಅಪ್ಪುಗೆ ಮತ್ತು ಮುತ್ತುಗಳು ನಿಮಗೆ' ಎಂದು ಹಂಸ ಬರೆದುಕೊಂಡಿದ್ದಾರೆ.

'ನಮ್ಮ ರಾಣಿ ವಾಪಸ್ ಬಂದಿದ್ದಾರೆ, ನಮಗೆ ಸಖತ್ ಖುಷಿಯಾಗುತ್ತಿದೆ.' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು 'ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಈಗೊಂದು ಅರ್ಥ ಸಿಕ್ಕಿದೆ. ನೀವು ರಿಯಲ್ ಲೈಫ್ ಫೈಟರ್' ಎಂದಿದ್ದಾರೆ ನೆಟ್ಟಿಗರು.

ಸ್ತನ ಕ್ಯಾನ್ಸರ್ ಕಾಣಿಸಿಕೊಂಡ ಕ್ಷಣ:

'ನನ್ನ ಲೈಫ್‌ ಇನ್ನು ಮುಂದೆ ಹೀಗೆ ಇರುವುದಿಲ್ಲ ಎಂದು ತಿಳಿದ ಕ್ಷಣವಿದು. 18 ವರ್ಷಳ ಹಿಂದ ಡ್ರೇಡ್‌ಫುಲ್‌ ಕಾಯಿಲೆಗೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೆ. ಆಗಿನಿಂದ ಕತ್ತಲಲ್ಲಿ ಜೀವನ ನಡೆಸುತ್ತಿದ್ದೆ. ಭಯದಲ್ಲೇ ಜೀವನ ನಡೆಸಿದೆ. plethora ಸ್ಕ್ಯಾನ್‌ ಮತ್ತು ಟೆಸ್ಟ್‌ ನಡೆದ ನಂತರ ನಾನು ಧೈರ್ಯದಿಂದ ಆಪರೇಷನ್ ಥಿಯೇಟರ್‌ ಪ್ರವೇಶಿಸಿದೆ. ಆ ಓಟಿಯಲ್ಲಿ ನನ್ನ ಟ್ಯೂಮರ್‌ ತೆಗೆದ್ದರು. ಆ ಕ್ಷಣದ ವೈದ್ಯರು ಕನ್ಫರ್ಮ್‌ ಮಾಡಿದ್ದರು ಟ್ಯೂಮರ್‌ ಎಲ್ಲೂ ಹರಡಿಲ್ಲ ನೀವು ಕ್ಷೇಮವಾಗಿದ್ದೀರಿ ಎಂದು. ಆರಂಭ ಹಂತದಲ್ಲಿ ಟ್ಯೂಮರ್‌ ಇರುವುದನ್ನು ಗುರುತಿಸಿದಕ್ಕೆ ನಾನು ತುಂಬಾನೇ ಲಕ್ಕಿ' ಎಂದು ಬರೆದುಕೊಂಡಿದ್ದರು.

ಟಾಲ್ಕಮ್ ಪೌಡರ್‌ ಬಳಸೋ ಮುನ್ನ ಎಚ್ಚರ, ಕ್ಯಾನ್ಸರ್‌ಗೂ ಕಾರಣವಾಗುತ್ತೆ

ಫೆಬ್ರವರಿ ತಿಂಗಳಿನಲ್ಲಿ 16 ಕೀಮೋಥೆರಪಿ ಮುಗಿಸಿಕೊಂಡು ತಲೆ ಕೂದಲು ಶೇವ್ ಮಾಡಿಸಿಕೊಂಡಿರುವುದರ ಬಗ್ಗೆ ಹಂಸ ಫೋಟೋ ಹಂಚಿಕೊಂಡಿದ್ದರು. 'ಕೊನೆಗೂ 16 ಕೀಮೋಥೆರಪಿ ಮುಗಿಸಿರುವೆ. ಈಗ ನಾನು ಆಫೀಶಿಯಲಿ ಕೀಮೋ ಸರ್ವೈವರ್. ಅದರೆ ಇಲ್ಲಿಗೆ ಮುಗಿದಿಲ್ಲ. ನಾನು ಇನ್ನೂ ಗೆದ್ದಿಲ್ಲ. ದೊಡ್ಡ ಯುದ್ಧ ಎದುರಿಸುವ ಸಮಯ ಬಂದಿದೆ. ಈಗ ಸರ್ಜರಿ ಮಾಡಿಸಬೇಕು.ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು. ಈ ಕಷ್ಟದ ಸಮಯದಲ್ಲಿ ನಿಮ್ಮ ಪ್ರೀತಿ ನನಗೆ ಧೈರ್ಯ ಕೊಟ್ಟಿದೆ, ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ಈ ಯುದ್ಧದಲ್ಲಿ ನಾನೊಬ್ಬಳೇ ಅಲ್ಲ ಅನ್ನುವುದನ್ನು ತೋರಿ ಕೊಟ್ಟಿದ್ದೀರಿ. ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದವರು ತೋರಿಸುತ್ತಿರುವ ಕಾಳಜಿ ಎಂದೂ ಮರೆಯುವುದಿಲ್ಲ. ನಾನು ಸ್ಟ್ರಾಂಗ್ ಆಗಿರುವೆ, ಇದು ನನ್ನನ್ನು ಇನ್ನೂ ಸ್ಟ್ರಾಂಗ್ ಮಾಡುತ್ತಿದೆ' ಎಂದು ಹಂಸ ಬರೆದುಕೊಂಡಿದ್ದಾರೆ. 

Health Tips : ನೈಟ್ ಶಿಫ್ಟ್ ಮಾಡಿದ್ರೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು

'ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವೂ ಕ್ಯಾನ್ಸರ್‌ ಆಗುವ ಶೇ. 70  ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್‌ ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗ ನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ. ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹುಬೇಗನೇ ಕಂಡುಹಿಡಿದುಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವು ಕ್ಯಾನ್ಸರ್‌ ಆಗುವ ಶೇ. 70  ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್‌ ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ.ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಇಂಥ ಚಿಕಿತ್ಸೆಗಳು ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡುತ್ತಿವೆ. ಸ್ತನ ಕ್ಯಾನ್ಸರ್  ನನ್ನನ್ನು ಆವರಿಸಿರುವುದು ಗೊತ್ತಾಯಿತು.  ನನ್ನಷ್ಟಕ್ಕೇ ನಾನು ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡೆ. ಈ ರೋಗದೊಂದಿಗೆ ಹೋರಾಟಲು ಮಾನಸಿಕವಾಗಿ ಸಿದ್ಧಳಾದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಾ ಬೇರೆಯವರಿಗೂ ಧೈರ್ಯ ತುಂಬಲು ತೀರ್ಮಾನಿಸಿದೆ. ನಾನು ಸಾಮಾಜಿಕ ಜೀವನದಿಂದ ದೂರವಾಗಿದ್ದಕ್ಕೆ ಅನೇಕರು ಕಾರಣ ಕೇಳಿ ಸಂದೇಶ ರವಾನಿಸಿದ್ದಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು  ಚಿರಋಣಿ.  ನಾನು ಹಿಂದಕ್ಕೆ ಸರಿಯುವ ಮಾತೇ ಇಲ್ಲ. ಹೋರಾಡುತ್ತಲೇ ಇರುತ್ತೇನೆ. ನನ್ನ ಜತೆ ನಿಂತ ನಿಮಗೆಲ್ಲ ಮತ್ತೊಂದು ಸಾರಿ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಪ್ರೀತಿಯ ಹಂಸ! ಎಂದು ಪತ್ರ ಬರೆದಿದ್ದರು.

 

click me!