ಖ್ಯಾತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan) ವಿರುದ್ಧ ದೂರು ದಾಖಲಾಗಿದೆ. ಕಮಲ್ ಹಾಸನ್ ನಟನೆಯ ವಿಕ್ರಮ್(Vikram) ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. 'ಪಾತಾಳ ಪಾತಾಳ...' ಎನ್ನುವ ಸಾಹಿತ್ಯವಿರುವ ಹಾಡು ಇದಾಗಿದ್ದು ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.
ಖ್ಯಾತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan) ವಿರುದ್ಧ ದೂರು ದಾಖಲಾಗಿದೆ. ಕಮಲ್ ಹಾಸನ್ ನಟನೆಯ ವಿಕ್ರಮ್(Vikram) ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. 'ಪಾತಾಳ ಪಾತಾಳ...' ಎನ್ನುವ ಸಾಹಿತ್ಯವಿರುವ ಹಾಡು ಇದಾಗಿದ್ದು ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸಿದ್ದಾರೆ.
ಅಂದಹಾಗೆ ಸದ್ಯ ವಿವಾದದಲ್ಲಿ ಸಿಲುಕಿರುವ ಪಾತಾಳ್ ಪಾತಾಳ್ ಹಾಡನ್ನು ಕಮಲ್ ಹಾಸನ್ ಅವರೇ ಬರೆದು ಹಾಡಿರುವ ಹಾಡಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸುವ ಸಾಲುಗಳಿವೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಮತ್ತು ಕೊವಿಡ್ ನಿಧಿ ಸಂಗ್ರಹ ಹಣದ ಬಗ್ಗೆ ನಕಾರಾತ್ಮಕವಾಗಿ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದೂರಿದ್ದಾರೆ.
ಹಾಡಿನ ಅರ್ಥ 'ಖಜಾನೆಯಲ್ಲಿ ಹಣವಿಲ್ಲ, ಜ್ವರ ಮತ್ತು ರೋಗಗಳು ಹೆಚ್ಚುತ್ತಿರುವ ಸಮಯದಲ್ಲಿ ಕೇಂದ್ರದ (ಕೇಂದ್ರ ಸರ್ಕಾರ) ತಪ್ಪಿನಿಂದಾಗಿ ಏನು ಉಳಿದಿಲ್ಲ. ಕೀ ಈಗ ಕಳ್ಳನ ಬಳಿ ಇದೆ' ಎನ್ನುವ ಅರ್ಥದ ಸಾಲು ಈ ಹಾಡಿನಲ್ಲಿ ಇದೆ ಎನ್ನುವ ಕಾರಣಕ್ಕೆ ಕಮಲ್ ಹಾಸನ್ ವಿರುದ್ಧ ದೂರು ದಾಖಲಿಸಲಾಗಿದೆ.
ಸೆಲ್ವಂ ಎನ್ನುವ ವ್ಯಕ್ತಿ ಮೇ 12ರಂದು ಚೆನ್ನೈ ಪೊಲೀಸ್ ಕಮಿಷನರ್ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಅಂದಹಾಗೆ ಕಮಲ್ ಹಾಸನ್ ಸಿನಿಮಾಗಳು ಅಂದ್ಮೇಲೆ ವಿವಾದಗಳು ಕಾಮನ್ ಎನ್ನುವ ಹಾಗೆ ಆಗಿದೆ. ಯಾಕೆಂದರೆ ಈ ಮೊದಲ ಬಿಡುಗಡೆಯಾಗಿರುವ 2004ರಲ್ಲಿ ಬಂದ ವಿರುಮಾಂಡಿ ಮತ್ತು 2013ರಲ್ಲಿ ಬಂದ ವಿಷ್ವರೂಪಮ್ ಸಿನಿಮಾಗಳು ಬಿಡುಗಡೆಗೂ ಮೊದಲೇ ಭಾರಿ ವಿವಾದ ಸೃಷ್ಟಿ ಮಾಡಿದ್ದವು.
KGF 2 ವೀಕ್ಷಿಸಿದ ಕಮಲ್ ಹಾಸನ್ ಮತ್ತು ಇಳಯರಾಜ; ಫೋಟೋ ವೈರಲ್
ಸದ್ಯ ಬಿಡುಗಡೆಯಾಗಿರುವ ವಿಕ್ರಮ್ ಸಿನಿಮಾದ ಪಾತಾಳ್ ಪಾತಾಳ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಯೂಟ್ಯೂಬ್ ನಲ್ಲಿ 14 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ. ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇ 11ರಂದು ಹಾಡು ರಿಲೀಸ್ ಆಗಿದೆ.
ಕಮಲ್ ಹಾಸನ್ ಸಿನಿಮಾ ಅಂದ್ಮೇಲೆ ನಿರೀಕ್ಷೆ ದುಪ್ಪಟ್ಟಾಗಿರುತ್ತದೆ. ವಿವಾದಗಳ ನಡುವೆಯೂ ಬಾರಿ ಕುತೂಹಲ ಮೂಡಿಸಿರುವ ವಿಕ್ರಮ್ ಸಿನಿಮಾ ಜುನ್ 3ರಂದು ತೆರೆಗೆ ಬರುತ್ತಿದೆ. ಒಂದು ಹಾಡಿನ ಮೂಲಕವೇ ವಿವಾದ ಎಬ್ಬಿಸಿರುವ ವಿಕ್ರಮ್ ಸಿನಿಮಾ ಇನ್ನ ಏನೆಲ್ಲ ವಿವಾದಗಳನ್ನು ಸೃಷ್ಟಿ ಮಾಡಲಿದೆಯೊ ಕಾದುನೋಡಬೇಕು.
Hijab Row : ಕರ್ನಾಟಕದ ವಿವಾದ ತಮಿಳುನಾಡಿಗೆ ಬರಬಾರದು ಎಂದ ಕಮಲ್ ಹಾಸನ್
ಕಮಲ್ ಹಾಸನ್ ಕೊನೆಯದಾಗಿ ವಿಶ್ವರೂಪಮ್-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2018ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು. ಈ ಸಿನಿಮಾ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿರಲಿಲ್ಲ. ಸುಮಾರು 4 ವರ್ಷಗಳ ಬಳಿಕ ಕಮಲ್ ಹಾಸನ್ ವಿಕ್ರಮ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೂ ಮೊದಲು ಕಮಲ್ ಇಂಡಿಯನ್-2 ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಬಹುತೇಕ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಆದರೆ ಕೆಲವು ಅಡೆತಡೆಗಳಿಂದ ಇಂಡಿಯನ್-2 ಸಿನಿಮಾ ಅರ್ಥದಲ್ಲೇ ನಿಂತುಹೋಗಿದೆ. ಈ ಸಿನಿಮಾಗೂ ಮೊದಲು ಲೋಕೇಶ್ ಕನಗರಾಜ್ ರಾಜ್ ಜೊತೆ ವಿಕ್ರಮ್ ಸಿನಿಮಾ ಅನೌನ್ಸ್ ಮಾಡಿ ಚಿತ್ರೀಕರಣ ಮುಗಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದ್ದಾರೆ.