ಆತ್ಮವನ್ನೂ ಬಿಡದ ಪ್ರೇಮ ಕತೆಗಳು ತೆರೆ ಮೇಲೆ ಈಗಾಗಲೇ ನೂರಾರು ಬಂದು ಹೋಗಿವೆ. ಸತ್ತವರು ಆತ್ಮದ ರೂಪದಲ್ಲಿ ಬಂದು ಪ್ರತೀಕಾರ ತೀರಿಸಿಕೊಳ್ಳುವ ಚಿತ್ರಗಳನ್ನು ಲೆಕ್ಕವಿಲ್ಲದಷ್ಟುನೋಡಿದ್ದಾರೆ ಪ್ರೇಕ್ಷಕರು. ಅದೇ ಸಾಲಿನ ಚಿತ್ರ ‘ಕಸ್ತೂರಿ ಮಹಲ್’. ಒಂದು ಹಳೆಯ ಬೃಹತ್ ಮನೆ, ಅಲ್ಲಿಗೆ ಹೋಗುವ ನಾಲ್ಕೈಂದು ಮಂದಿ, ಅಲ್ಲಿ ಬೇರೆ ಯಾವುದೋ ಕಾರಣಕ್ಕೆ ಬಲಿಯಾಗಿರುವ ಹುಡುಗಿ, ಆ ಮನೆಗೆ ಹೋದವರ ಮೇಲೆ ಸೇಡು ತೀರಿಸಿಕೊಳ್ಳುವ ಆ ಹುಡುಗಿಯ ಆತ್ಮ, ಕೊನೆಗೆಯಲ್ಲಿ ಆತ್ಮಕ್ಕೂ ಮನಸ್ಸು, ಕೋಪ, ಆಸೆ, ಕನಸುಗಳು ಇರುತ್ತವೆ ಎನ್ನುವುದರೊಂದಿಗೆ ಮುಕ್ತಾಯ ಆಗುವುದು.
ಆತ್ಮ ಪ್ರೇಮ ಕತೆಯ ಪರದಾಟಗಳು
ಚಿತ್ರ: ಕಸ್ತೂರಿ ಮಹಲ್
ತಾರಾಗಣ: ಶಾನ್ವಿ ಶ್ರೀವಾಸ್ತವ, ರಂಗಾಯಣ ರಘು, ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ನೀನಾಸಂ ಅಶ್ವತ್‌್ಥ, ಕೆಂಪೇಗೌಡ, ಅಕ್ಷರಾ, ಕಾಶಿಮಾ ರಫಿ
ನಿರ್ದೇಶನ: ದಿನೇಶ್ ಬಾಬು
ರೇಟಿಂಗ್: 2
ಆತ್ಮವನ್ನೂ ಬಿಡದ ಪ್ರೇಮ ಕತೆಗಳು ತೆರೆ ಮೇಲೆ ಈಗಾಗಲೇ ನೂರಾರು ಬಂದು ಹೋಗಿವೆ. ಸತ್ತವರು ಆತ್ಮದ ರೂಪದಲ್ಲಿ ಬಂದು ಪ್ರತೀಕಾರ ತೀರಿಸಿಕೊಳ್ಳುವ ಚಿತ್ರಗಳನ್ನು ಲೆಕ್ಕವಿಲ್ಲದಷ್ಟುನೋಡಿದ್ದಾರೆ ಪ್ರೇಕ್ಷಕರು. ಅದೇ ಸಾಲಿನ ಚಿತ್ರ ‘ಕಸ್ತೂರಿ ಮಹಲ್’. ಒಂದು ಹಳೆಯ ಬೃಹತ್ ಮನೆ, ಅಲ್ಲಿಗೆ ಹೋಗುವ ನಾಲ್ಕೈಂದು ಮಂದಿ, ಅಲ್ಲಿ ಬೇರೆ ಯಾವುದೋ ಕಾರಣಕ್ಕೆ ಬಲಿಯಾಗಿರುವ ಹುಡುಗಿ, ಆ ಮನೆಗೆ ಹೋದವರ ಮೇಲೆ ಸೇಡು ತೀರಿಸಿಕೊಳ್ಳುವ ಆ ಹುಡುಗಿಯ ಆತ್ಮ, ಕೊನೆಗೆಯಲ್ಲಿ ಆತ್ಮಕ್ಕೂ ಮನಸ್ಸು, ಕೋಪ, ಆಸೆ, ಕನಸುಗಳು ಇರುತ್ತವೆ ಎನ್ನುವುದರೊಂದಿಗೆ ಮುಕ್ತಾಯ ಆಗುವುದು. ಇವಿಷ್ಟುಅಂಶಗಳು ದಿನೇಶ್ ಬಾಬು ಅವರ ಸ್ಟೈಲಿನಲ್ಲಿ ಈ ಚಿತ್ರದಲ್ಲಿ ತೆರೆದುಕೊಂಡಿವೆ. ದಿನೇಶ್ ಬಾಬು ಅವರ ಈ ಹಾರರ್ ಕತೆಯನ್ನು ಸಾಧ್ಯವಾದಷ್ಟುಮಟ್ಟಿಗೆ ಲಿಫ್‌್ಟಮಾಡಿ, ನೋಡುಗನಿಗೆ ಹತ್ತಿರ ಮಾಡುವುದು ಮಾತ್ರ ಪಿಕೆಎಚ್ ದಾಸ್ ಅವರ ಕ್ಯಾಮೆರಾ ಕಣ್ಣಿನ ಬೆಳಕು. ಬಿಸಿಲು ಮಿಶ್ರಿತ ಲೈಟಿಂಗ್, ಮಳೆಯ ನಡುವೆ ಕಾಡುವ ಮನೆಯ ದೃಶ್ಯಗಳು, ಮುಖ ತೋರಿಸದ ಆತ್ಮದ ಆಕೃತಿ...ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪಿಕೆಎಚ್ ದಾಸ್ ಅವರ ಕ್ಯಾಮೆರಾ ತನ್ನತನವನ್ನು ಸಾಬೀತು ಮಾಡುತ್ತ ಹೋಗುತ್ತದೆ.
ಮೇ 13ಕ್ಕೆ ಶಾನ್ವಿ ಶ್ರೀವಾಸ್ತವ ಅಭಿನಯದ ‘ಕಸ್ತೂರಿ ಮಹಲ್’ ರಿಲೀಸ್
ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡುವ ಐದು ಮಂದಿ ತಂಡ. ಇವರ ಪೈಕಿ ಪುರಾತತ್ವಶಾಸ್ತ್ರಜ್ಞೆ ಆಗಿರುವ ಮೇಘಾ ಶಾಸ್ತ್ರಿ. ಈಕೆ ಎಲ್ಲೇ ಹೋದರೂ ಹಳೆಯ ವಸ್ತುಗಳನ್ನು ಕದಿಯುವ ಮತ್ತು ಹಾಗೆ ಕದ್ದ ವಸ್ತುಗಳ ಹಿನ್ನೆಲೆ ತಿಳಿಯುವ ಆಸಕ್ತಿ ಹೆಚ್ಚು. ಹೀಗೆ ಮೇಘಾ ಶಾಸ್ತ್ರೀಗೆ ಮನೆಯೊಂದರಲ್ಲಿ ಹಳೆಯ ಡೈರಿ ಸಿಗುತ್ತದೆ. ಆ ಡೈರಿ ತೆಗೆದುಕೊಂಡ ಮೇಲೆ ಆಕಸ್ಮಿಕ, ನಿಗೂಢವಾದ ಘಟನೆಗಳು, ಸನ್ನಿವೇಶಗಳು ಸಂಭವಿಸುತ್ತವೆ. ಇಷ್ಟಕ್ಕೂ ಆ ಡೈರಿನಲ್ಲಿ ಏನಿದೆ, ಆ ಡೈರಿ ಓದಿದ ಮೇಲೆ ಹೊರಗೆ ಬರುವ ಆತ್ಮಕ್ಕೂ ಮತ್ತು ಅದನ್ನು ಓದುವ ಹುಡುಗಿಗೂ ನಂಟು ಏನು ಎಂಬುದೇ ಸಿನಿಮಾ.
'ಕಸ್ತೂರಿ ಮಹಲ್'ನಲ್ಲಿ ದೆವ್ವವಾಗಿ ಹೆದರಿಸುತ್ತಿದ್ದಾರೆ ಕ್ಯೂಟಿ ಶಾನ್ವಿ ಶ್ರೀವತ್ಸವ್.!
ರಾಜ ಮನೆತನದ ಕುಟುಂಬ, ಹೆತ್ತವರಿಗೆ ಇಷ್ಟವಿಲ್ಲದೆ ನಡೆಯುವ ಅಲ್ಲೊಂದು ಪ್ರೇಮ ಕತೆ, ಮಂತ್ರ-ತಂತ್ರಗಳ ಪ್ರಯೋಗ, ಹುಡುಗಿಯ ಬಲಿ, ಆಕೆಯ ಆತ್ಮಕ್ಕೆ ಬಂಧನ ಇತ್ಯಾದಿ ಫ್ಲ್ಯಾಷ್ ಬ್ಯಾಕ್ ಅಂಶಗಳೊಂದಿಗೆ ತೆರೆದುಕೊಳ್ಳುವ ಕತೆಯಲ್ಲಿ ಶಾನ್ವಿ ಶ್ರೀವಾಸ್ತವ ಹಾಗೂ ರಂಗಾಯಣ ರಘು ಪಾತ್ರಗಳು ಹೈಲೈಟ್ ಆಗಿವೆ. ಇಡೀ ಸಿನಿಮಾ ಈ ಎರಡೂ ಪಾತ್ರಗಳ ಸುತ್ತ ಸಾಗಿದಂತೆ ಕಾಣುತ್ತದೆ. ಶ್ರುತಿ ಪ್ರಕಾಶ್ ನೋಡಲು ಮುದ್ದಾಗಿ ಕಾಣುತ್ತಾರೆ. ಅದೇ ಹಳೆಯ ಸೂತ್ರ, ಬಹುಮುಖ್ಯ ಪಾತ್ರ ವಹಿಸಬೇಕಾದ ಹಿನ್ನೆಲೆ ಸಂಗೀತ ತಟಸ್ಥ ನೀತಿ ತಾಳುವುದು ಚಿತ್ರದ ಕೊರತೆ. ಕತೆ ಕೂಡ ತೀರಾ ಅದ್ಭುತ ಅಥವಾ ಹೊಸತದಿಂದ ಕೂಡಿಲ್ಲ. ಬಿಡುವಿನಲ್ಲಿ ಒಂದು ಹಾರರ್ ಸಿನಿಮಾ ಮಾಡಬೇಕು ಎನ್ನುವ ಮನಸ್ಥಿತಿಯಲ್ಲಿ ನಿರ್ದೇಶಕರು ಈ ಚಿತ್ರವನ್ನು ರೂಪಿಸಿದಂತಿದೆ.