ಹಾಯ್​ ಬೇಬಿ.. ಏನಾದರೂ ಧರಿಸಿದ್ರೂ ಓಕೆ, ಆದ್ರೆ ಬಣ್ಣ ಕಪ್ಪು ಇರಲಿ... ಲವ್​ ಯೂ ಸೋ ಮಚ್​...

By Suvarna News  |  First Published Dec 27, 2023, 11:47 AM IST

ಕೋರ್ಟ್​ ವಿಚಾರಣೆ ವೇಳೆ ಕಪ್ಪು ಬಟ್ಟೆ ಧರಿಸಿ ಬರುವಂತೆ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ಗೆ ವಂಚಕ ಸುಕೇಶ್​ ಚಂದ್ರಶೇಖರ್​ ಬರೆದಿರುವ ಪತ್ರ ಇದೀಗ ರಿವೀಲ್​ ಆಗಿದೆ. ಏನಿದರೆ ಅದರಲ್ಲಿ? 
 


ಐಷಾರಾಮಿ ಉಡುಗೊರೆಗೋಸ್ಕರ ವಂಚಕ ಸುಕೇಶ್​ ಜೊತೆ ಸಂಬಂಧ ಬೆಳೆಸಿರುವ ರಾ ರಾ ರಕ್ಕಮ್ಮ ಬೆಡಗಿ, ಬಾಲಿವುಡ್​ ತಾರೆ ಜಾಕ್ವೆಲಿನ್​ ಫರ್ನಾಂಡೀಸ್​ಗೆ ಸದ್ಯ ಗ್ರಹಗತಿ ಚೆನ್ನಾಗಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್​ನಿಂದಾಗಿ ನಟಿಗೆ ದೊಡ್ಡ ತಲೆನೋವು ಉಂಟಾಗಿದೆ.  ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್​ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್​ ಅಲೀಯುವಂತಾಗಿದೆ ಜಾಕ್ವೆಲಿನ್​. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು ಸೇರಿದಂತೆ ಈಕೆ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ. ನಂತರ ಯಾವಾಗ ಸುಕೇಶ್​ ಜೈಲು ಸೇರಿದನೋ, ಅವನ ಹಿಂದೆ ಜಾಕ್ವೆಲಿನ್​ ಹೆಸರೂ ಕೇಳಿಬಂದಿದ್ದು, ಇವರ ವಿರುದ್ಧವೂ ದೂರು ದಾಖಲಾಗಿದೆ. ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲಿದೆ.

ಈ ಮಧ್ಯೆಯೇ ಈ ಕೇಸ್​ಗೂ ತಮಗೂ ಸಂಬಂಧ ಇಲ್ಲ ಎಂದು ನಟಿ ಇದಾಗಲೇ ಕೋರ್ಟ್​ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈಗ ಸುಕೇಶ್​ ಜೈಲಿನಿಂದ ಬರೆಯುತ್ತಿರುವ ಲವ್​ ಲೆಟರ್​ಳನ್ನು ತಮಗೆ ನೀಡದಂತೆ  ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ ಮತ್ತು ಮಂಡೋಲಿ ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸುವಂತೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ  ಜಾಕ್ವೆಲಿನ್​.  ಯಾವಾಗ ನಟಿ ತನ್ನ ವಿರುದ್ಧ ಕೋರ್ಟ್​ಗೆ ಹೋದರೋ, ಸುಕೇಶ್​ ಪಿತ್ತ ನೆತ್ತಿಗೇರಿದೆ. ನಟಿಯ ನಿಜವಾದ ಬಣ್ಣ ಬಯಲು ಮಾಡುವುದಾಗಿ ಸುಕೇಶ್​ ಜೈಲಿನಿಂದಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ.  ಕೋಟಿ ಕೋಟಿ ಗಿಫ್ಟ್​ ಪಡೆಯುವಾಗ ಸುಮ್ಮನಿದ್ದ ಜಾಕ್ವೆಲಿನ್​ ಈಗ ತಾನು ಜೈಲಿಗೆ ಸೇರಿದ ಮೇಲೆ ಕೇಸ್​ ಹಾಕಿರುವುದರಿಂದ ರೊಚ್ಚಿಗೆದ್ದಿರುವ ಸುಕೇಶ್​, ನಟಿಯ ಬಂಡವಾಳ ಬಯಲು ಮಾಡುವುದಾಗಿ ಜೈಲಿನಿಂದಲೇ ಗುಡುಗಿದ್ದಾರೆ ಎಂದು ವರದಿಯಾಗಿದೆ. ‘ಇಷ್ಟು ದಿನ ನಾನು ನಿನ್ನನ್ನು ರಕ್ಷಿಸುತ್ತಿದ್ದೆ. ಈಗ ಸುಮ್ಮನಿರುವುದಿಲ್ಲ. ಕಾನೂನಿನ ಪ್ರಕಾರ ಎಲ್ಲ ಸಾಕ್ಷಿ ಬಹಿರಂಗ ಮಾಡುತ್ತೇನೆ’ ಎಂದು ಸುಕೇಶ್​ ಹೇಳಿದ್ದಾನೆ.  ಯಾರಿಗೂ ಇದುವರೆಗೆ ತೋರಿಸದ ಚಾಟ್​ ಸಂದೇಶ, ಮೆಸೇಜ್​ಗಳು, ವಿಡಿಯೋಗಳು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾನೆ. 

Tap to resize

Latest Videos

ಮಾಡೋದೆಲ್ಲಾ ಮಾಡಿ ಕೈಕೊಡ್ತಾಳಾ? ನಟಿ ಜಾಕ್ವೆಲಿನ್​ ವಿಡಿಯೋ ಬಹಿರಂಗ ಮಾಡ್ತೇನೆಂದು ಜೈಲಿನಿಂದ್ಲೇ ಗುಡುಗಿದ ಸುಕೇಶ್​!

ಇದರ ಮಧ್ಯೆಯೇ, ಇವರಿಬ್ಬರ ನಡುವಿನ ವಾದ-ಪ್ರತಿವಾದ ಜೋರಾಗುತ್ತಿದ್ದಂತೆಯೇ ವಾಟ್ಸ್​ಆ್ಯಪ್​ ಸಂದೇಶವನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಇದ್ದ ಸಂದರ್ಭದಲ್ಲಿಯೇ ನಟಿಯನ್ನು ವರ್ಚುವಲ್​ ಆಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದಿದ್ದ ಸುಕೇಶ್ ಅವರಿಗೆ, ಹಾಯ್​ ಬೇಬಿ...  ಜೂನ್ 30, 2023ರಂದು ವಿಚಾರಣೆಗೆ ಕರೆಯಲಿದ್ದಾರೆ. ನೀನು ವರ್ಚುವಲ್​ ಮೂಲಕ ಹಾಜರಾಗುತ್ತಿ ಎಂದು ತಿಳಿದುಬಂದಿದೆ. ಹೀಗೆ ಬರುವುದಾದರೆ ನೀನು ಕಪ್ಪು ಬಣ್ಣದ ಕುರ್ತಾ ಧರಿಸು, ಕುರ್ತಾನೇ  ಆಗಬೇಕೆಂದೇನೂ ಇಲ್ಲ. ಏನೇ ಧರಿಸಿದರೂ ಅದು ಕಪ್ಪು ಬಣ್ಣದಲ್ಲಿರಲಿ... ನೀನು ನನ್ನ ಎಲ್ಲಾ ಪತ್ರಗಳನ್ನು, ಮೆಸೇಜ್​ಗಳನ್ನು ನೋಡುತ್ತಿದ್ದಿ ಎಂದು ನಾನು ಬಲ್ಲೆ, ನೀನು ನನ್ನನ್ನು ಪ್ರೀತಿಸುತ್ತಿರುವೆ ಎಂದೂ ತಿಳಿದಿದೆ. ಆದ್ದರಿಂದ ಬೇಬಿ ಕಪ್ಪು ಬಣ್ಣದಲ್ಲಿ ಬಾ.  ಮಿಸ್ ಯೂ ಟನ್.. ಐ ಲವ್ ಯೂ ಬೇಬಿ ಗರ್ಲ್... ನೀನು ಎಂದೆಂದಿಗೂ ನನ್ನವಳು... ಎಂದು ಬರೆದಿದ್ದ. ಆದರೆ ಇದಾಗಲೇ ವಿಚಾರಣೆ, ಕೋರ್ಟು, ಕೇಸು ಎಂದೆಲ್ಲಾ ಸೋತು ಹೋಗಿದ್ದ ನಟಿ ಕಪ್ಪು ಬಣ್ಣದ ಬಟ್ಟೆ ಧರಿಸದೇ ಬೇರೆ ಬಣ್ಣದ ಬಟ್ಟೆ ಧರಿಸಿ ಹೋಗಿದ್ದಾರೆ.

ಇದರಿಂದ ಬೇಸರಗೊಂಡಿದ್ದ ಸುಕೇಶ್​, ನೀನು ಬೇರೆ ಬಣ್ಣದ ಡ್ರೆಸ್​ ಧರಿಸಿ ಬಂದಿದ್ದು ನೋಡಿ  ಬೇಸರವಾಯಿತು. ನನ್ನ ಬಗ್ಗೆ ನಿನ್ನ ಮನದಲ್ಲಿ ಏನಿದೆ ಎಂದು  ಅರ್ಥವಾಗುತ್ತಿಲ್ಲ. ನನ್ನನ್ನು ತಪ್ಪಿಸಿ ಓಡಿಹೋಗುವುದು ಅಥವಾ ನನ್ನನ್ನು ನಿರ್ಲಕ್ಷಿಸುವುದು ಮಾಡುತ್ತಿರುವೆ. ನೀನು ಧೈರ್ಯಗೆಡಬೇಡ. ಎಲ್ಲ ರೀತಿಯಲ್ಲೂ ನಾನು ನಿಮ್ಮ ಪಕ್ಕದಲ್ಲೇ ಇರುತ್ತೇನೆ. ನಿನಗೆ ಏನು ಬೇಕೋ ಎಲ್ಲವನ್ನೂ ನಾನು ಮಾಡುತ್ತೇನೆ.  ಮುಂದಿನ ವಿಚಾರಣೆ ಸಮಯದಲ್ಲಿ  ಬಹು ಬಣ್ಣದ ಕುರ್ತಾ ಅಥವಾ ಯಾವುದೇ ವಿನ್ಯಾಸವಿಲ್ಲದೆ ಸರಳವಾದ ಬಿಳಿ ಶರ್ಟ್ ಧರಿಸಿ ಬಾ. ನೀನು ನನ್ನ ಸಂದೇಶ ನೋಡಿರುವುದು ಇದರಿಂದ ನನಗೆ ತಿಳಿಯುತ್ತದೆ.  ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಕಳಿಸಿದ್ದಾನೆ.

ದುಬಾರಿ ಗಿಫ್ಟ್​ ಪಡೆದು ತಗ್ಲಾಕ್ಕೊಂಡ ರಾ ರಾ ರಕ್ಕಮ್ಮ ಬೆಡಗಿ: ಲವ್​ ಲೆಟರ್​ ವಿರುದ್ಧ ಕೋರ್ಟ್​ ಮೊರೆ

ಇದೀಗ ಪೊಲೀಸರ ಕೈ ಸೇರಿದೆ. ಅಷ್ಟೇ ಅಲ್ಲದೇ ಇನ್ನೊಂದು ಸಂದೇಶದಲ್ಲಿ ಮುಂದಿನ ಎರಡು ವಾರಗಳಲ್ಲಿ ಸಂಗೀತ ಬರಹಗಾರ ಲವ್ ರಂಜನ್, ಸಿನಿಮಾವೊಂದಕ್ಕೆ ನಿನ್ನನ್ನು ಸಂಪರ್ಕಿಸುತ್ತಾರೆ. ನಾನು ಅವನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಇದು ನಿನಗಾಗಿ ನನ್ನ ದೊಡ್ಡ ಉಡುಗೊರೆಯಾಗಿದೆ ಎಂದಿದ್ದಾನೆ. ಇದಾಗಲೇ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಉಡುಗೊರೆಗಳನ್ನು ಪಡೆದುಕೊಂಡು ಸುಕೇಶ್​ ಸಂಬಂಧ ಬೆಳೆಸಿರುವ ಜಾಕ್ವೆಲಿನ್​ಗೆ​, ಇನ್ನಷ್ಟು ಉಡುಗೊರೆ ಕೊಡಲು ಸುಕೇಶ್​ ಮುಂದಾಗಿರುವುದು ಇದರಿಂದ ತಿಳಿದುಬರುತ್ತದೆ.  

click me!